ಅಮ್ರಿಟಾ Vs ಮಾನ್ಯ.. ಸಿಂಗರ್‌ಗೆ ಈಕೆಯೇ ಬೇಕು! – ಮದುವೆ ಬಗ್ಗೆ ಮೌನ ಮುರಿದ ಸುನೀಲ್‌

ಅಮ್ರಿಟಾ Vs ಮಾನ್ಯ.. ಸಿಂಗರ್‌ಗೆ ಈಕೆಯೇ ಬೇಕು! – ಮದುವೆ ಬಗ್ಗೆ ಮೌನ ಮುರಿದ ಸುನೀಲ್‌

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಈಗ ಕೊನೆಯ ಘಟ್ಟದಲ್ಲಿದೆ. ಬ್ಯಾಚುಲರ್ಸ್‌ ತಮ್ಮ ಮೆಂಟರ್ಸ್‌ನ ಸಾಕಷ್ಟು ಅರ್ಥ ಮಾಡಿಕೊಂಡಿದ್ದಾರೆ. ಆ ರೌಡ್..‌ ಈ ರೌಂಡ್‌ ಅಂತಾ ಹೇಳ್ಕೊಂಡು ವೇದಿಕೆ ಮೇಲೆ ರಿಯಲ್‌ ಪ್ರೇಮಿಗಳನ್ನ ನಾಚಿಸುವಂತೆ ಪರ್ಫಾಮೆನ್ಸ್‌ ನೀಡ್ತಿದ್ದಾರೆ ಜೋಡಿಗಳು.. ಆದ್ರೆ ಈ ಶೋನಲ್ಲಿ ಈ ಒಂದು ಜೋಡಿ ಮಾತ್ರ ಭಾರಿ ಸುದ್ದಿಯಲ್ಲಿದೆ. ಶೋಗೆ ಜೋಡಿಯಾಗಿ ಬಂದವರು ರಿಯಲ್‌ ಲೈಫ್‌ನಲ್ಲೂ ಜೋಡಿ ಆಗ್ತಿದ್ದಾರಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಆ ಜೋಡಿ ಬೇರೆ ಯಾರು ಅಲ್ಲ.. ಅಮ್ರಿಟಾ ಹಾಗೂ ಸುನೀಲ್..‌ ಇದೀಗ ವೇದಿಕೆಯಲ್ಲೇ ಸುನೀಲ್‌ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ – 4ನೇ ಪಂದ್ಯ.. 3 ಸೂತ್ರ ಸಿದ್ಧ.. ಕೈಕೊಟ್ಟವರನ್ನ ಕೈ ಬಿಟ್ಟು ಗೆಲ್ತಾರಾ?

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ವೀಕ್ಷಕರನ್ನ ಸಖತ್‌ ಆಗೇ ರಂಜಿಸ್ತಿದೆ.. ಬ್ಯಾಚುಲರ್ಸ್‌ ತಮ್ಮ ಮೆಂಟರ್ಸ್‌ ನ ಇಂಪ್ರೆಸ್‌ ಮಾಡಲು ಹೊಸ ಹೊಸ ಕಾನ್ಸೆಪ್ಟ್‌ ಮೂಲಕ ವೇದಿಕೆಗೆ ಬರ್ತಿದ್ದಾರೆ. ಇದು ರಿಯಲ್‌ ಪ್ರೇಮಿಗಳನ್ನೇ ನಾಚಿಸುವಂತಿದೆ. ಈ ಶೋನ ಆರಂಭದಿಂದಲೂ ಸುನೀಲ್‌ ಹಾಗೂ ಅಮ್ರಿಟಾ ಜೋಡಿ ವೀಕ್ಷಕರ ಮನಗೆದ್ದಿದೆ. ಇವರಿಬ್ರ ಬಾಂಡಿಂಗ್‌ ನೋಡಿ ರಿಯಲ್‌ ಲೈಫ್‌ನಲ್ಲೂ ಈ ಜೋಡಿ ಒಂದಾಗ್ಲಿ ಅಂತಾ ವೀಕ್ಷಕರು ಹೇಳ್ತಿದ್ದಾರೆ. ಅಷ್ಟೇ ಅಲ್ಲ ಇವರಿಬ್ರು ಮದುವೆ ಆಗ್ತಾರೆ ಅನ್ನೋ ಗಾಸಿಪ್‌ ಕೂಡ ಹರಿದಾಡ್ತಿದೆ. ಇದೀಗ ಸುನೀಲ್‌ ಭರ್ಜರಿ ಬ್ಯಾಚುಲರ್ಸ್‌ ವೇದಿಕೆಯಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

ಕಳೆದ ವಾರ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಹಾಗೂ ಮಹಾನಟಿ ಸೀಸನ್‌ 2 ಮಹಾಸಂಗಮ ಸಂಚಿಕೆ ಪ್ರಸಾರವಾಗಿತ್ತು. ಈ ವೇಳೆ ಸುನೀಲ್‌ ಜೊತೆ ಮಹಾನಟಿ ಸ್ಪರ್ಧಿ ಮಾನ್ಯ ಜೊತೆ ಭರ್ಜರಿ ಡ್ಯಾನ್ಸ್‌ ಮಾಡಿದ್ರು.. ಮೊದಲ ಪ್ರೇಮ ಪತ್ರವೇ ಹೃದಯಗಳಿಗೆ ಸೇತುವೆ ಎಂಬ ಸಾಂಗ್‌ ಗೆ ಡ್ಯಾನ್ಸ್‌ ಮಾಡಿದ್ರು.. ಪರ್ಫಾಮೆನ್ಸ್‌ ಮುಗಿತಿದ್ದಂತೆ ಆಂಕರ್‌ ಅನುಶ್ರೀ ಹಾಗೂ ನಿರಂಜನ್‌ ಸುನೀಲ್‌ ನ ಸರಿಯಾಗೇ ಕಾಲೆಳಿದ್ದಿದ್ದಾರೆ.. ಅಷ್ಟೇ ಅಲ್ಲ ಸುನೀಲ್‌ ಮದುವೆ ಬಗ್ಗೆ ಮಾತನಾಡಿದ್ದಾರೆ.. ಮಾನ್ಯ ಹಾಗೂ ಅಮ್ರಿಟಾ ಇಬ್ಬರಲ್ಲಿ ಯಾರು ಬೇಕು ಅನ್ನೋದನ್ನ ಕೂಡ ಹೇಳಿದ್ದಾರೆ.

ಹೌದು, ಈ ವಾರ ಮಾನ್ಯ ಜೊತೆ ಸುನೀಲ್‌ ಡ್ಯಾನ್ಸ್‌ ಮಾಡಿದ್ರು.. ಇವರಿಬ್ರ ಪರ್ಫಾಮೆನ್ಸ್‌ ಮುಗಿಸುತ್ತಿದ್ದಂತೆ ನಿರಂಜನ್‌ ಬಸ್‌ ಹರ್ಕೊಂಡು ತಂದೆ ಕನಸು ಈಡೇಸೋಕೆ ಬೆಂಗ್ಳೂರಿಗೆ ಬಂದ ಹುಡುಗ ಇವನೇನಾ ಅಂತಾ ಕೇಳಿದ್ದಾರೆ. ಆಗ ಅನುಶ್ರೀ ತಂದೆ ಕನಸನ್ನ ಈಡೇಸೋಕೆ.. ತಾಯಿಗೆ ಮನೆ ಕಟ್ಟಿಸಿಕೊಡ್ಬೇಕು ಅಂತಾ ಬೆಂಗ್ಳೂರಿಗೆ ಬಂದಿದ್ದೀನಿ ಅಂತಾ ಹೇಳಿದ್ದ.. ಆದ್ರೆ ಕಟ್ಟಿರೋ ಮನೆಗೆ ಈಗ ಸೊಸೆ ಹುಡುಕೋಕೆ ಬಂದಿದ್ದಾನೆ ಅಂತಾ ಗೊತ್ತಿರ್ಲಿಲ್ಲ.. ಒಂದು ಹೃದಯಕ್ಕೆ ಬೆಂಕಿ ಹಾಕಿ.. ಇನ್ನೊಂದು ಹೃದಯದ ಬೆಂಕಿ ಜೊತೆ ಚಳಿ ಕಾಯಿಸ್ಕೊತ್ತಿರೋ ಮುದ್ದು ರಾಜ.. ಅಂತಾ ಅನುಶ್ರೀ ಕರೆದಿದ್ದಾರೆ.. ಆಗ ಅಮ್ರಿಟಾ ಮುಖ ಸಪ್ಪೆ ಮಾಡಿಕೊಂಡು ಕೂತಿದ್ರೆ, ಇತ್ತ ಸುನೀಲ್‌ ನಾಚಿಕೊಂಡು ನಿಂತಿದ್ದಾರೆ.. ಅಷ್ಟೊತ್ತಿಗೆ ಹುಲಿ ಕಾರ್ತಿಕ್‌ ಅವುನಿಗೆ ಮನೆ ತುಂಬಕ್ಕೆ ಒಂದು ಹುಡುಗಿ ಬೇಕು ಅಂತಾ ಹೇಳಿದ್ರು.. ಅವ ಮಿಸ್‌ ಆಗಿ ಮನೆ ತುಂಬಾ ಹುಡುಗಿರನ್ನ ಕರ್ಕೊಂಡು ಹೋಗ್ತಿದ್ದಾನೆ ಅಂತಾ ಹೇಳಿದ್ದಾರೆ. ಆಗ ಸುನೀಲ್‌ ಅಪ್ಪನ ಕನಸು ಈಡೇಸಿದ್ದಾಯ್ತು.. ಮನೆನೂ ಕಟ್ಟಿ ಆಯ್ತು.. ಅಂತಾ ಹೇಳಿದ್ದಾರೆ.. ಈಗ ಪ್ರೆಸೆಂಟ್‌ ಕನಸೇನು ಅಂತಾ ಅನುಶ್ರೀ ಕೇಳಿದಾಗ ಇನ್ನೂ ಬೆಳಿಬೇಕು.. ಚೆನ್ನಾಗಿ ಸಾಧನೆ ಮಾಡ್ಬೇಕು ಅಂತಾ ಹೇಳಿದ್ದಾರೆ. ಆಗ ರವಿಚಂದ್ರನ್‌ ಕೂಡ ಕಾಲೆಳೆದಿದ್ದಾರೆ.. ಆಗ ಏನು ವಂಶ ಬೆಳಿಬೇಕಾ? ಮೂರು ಮೂರು ಜನಕ್ಕೆ ಕಾಳ್‌ ಹಾಕಿದ್ರೆ ವಂಶ ಬೆಳೆಯುತ್ತಾ? ಸಾಧನೆ ಮಾಡಿದ್ರೆ ಹುಡುಗಿರು ನಿನ್ನ ಹುಡ್ಕೊಂಡು ಬರ್ತಾರೆ ಅಂತಾ ಹೇಳಿದ್ದಾರೆ.

ಇನ್ನು ಮಾನ್ಯ ಜೊತೆ ಡ್ಯಾನ್ಸ್‌ ಮಾಡುವಾಗ್ಲೂ ಅಮ್ರಿಟಾಗೆ ವಿಡಿಯೋ ಕಾಲ್‌ ಮಾಡ್ತಿದ್ರಂತೆ.. ಇದನ್ನ ಮಾನ್ಯ ವೇದಿಕೆಯಲ್ಲಿ ಹೇಳಿದ್ದಾರೆ. ಬಳಿಕ ಸೌಂದರ್ಯ ಅಥವಾ ಪ್ರೇಮಾ ಯಾರು ಅಂತಾ ಅನುಶ್ರೀ ಕೇಳಿದ್ದಾರೆ.. ಆಗ ಅಮ್ರಿಟಾಳನ್ನ ತೋರಿಸಿ ಸುನೀಲ್‌ ಸೌಂದರ್ಯ ಅಂತಾ ಹೇಳಿದ್ದಾರೆ.. ಇದೀಗ ವೀಕ್ಷಕರು ಇವರಿಬ್ರ ಮಧ್ಯೆ ಸಮ್‌ಂಥಿಗ್‌ ಸಮ್‌ಂಥಿಗ್‌ ನಡಿತಾ ಇದೆ. ಶೋ ಮುಗಿತಾ ಇದ್ದಂತೆ ಪಕ್ಕಾ ಮದುವೆ ಆಗ್ತಾರೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.

Shwetha M