ಸ್ಟೇಜ್‌ನಲ್ಲೇ ಕಿ* ಕೇಳಿದ ಸಿಂಗರ್‌!? – ಸುನೀಲ್‌ ಜೊತೆ ಅಮ್ರಿಟಾ ಮದ್ವೆ?  

ಸ್ಟೇಜ್‌ನಲ್ಲೇ ಕಿ* ಕೇಳಿದ ಸಿಂಗರ್‌!? – ಸುನೀಲ್‌ ಜೊತೆ ಅಮ್ರಿಟಾ ಮದ್ವೆ?  

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಭರ್ಜರಿಯಾಗೇ ಸದ್ದು ಮಾಡ್ತಿದೆ.  ಬಾಚುಲರ್ಸ್‌ಗಳು ಪ್ರತಿ ವಾರ ಸಖತ್‌ ಮನರಂಜನೆ ನೀಡ್ತಿದ್ದು, ಶೋ ಸಖತ್‌ ಮೋಡಿ ಮಾಡುತ್ತಿದೆ.. ಈ ಶೋನಲ್ಲಿ ಡ್ರೋನ್‌ ಪ್ರತಾಪ್‌ ಹಾಗೇ ಗಗನಾರನ್ನ ಬಿಟ್ರೆ ಹೆಚ್ಚು ಹೈಲೈಟ್‌ ಆಗಿದ್ದು, ಸುನೀಲ್‌ ಮತ್ತು ಅಮ್ರಿಟಾ ಜೋಡಿ.. ಇವರಿಬ್ರ ಕೆಮಿಸ್ಟ್ರೀ  ನೋಡಿ ವೀಕ್ಷಕರು ರಿಯಲ್‌ ಲೈಫ್‌ನಲ್ಲೂ ಜೋಡಿಯಾಗುತ್ತಾರಾ ಅಂತಾ ಕೇಳ್ತಿದ್ದಾರೆ. ಇದೀಗ ಸುನೀಲ್‌, ಅಮ್ರಿಟಾ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲೇ ತಮ್ಮ ಪ್ರೀತಿ ಬಗ್ಗೆ ಕ್ಲೂ ಕೊಟ್ರಾ ಅನ್ನೋ ಅನುಮಾನ ವೀಕ್ಷರನ್ನ ಕಾಡ್ತಿದೆ.. ಇದೀಗ ಕ್ರೇಜಿಸ್ಟಾರ್‌ ರವಿಚಂದ್ರನ್‌ ಕೂಡ  ಇವರಿಬ್ರ ಮದ್ವೆ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: RO-KO ಇಲ್ಲದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಸರೆ – ಆಂಗ್ಲರ ನಾಡಲ್ಲಿ ಗೆಲ್ಲೋದು ಕಷ್ಟನಾ?

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಈಗ ಸಖತ್‌ ಮನರಂಜನೆ ನೀಡ್ತಿದೆ. ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ನಡಿತಾ ಇದೆ.. ತಮ್ಮ ಮೆಂಟರ್ಸ್‌ನ ಇಂಪ್ರೆಸ್‌ ಮಾಡಲು ಬ್ಯಾಚುಲರ್ಸ್‌ ಸಾಕಷ್ಟು ಪ್ರಯತ್ನ ಪಡ್ತಿದ್ದಾರೆ.. ಆದ್ರೆ ಅಮ್ರಿಟಾ ಹಾಗೂ ಸುನೀಲ್‌ ಡೆಡಿಕೇಷನ್‌ ಮಾತ್ರ ನೆಕ್ಟ್‌ ಲೆವೆಲ್‌ನಲ್ಲೇ ಇದೆ ಅಂತಾ ವೀಕ್ಷಕರು ಹೇಳ್ತಿದ್ದಾರೆ..  ಇವರಿಬ್ರ ಬಿಹೇವಿಯರ್‌ ನೋಡಿದ ವೀಕ್ಷಕರು  ಸುನಿಲ್ ಮತ್ತು ಅಮ್ರಿಟಾ ಸೀರಿಯೆಸ್ ಆಗಿಯೇ ಲವ್ ಮಾಡ್ತಿದ್ದಾರೆ ಅಂತಾ ಹೇಳ್ತಾನೇ ಬಂದಿದ್ರು.. ಇದೀಗ  ಈ ಡೌಟ್ ಕ್ರೇಜಿ ಸ್ಟಾರ್ ರವಿಚಂದ್ರನ್ ಗೂ ಬಂದಾಗಿದೆ. ಇದೀಗ ರವಿಚಂದ್ರನ್‌ ಇವರಿಬ್ರನ್ನ ನೋಡಿದ್ರೆ ಲವರ್ಸ್ ತರ ಕಾಣಿಸ್ತಾರೆ.. ಇಡೀ ಶೋ ಮುಗಿಯೋ ಹೊತ್ತಿಗೆ ಮದುವೆ ಮಾಡಿ ಕಳಿಸ್ಬೇಕೇನೋ ಅಂತಾ ಹೇಳಿದ್ದಾರೆ. ಅಷ್ಟೇ ಅಲ್ಲ ರವಿಚಂದ್ರನ್‌ ಹಾಗೇ ಹೇಳ್ತಿದ್ದಂತೆ ಅವರಿಬ್ರು ನಾಚಿ ನೀರಾಗಿದ್ದಾರೆ..

ಭರ್ಜರಿ ಬ್ಯಾಚುಲರ್ಸ್​ನಲ್ಲಿʻಸರಿಗಮಪʼ ಖ್ಯಾತಿಯ ಸುನೀಲ್‌ ಮತ್ತು ʻಮಹಾನಟಿʼ ಫೈನಲಿಸ್ಟ್‌ ಅಮ್ರಿಟಾ ಕ್ಯೂಟ್ ಜೋಡಿಗಳು ಎಂದೆನಿಸಿಕೊಂಡಿದ್ದಾರೆ. ಇಬ್ಬರ ಕೆಮಿಸ್ಟ್ರೀ, ಮುದ್ದಾದ ಜಗಳ ಇಂಟರೆಸ್ಟಿಂಗ್‌ ಆಗಿದೆ.​. ವೇದಿಕೆ ಮೇಲೆ ಡ್ಯಾನ್ಸ್, ಹಾಡು, ಡ್ರಾಮಾ, ಡೈಲಾಗ್​ ಹೀಗೆ ಸಾಲು ಸಾಲಾಗಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡ್ತಾ ಬಂದಿದ್ದಾರೆ. ಇವರಿಬ್ರ ಬಾಂಡಿಂಗ್‌ ನೋಡಿ, ಇವರಿಬ್ರ ಮಧ್ಯೆ ಸಂಥಿಂಗ್‌ ಸಂಥಿಂಗ್‌ ನಡಿತಾ ಇದೆ ಅಂತಾ ವೀಕ್ಷಕರು ಹೇಳ್ತಾನೆ ಬಂದಿದ್ರು.. ಕಳೆದ ವಾರ ಶೋ ನಲ್ಲಿ ಡ್ರೀಮ್‌ ಗರ್ಲ್‌ ಕಾನ್ಸೆಪ್ಟ್‌ ಇತ್ತು. ಹೀಗಾಗಿ ಸುನೀಲ್‌ ತನ್ನ ಡೀಮ್‌ ಗರ್ಲ್‌ ಹೇಗಿರ್ಬೇಕು ಅನ್ನೋದನ್ನ ಅಮ್ರಿಟಾ ಮೂಲಕ ತೋರಿಸಿಕೊಟ್ಟಿದ್ದಾರೆ.  ಸುನೀಲ್‌ ಆರಂಭದಲ್ಲಿ ಅಮ್ರಿಟಾರನ್ನ ಬೆಟ್ಟಕ್ಕೆ ಕರ್ಕೊಂಡು ಹೋಗಿದ್ರು.. ನನಗೆ ನೇಚರ್‌ ಇಷ್ಟ ಅಂತಾ ಅಮ್ರಿಟಾ ಹೇಳಿದಾ, ನೀನೇ ನನ್ನ ಡ್ರೀಮ್‌ ಗರ್ಲ್‌ ಆಗ್ತೀಯಾ ಅಂತಾ ಕೇಳಿದ್ದಾರೆ.. ಬಳಿಕ ಬೆಟ್ಟದಲ್ಲೇ ಇಬ್ಬರು ಕಾಫಿ ಕುಡಿದಿದ್ರು.. ಇದನ್ನ ಶೋನಲ್ಲಿ ತೋರಿಸಲಾಗಿದೆ.. ಇದನ್ನ ನೋಡಿದ ನಿರಂಜನ್‌, ರವಿಚಂದ್ರನ್‌, ರಚಿತಾ ರಾಮ್‌.. ಸುನೀಲ್‌ ನ ಸರಿಯಾಗೇ ಕಾಲೇಳಿದ್ದಾರೆ.. ನಿಮ್ಮಿಬ್ರ ಮಧ್ಯೆ ಏನ್‌ ನಡಿತಾ ಇದೆ ಅಂತಾ ಕೇಳಿದ್ದಾರೆ.. ಅದ್ಕೆ ಸುನೀಲ್‌ ಏನಿಲ್ಲಾ ಅಂತಾ ಹೇಳಿ ನಾಚಿಕೊಂಡಿದ್ದಾರೆ.. ಆಗ ಕ್ರೇಜಿ ಸ್ಟಾರ್‌ ಇವಿಬ್ರು ಅಲ್‌ರೆಡಿ ಲವ್ವಲ್ಲಿ ಬಿದ್ದಿದ್ದಾರೆ.. ಶೋ ಮುಗಿಯೋದ್ರೊಳಗೆ ಮದ್ವೆಗೆ ಸಿದ್ಧ ಮಾಡಿಕೊಳ್ಬೇಕೇನೋ ಅಂತಾ ಹೇಳಿದ್ದಾರೆ.. ಆಗ ಸುನೀಲ್‌ ನಾಚಿ ನೀರಾಗಿದ್ದಾರೆ.

ಇನ್ನು ಸುನೀಲ್‌ ಅಮ್ರಿಟಾಗೆ ತನ್ನ ತಾಯಿಯ ಮದುವೆ ಸೀರೆಯನ್ನ ಕೊಟ್ಟಿದ್ರು.. ಅಮ್ರಿಟಾ ಈ ವಿಶೇಷ ಸೀರೆಯನ್ನ ಉಟ್ಟುಕೊಂಡು ಉತ್ತರ ಕರ್ನಾಟಕದ ಹುಡುಗಿಯಂತೆ ವೇದಿಕೆ ಬಂದ್ರು. ಸುನಿಲ್ ಕೂಡ ಉತ್ತರ ಕರ್ನಾಟಕ ಶೈಲಿಯ ಉಡುಪು ತೊಟ್ಟು ಆಗಮಿಸಿದ್ದರು. ವೇದಿಕೆಗೆ ಬರ್ತಿದ್ದಂತೆ ಅಮ್ರಿಟಾ ಸುನೀಲ್‌ ಬಳಿ ಹೇಗೆ ಕಾಣ್ತಿದ್ದೀನಿ ಅಂತಾ ಹೇಳಿದ್ದಾರೆ. ಆಗ ಸುನೀಲ್‌ ನಾಚಿಕೊಂಡಿದ್ದಾರೆ. ನಂತ್ರ ಲಕ್ಷ್ಮೀಯಂತೆ ಕಾಣ್ತಿದ್ದೀಯಾ ಅಂತಾ ಸುನೀಲ್‌ ಹೇಳಿದ್ದಾರೆ.. ಬಳಿಕ ಶೂಟಿಂಗ್‌ ವೇಳೆ ಏನೆಲ್ಲಾ ನಡಿತು ಅಂತಾ ಅಮ್ರಿಟಾ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.. ಗೆಜ್ಜೆ ತೊಡಿದ ಬಳಿಕ ಸುನೀಲ್‌ ನೀನೇ ನನ್ನ ಡ್ರೀಮ್‌ ಗರ್ಲ್ ಆಗ್ತೀಯಾ ಅಂತಾ ಕೇಳಿದ.. ಬಳಿಕ ಕಿಸ್‌ ಕೊಡ್ತೀಯಾ ಅಂತಾ ಕೇಳಿದ ಅಂತಾ ಅಮ್ರಿಟಾ ಹೇಳಿದ್ದಾರೆ..

ಇನ್ನು ನಿರಂಜನ್‌ ನಿಮ್ಮ ಡ್ರೀಮ್ ಗರ್ಲ್ ಹೀಗೆ ಇರಬೇಕು ಅಂತಿಯಾ. ಆದರೆ, ಅಮ್ರಿಟಾಗೆ ಅಮ್ಮನ ಸೀರೆ ಕೊಟ್ಟೆ. ನಿಮ್ಮ ಡ್ರೀಮ್‌ ಗರ್ಲ್‌ಗೆ ಏನ್ ಕೊಡ್ತೀಯಾ ಕೇಳಿದ್ರು. ಆಗ ಸುನಿಲ್ ಆ ರೀತಿ ಹುಡುಗಿ ಸಿಕ್ಕರೆ ಅವಳಿಗೂ ಸೀರೆ ಕೊಡ್ತಿನಿ ಅಂತ  ಹೇಳಿದರು. ಇಲ್ಲ ಅಂದ್ರೆ ಇವರನ್ನೆ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದರು. ಇದರ ಮಧ್ಯೆ ಇನ್ನೂ ಒಂದು ವಿಷಯ ಬಂತು. ನಿನ್ನ ಡ್ರೀಮ್‌ ಗರ್ಲ್‌ಗೆ ಯಾವ ಹಾಡನ್ನ ಹಾಡ್ತೀಯಾ ಅಂತ ನಿರಂಜನ್ ಕೇಳಿದ್ರು.  ಆಗ ಸುನೀಲ್‌ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ ಹಾಡನ್ನ ಹಾಡಿದ್ರು.. ಈ ವೇಳೆ ಸುನೀಲ್‌ ಅಮ್ರಿಟಾಳನ್ನ ನೋಡಿಕೊಂಡೇ ಹಾಡಿದ್ರು. ಎಲ್ಲರು ಸಾಂಗ್‌ ಕೇಳಿ ಎಂಜಾಯ್ ಮಾಡಿದ್ರೆ, ರಚಿತಾ ರಾಮ್ ಸುನಿಲ್ ಮತ್ತು ಅಮ್ರಿಟಾರನ್ನ ಗಮನಿಸ್ತಾ ಇದ್ರು.. ಇವರಿಬ್ರನ್ನ ನೋಡಿದ ಕ್ರೇಜಿ ಸ್ಟಾರ್‌ ಶೋ ಮುಗಿದ್ಮೇಲೆ ಮದುವೆ ಮಾಡಿಕೊಡಬೇಕಾಗುತ್ತದೆಯೋ ಏನೋ ಅಂತ ಹೇಳಿದರು. ಇನ್ನು ಸುನೀಲ್‌ ಫ್ರೆಂಡ್ಸ್‌ ಕೂಡ ಶೋಗೆ ಬಂದಿದ್ರು.. ಆಗ ಫ್ರೆಂಡ್ಸ್‌ ಕೂಡ ಈ ಜೋಡಿ ಮೇಲೆ ಒಂದು ಡೌಟ್ ಇದೆ ಹೇಳಿದ್ರು. ಆದರೆ, ಸುನಿಲ್ ಆಗಲಿ ಇಲ್ವೇ ಅಮ್ರಿಟಾ ಆಗಲಿ, ಎಲ್ಲೂ ತಾವು ಲವ್ ಅಲ್ಲಿ ಬಿದ್ದಿದ್ದೇವೆ ಅಂತ ಹೇಳಿಕೊಂಡಿಲ್ಲ.. ಸೋ ಮುಂದಿನ ದಿನಗಳಲ್ಲಿ ಈ ಬಗ್ಗೆ ಮೌನ ಮುರಿತಾರಾ ಅಂತಾ ಕಾದು ನೋಡ್ಬೇಕು.. ಒಟ್ಟಿನಲ್ಲಿ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಅಮ್ರಿಟಾ ಹಾಗೂ ಸುನೀಲ್‌ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *