ಅಮ್ರಿಟಾ – ಸುನೀಲ್‌ ರಿಯಲ್‌ Love? – ಕಡೆಗೂ ಸತ್ಯ ಬಾಯ್ಬಿಟ್ಟ ಅಮ್ರಿಟಾ!

ಅಮ್ರಿಟಾ – ಸುನೀಲ್‌ ರಿಯಲ್‌ Love? – ಕಡೆಗೂ ಸತ್ಯ ಬಾಯ್ಬಿಟ್ಟ ಅಮ್ರಿಟಾ!

ಭರ್ಜರಿ ಬ್ಯಾಚುಲರ್ಸ್‌ ದಿನದಿಂದ ದಿನಕ್ಕೆ ವೀಕ್ಷಕರಿಗೆ ಸಖತ್‌ ಮನರಂಜನೆ ನೀಡ್ತಾ ಇದೆ. 10 ಸ್ಪರ್ಧಿಗಳು ತಮ್ಮ ಪಾರ್ಟ್ನರ್ ಗಳನ್ನ ಇಂಪ್ರೆಸ್‌ ಮಾಡಲು ವಿಭಿನ್ನವಾಗಿ ಪ್ರಯತ್ನಿಸ್ತಿದ್ದಾರೆ. ಈ ಶೋನಲ್ಲಿ ಗಗನಾ ಡ್ರೋನ್‌ ಜೊತೆ ಮೋಡಿ ಮಾಡ್ತಿರುವ ಜೋಡಿ ಅಂದ್ರೆ ಅದು ಸುನೀಲ್‌ ಹಾಗೂ ಅಮ್ರಿಟಾ.. ಪ್ರತಿವಾರ ಬೆಸ್ಟ್‌ ಪರ್ಫಾಮೆನ್ಸ್‌ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ರಿಯಾಲಿಟಿ ಶೋನಲ್ಲಿ ಮೋಡಿ ಮಾಡ್ತಿರೋ ಈ ಜೋಡಿ ಈಗ ರಿಯಲ್‌ ಲೈಫ್‌ನಲ್ಲೂ ಒಂದಾಗ್ರಾರಾ ಅನ್ನೋ ಪ್ರಶ್ನೆ ಈಗ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಪೊಲೀಸರಿಗೆ ರಜೆ ಘೋಷಣೆ ಮಾಡಲ್ಲ – ಹೆಚ್ಚುವರಿ ರಜೆಗಳನ್ನ ಯಾರಿಗೂ ಕೊಡ್ತಿಲ್ಲ

ವಿಕೇಂಡ್ ಬಂತು ಅಂದರೆ ಈಗಂತೂ ವೀಕ್ಷಕರಿ ಭರ್ಜರಿಯಾಗಿ ಮನರಂಜನೆ ನೀಡುತ್ತಿದ್ದಾರೆ ಭರ್ಜರಿ ಬ್ಯಾಚುಲರ್ಸ್ ಜೋಡಿ. ವಾರದಿಂದ ವಾರಕ್ಕೆ ವಿಭಿನ್ನ ಕಾನ್ಸೆಪ್ಟ್‌ಗಳನ್ನು ಭರ್ಜರಿ ಬ್ಯಾಚುಲರ್ಸ್‌ ಮತ್ತು ಏಂಜಲ್ಸ್‌ ಹೊತ್ತು ತರುತ್ತಿದ್ದಾರೆ. ಈ ಶೋನಲ್ಲಿ ಸುನೀಲ್‌ ಹಾಗೂ ಅಮ್ರಿಟಾ ರಾಜ್‌ ಈಗ ಸಖತ್‌ ಹೈಲೈಟ್‌ ಆಗಿದ್ದಾರೆ..  ಭರ್ಜರಿ ಬ್ಯಾಚುಲರ್ಸ್‌ʼನ ಫೇಮಸ್‌ ಜೋಡಿ ಅಂತಾನೇ ಹೇಳಲಾಗ್ತಿದೆ, ಇದೀಗ ಇವರಿಬ್ಬರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲೊಂದು ಸುದ್ದಿ ಜೋರಾಗಿ ಸದ್ದು ಮಾಡ್ತಿದೆ. ಸುನೀಲ್‌ ಹಾಗೂ ಅಮ್ರಿಟಾ ರಿಯಲ್‌ ಜೀವನದಲ್ಲೂ ಮದುವೆ ಆಗ್ತಾರೇ ಹೇಳಲಾಗ್ತಿದೆ.

ಭರ್ಜರಿ ಬ್ಯಾಚುಲರ್ಸ್​ನಲ್ಲಿʻಸರಿಗಮಪʼ ಖ್ಯಾತಿಯ ಸುನೀಲ್‌ ಮತ್ತು ʻಮಹಾನಟಿʼ ಫೈನಲಿಸ್ಟ್‌ ಅಮ್ರಿಟಾ ಕ್ಯೂಟ್ ಜೋಡಿಗಳು ಎಂದೆನಿಸಿಕೊಂಡಿದ್ದಾರೆ. ಇಬ್ಬರ ಕೆಮಿಸ್ಟ್ರೀ, ಮುದ್ದಾದ ಜಗಳ ಇಂಟರೆಸ್ಟಿಂಗ್‌ ಆಗಿದೆ.​. ವೇದಿಕೆ ಮೇಲೆ ಡ್ಯಾನ್ಸ್, ಹಾಡು, ಡ್ರಾಮಾ, ಡೈಲಾಗ್​ ಹೀಗೆ ಸಾಲು ಸಾಲಾಗಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡ್ತಾ ಬಂದಿದ್ದಾರೆ. ಅದರಲ್ಲೂ ಇತ್ತೀಚೆಗೆ ಅಮ್ರಿಟಾ ಸುನೀಲ್​ಗಾಗಿ ಹಾಡು ಕಲಿತು ವೇದಿಕೆಯಲ್ಲಿ ಹಾಡಿ ಮನಗೆದಿದ್ರು. ಅದಾದ್ಮೇಲೆ  ಲವ್‌ ಕೆಮಿಸ್ಟ್ರೀ ರೌಂಡ್‌ ಅಮ್ರಿಟಾ ಜೊತೆ ರೊಮ್ಯಾಂಟಿಕ್‌ ಹಾಡಿಗೆ ಸುನೀಲ್‌ ಹೆಜ್ಜೆ ಹಾಕಿದ್ದರು. ಪರ್ಫಾಮೆನ್ಸ್‌ ಮುಗಿದ ಬಳಿಕ  ಅಮ್ರಿಟಾಗಾಗಿ ಸುನೀಲ್‌ ಹಾಡನ್ನು ಹಾಡಿ ಗಮನ ಸೆಳೆದಿದ್ದರು.. ಈ ವೇಳೆ ಸುನೀಲ್‌ ಅಂದ್ರೆ ನಂಗೆ ತುಂಬಾ ಇಷ್ಟ ಎಂದು ಅಮ್ರಿಟಾ ಹೇಳಿ ಅಚ್ಚರಿ ಮೂಡಿಸಿದ್ರು.  ಇದೀಗ ಇವರಿಬ್ರು ರಿಯಲ್‌ ಲೈಫ್‌ನಲ್ಲೂ ಜೋಡಿಯಾಗುತ್ತಾರಾ ಎಂಬ ಅನುಮಾನವು ನೆಟ್ಟಿಗರಲ್ಲಿ ಮೂಡಿದೆ.

ಇದೀಗ ಸುನೀಲ್‌ ಅಮ್ರಿಟಾ ಜೊತೆಗಿನ ಕೆಮಿಸ್ಟ್ರೀ ಮತ್ತು ಲವ್‌ ಗಾಸಿಪ್‌ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.  ನಮ್ಮ ಮಧ್ಯೆ ಆ ರೀತಿ ಏನೂ ಇಲ್ಲ. ಶೋಗಾಗಿ ಬಂದಿದ್ದೇವೆ, ಅಮ್ರಿಟಾ ಮತ್ತು ನಾನು ಒಳ್ಳೆಯ ಫ್ರೆಂಡ್ಸ್‌ ಅಷ್ಟೇ. ಅದನ್ನು ಬಿಟ್ರೆ ಬೇರೆ ಏನೂ ಇಲ್ಲ. ಶೋನಲ್ಲಿ ಇರುವ ಕಾರಣ ಒಳ್ಳೆಯ ಸ್ನೇಹಿತರಾಗಿ ಒಳ್ಳೆಯ ಬಾಂಡಿಂಗ್‌ ಇದೆ  ಎಂದು ಸುನೀಲ್‌ ಲವ್‌ ಗಾಸಿಪ್‌ಗೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಆದ್ರೆ ಸುನೀಲ್‌ ಅಮ್ರಿಟಾ ಫ್ಯಾನ್ಸ್‌ ಈ ಜೋಡಿ ರಿಯಲ್‌ ಲೈಫ್‌ನಲ್ಲೂ ಒಂದಾಗ್ಬೇಕು. ಇವರಿಬ್ಬರು ಮದುವೆ ಆಗ್ಬೇಕು ಅಂತ ಹೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *