ಡ್ರೋನ್‌ನ ಎತ್ತಿ ಮುದ್ದಾಡಿದ ಗಗನಾ.. – ತಬಲಾ ತಬಲಾ ಎಂದು ಬಡಿದ ಪ್ರತಾಪ್

ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರೋದು ಅಂದ್ರೆ ಗಗನಾ.. ಮತ್ತು ಡ್ರೋನ್ ಪ್ರತಾಪ್. ಪ್ರತಿ ವಾರ ಹೊಸತನದೊಂದಿಗೆ ವೀಕ್ಷಕರಿಗೆ ಸಖತ್ ಮನರಂಜನೆ ನೀಡ್ತಿದ್ದಾರೆ. ಈ ವಾರವೂ ಡ್ರೋನ್ ಪ್ರತಾಪ್ ಹಾಗೂ ಗಗನಾ ಭರ್ಜರಿ ಪಾರ್ಫಾಮೆನ್ಸ್ ನೀಡಿದ್ದಾರೆ. ಗಗನಾ ಜೊತೆಗೆ ತಬಲಾ ತಬಲಾ ಹಾಗೇ ಸುಂದರಿ ಸುಂದರಿ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಆದ್ರೆ ಗಗನಾ ಡ್ರೋನ್ ಜೊತೆ ಡ್ಯಾನ್ಸ್ ಮಾಡಿದ್ದಕ್ಕೆ ಗಿಲ್ಲಿ ಫುಲ್ ಉರ್ಕೊಂಡಿದ್ದಾರೆ. ಸ್ಟೇಜ್ ನಲ್ಲೇ ಡ್ರೋನ್ ಪ್ರತಾಪ್ ಗೆ ಗಿಲ್ಲಿನಟ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಮುಂಬೈ ದಾಳಿಯ ಮಾಸ್ಟರ್ಮೈಂಡ್ ರಾಣಾಗೆ ಭಾರಿ ಭದ್ರತೆ – ಕೋಟೆಯಾಗಿ ಬದಲಾದ NIA ಕಚೇರಿ
ಜೀಕನ್ನಡದಲ್ಲಿ ಪ್ರಸಾರವಾಗ್ತಿರೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಬರೀ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡ್ತಿದ್ದ ಡ್ರೋನ್ ಪ್ರತಾಪ್ ಈ ಶೋ ಮೂಲಕವೇ ಜನರ ಮನಸ್ಸಿಗೆ ಹತ್ತಿರವಾಗ್ತಿದ್ದಾರೆ. ಪ್ರತಿ ವಾರ ಗಗನಾ ಜೊತೆ ಪ್ರತಾಪ್ ಬ್ಲಾಕ್ ಬಾಸ್ಟರ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಈ ವಾರ ಸ್ಪರ್ಧಿಗಳಿಗೆ Love Chemistry Round ಕಾನ್ಸೆಪ್ಟ್ ನೀಡಲಾಗಿತ್ತು. ಹೀಗಾಗಿ ಡ್ರೋನ್ ಪ್ರತಾಪ್ ಹಾಗೂ ಗಗನಾ ಭರ್ಜರಿ ಪಾರ್ಫಾಮೆನ್ಸ್ ನೀಡಿದ್ದಾರೆ. ಎರಡು ಹಾಡುಗಳಿಗೆ ಗಗನಾ ಡ್ರೋನ್ ಡ್ಯಾನ್ಸ್ ಮಾಡಿದ್ದು ಜಡ್ಜಸ್ ಫುಲ್ ಇಂಪ್ರೆಸ್ ಆಗಿದ್ದಾರೆ.
ಗಗನಾ ಹಾಗೂ ಪ್ರತಾಪ್ ದರ್ಶನ್ ನಟನೆಯ ಅಯ್ಯ ಚಿತ್ರದ ತಬಲಾ ತಬಲಾ ಸಾಂಗ್ ಹಾಗೇ ಕಿಚ್ಚ ಸುದೀಪ್ ನಟನೆಯ ಸುಂದರಿ ಸುಂದರಿ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಡ್ಯಾನ್ಸ್ ವೇಳೆ ಗಗನಾ ಡ್ರೋನ್ ಪ್ರತಾಪ್ ಅನ್ನ ಎತ್ತಿ ಮುದ್ದಾಡಿದ್ದಾರೆ. ಮತ್ತೊಂದ್ಕಡೆ ಡ್ರೋನ್ ಪ್ರತಾಪ್ ತಬಲಾ ತಬಲಾ ಸಾಂಗ್ ಗೆ ಡ್ಯಾನ್ಸ್ ಮಾಡುವಾಗ ಗಗನಾಗೆ ಬಡಿದ್ರೆ ಆಕೆ ಸೊಂಟ ಬಳುಕಿಸಿದ್ದಾರೆ. ಇವರಿಬ್ರ ಪಾರ್ಫಾಮೆನ್ಸ್ ನೋಡಿದ ಜಡ್ಜಸ್, ಕೆಮಿಸ್ಟ್ರಿ ತುಂಬಾ ಚೆನ್ನಾಗಿತ್ತು ಅಂದಿದ್ದಾರೆ. ಇದಕ್ಕೆ ಗಗನಾ ಡ್ರೋನ್ ಪ್ರತಾಪ್ ಬಳಿ ಎಲ್ಲಾ ಕಲೆನೂ ಇದೆ.. ಕಲೆಗಾರ ಅಂತಾ ಹೇಳಿದ್ದಾರೆ. ಅಷ್ಟೊತ್ತಿಗೆ ಗಿಲ್ಲಿ ಸ್ಟೇಜ್ ಗೆ ಬಂದು ಕ್ಯಾತೆ ತೆಗೆದಿದ್ದಾರೆ.
ಗಗನಾ ಎಲ್ಲೋ ಅಲ್ಲಿ ಗಿಲ್ಲಿ ಇದ್ದೇ ಇರ್ತಾರೆ. ಭರ್ಜರಿ ಬ್ಯಾಚುಲರ್ಸ್ ಗೆ ಬಂದ್ರೂ ಗಿಲ್ಲಿ ಗಗನಾ ಕಾಲೆಳೆಯುತ್ತಿದ್ದಾರೆ. ಇದೀಗ ಸ್ಟೇಜ್ ನಲ್ಲಿ ಉಪ್ಪಿ ಸ್ಟೈಲ್ ನಲ್ಲೇ ಡೈಲಾಗ್ ಹೊಡೆದಿದ್ದಾರೆ. ಕಾಂತ.. ಗಿಲ್ಲಿ ಇಲ್ಲದ ಗಗನಾ ಎಲ್ಲಿ ಕಾಂತ.. ನೀನು ನನ್ ಜೊತೆ ಡ್ಯಾನ್ಸ್ ಮಾಡಿದ್ರೆ ಸ್ವಾಗ್ ಆಗಿರುತ್ತೆ. ಅವನ ಜೊತೆ ಮಾಡಿದ್ರೆ ಲ್ಯಾಗ್ ಆಗಿರುತ್ತೆ. ನೋಡೋಕ್ ಮಾತ್ರ ಸಿಲ್ಲಿಯಾಗಿದ್ರೂ.. ಪಂಚ್ ನ ಸ್ಟೇಜ್ ಮೇಲೆ ಚೆಲ್ಲಿ ಗಲ್ಲಿ ಗಲ್ಲಿಯಿಂದ ಡಿಲ್ಲಿವರೆಗೂ, ಮೈಲಿಗಲ್ಲನ್ನ ನೆಟ್ಟಿರುವ ಗಿಲ್ಲಿ, ಮಂಡ್ಯದ ಗಂಡು ಗಿಲ್ಲಿ ಕಾಂತ.. ಗಗನಾನ ಇಂಪ್ರೆಸ್ ಮಾಡಲು ಪ್ರತಾಪ್ ಡ್ರೋನ್ ಬೇಕಾಗಿಲ್ಲ.. ಬಾಳು ಬೆಳಗುಂದಿಯ ಡ್ಯಾನ್ಸ್ ಏನೇನು ಅಲ್ಲ. ಕವನ ಕವಿತೆಗಳು ಬೇಕಾಗೇ ಇಲ್ಲ.. ಅಂತ ಹೇಳ್ತಾ ಗಗನಾಳನ್ನ ಮುಟ್ಟಿದ್ದಾರೆ ಗಿಲ್ಲಿ.. ಆಗ ಡ್ರೋನ್ ಪ್ರತಾಪ್ ಗಗನಾಳನ್ನ ತನ್ನತ್ತ ಎಳೆದುಕೊಂಡಿದ್ದಾರೆ. ಯಾಕೆ ಆಕೆಯನ್ನ ಎಳೆದೆ ಎಂದು ಗಿಲ್ಲಿ ಹೇಳಿದಾ ದುಷ್ಟರನ್ನ ಕಂಡ್ರೆ ದೂರ ಇರ್ಬೇಕು ಅಂತಾ ದೊಡ್ಡವರು ಹೇಳಿದ್ದಾರೆ. ಅದ್ಕೆ ದೂರ ಇರ್ತೀನಿ ಅಂತಾ ಗಗನಾ ಆಚೆ ಹೋಗಿದ್ದಾರೆ. ಗಿಲ್ಲಿ ಪಂಚ್ ಡೈಲಾಗ್ಸ್ ಗೆ ಎಲ್ಲರು ಬಿದ್ದು ಬಿದ್ದು ನಕ್ಕಿದ್ದಾರೆ.