ಗಗನ ಜೊತೆಗೆ ಸೈಕ್ ಆದ ಬಾಳು.. ಬೆಳಗುಂದಿ ರೊಮ್ಯಾಂಟಿಕ್ ಮೂಡ್
ಪೊಲೀಸ್ ಅವತಾರದಲ್ಲಿ ಡ್ರೋನ್

ಗಗನಾ.. ಚಿತ್ರದುರ್ಗದ ಹಳ್ಳಿ ಹುಡುಗಿ ಗಗನಾ ಭಾರಿ ಕಳೆದೆರಡು ವರ್ಷಗಳಿಂದ ಜೀ ಕನ್ನಡ ಕಿರುತೆರೆ ವೇದಿಕೆಯ ಮೂಲಕ ಮನರಂಜನೆ ನೀಡ್ತಾ ಬಂದಿದ್ದಾರೆ. ಜೀಕನ್ನಡದ ಟಿಆರ್‌ಪಿ ಕ್ವೀನ್ ಅಂತಾನೇ ಕರೆಸಿಕೊಂಡಿದ್ದಾರೆ ಮಾತಿನ ಮಲ್ಲಿ. ಸದ್ಯ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಗಗನಾ ಸಖತ್ ಶೈನ್ ಆಗ್ತಿದ್ದಾರೆ. ಡ್ರೋನ್ ಪ್ರತಾಪ್ ಗೆ ಮೆಂಟರ್ ಆಗಿರೋ ಈಕೆ ಈಗ ಬಾಳುಬೆಳಗುಂದಿ ಜೊತೆ ರೊಮ್ಯಾಂಟಿಕ್ ಸಾಂಗ್ ಗೆ ಡ್ಯಾನ್ಸ್ ಮಾಡಿದ್ದಾರೆ. ಗಗನಾ ಬಾಳು ಬೆಳಗುಂದಿ ಪರ್ಫಾಮೆನ್ಸ್ ಗೆ ಜಡ್ಜಸ್ ಫುಲ್ ಫಿದಾ ಆಗಿದ್ದಾರೆ.. ಮತ್ತೊಂದ್ಕಡೆ ಡ್ರೋನ್ ಪ್ರತಾಪ್ ಪೊಲೀಸ್ ಅವತಾರದಲ್ಲಿ ಎಂಟ್ರಿ ಕೊಟ್ರೆ, ಗಿಲ್ಲಿ ಗಗನಾಗಾಗಿ ಬೆಳಗುಂದಿ ಜೊತೆ ಕಿರಿಕ್ ಮಾಡ್ಕೊಂಡಿದ್ದಾರೆ.
ಇದನ್ನೂ ಓದಿ: ವ್ಹೀಲ್ ಚೇರ್ ನಲ್ಲಿ ರಾಜಸ್ತಾನಕ್ಕೆ ದ್ರಾವಿಡ್ ತರಬೇತಿ – ರಾಯಡುಗೆ ಯಾಕಿಷ್ಟು ಉರಿ?
ಜೀಕನ್ನಡ ಯಾವಾಗ್ಲೂ ವೀಕ್ಷಕರಿಗೆ ಮನರಂಜನೆ ನೀಡೋದ್ರಲ್ಲಿ ಎಕ್ಸಪರ್ಟ್.. ಸದಾ ವಿಭಿನ್ನ ಕಾನ್ಸೆಪ್ಟ್ ಮೂಲಕ ವೀಕ್ಷಕರನ್ನ ರಂಜಿಸ್ತಾ ಬಂದಿದೆ. ಈ ವಾರ ʻಸರಿಗಪಮʼ ಹಾಗೂ ʻಭರ್ಜರಿ ಬ್ಯಾಚುಲರ್ಸ್ʼ ಶೋಗಳ ಮಹಾಸಂಗಮ ಇದ್ದು, ಇದು ಮಹಾಸಂಚಿಕೆ ಆಗಲಿದೆ. ಒಂದು ಕಡೆ ಬ್ಯಾಚುಲರ್ಸ್ ಮತ್ತೊಂದೆಡೆ ಸಿಂಗರ್ಸ್ ಇಬ್ಬರ ಮಧ್ಯೆ ಜಟಾಪಟಿ ನಡೆದಿದೆ. ಈ ವಾರದ ಮಹಾ ಸಂಚಿಕೆಯಲ್ಲಿ ಉತ್ತರ ಕರ್ನಾಟಕದ ಹುಲಿ ಬಾಳು ಬೆಳಗುಂದಿ, ಮಾತಿನ ಮಲ್ಲಿ ಗಗನಾ ಜೊತೆಗೆ ರೊಮ್ಯಾಂಟಿಕ್ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.
ಹೌದು, ಗಗನ ಮತ್ತು ಬಾಳು ಬೆಳಗುಂದಿ ಮಹಾ ಸಂಗಮ ವೇದಿಕೆ ಮೇಲೆ ಜಬರ್‌ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ದುನಿಯಾ ವಿಜಯ್ ನಟಿಸಿ ನಿರ್ದೇಶನದ ಮಾಡಿರೋ ಭೀಮ ಚಿತ್ರದ ಸೈಕಾಗೋದೆ ಸೈಕಾದೆ ಹಾಡಿಗೆ ಗಗನಾ, ಬೆಳಗುಂದಿ ಡ್ಯಾನ್ಸ್ ಮಾಡಿದ್ದಾರೆ. ಮಾತಿನ ಮಲ್ಲಿ ಹಾಗೇ ಜವಾರಿ ಹೈದನ ಪರ್ಫಾಮೆನ್ಸ್ ನೋಡಿ, ಜಡ್ಜಸ್ ಫಿದಾ ಆಗಿದ್ದಾರೆ. ಮನಮೋಹಕ ಡ್ಯಾನ್ಸ್ ಪರ್ಫಾಮೆನ್ಸ್ ಕಂಡ ರಚಿತಾ ರಾಮ್ ಗಗನ ನೀನು ನಿಜಕ್ಕೂ ಅದ್ಭುತ ಅನ್ನೋ ಅರ್ಥದಲ್ಲಿಯೇ ತಮ್ಮ ಅಭಿಪ್ರಾಯವನ್ನ ಹೇಳಿದ್ದಾರೆ. ಇನ್ನು ಅರ್ಜುನ್ ಜನ್ಯ ಇವ್ರ ಪರ್ಫಾಮೆನ್ಸ್ ನೋಡಿ ಸಿನಿಮಾದ ಹಾಡು ನೋಡಿದ ಫೀಲ್ ಆಯಿತು ಅಂತ ಹೇಳಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಬಾಳು ಬೆಳಗುಂದಿ ಮತ್ತು ಗಗನ ಡ್ಯಾನ್ಸ್ ನೋಡಿ ಥ್ರಿಲ್ ಆಗಿದ್ದಾರೆ. ಬಾಳು ನಿನ್ನ ಬಾಳು ಈಗ ಬೆಳಗಿತು ಅಂತಲೇ ಹೇಳಿದ್ದಾರೆ. ಬಾಳು ಬೆಳಗುಂದಿಯನ್ನ ಜಡ್ಜಸ್ ಹೊಗಳ್ತಿದ್ದಂತೆ, ಅಲ್ಲಿಗೆ ಗಿಲ್ಲಿನಟ ಎಂಟ್ರಿ ಕೊಟ್ಟಿದ್ದಾರೆ. ಸ್ಟೇಜ್ ಗೆ ಎಂಟ್ರಿಕೊಡ್ತಿದ್ದಂತೆ, ಬಾಳು ಅಂತ ಹೆಸ್ರಿಡ್ಕೊಂಡು ನನ್ನ ಬಾಳನ್ನೇ ಹಾಳು ಮಾಡಿದ್ಯಲ್ಲಾ ಅಂತಾ ಗಿಲ್ಲಿ ಬೆಳಗುಂದಿಗೆ ಹೇಳಿದ್ದಾರೆ. ಆಗ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.
ಮತ್ತೊಂದ್ಕಡೆ, ಪ್ರತಿ ಸಲ ಏನಾದ್ರೋಂದು ಸರ್‌ಪ್ರೈಸ್ ಕೊಟ್ಟು ಗಗನಾಗೆ ಇಂಪ್ರೆಸ್ ಮಾಡ್ತಿದ್ದ ಡ್ರೋನ್ ಪ್ರತಾಪ್ ಈ ಬಾರಿ ಸಿಂಗರ್ ಆಗಿದ್ದಾರೆ.. ಪೊಲೀಸ್ ಗೆಟಪ್ ನಲ್ಲಿ ಸ್ಟೇಜ್ ಗೆ ಎಂಟ್ರಿಕೊಟ್ಟ ಡ್ರೋನ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾದ ಹಾಡನ್ನ ಹಾಡಿದ್ದಾರೆ. ಶಾಂತಿ ಕ್ರಾಂತಿ ಸಿನಿಮಾದ ಮಧ್ಯರಾತ್ರಿಲೀ.. ಹೈವೇ ರಸ್ತೇಲೀ ಸಾಂಗ್ ನ ಶಿವಾನಿ ಜೊತೆಗೆ ಹಾಡಿದ್ದಾರೆ. ಡ್ರೋನ್ ಹಾಡು ಕೇಳಿ ಜಡ್ಜಸ್ ಫುಲ್ ಇಂಪ್ರೆಸ್ ಆಗಿದ್ದಾರೆ. ಒಟ್ಟಿನಲ್ಲಿ ಜೀಕನ್ನಡದಲ್ಲಿ ಹಳ್ಳಿ ಪ್ರತಿಭೆಗಳು ಸಖತ್ ಹೈಲೈಟ್ ಆಗ್ತಿದ್ದಾರೆ. ಕರುನಾಡಿನ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.