ವಿದ್ಯಾರ್ಥಿನಿ ಮೇಲೆ ಪ್ರೀತಿ: ಲಿಂಗ ಪರಿವರ್ತನೆ ಮಾಡಿಕೊಂಡು ಮದುವೆಯಾದ ಶಿಕ್ಷಕಿ!

ವಿದ್ಯಾರ್ಥಿನಿ ಮೇಲೆ ಪ್ರೀತಿ: ಲಿಂಗ ಪರಿವರ್ತನೆ ಮಾಡಿಕೊಂಡು ಮದುವೆಯಾದ ಶಿಕ್ಷಕಿ!

ಜೈಪುರ: ವಿದ್ಯಾರ್ಥಿನಿ ಮೇಲೆ ಪ್ರೀತಿಯುಂಟಾಗಿ, ತನ್ನ ಪ್ರೇಯಸಿಯನ್ನು ಮದುವೆಯಾಗಲು ಶಿಕ್ಷಕಿಯೊಬ್ಬಳು ತನ್ನ ಲಿಂಗ ಪರಿವರ್ತನೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಇದನ್ನೂ ಓದಿ:  6 ತಿಂಗಳ ಹಿಂದೆ ಯುವಕನಿಗೆ ನಾಯಿ ಕಡಿತ: ಆತನಲ್ಲಾದ ಬದಲಾವಣೆ ಕಂಡು ವೈದ್ಯರು ಶಾಕ್

ಶಿಕ್ಷಕಿ ಮೀರಾ ಮತ್ತು ವಿದ್ಯಾರ್ಥಿನಿ 2016 ರಲ್ಲಿ ಸ್ನೇಹಿತೆಯರಾಗಿದ್ದರು. ಆದರೆ 2018ರಲ್ಲಿ ಮೀರಾ, ಕಲ್ಪನಾಳ ಬಳಿ ಮದುವೆಯ ಪ್ರಸ್ತಾಪ ಮಾಡಿದ್ದಳು. ಇದಕ್ಕೆ ಕಲ್ಪನಾ ಕೂಡ ಒಪ್ಪಿಕೊಂಡಿದ್ದಳು. ಆದರೆ ಆರಂಭದಲ್ಲಿ ಇಬ್ಬರ ಪಾಲಕರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದಾದ ಬಳಿಕ ಮೀರಾ ತನ್ನ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾಳೆ. ಪಸ್ತುತ ಮೀರಾಳನ್ನು ಅರವ್ ಕುಂತಲ್ ಎಂದು ಕರೆಯಲಾಗುತ್ತಿದೆ. ಇದಾದ ಬಳಿಕ ಪೋಷಕರ ಒಪ್ಪಿಗೆ ಮೇರೆಗೆ ವಿವಾಹವಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಮೀರಾ ಬಾಲ್ಯದಿಂದಲೂ ನನ್ನನ್ನು ನಾನು ಯಾವಾಗಲೂ ಹುಡುಗನಂತೆ ಭಾವಿಸುತ್ತಿದ್ದೆ. ಹೀಗಾಗಿ ಈ ನಿರ್ಧಾರ ಸಹಜ ಎಂದು ಅನ್ನಿಸಿತು. ಆದ್ದರಿಂದ ನಾನು 2019ರಿಂದ ಹಂತ ಹಂತವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದೇನೆ. 2021ರಲ್ಲಿ ಅಂತಿಮ ಶಸ್ತ್ರ ಚಿಕಿತ್ಸೆ ಒಳಗಾಗಿ ಇದೀಗ ತನ್ನ ಪ್ರೇಯಸಿಯನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

suddiyaana