ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆ ಸಮಾರೋಪ – ರಾಹುಲ್ ಪಾದಯಾತ್ರೆಗೆ ಸಿಕ್ಕಿತಾ ಸಕ್ಸಸ್!?

ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆ ಸಮಾರೋಪ – ರಾಹುಲ್ ಪಾದಯಾತ್ರೆಗೆ ಸಿಕ್ಕಿತಾ ಸಕ್ಸಸ್!?

ಬಿಸಿಲು, ಗಾಳಿ, ಚಳಿ, ಮಳೆಯ ಪರಿವಿಲ್ಲ. ಕಿಲೋಮೀಟರ್​ಗಳ ಲೆಕ್ಕವಿಲ್ಲ. ಸಾವಿರಾರು ಕಾರ್ಯಕರ್ತರ ದಂಡಿನ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ರು. ಲೋಕಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದ್ದಾಗ ನಡೆದಿರೋ ಈ ಯಾತ್ರೆ ಹಿಂದೆ ಹತ್ತಾರು ಲೆಕ್ಕಾಚಾರಗಳು ಶುರುವಾಗಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿನ್ನೆಗೆ ಅಂತ್ಯಗೊಂಡಿದ್ದು, ಇವತ್ತು ಸಮಾರೋಪ ಸಮಾರಂಭ ನಡೆಯಲಿದೆ. ಲೋಕಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಇದ್ದು ಭಾರತ್ ಜೋಡೋ ಯಾತ್ರೆಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಸೆಪ್ಟಂಬರ್ 7ರಂದು ದಕ್ಷಿಣ ತುದಿ ಕನ್ಯಾಕುಮಾರಿಯಿಂದ ಆರಂಭಗೊಂಡ ಪಾದಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಿ ಉತ್ತರ ತುದಿ ಕಾಶ್ಮೀರದಲ್ಲಿ ಸಮಾಪ್ತಿಗೊಂಡಿದೆ.

ಇದನ್ನೂ ಓದಿ : ಕಾಲಿನ ಬೆರಳನ್ನು ಕೈಗೆ ಜೋಡಿಸಿದ ವೈದ್ಯರು! – ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಇವತ್ತು ಯಾತ್ರೆ ಸಮಾರೋಪ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ್​ನಲ್ಲಿರುವ ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ಭಾರತ್ ಜೋಡೋ ಯಾತ್ರೆಗೆ ಅಧಿಕೃತವಾಗಿ ತೆರೆಬೀಳಲಿದೆ. ಬಳಿಕ ಶೇರ್ ಎ ಕಾಶ್ಮೀರ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಹಾಗೂ ಇತರ ಹಲವು ರಾಜಕೀಯ ಪಕ್ಷಗಳ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಗೂ ಎನ್​ಡಿಎಯೇತರ 21 ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್​ನಿಂದ ಆಹ್ವಾನ ನೀಡಿದೆ.

ಭಾರತ್ ಜೋಡೋ ಯಾತ್ರೆ ನಿನ್ನೆಗೆ ಅಂತ್ಯಗೊಂಡಿದ್ದು, ಭಾನುವಾರ ಶ್ರೀನಗರ್​ನ ಲಾಲ್ ಚೌಕ್​ನ ಕ್ಲಾಕ್ ಟವರ್ ಮೇಲೆ ರಾಹುಲ್ ಗಾಂಧಿ ರಾಷ್ಟ್ರಧ್ವಜ ಹಾರಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಣಿವೆ ರಾಜ್ಯದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಭಾರತ್ ಜೋಡೋ ಯಾತ್ರೆ ಜಮ್ಮು ಕಾಶ್ಮೀರಕ್ಕೆ ಜನವರಿ 20ರಂದು ಕಾಲಿಟ್ಟಿತ್ತು. ಬಳಿಕ 9 ದಿನಗಳ ಕಾಲ ಇಲ್ಲಿ ಪಾದಯಾತ್ರೆ ನಡೆದಿತ್ತು.

ಸೆಪ್ಟೆಂಬರ್ 7ರಂದು ಆರಂಭವಾಗಿದ್ದ ಯಾತ್ರೆ ಒಟ್ಟು 150 ದಿನಗಳ ಕಾಲ 12 ರಾಜ್ಯಗಳಾದ್ಯಂತ ನಡೆದಿತ್ತು.   ಒಟ್ಟು 4 ಸಾವಿರ ಕಿ.ಮೀನಷ್ಟು ದೂರ ಯಾತ್ರೆ ಸಾಗಿದ್ದು, ನೂರಾರು ನಾಯಕರು, ಸಾವಿರಾರು ಕಾರ್ಯಕರ್ತರು, ಲಕ್ಷಾಂತರ ಜನರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಕರ್ನಾಟಕದಲ್ಲಿ ಪಾದಯಾತ್ರೆ ವೇಳೆ ರಾಹುಲ್ ಜೊತೆ ವಿಪಕ್ಷನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ರು.

 

suddiyaana