ಜ.14 ರಿಂದ ‘ಭಾರತ ನ್ಯಾಯ ಯಾತ್ರಾ’ – ಪೂರ್ವದಿಂದ ಪಶ್ಚಿಮದ ಕಡೆಗೆ  ರಾಹುಲ್‌ ಗಾಂಧಿ ನೇತೃತ್ವದಲ್ಲಿ ಯಾತ್ರೆ

ಜ.14 ರಿಂದ ‘ಭಾರತ ನ್ಯಾಯ ಯಾತ್ರಾ’ – ಪೂರ್ವದಿಂದ ಪಶ್ಚಿಮದ ಕಡೆಗೆ  ರಾಹುಲ್‌ ಗಾಂಧಿ ನೇತೃತ್ವದಲ್ಲಿ ಯಾತ್ರೆ

ಲೋಕಸಭಾ ಚುನಾವಣೆಗೆ ಹತ್ತಿರವಾಗುತ್ತಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಈಗಿನಿಂದಲೇ ಪ್ಲಾನ್‌ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್‌ನ ಮೊದಲ ಹಂತದಲ್ಲಿ ದಕ್ಷಿಣದಿಂದ ಉತ್ತರಕ್ಕೆ ‘ಭಾರತ್‌ ಜೋಡೋ ಯಾತ್ರೆ’ ಮಾಡಿ ಸಕ್ಸಸ್‌ ಕಂಡಿದೆ. ಇದೀಗ ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತೆ ಪಾದಯಾತ್ರೆ ಕೈಗೊಳ್ಳಲು ರಾಹುಲ್‌ ಗಾಂಧಿ ಮುಂದಾಗಿದ್ದಾರೆ. ಈ ಬಾರಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ 2 ನೇ ಹಂತದ ಯಾತ್ರೆ ಪೂರ್ವ-ಪಶ್ಚಿಮ ಭಾಗಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: ಲೋಕಸಭೆ-2024 ಸಿ-ವೋಟರ್ ಸಮೀಕ್ಷೆ – ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?

ಹೌದು, ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ಮೊದಲ ಹಂತವು ಸೆಪ್ಟೆಂಬರ್ 7, 2022 ರಿಂದ ಜನವರಿ 2023ರವರೆಗೂ ನಡೆಯಿತು. ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಸರಿಸುಮಾರು 4,080 ಕಿಮೀ ಗಳಷ್ಟು ದೂರ ಕ್ರಮಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆಯನ್ನ ಮುಕ್ತಾಯಗೊಳಿಸಲಾಗಿತ್ತು. ಯಾತ್ರೆಯು 12 ರಾಜ್ಯಗಳ 75 ಜಿಲ್ಲೆಗಳ ಮೂಲಕ 126 ದಿನಗಳಲ್ಲಿ ಸಾಗಿತು, ಇದು ಭಾರತದ ಸುದೀರ್ಘ ಪಾದಯಾತ್ರೆಯಾಗಿದೆ. ಇದೀಗ ಕಾಂಗ್ರೆಸ್‌ ಲೋಕಸಭಾ ಚುನಾವಣೆಗೂ ಮುನ್ನವೇ ಭಾರತ್ ಜೋಡೊ-2.0ಗೆ ಚಿಂತನೆ ನಡೆಸಿದೆ. 2ನೇ ಹಂತದ ಯಾತ್ರೆ ಕೂಡ ರಾಹುಲ್‌ ಗಾಂಧಿ ನೇತೃತ್ವದಲ್ಲೇ ನಡೆಯಲಿದೆ.  2ನೇ ಹಂತದ ಯಾತ್ರೆಗೆ ‘ಭಾರತ ನ್ಯಾಯ ಯಾತ್ರೆ’ ಎಂದು ಹೆಸರಿಡಲಾದ್ದು ಜನವರಿ 14 ರಿಂದ ಯಾತ್ರೆ ಪ್ರಾರಂಭವಾಗಲಿದೆ.

ಜನವರಿ 14 ರಿಂದು ಮಣಿಪುರದಿಂದ ಯಾತ್ರೆ ಪ್ರಾರಂಭವಾಗಿ ಮುಂಬೈನಲ್ಲಿ ಮುಕ್ತಾಯವಾಗಲಿದೆ. ಕಾಂಗ್ರೆಸ್‌ ನಾಯಕರು 6,200 ಕಿಮೀ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ‘ಭಾರತ ನ್ಯಾಯ ಯಾತ್ರೆ’ಯು ಲೋಕಸಭೆ ಚುನಾವಣೆಗೆ ಮುನ್ನ ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಯಾತ್ರೆ ಕೈಗೊಳ್ಳಲಿದ್ದಾರೆ. ಯಾತ್ರೆಯಲ್ಲಿ 14 ರಾಜ್ಯಗಳು ಮತ್ತು 85 ಜಿಲ್ಲೆಗಳನ್ನು ಸುತ್ತಲಿದ್ದಾರೆ ಎಂದು ಕಾಂಗ್ರಸ್‌ ಹೇಳಿದೆ.

ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪಾದಯಾತ್ರೆ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Shwetha M