ವಿಷಪೂರಿತ ಆಹಾರ ಸೇವನೆ  – ಭಾರತ್ ಗೌರವ್ ರೈಲಿನಲ್ಲಿ ಪ್ರಯಾಣಿಸಿದ್ದ 90ಕ್ಕೂ ಅಧಿಕ ಪ್ರಯಾಣಿಕರು ಅಸ್ವಸ್ಥ!

ವಿಷಪೂರಿತ ಆಹಾರ ಸೇವನೆ  – ಭಾರತ್ ಗೌರವ್ ರೈಲಿನಲ್ಲಿ ಪ್ರಯಾಣಿಸಿದ್ದ 90ಕ್ಕೂ ಅಧಿಕ ಪ್ರಯಾಣಿಕರು ಅಸ್ವಸ್ಥ!

ಭಾರತ್ ಗೌರವ್ ರೈಲಿನಲ್ಲಿ ಆಹಾರ ಸೇವಿಸಿ 90 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಚೆನ್ನೈನಿಂದ ಗುಜರಾತ್‌ನ ಪಾಲಿಟಾನಾಗೆ ಪ್ರಯಾಣಿಸುತ್ತಿದ್ದ ಭಾರತ್ ಗೌರವ್ ರೈಲಿನಲ್ಲಿ ಈ ಘಟನೆ ವರದಿಯಾಗಿದೆ.

ರೈಲಿನಲ್ಲಿ ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಅಡುಗೆ ಗುತ್ತಿಗೆದಾರರು ತಯಾರಿಸಿದ ಭೋಜನವನ್ನು ಪ್ರಯಾಣಿಕರಿಗೆ ನೀಡಲಾಗಿತ್ತು. ಈ ಆಹಾರ ಸೇವಿಸಿದ 90 ಕ್ಕೂ ಅಧಿಕ ಮಂದಿಗೆ ಅನಾರೋಗ್ಯ ಕಾಡಿತ್ತು. ಹೊಟ್ಟೆ ನೋವು, ಬೇಧಿ, ವಾಂತಿ ಮುಂತಾದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಪಾಲಿಟಾನಾಗೆ ಹೋಗುವ ರೈಲು ಪುಣೆ ರೈಲು ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡಲಾಯಿತು.

ಇದನ್ನೂ ಓದಿ: ಕಿಡ್ನ್ಯಾಪ್‌ ಆಗಿದ್ದ ಬಾಲಕನನ್ನು ಕೇವಲ 90 ನಿಮಿಷಗಳಲ್ಲಿ ಪತ್ತೆಹಚ್ಚಿದ  ಪೊಲೀಸ್‌ ಶ್ವಾನ!

ಅಸ್ವಸ್ಥರಾದ ಪ್ರಯಾಣಿಕರನ್ನು ಕಲ್ಯಾಣ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ರೂಬಿ ಹಾಲ್ ಕ್ಲಿನಿಕ್ ರೈಲ್ವೆ ಆಸ್ಪತ್ರೆ ಮತ್ತು ಸಾಸೂನ್ ಜನರಲ್ ಆಸ್ಪತ್ರೆಯ ವೈದ್ಯರು ಒಟ್ಟು 99 ರೋಗಿಗಳನ್ನು ಪರೀಕ್ಷಿಸಿದರು ಮತ್ತು ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

50 ನಿಮಿಷಗಳ ನಂತರ ರೈಲು ತನ್ನ ಪ್ರಯಾಣ ಮುಂದುವರೆಸಿದೆ. ಕೆಲವು ಪ್ರಯಾಣಿಕರು ತಾವೇ ಆಹಾರ ತಂದಿದ್ದರು, ರೈಲ್ವೆ ಸಿಬ್ಬಂದಿ ಪೂರೈಸಿಲ್ಲ ಎಂದು ಹೇಳಲಾಗಿದೆ. ಎಲ್ಲಾ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ನಂತರ ಸಹಜ ಸ್ಥಿತಿಯಲ್ಲಿದ್ದಾರೆ. ಯಾವುದೇ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ, ಅವರೆಲ್ಲರೂ ಅದೇ ರೈಲಿನಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು, ಎಂದು ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಹೇಳಿಕೆ ತಿಳಿಸಿದೆ.

Shwetha M