ಅಭಿಷೇಕ್ ಬ್ಯಾಟ್ ನಲ್ಲಿ ರಬ್ಬರ್ ಲೇಯರ್ – ಮೋಸದಿಂದಲೇ ಬಿಗ್ ಸ್ಕೋರ್ ಬರ್ತಿದ್ಯಾ?
ಕುಣಿಯಲಾರದೆ ನೆಲ ಡೊಂಕು ಎಂದ ಲಂಕಾ!

ಅಭಿಷೇಕ್ ಬ್ಯಾಟ್ ನಲ್ಲಿ ರಬ್ಬರ್ ಲೇಯರ್ – ಮೋಸದಿಂದಲೇ ಬಿಗ್ ಸ್ಕೋರ್ ಬರ್ತಿದ್ಯಾ?ಕುಣಿಯಲಾರದೆ ನೆಲ ಡೊಂಕು ಎಂದ ಲಂಕಾ!

ಟಿ-20ಐ ಫಾರ್ಮೆಟ್​​ನಲ್ಲಿ ಭಾರತದ ಬ್ಯಾಟಿಂಗ್ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಕಳೆದ 20 ತಿಂಗಳಿಂದ ಘಟಾನುಘಟಿ ತಂಡಗಳಿಗೆಲ್ಲಾ ನೀರು ಕುಡ್ಸಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಸರಣಿ, ಸೌತ್ ಆಫ್ರಿಕಾ ವಿರುದ್ಧದ ವಾರ್ಮ್ ಅಪ್ ಮ್ಯಾಚಲ್ಲಿ ರನ್ ಮಳೆ ಸುರಿಸಿದ್ರು. ಯುಎಸ್​ಎ ವಿರುದ್ಧ ಮೊದಲ ಟಿ-20 ವಿಶ್ವಕಪ್ ಮ್ಯಾಚಲ್ಲಿ ಸೂರ್ಯಕುಮಾರ್ ಯಾದವ್ ಸಿಂಗಲ್ ಶೇರ್​ನಿಂತು ನಿಂತು ಮ್ಯಾಚ್ ಗೆಲ್ಲಿಸಿದ್ರು. ಆದ್ರೆ ಕೆಲವ್ರು ಭಾರತದ ಬ್ಯಾಟಿಂಗ್​ ನೋಡಿ ಉರ್ಕೊಳ್ತಿದ್ದಾರೆ. ಭಾರತೀಯರು ಬಳಸೋ ಬ್ಯಾಟ್​ಗಳೇ ಸರಿ ಇಲ್ಲ. ಮೋಸ ಮಾಡ್ತಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ದುಡ್ಡಿದ್ರೂ BCCI ದಡ್ಡತನ – ಗ್ರೇಡ್ ನಲ್ಲೂ RO-KOಗೆ ಅವಮಾನ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20ಐನಿಂದ ನಿವೃತ್ತಿ ಪಡೆದಾಗ ಈ ಮ್ಯಾಚ್​ಗಳು ಇನ್ಮೇಲೆ ಕ್ರೇಜ್ ಕಳ್ಕೊಳ್ಳುತ್ತೆ ಅಂತ್ಲೇ ಎಲ್ರೂ ಅನ್ಕೊಂಡಿದ್ರು. ಆದ್ರೆ ಈಗ ಭಾರತದ ಟಿ-20ಐ ಮ್ಯಾಚ್​ಗಳೇ ಎಲ್ರಿಗೂ ಫೇವರೆಟ್ ಆಗಿದೆ. ಅದಕ್ಕೆ ಕಾರಣ ಭಾರತದ ಬ್ಯಾಟಿಂಗ್ ಪರಾಕ್ರಮ.. ಅದ್ರಲ್ಲೂ ಅಭಿಷೇಕ್ ಶರ್ಮಾ ಅವ್ರ ಬಿರುಗಾಳಿ ಬ್ಯಾಟಿಂಗ್. ಓಪನರ್ ಆಗಿ ಕಣಕ್ಕೆ ಬರೋ ಅಭಿಷೇಕ್ ಇರೋವಷ್ಟು ಹೊತ್ತೂ ಸಿಕ್ಸ್, ಫೋರ್​ಗಳಲ್ಲೇ ಡೀಲ್ ಮಾಡ್ತಾರೆ. ಆಲ್ಮೋಸ್ಟ್ 200ಪ್ಲಸ್ ಸ್ಟ್ರೈಕ್​ರೇಟ್ ಮೇಂಟೇನ್ ಮಾಡ್ತಾರೆ. ಇತ್ತೀಚೆಗೆ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಜಾಯ್ನ್ ಆಗಿದ್ದಾರೆ. ರಿಂಕು ಸಿಂಗ್, ಪಾಂಡ್ಯ, ದುಬೆ ಫಿನಿಶಿಂಗ್ ಕೂಡ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಟೀಂ ಇಂಡಿಯಾ ಮ್ಯಾಚ್ ಅಂದ್ರೆ ಭಾರತೀಯರಷ್ಟೇ ಅಲ್ಲ ಬೇರೆ ಬೇರೆ ರಾಷ್ಟ್ರಗಳು ಕಣ್ಣರಳಿ ನೋಡೋ ಅಷ್ಟರ ಮಟ್ಟಿಗೆ ಧೂಳೆಬ್ಬಿಸ್ತಿದ್ದಾರೆ. ಆದ್ರೆ ಭಾರತದ ಬ್ಯಾಟಿಂಗ್ ಪವರ್ ಮುಂದೆ ಗೆಲ್ಲೋಕಾಗ್ದೇ ಕೆಲವ್ರು ಮೋಸದ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಈಗ ಶ್ರೀಲಂಕಾದ ಆಟಗಾರ ಭಾನುಕ ರಾಜಪಕ್ಸೆ ಗಂಭೀರ ಆರೋಪ ಮಾಡಿದ್ದಾರೆ.

ಭಾರತೀಯರ ಬ್ಯಾಟ್ ಗಳ ಮೇಲೆ ರಬ್ಬರ್ ಲೇಯರ್ ಇದೆ ಎಂದ ಭಾನುಕ!

ಭಾರತೀಯರ ಮುಂದೆ ಆನ್ ಫೀಲ್ಡ್​ನಲ್ಲಿ ಗೆಲ್ಲೋಕೆ ಆಗ್ದಿದ್ರೂ ಕೆಲವ್ರು ಆಫ್ ದಿ ಫೀಲ್ಡ್​ನಲ್ಲಿ ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಭಾನುಕ ರಾಜಪಕ್ಸೆ. ಇತ್ತೀಚಿಗೆ ಇಂಟರ್​ವ್ಯೂನಲ್ಲಿ ಮಾತನಾಡಿರೋ ರಾಜಪಕ್ಸೆ ಭಾರತದ ಬ್ಯಾಟಿಂಗ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ನ್ಯೂಸ್ ವೈರ್​ನಲ್ಲಿ ಸಂದರ್ಶನದ ವೇಳೆ ಭಾರತೀಯ ಬ್ಯಾಟಿಂಗ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರಂತಹ ಆಟಗಾರರು ಭಾರತ ಟಿ20 ಕ್ರಿಕೆಟ್ ಆಡುವ ವಿಧಾನವನ್ನು ಬದಲಾಯಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರಾಜಪಕ್ಸೆ ನೀಡಿರೋ ಸ್ಟೇಟ್​ಮೆಂಟ್ ಭಾರತೀಯರ ಕಣ್ಣು ಕೆಂಪಾಗಿಸಿದೆ. ಭಾರತೀಯ ಆಟಗಾರರು ಸ್ಪೆಷಲ್ ಬ್ಯಾಟ್​ಗಳನ್ನ ಬಳಸ್ತಾರೆ. ಇವು ಬೇರೆ ಯಾವುದೇ ಆಟಗಾರರು ಬಳಸೋ ಬ್ಯಾಟ್​ಗಳಿಗಿಂತ ಡಿಫ್ರೆಂಟ್ ಆಗಿವೆ. ಅಲ್ದೇ ಬ್ಯಾಟ್‌ಗಳ ಮೇಲೆ ರಬ್ಬರ್‌ ಲೇಯರ್ ಬಳಸಲಾಗಿದೆ. ಇದ್ರಿಂದಾಗಿಯೇ ಅಭಿಷೇಕ್ ಶರ್ಮಾ ಆ ಮಟ್ಟಿಗೆ ಸ್ಕೋರ್ ಮಾಡೋಕೆ ಸಾಧ್ಯವಾಗ್ತಿದೆ. ಆದ್ರೆ ಭಾರತೀಯರು ಬಳಸೋ ಬ್ಯಾಟ್​ಗಳನ್ನ ಬೇರೆ ಯಾರೂ ಕೂಡ ಖರೀದಿ ಮಾಡೋಕೆ ಸಾಧ್ಯನೇ ಇಲ್ಲ ಎಂದಿದ್ದಾರೆ. ಈ ಮೂಲಕ ಭಾರತೀಯರ ಬಿಗ್​ಸ್ಕೋರ್ ಗಳ ಹಿಂದೆ ಬ್ಯಾಟ್ ಸ್ಕ್ಯಾಮ್ ಇದೆ ಎಂದಿದ್ದಾರೆ.

ಕ್ರಿಕೆಟ್​ನಲ್ಲಿ ಭಾರತೀಯರ ಡಾಮಿನೇಷನ್ ನೋಡಿ ಗೆಲ್ಲೋಕಾಗ್ದೇ ಈ ಥರ ಹೇಳಿಕೆಗಳನ್ನ ಕೊಡೋದು ಇದೇ ಮೊದ್ಲೇನಲ್ಲ ಬಿಡಿ. ಈ ಹಿಂದೆ 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಜಾ ಬೌಲಿಂಗ್ ಬಗ್ಗೆಯೂ ಆರೋಪ ಮಾಡಿದ್ರು, ಭಾರತ ಐಸಿಸಿ ಅಥವಾ ಬಿಸಿಸಿಐನಿಂದ ಸ್ಪೆಷಲ್ ಚೆಂಡುಗಳನ್ನ ಪಡೆಯುತ್ತೆ. ಇದ್ರಿಂದಾಗೇ ಆಟಗಾರರು ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್‌ಗಳಲ್ಲಿ ಹೆಚ್ಚುವರಿ ಸ್ವಿಂಗ್ ಪಡೆದು ವಿಕೆಟ್ ತೆಗೆಯುತ್ತಾರೆ ಎಂದಿದ್ರು. ಆದ್ರೆ ಇದೆಲ್ಲಾ ಕೈಲಾಗದವ್ರ ಕೊನೇ ಅಸ್ತ್ರವೇ ಅಪಪ್ರಚಾರ ಎನ್ನುವಂಥ ಹೇಳಿಕೆಗಳಷ್ಟೇ.

Shantha Kumari