ಬಯ್ಯ ಏಕ್ ಪ್ಲೇಟ್ ಪಾನಿಪುರಿ ದೇದೋ.. – ರಸ್ತೆ ಬದಿಯಲ್ಲಿ ಪಾನಿಪುರಿ ಸವಿದ ಗಜರಾಜ

ಬಯ್ಯ ಏಕ್ ಪ್ಲೇಟ್ ಪಾನಿಪುರಿ ದೇದೋ.. – ರಸ್ತೆ ಬದಿಯಲ್ಲಿ ಪಾನಿಪುರಿ ಸವಿದ ಗಜರಾಜ

ಗೋಲ್ಗಪ್ಪ ಅಥವಾ ಪಾನಿಪುರಿ ಹೆಸರು ಕೇಳಿದರೆ ಅನೇಕರ ಬಾಯಲ್ಲಿ ನೀರೂರುತ್ತದೆ.  ಇದು ದೇಶದ ಅತ್ಯಂತ ಪ್ರಿಯವಾದ ಆಹಾರವಾಗಿದೆ. ಪ್ರತಿಯೊಬ್ಬರೂ ಇದನ್ನು ಇಷ್ಟಪಡುತ್ತಾರೆ. ಅದ್ರಲ್ಲೂ ಈ ಪಾನಿಪುರಿ ಯುವತಿಯರ ಆಲ್ ಟೈಮ್ ಫೇವರೆಟ್ ಸ್ಟ್ರೀಟ್ ಫುಡ್ ಅಂತಾನೇ ಹೇಳ್ಬಹುದು. ಈ ಹೆಂಗಳೆಯರು ಪ್ರತಿನಿತ್ಯ ಸಂಜೆ ಹೊತ್ತಿನಲ್ಲಿ ಬೀದಿಬದಿಗಳಲ್ಲಿರುವ ಪಾನಿಪುರಿ ಸ್ಟಾಲ್ ಗಳಿಗೆ ಹೋಗಿ ಬಯ್ಯ ಏಕ್ ಪ್ಲೇಟ್ ಪಾನಿಪುರಿ ದೇದೊ ಅಂತ ಹೇಳಿ ಬಾಯಿ ಚಪ್ಪರಿಸಿಕೊಂಡು ಪಾನಿಪುರಿಯನ್ನು ಸವಿಯುತ್ತಾರೆ. ಆದ್ರೆ ಇಲ್ಲೊಂದು ಆನೆಗೆ ಗೋಲ್ಗಪ್ಪವನ್ನು ಇನ್ನೂ ಬೇಕು.. ಇನ್ನೂ ಬೇಕು ಅಂತಾ ಸವಿಯುತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ:ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ – 11 ಮಂದಿ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಸಾಮಾನ್ಯವಾಗಿ ಆನೆಗಳು, ಕಬ್ಬು, ತರಕಾರಿ, ಸೋಪ್ಪು, ಹಣ್ಣುಗಳನ್ನು ಬಹಳ ಇಷ್ಟಪಟ್ಟು ತಿನ್ನುತ್ತವೆ. ಆದ್ರೆ ಇಲ್ಲೊಂದು ಆನೆಗೆ ಪಾನಿಪುರಿ ಇಷ್ಟವಾಗಿದೆ. ಹೀಗಾಗಿ ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುತ್ತಿದೆ. ಗಜರಾಜ ಪಾನಿಪುರಿ ತಿನ್ನುತ್ತಿರುವ ವಿಡಿಯೋವನ್ನು ಸೆರೆ ಹಿಡಿಯಲಾಗಿದ್ದು, ಈ ವಿಡಿಯೋವನ್ನು ವಿಸ್ಮಯ (@vismaya8) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಮುದ್ದಾದ ಆನೆಯೊಂದು ರಸ್ತೆ ಬದಿಯ ಪಾನಿಪುರಿ ಸ್ಟಾಲ್ ಒಂದರ ಬಳಿ ನಿಂತು, ಬಯ್ಯ ಏಕ್ ಪ್ಲೇಟ್ ಪಾನಿಪುರಿ ದೇದೋ ಅಂತ ಹೇಳಿ ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ತಿನ್ನುವಂತಹ ಮುದ್ದಾದ ದೃಶ್ಯವನ್ನು ಕಾಣಬಹುದು. ಜನವರಿ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.7 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.  ಒಬ್ಬ ಬಳಕೆದಾರರು ʼಇದು ಪಕ್ಕಾ ಹೆಣ್ಣಾನೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಆನೆಯನ್ನು ಹಾಳು ಮಾಡಿಬಿಟ್ರʼ ಅಂತ ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಾನಿಪುರಿ ಆನೆಗಳ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದನ್ನೆಲ್ಲಾ ಪ್ರಾಣಿಗಳಿಗೆ ಕೊಡಬಾರದುʼ ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಗಜರಾಜ ಪಾನಿಪುರಿ ತಿನ್ನುವ ದೃಶ್ಯವನ್ನು ನೋಡಲು ತುಂಬಾ ತಮಾಷೆಯಾಗಿದೆ ಅಂತ ಹೇಳಿದ್ದಾರೆ.

Shwetha M