ಆದಿ-ಭಾಗ್ಯ ಕಲ್ಯಾಣ.. ಮದುವೆ ನಿಲ್ಲಿಸ್ತಾನಾ ತಾಂಡವ್?‌ – ಕಟ್ಟಡದಿಂದ ಹಾರಿದ ಶ್ರೇಷ್ಠಾ ಏನಾದ್ಲು?

ಆದಿ-ಭಾಗ್ಯ ಕಲ್ಯಾಣ.. ಮದುವೆ ನಿಲ್ಲಿಸ್ತಾನಾ ತಾಂಡವ್?‌ – ಕಟ್ಟಡದಿಂದ ಹಾರಿದ ಶ್ರೇಷ್ಠಾ ಏನಾದ್ಲು?

ಭಾಗ್ಯ ಜೀವನದಲ್ಲಿ ಕಷ್ಟ ಮುಗಿಯೋದೇ ಇಲ್ಲ ಅನ್ಸುತೆ. ಒಂದಾದ ಮೇಲೊಂದು ಸಮಸ್ಯೆ ಎರಾಗುತ್ತಲೇ ಇದೆ. ತಾಂಡವ್‌ನ ಬಿಟ್ಟುಬಂದು ಒಂಟಿ ಜೀವನ ನಡೆಸ್ತಾ ಇದ್ದ ಭಾಗ್ಯ ಜೀವನಕ್ಕೆ ಆದಿ ಬೆಳಕಾಗಿ ಬಂದಿದ್ದ. ಇನ್ನೇನು ಆದಿ ಭಾಗ್ಯ ಒಂದಾಗ್ಬೇಕು ಅನ್ನುವಷ್ಟರಲ್ಲಿ ತಾಂಡವ್‌ ಎಂಟ್ರಿಕೊಟ್ಟ. ಇದೀಗ ಭಾಗ್ಯ ಯಾರನ್ನ ಒಪ್ಪಿಕೊಳ್ತಾಳೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ. ಈ ಹೊತ್ತಲ್ಲೇ ಭಾಗ್ಯ ಮದುವೆ ವಿಚಾರ ಮುನ್ನಲೆಗೆ ಬಂದಿದೆ. ಮತ್ತೊಂದ್ಕಡೆ ಶ್ರೇಷ್ಠಾ ಬಿಲ್ಡಿಂಗ್‌ನಿಂದ ಹಾರಿದ್ದಾಳೆ. ಇದೀಗ ಶ್ರೇಷ್ಠಾ ಏನಾದ್ಲೂ? ಭಾಗ್ಯ ಆದಿ ಮದುವೆ ನಡೆಯುತ್ತಾ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮತ್ತೆ ಯಶ್‌ ಬೋಲ್ಡ್‌ ಅವತಾರ! – ಟಾಕ್ಸಿಕ್‌ ಮೊದಲ ಹಾಡು ರಿಲೀಸ್‌ಗೆ ಡೇಟ್‌ ಫಿಕ್ಸ್!

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಹನಿ ಹನಿ ಅಂತ ಹೇಳ್ಕೊಂಡು ಶ್ರೇಷ್ಠಾ ಹಿಂದೆ ಹೋಗಿದ್ದ ತಾಂಡವ್‌ಗೆ ಈಗ ಬುದ್ದಿ ಬಂದಂತಿದೆ. ಶ್ರೇಷ್ಠಾ ಇನ್ನೊಂದು ಮುಖ ಗೊತ್ತಾಗ್ತಿದ್ದಂತೆ ಭಾಗ್ಯ ಮನೆಗೆ ಬಂದಿದ್ದಾನೆ. ತಾನು ಬದಲಾಗಿದ್ದೇನೆ. ನನಗೆ ಭಾಗ್ಯಳೇ ಬೇಕು ಅಂತ ಹೇಳ್ತಾ ಇದ್ದಾನೆ. ಆದ್ರೆ ತಾಂಡವ್‌ ಮಾತನ್ನ ಯಾರು ನಂಬುತ್ತಿಲ್ಲ. ಹೊಸ ಡ್ರಾಮಾ ಮಾಡ್ತಿದ್ದಾನೆ ಎಂದೇ ಎಲ್ಲರೂ ಹೇಳ್ತಿದ್ದಾರೆ. ಇತ್ತ ಆದೀಶ್ವರ್‌ ಕೂಡ ಭಾಗ್ಯ ಹಿಂದೆಯೇ ಸುತ್ತುತ್ತಾ ಇದ್ದಾನೆ. ಆಕೆಯನ್ನ ತಾನೇ ಮದುವೆ ಆಗ್ತೇನೆ ಎಂದು ಹೇಳ್ತಿದ್ದಾನೆ. ಇವೆಲ್ಲದ್ರ ಮಧ್ಯೆ ಭಾಗ್ಯಗೆ ಶಾಕ್‌ ಎದುರಾಗಿದೆ. ಬುಡಬುಡಿಕೆಯವರು ಈಗ ಭಾಗ್ಯ ಬಗ್ಗೆ ಶಾಕಿಂಗ್‌ ಭವಿಷ್ಯ ನುಡಿದಿದ್ದಾರೆ.

ಭಾಗ್ಯ ಜೀವನದಲ್ಲಿ ಎಲ್ಲ ಸರಿ ಹೋಗ್ತಿದೆ ಅನ್ನುವಷ್ಟರಲ್ಲಿ ಇನ್ನೇನೋ ಆಗಿರುತ್ತೆ. ಇದೀಗ ಮತ್ತೆ ಆಕೆ ಜೀವನದಲ್ಲಿ ಬಿರುಗಾಳಿ ಎಳೋ ಮುನ್ಸೂಚನೆ ಸಿಕ್ಕಿದೆ. ಬುಡಬುಡಿಕೆಯರು ನುಡಿದಿರುವ ಭವಿಷ್ಯ ಇಡೀ ಕುಟುಂಬವನ್ನು ಚಿಂತೆಗೆ ತಳ್ಳಿದೆ. ಹೌದು, ಭಾಗ್ಯಾಳ ಮನೆಗೆ ಬಂದ ಬುಡಬುಡಿಕೆಯವರು ಒಂದು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ. ಈ ಮನೆಯಲ್ಲಿ ಒಬ್ಬರಿಗೆ ಮಾಂಗಲ್ಯ ಸೌಭಾಗ್ಯ ಒದಗಿ ಬಂದಿದೆ ಎಂದು ಹೇಳುವ ಮೂಲಕ ಕಥೆಗೆ ಹೊಸ ತಿರುವು ನೀಡಿದ್ದಾರೆ.  ಮುಂದಿನ ಹುಣ್ಣಿಮೆಯ ಒಳಗೆ ಒಂದು ದೊಡ್ಡ ಬದಲಾವಣೆ ಆಗಲಿದೆ. ಈ ಹುಣ್ಣಿಮೆ ಕಳೆದು ಬರುವ ಹುಣ್ಣಿಮೆಯೊಳಗಾಗಿ ನಿನ್ನ ಕುತ್ತಿಗೆಗೆ ಮಾಂಗಲ್ಯ ಬೀಳಲೇಬೇಕು. ಒಂದು ವೇಳೆ ಹಾಗೆ ಆಗದಿದ್ದರೆ ಸಾಯುವವರೆಗೂ ನಿನಗೆ ಮಾಂಗಲ್ಯ ಭಾಗ್ಯ ಇರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಮಾತು ಕೇಳಿ ಭಾಗ್ಯಾ ಮಾತ್ರವಲ್ಲದೇ, ಇಡೀ ಮನೆಯವರಿಗೆ ಶಾಕ್‌ಗೆ ಒಳಗಾಗಿದ್ದಾರೆ.

ಹೌದು, ಭಾಗ್ಯಳನ್ನ ಕುಸುಮಾ ತನ್ನ ಮಗಳಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾಳೆ. ಭಾಗ್ಯ ಮೇಲೆ ಆಕೆಗೆ ಬೆಟ್ಟದಷ್ಟು ನಂಬಿಕೆ ಇದೆ. ತಾನು ಹೆತ್ತ ಮಗ ತನ್ನನ್ನ ಯಾವಾಗ ಬೇಕಾದ್ರೂ ಬಿಟ್ಟುಕೊಡಬಹುದು. ಆದ್ರೆ ಸೊಸೆ ಯಾವತ್ತು ತನ್ನ ಕೈ ಬಿಡಲ್ಲ ಅನ್ನೋದು ಆಕೆಗೆ ಗೊತ್ತಿದೆ. ಇದೀಗ ಕುಸುಮಾ ಜ್ಯೋತಿಷಿಯ ಮಾತನ್ನ ಕೇಳಿ ಶಾಕ್‌ ಆಗಿದ್ದಾಳೆ. ಯಾಕಂದ್ರೆ ಕುಸುಮಾ ಆದೀಶ್ವರ್‌ ಜೊತೆ ಭಾಗ್ಯ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಈಗ ತಾಂಡವ್‌ ಕೂಡ ಮನೆಗೆ ಬಂದಿದ್ದು, ಆಕೆಯ ಆತಂಕಕ್ಕೆ ಕಾರಣವಾಗಿದೆ.

ಮತ್ತೊಂದ್ಕಡೆ ಶ್ರೇಷ್ಠಾ ಹೊಸ ಡ್ರಾಮಾ ಶುರುಮಾಡಿದ್ದಾಳೆ. ತಾಂಡವ್‌ ಭಾಗ್ಯ ಮನೆಗೆ ಬದ್ದಿದ್ದು ನೋಡಿ ಶಾಕ್‌ ಆಗಿದ್ದಾಳೆ. ತನ್ನ ಜೊತೆ ಬರಬೇಕು ಅಂತ ಹಠ ಹಿಡಿದಿದ್ದಾಳೆ. ಆದ್ರೆ ತಾಂಡವ್‌ ಹೋಗಲು ರೆಡಿ ಇಲ್ಲ. ಇದ್ರಿಂದ ನೊಂದ ಶ್ರೇಷ್ಠಾ ಬಿಲ್ಡಿಂಗ್‌ನಿಂದ ಹಾರಲು ಹೋಗಿದ್ದಾಳೆ. ಆದ್ರೆ ಶ್ರೇಷ್ಠಾ ಆತ್ಮಹತ್ಯೆ ಮಾಡಿಕೊಂಡ್ಲಾ? ಅಥವಾ ಸೂಸೈಡ್‌ ಡ್ರಾಮಾ ಮಾಡ್ತಿದ್ದಾಳಾ ಅನ್ನೋದನ್ನ ಸೀರಿಯಲ್‌ನಲ್ಲಿ ಇನ್ನೂ ತೋರಿಸಿಲ್ಲ. ಇದೀಗ ಶ್ರೇಷ್ಠಾ ಅಕ್ಕ, ಪಕ್ಕದ ಮನೆಯವರು ತಾಂಡವ್‌ಗೆ ಪದೇ ಪದೆ ಕಾಲ್‌ ಮಾಡಿ ನಿಮ್ಮ ಮನೆ ಮುಂದೆ ಇರೋ, ಹಾಲು, ಪೇಪರ್‌ನ ತೆಗೆದುಕೊಂಡು ಹೋಗಿ. ಶ್ರೇಷ್ಠಾ ಕಾಲ್‌ ರಿಸೀವ್‌ ಮಾಡ್ತಿಲ್ಲ ಎಂದು ಹೇಳ್ತಿದ್ದಾರೆ. ಆದ್ರೆ ತಾಂಡವ್‌ ಇದನ್ನ ತಲೆಗೆ ಹಾಕಿಕೊಳ್ತಿಲ್ಲ. ಇದೀಗ ಶ್ರೇಷ್ಠಾ ಏನಾದ್ಲು ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ಒಟ್ಟಿನಲ್ಲಿ ಭಾಗ್ಯ ಜೀವನದಲ್ಲಿ ದೊಡ್ಡ ಬಿರುಗಾಳಿ ಎದುರಾಗಲಿದೆ ಅನ್ನೋದು ಗೊತ್ತಾಗಿದೆ. ಇದೀಗ ಭಾಗ್ಯ ಆದಿನಾ ಮದುವೆ ಆಗ್ತಾಳಾ ಇಲ್ಲ ತಾಂಡವ್‌ ನ ಒಪ್ಪಿಕೊಳ್ತಾಳಾ? ಅಥವಾ ಇಬ್ಬರು ಬೇಡ.. ಸಾಯೋವರೆಗೂ ತಾನು ಒಂಟಿಯಾಗಿ ಇರ್ತೇನೆ ಅಂತಾ ಹೇಳ್ತಾಳಾ  ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

Shwetha M

Leave a Reply

Your email address will not be published. Required fields are marked *