ಮುಗಿಯಲಿದೆ ಭಾಗ್ಯಲಕ್ಷ್ಮೀ ಪಯಣ – ಧಾರಾವಾಹಿ ಕೊನೇ ಸಂಚಿಕೆ ಪ್ರಸಾರ ಯಾವಾಗ?

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ ಪಯಣ ಸಧ್ಯದಲ್ಲೇ ಮುಗಿಯಲಿದೆ. ನಟಿ ಸುಷ್ಮಾ ರಾವ್ ಅವರ ಲೀಡ್ ರೋಲ್‌ನಲ್ಲಿ ಮೂಡಿಬಂದಿರುವ ಧಾರಾವಾಹಿಯ ಜನಪ್ರಿಯತೆ ಪಡೆದುಕೊಂಡಿತ್ತು. ಇದೀಗ ಈ ಧಾರಾವಾಹಿ ಮುಕ್ತಾಯವಾಗುತ್ತಿದೆ.
ಇದನ್ನೂ ಓದಿ:ಕನ್ನಡದ ನಟಿ ಶ್ರೀಲೀಲಾ & ಕ್ರಿಕೆಟರ್ ತಿಲಕ್ ವರ್ಮಾ ಕದ್ದುಮುಚ್ಚಿ ಡೇಟಿಂಗ್ – ಲವ್ ಸೀಕ್ರೆಟ್ ಬಿಚ್ಚಿಟ್ಟ ನಟಿ ತಾಯಿ!
ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ ಅಂತಿಮ ಸಂಚಿಕೆಯತ್ತ ಹೆಜ್ಜೆ ಇಡುತ್ತಿದೆ. ಭಾಗ್ಯ ಮತ್ತು ಲಕ್ಷ್ಮಿ ಎಂಬ ಇಬ್ಬರು ಸಹೋದರಿಯರ ಕಥೆಯನ್ನಿಟ್ಟುಕೊಂಡು ಶುರುವಾದ ಈ ಸೀರಿಯಲ್, ನಂತರ ಪ್ರತ್ಯೇಕ ಧಾರಾವಾಹಿಗಳಾದವು. ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ಮೊದಲೇ ಮುಗಿದಿದೆ. ಈಗ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಅಂತಿಮ ಅಧ್ಯಾಯಕ್ಕೆ ಬಂದು ನಿಂತಿದೆ.
ಈ ಧಾರಾವಾಹಿ ನಟಿ ಸುಷ್ಮಾ ರಾವ್ (ಭಾಗ್ಯ) ಅವರ ಅದ್ಭುತ ನಟನೆಯಿಂದಾಗಿ ಪ್ರತಿ ಮನೆಮಾತಾಗಿತ್ತು. ಮೊದಲ ಹಂತಗಳಲ್ಲಿ ಪತಿಯಿಂದ ಸಿಗದ ಪ್ರೀತಿ, ನಂತರ ಭಾಗ್ಯ ಗಂಡ ತಾಂಡವ್ ಬೇರೆ ಹುಡುಗಿಯೊಂದಿಗೆ ಸಂಬಂಧ ಬೆಳೆಸುವುದು, ಮಕ್ಕಳ ಜವಾಬ್ದಾರಿ, ಅತ್ತೆ ಮಾವನ ಜವಾಬ್ದಾರಿ ಹೊತ್ತ ಗೃಹಿಣಿಯಾಗಿ ಭಾಗ್ಯ ತನ್ನ ಕರ್ತವ್ಯ ನಿಭಾಯಿಸುವ ಕಥೆ ಮಹಿಳಾ ವೀಕ್ಷಕರನ್ನು ಸೆಳೆದಿದೆ.
ಗಂಡನಿಂದ ತಿರಸ್ಕಾರಕ್ಕೆ ಒಳಗಾಗುವ ಮುಗ್ಧ ಗೃಹಿಣಿ ಭಾಗ್ಯ, ನಂತರದ ದಿನಗಳಲ್ಲಿ ಶಿಕ್ಷಣ ಪಡೆದು, ಸ್ವಾವಲಂಬಿಯಾಗಿ ಹೇಗೆ ನಿಲ್ಲುತ್ತಾಳೆ ಎಂಬ ಕಥಾಹಂದರ ಮಹಿಳಾ ವೀಕ್ಷಕರನ್ನು ಅಪಾರವಾಗಿ ಸೆಳೆದಿತ್ತು. ತಾಂಡವ್ ಎಂಬ ನೆಗೆಟಿವ್ ಪಾತ್ರ ಹಾಗೂ ಶ್ರೇಷ್ಠಾಳ ಕುತಂತ್ರಗಳ ಸುತ್ತ ನಡೆದ ಹೈ-ಡ್ರಾಮಾ ಸೀರಿಯಲ್‌ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಭಾಗ್ಯ ಮತ್ತು ತಾಂಡವ್ ವಿಚ್ಛೇದನ, ಆದಿ ಜೊತೆ ಭಾಗ್ಯಾ ಮದುವೆಯಿಂದ ಕಥೆ ಮತ್ತೊಂದು ತಿರುವು ಪಡೆದುಕೊಂಡಿತ್ತು. ಈಗ ಕಥೆಯನ್ನು ಎಳೆಯದೆ, ವೀಕ್ಷಕರಿಗೆ ನಿರಾಸೆ ಮೂಡಿಸದಂತೆ ಗೌರವಯುತವಾಗಿ ಮುಕ್ತಾಯಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

ನೋಡಿರಿ

