ಶ್ರೇಷ್ಠಾ ಪ್ಲ್ಯಾನ್.. ಗೆದ್ದ ಭಾಗ್ಯ.. ತಾಂಡವ್ ಗೆ ಭಾಗ್ಯ ಟಕ್ಕರ್ – ಹೊಸ ಬ್ಯುಸಿನೆಸ್ ಕೊನೆಗೂ ಸಕ್ಸಸ್?

ಭಾಗ್ಯ ಸೋಲೋ ಮಾತೇ ಇಲ್ಲ.. ಒಂದು ಕೆಲ್ಸ ಹೋದ್ರೆ ಏನಾಯ್ತು.. ಇನ್ನೊಂದು ಕೆಲ್ಸ ಹುಡುಕಿದ್ರೆ ಆಯ್ತು ಅನ್ನೋದು ಭಾಗ್ಯ ಮೈಂಡ್ ಸೆಟ್.. ಭಾಗ್ಯ ಎಲ್ಲಾ ನಿರ್ಧಾರಕ್ಕೂ ಕುಸುಮಾ ಸಪೋರ್ಟಿವ್ ಆಗಿ ನಿಂತಿದ್ದಾಳೆ. ಇದೀಗ ಭಾಗ್ಯ ಹೊಸ ಬ್ಯುಸಿನೆಸ್ ಶುರುಮಾಡಿದ್ದಾಳೆ. ಅದಕ್ಕೆ ಕೈತುತ್ತು ಅಂತಾ ಹೆಸ್ರು ಇಟ್ಟಿದ್ದಾಳೆ. ಆದ್ರೆ ಈ ಕೆಲಸದ ಮೇಲೂ ತಾಂಡವ್, ಶ್ರೇಷ್ಠಾ ವಕ್ರ ದೃಷ್ಟಿ ಬಿದ್ದಿದೆ. ಭಾಗ್ಯಳಿಗೆ ಲಾಸ್ ಮಾಡ್ಬೇಕು ಅಂತಾ ಶ್ರೇಷ್ಠಾ ಹೊಸ ಪ್ಲ್ಯಾನ್ ಮಾಡಿದ್ಲು.. ಆದ್ರೆ ಆಕೆಯ ಪ್ಲ್ಯಾನ್ ನಿಂದ ಭಾಗ್ಯಗೆ ಒಳ್ಳೆಯದ್ದೇ ಆಗಿದೆ. ಬಂದ ಸವಾಲ್ ಅನ್ನ ಭಾಗ್ಯ ಚೆನ್ನಾಗೇ ನಿಭಾಯಿಸಿದ್ದಾಳೆ. ಬಂದ ದುಡ್ಡಲ್ಲಿ ಮಗನ ಫೀಸ್ ಕಟ್ಟಿದ್ದಾಳೆ.
ಇದನ್ನೂ ಓದಿ: ಲಕ್ಷ್ಮೀ ಸೀಮಂತ.. ಕೀರ್ತಿಗೆ ಮೋಸ.. – ಕುತಂತ್ರಿ ಕಾವೇರಿಗೆ ಜೈಲೇ ಗತಿ
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ತಾಂಡವ್, ಶ್ರೇಷ್ಠಾ ಜೊತೆ ಸೇರಿಕೊಂಡು ಭಾಗ್ಯಳನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಪ್ರಯತ್ನ ಮಾಡ್ತಾ ಬಂದಿದ್ದಾನೆ. ಅವನು ಪ್ರತಿ ಬಾರಿ ಭಾಗ್ಯಳನ್ನು ಸೋಲಿಸಲು ಪ್ರಯತ್ನಿಸಿದಾಗಲೂ, ಅವಳು ಮತ್ತೆ ಗೆಲ್ಲುತ್ತಾ ಅವನಿಗೆ ಪಾಠ ಕಲಿಸುತ್ತಿದ್ದಾಳೆ. ಹೀಗಾಗಿ ಅವನಿಗೆ ಭಾಗ್ಯ ಮೇಲಿನ ದ್ವೇಷ ಮತ್ತು ಕೋಪ ಮತ್ತಷ್ಟು ಹೆಚ್ಚಾಗಿದೆ. ಇದೀಗ ಭಾಗ್ಯ ಹೊಸ ಬ್ಯುಸಿನೆಸ್ ಮೇಲೂ ಶ್ರೇಷ್ಠಾ ತಾಂಡವ್ ಕೆಟ್ಟ ದೃಷ್ಠಿ ಬಿದ್ದಿದೆ. ಹೇಗಾದ್ರೂ ಮಾಡಿ, ಅವಳಿಗೆ ಲಾಸ್ ಮಾಡಿಸ್ಬೇಕು ಅಂತಾ ಶ್ರೇಷ್ಠಾ ಹೊಸ ಪ್ಲಾನ್ ಮಾಡಿದ್ಲು.. ಇದ್ರಿಂದಾಗಿ ಭಾಗ್ಯಗೆ ಒಳ್ಳೆಯದ್ದಾಗಿದೆ. ಕೈತುಂಬಾ ದುಡ್ಡು ಬರುವಂತೆ ಆಗಿದೆ.
ತನ್ಮಯ್ ಸ್ಕೂಲ್ ಫೀಸ್ ಕಟ್ಟಲು ಭಾಗ್ಯ ಒದ್ದಾಡುತ್ತಿರುತ್ತಾಳೆ. ಹೀಗಾಗಿ ಮಗನ ಸ್ಲೂಕ್ ಫೀಸ್ ತಾನೇ ಕಟ್ಬೇಕು ಅಂತಾ ತಾಂಡವ್ ಪ್ಲ್ಯಾನ್ ಮಾಡಿದ್ದ.. ಭಾಗ್ಯ ಹೊಂದಿಸಿದ್ದ ದುಡ್ಡು ಕೂಡ ಖರ್ಚಾಗ್ಬೇಕು.. ಆಗ ತಾನೇ ಸ್ಕೂಲ್ ಫೀಸ್ ಕಟ್ಬೋದು ಅಂತಾ ಪ್ಲ್ಯಾನ್ ಮಾಡಿದ್ದ.. ಹೀಗಾಗಿ ಶ್ರೇಷ್ಠಾ ಹಾಗೂ ಆಕೆಯ ಫ್ರೆಂಡ್ ಸೇರ್ಕೊಂಡು ಖತರ್ನಾಕ್ ಐಡಿಯಾ ಮಾಡ್ತಾರೆ. ಇದಕ್ಕೆ ತಾಂಡವ್ ಕೂಡ ಕೈ ಜೋಡಿಸಿದ್ದಾನೆ. ಬಳಿಕ ಶ್ರೇಷ್ಠಾ ಫ್ರೆಂಡ್ ಭಾಗ್ಯಗೆ ಫೋನ್ ಮಾಡಿ, ಮನೆಯಲ್ಲಿ ಫಂಕ್ಷನ್ ಇದೆ, ಹೀಗಾಗಿ ನೀವು ಅಡುಗೆ ಮಾಡಿ ಕೊಡಬೇಕು. 200 ಜನಕ್ಕೆ ಊಟಕ್ಕೆ ರೆಡಿ ಮಾಡಿ ಎಂದು ಹೇಳಿದ್ದಾಳೆ. ಊಟ ಇಲ್ಲಿ ತಂದು ಕೊಟ್ಟ ಬಳಿಕ ಹಣ ಕೊಡುತ್ತೇನೆ ಎಂದು ಹೇಳಿದ್ದಾಳೆ. ಭಾಗ್ಯ ಮೊದಲು ಆಗುವುದಿಲ್ಲ ಎಂದು ಹೇಳುತ್ತಾಳೆ. ನಂತರ ಮನೆಯವರ ಒತ್ತಾಯದಿಂದ ಒಪ್ಪಿಕೊಳ್ಳುತ್ತಾಳೆ.
ಅಡುಗೆ ಮಾಡಿ, ಭಾಗ್ಯ ಶ್ರೇಷ್ಠಾ ಫ್ರೆಂಡ್ ಮನೆ ಮುಂದೆ ಹೋಗಿದ್ದಾಳೆ.. ಆದ್ರೆ ಆರ್ಡರ್ ಕ್ಯಾನ್ಸಲ್ ಮಾಡಿದ್ದಾಳೆ. ತಾನು ಮನೆಯಲ್ಲಿ ಇಲ್ಲ ಅಂತಾ ಹೇಳಿದ್ದಾಳೆ. ಆದ್ರೆ ಶ್ರೇಷ್ಠಾ ಫ್ರೆಂಡ್ ಭಾಗ್ಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ಬಳಿಕ ಆಕೆಯ ಬಾಯಿ ಬಿಡಿಸಿದ್ದಾಳೆ. ಆಗಲೇ ಗೊತ್ತಾಗಿದ್ದು, ಈ ಖತರ್ನಾಕ್ ಕೆಲಸದ ಹಿಂದೆ ಇರೋದು ಶ್ರೇಷ್ಠಾ ಅಂತಾ. ಬಳಿಕ ಶ್ರೇಷ್ಠಾ ಮನೆಗೆ ಹೋದ ಭಾಗ್ಯ ಆಕೆಗೆ ಸರಿಯಾಗೇ ಕಪಾಳ ಮೋಕ್ಷ ಮಾಡಿದ್ದಾಳೆ. ಆಕೆಯ ಕೆನ್ನೆಗೆ ರಪ ರಪ ಅಂತಾ ಬಾರಿಸಿದ್ದಾಳೆ. ಬಳಿಕ ಶ್ರೇಷ್ಠಾ ಪರ್ಸ್ ನಿಂದ ದುಡ್ಡು ಕಿತ್ತೊಂಡಿದ್ದಾಳೆ. ಅಷ್ಟೇ ಅಲ್ಲ ತಾಂಡವ್ ಗಿಂತ ಮುಂಚೆಯೇ ಸ್ಕೂಲ್‌ಗೆ ಬಂದು ಫೀಸ್ ಕಟ್ಟಿದ್ದಾಳೆ ಭಾಗ್ಯ. ಆದ್ರೆ ತಾಂಡವ್ ಗೆ ಇದನ್ನ ಸಹಿಸಿಕೊಳ್ಳೋದಿಕ್ಕೆ ಆಗ್ತಿಲ್ಲ.. ಯಾರು ಫೀಸ್ ಕಟ್ಟಿದ್ದಾರೆ ಅಂತಾ ಯೋಚನೆ ಮಾಡ್ತಿರುವಾಗಲೇ ಭಾಗ್ಯ ಬಂದು ಸರಿಯಾಗೇ ಮಂಗಳಾರತಿ ಮಾಡಿದ್ದಾಳೆ. ಇದು ಆತನಿಗೆ ಸಹಿಸಿಕೊಳ್ಳೋಕೆ ಆಗದೇ ಆತ ಕಿರುಚಾಡಿದ್ದಾನೆ. ಇದೀಗ ಶ್ರೇಷ್ಠಾಳಿಗೆ ತಾಂಡವ್ ಮಂಗಳಾರತಿ ಫಿಕ್ಸ್.. ಭಾಗ್ಯ ಸೋಲೋ ಮಾತೇ ಇಲ್ಲ.. ಆಕೆಯ ಹೊಸ ಬ್ಯುಸಿನೆಸ್ ಸಕ್ಸಸ್ ಆಗುತ್ತೆ ಅಂತಾ ಸೀರಿಯಲ್ ಫ್ಯಾನ್ಸ್ ಹೇಳ್ತಿದ್ದಾರೆ.