ಮನೆಹಾಳಿ ಶ್ರೇಷ್ಠಾ ಬಂಡವಾಳ ಬಯಲು – ಮರಳಿ ಭಾಗ್ಯ ಮನೆ ಸೇರಿಕೊಳ್ತಾನಾ?

ಮನೆಹಾಳಿ ಶ್ರೇಷ್ಠಾ ಬಂಡವಾಳ ಬಯಲು – ಮರಳಿ ಭಾಗ್ಯ ಮನೆ ಸೇರಿಕೊಳ್ತಾನಾ?

ಶ್ರೇಷ್ಠಾ ತಾಂಡವ್‌ ನ ಎಷ್ಟೇ ಇಂಪ್ರೆಸ್‌ ಮಾಡೋದಿಕ್ಕೆ ಟ್ರೈ ಮಾಡಿದ್ರೂ ಅದು ವರ್ಕೌಟ್‌ ಆಗ್ತಾನೆ ಇಲ್ಲ.. ಭಾಗ್ಯ ಮುಂದೆ ಆಕೆ ಡಮ್ಮಿ ಅನ್ನೋದು ಫ್ರೂವ್‌ ಆಗ್ತಾನೆ ಇದೆ. ಇದೀಗ ತಾಂಡವ್‌ ಮುಂದೆ ಶ್ರೇಷ್ಠಾ ಬಂಡವಾಳ ಬಯಲಾಗಿದೆ. ಭಾಗ್ಯ ಮುಂದೆಯೇ ಶ್ರೇಷ್ಠಾಗೆ ಕಪಾಳಮೋಕ್ಷ ಮಾಡಿದ್ದಾನೆ.. ತನ್ನ ಫ್ಯಾಮಿಲಿ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳೋಕೆ ನೀನ್ಯಾರು ಅಂತಾ ಪ್ರಶ್ನೆ ಮಾಡಿದ್ದಾನೆ. ಹಾಗಾದ್ರೆ ಶ್ರೇಷ್ಠಾ ಕೆಟ್ಟವಳು ಅಂತಾ ಆತನಿಗೆ ಗೊತ್ತಾಯ್ತಾ? ತಾಂಡವ್‌ ಗೆ ಭಾಗ್ಯನೇ ಬೆಸ್ಟ್‌ ಅಂತಾ ಅನ್ನಿಸಿತಾ? ಭಾಗ್ಯ ಮನೆಗೆ ವಾಪಾಸ್‌ ಬರ್ತಾನಾ ಅಂತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಕ್ಫ್ ಮಸೂದೆ ಅಂಗೀಕಾರಕ್ಕೆ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ತೀವ್ರ ಆಕ್ಷೇಪ

ಭಾಗ್ಯ ಲಕ್ಷ್ಮೀ ಸೀರಿಯಲ್ ಈಗ ಹೊಸ ತಿರುವು ಪಡೆದುಕೊಳ್ಳುತ್ತಿದೆ.   ಭಾಗ್ಯಗಿಂತ ತಾನೇ ಬೆಸ್ಟ್‌ ವೈಫ್‌ ಅಂತಾ ತೋರಿಸಿಕೊಳ್ಳಲು ಶ್ರೇಷ್ಠಾ ಏನೇನೋ ಮಾಡ್ತಿದ್ದಾಳೆ. ಹೋಟೆಲ್‌ ನಿಂದ ಪಾರ್ಸೆಲ್‌ ತರಿಸಿ, ತಾನೇ ಮಾಡಿದ್ದು ಅಂತಾ ತಾಂಡವ್‌ ಮುಂದೆ ಬಿಲ್ಡ್‌ ಅಪ್‌ ಕೊಡ್ತಾಳೆ.. ಆದ್ರೆ ತಾಂಡವ್‌ಗೆ ಶ್ರೇಷ್ಠಾ ಎಷ್ಟು ಚೆನ್ನಾಗಿ ಅಡುಗೆ ಮಾಡ್ತಾಳೆ ಅಂತಾ ಗೊತ್ತಿದೆ. ಇದೀಗ ಶ್ರೇಷ್ಠಾ ತಾಂಡವ್‌ ಕೋಪಕ್ಕೆ ಗುರಿಯಾಗಿದ್ದಾಳೆ. ತನ್ವಿ ವಿಚಾರವಾಗಿ ನಿರ್ಧಾರ ತೆಗೆದುಕೊಂಡ ಶ್ರೇಷ್ಠಾಗೆ ಮಹಾ ಮಂಗಳಾರತಿ ಮಾಡಿದ್ದಾನೆ. ಅಷ್ಟೇ ಅಲ್ಲ ಆಕೆಯ ಕೆನ್ನೆಗೆ ರಪ ರಪ ಅಂತಾ ಬಾರ್ಸಿದ್ದಾನೆ.

ತನ್ವಿ ಇತ್ತೀಚೆಗಷ್ಟೇ ಕಾಲೇಜಿಗೆ ಸೇರ್ಕೊಂಡಿದ್ಲು.. ಆದ್ರೆ ಆಕೆ ಫ್ರೆಂಡ್ಸ್‌ ಜೊತೆ ರೆಸಾರ್ಟ್ ಗೆ ಹೋಗೋದಕ್ಕೆ ಅಮ್ಮನ ಬಳಿ ಪರ್ಮಿಷನ್ ಕೇಳಿದ್ಲು. ಇದಕ್ಕೆ ಭಾಗ್ಯ  ಒಪ್ಪಿಲ್ಲ.. ಹೀಗಾಗೇ ತನ್ವಿ ನೇರವಾಗಿ ತಾಂಡವ್‌ ಬಳಿ ಹೋಗಿ ರೆಸಾರ್ಟ್‌ ಗೆ ಹೋಗಲು ಪರ್ಮಿಷನ್‌ ಕೇಳಿದ್ದಾಳೆ. ಆದ್ರೆ ತಾಂಡವ್‌ ಕೂಡ ಸೈನ್‌ ಹಾಕೋದಿಕ್ಕೆ ಒಪ್ಪಿಲ್ಲ.. ಕೊನೆಗೆ ಆಕೆಗೆ ನೆನಪಾಗಿದ್ದು ಶ್ರೇಷ್ಠಾ ಆಂಟಿ. ತನ್ವಿ ಶ್ರೇಷ್ಠಾ ಬಳಿ ಈ ವಿಚಾರ ಹೇಳ್ತಿದ್ದಂತೆ ತನ್ವಿ ನಮ್ಮ ಸೈಡ್‌ ಆದ್ರೆ ತಾಂಡವ್‌ ಖುಷಿ ಪಡ್ತಾನೆ ಅಂತಾ  ಪರ್ಮಿಶನ್ ಲೆಟರ್ ಗೆ ಸೈನ್‌ ಹಾಕಿದ್ದಾಳೆ. ಆದ್ರೆ ತನ್ವಿ ರೆಸಾರ್ಟ್‌ ಗೆ ಹೋಗ್ತಿದ್ದಂತೆ ಪೊಲೀಸರ ಕೈಗೆ ಸಿಕ್ಕಾಕೊಂಡಿದ್ದಾಳೆ. ಇದ್ರಿಂದಾಗಿ ಭಾಗ್ಯ ಹೋಗಿ ಆಕೆಯನ್ನ ಬಿಡಿಸಿಕೊಂಡು ಬರೋತರ ಆಗಿದೆ. ಈ ವಿಚಾರ ಗೊತ್ತಾಗ್ತಿದ್ದಂತೆ, ತಾಂಡವ್‌ ಭಾಗ್ಯ ಮನೆಗೆ ಬಂದು ದೊಡ್ಡ ರಾದ್ಧಾಂರವೇ ಮಾಡಿದ್ದಾನೆ. ಭಾಗ್ಯ ವಿರುದ್ಧ ಕೂಗಾಡಿದ್ದಾನೆ. ಆದ್ರೆ ಕೊನೆಗೆ ತನ್ವಿಗೆ ಪರ್ಮಿಶನ್ ಕೊಟ್ಟದ್ದು, ಶ್ರೇಷ್ಠಾ ಅನ್ನೋದು ಗೊತ್ತಾಗಿ, ಭಾಗ್ಯ ಹಾಗೂ ತಾಂಡವ್ ಇಬ್ಬರೂ ಕೋಪ ಮಾಡ್ಕೊಂಡಿದ್ದಾರೆ.

ನನ್ನ ಮಗಳ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳೋಕೆ ಯಾರು ನೀನು ಎಂದು ಭಾಗ್ಯ ಕೇಳಿದ್ದಾಳೆ. ಅದಕ್ಕೆ ಸೊಕ್ಕಿನಿಂದ ಶ್ರೇಷ್ಠಾ ನಿಂದು, ತಾಂಡವ್ ದು ಓಲ್ಡ್ ಸ್ಕೂಲ್ ಯೋಚನೆ, ನಿಮಗೆ ಈ ಫನ್ ಎಲ್ಲಿ ಅರ್ಥ ಆಗುತ್ತೆ, ತನ್ವಿ ಬಂದ್ಲು.. ನಾನು ಸಿಗ್ನೇಚರ್ ಮಾಡಿ ಕಳಿಸ್ದೇ, ಎನ್ನುತ್ತಾಳೆ, ಅದಕ್ಕೆ ಭಾಗ್ಯ ನನ್ನ ಮಗಳ ಜೀವನದಲ್ಲಿ ಏನು ಬೇಕು , ಬೇಡ ಅನ್ನೋದನ್ನು ನಾನು ಡಿಸೈಡ್ ಮಾಡ್ತೀನಿ ನೀನಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ. ಇದನ್ನ ಕೇಳಿ ಮತ್ತಷ್ಟು ರೇಗಿದ ಶ್ರೇಷ್ಠಾ, ನೀವಿಬ್ರು ನಿರ್ಧಾರ ತೆಗೆದುಕೊಳ್ಳೋದ್ರಲ್ಲಿ ವಿಫಲರಾಗಿರೋದಕ್ಕೆ ಅಲ್ವಾ? ತನ್ವಿ ನನ್ನ ಹತ್ರ ಬಂದಿದ್ದು, ಇಡಿಯಟ್ಸ್ ಎನ್ನುತ್ತಾಳೆ. ಇದನ್ನ ಕೇಳಿ ಭಾಗ್ಯ ಕೋಪ ನೆತ್ತಿಗೇರಿ, ಇನ್ನೇನು ಹೊಡಿಬೇಕು ಎನ್ನುವಷ್ಟರಲ್ಲಿ ತಾಂಡವ್ ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾನೆ, ಆಕೆ ಮತ್ತೆ ತನ್ನನ್ನೇ ಸಮರ್ಥಿಸಿಕೊಳ್ಳೋದಿಕ್ಕೆ ಮುಂದಾದಾಗ ಮತ್ತೊಮ್ಮೆ ಕೆನ್ನೆಗೆ ಭಾರಿಸಿದ್ದಾನೆ. ನನ್ನ ಮಕ್ಕಳ ವಿಚಾರದಲ್ಲಿ, ಅಪ್ಪ,ಅಮ್ಮನ ವಿಚಾರದಲ್ಲಿ ನೀನು ಮಧ್ಯ ಬರೋದು ಬೇಕಾಗಿಲ್ಲ ಎಂದು ವಾರ್ನ್ ಮಾಡ್ತಾನೆ ತಾಂಡವ್. ಇದೀಗ ಶ್ರೇಷ್ಠಾ ಸಹವಾಸ ಸಾಕಾಗಿ ತಾಂಡವ್‌   ಭಾಗ್ಯ ಮನೆಗೆ ಬರ್ತಾನಾ ಅನ್ನೋ ಕುತೂಹಲ ಕಾಡ್ತಿದೆ.

ತಾಂಡವ್ ಶ್ರೇಷ್ಠಾ ಕೆನ್ನೆಗೆ ಹೊಡೆದಿರೋದನ್ನು ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ. ಈ ಶ್ರೇಷ್ಠಾಳಷ್ಟು ಕಪಾಳಕ್ಕೆ ಹೋಡ್ಸ್ಕೊಂಡ್ ಇರೋರು history ಲೇ ಇಲ್ಲ ಅನ್ಸುತ್ತೆ.. ಇವಳಿಗೆ ಎಷ್ಟು ಕಪಾಳಕ್ಕೆ ಹೊಡಿದ್ರು ಪ್ರಯೋಜನ ಇಲ್ಲ.. ಇನ್ನು ಎರಡು ಬಿಡು ಹಾಗೆ ಆ ತನ್ವಿಗೂ ಎಚ್ಚರಿಕೆ ಕೊಡು..ಎಂದಿದ್ದಾರೆ. ಇನ್ನೂ ಕೆಲವರು,   ಜನ ಫೆಮಿನಿಸ್ಟ್ ಬಗ್ಗೆ ಮಾತನಾಡ್ತಾರೆ, ಆದ್ರೆ ಸೀರಿಯಲ್ ಗಳಲ್ಲಿ ಹೆಣ್ಣಿನ ಕೆನ್ನೆಗೆ ಗಂಡು ಹೊಡೆಯೋದನ್ನು ಯಾಕೆ ನಾರ್ಮಲೈಸ್ ಮಾಡ್ತಾರೆ ಎಂದು ಕೇಳಿದ್ದಾರೆ.

Shwetha M

Leave a Reply

Your email address will not be published. Required fields are marked *