ಭಾಗ್ಯ ನಿರ್ಧಾರ ಒಪ್ಪಿದ ತಾಂಡವ್! – ಶ್ರೇಷ್ಠಾ ಆಟಕ್ಕೆ ಬ್ರೇಕ್!?

ಭಾಗ್ಯಗೆ ಒಂದು ಕಷ್ಟ ತಪ್ತು ಅಂದಾಗ ಮತ್ತೊಂದು ಸಂಕಷ್ಟ ಶುರುವಾಗಿರುತ್ತೆ.. ಶ್ರೇಷ್ಠಾ, ಕನ್ನಿಕಾ, ತಾಂಡವ್ ಕುತಂತ್ರದಿಂದ ಇದ್ದ ಕೆಲಸವೆಲ್ಲಾ ಹೋಯ್ತು.. ಇದೀಗ ಭಾಗ್ಯ ಹೊಸ ಬ್ಯುಸಿನೆಸ್ ಶುರುಮಾಡ್ತೀನಿ ಅಂತಾ ಹೊರಟ್ಟಿದ್ದಾಳೆ.. ಹೊಸ ಬ್ಯುಸಿನೆಸ್ ಮೇಲೂ ಈಗ ಕನ್ನಿಕಾ ವಕ್ರ ದೃಷ್ಠಿ ಬಿದ್ದಿದೆ. ಇವೆಲ್ಲದ್ರ ನಡುವೆ ತಾಂಡವ್ ಭಾಗ್ಯ ನಿರ್ಧಾರವೇ ಸರಿ ಅಂತಾ ಹೇಳಿದ್ದಾನೆ.. ಅಷ್ಟಕ್ಕೂ ಭಾಗ್ಯ ಹೊಸ ಬ್ಯುಸಿನೆಸ್ ಕತೆ ಏನು? ತಾಂಡವ್ ಭಾಗ್ಯನಾ ಒಪ್ಪಿಕೊಂಡ್ನಾ? ಶ್ರೇಷ್ಠಾ ಮುಂದೇನು ಮಾಡ್ತಾಳೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಸ್ಪಿನ್ ಅಸ್ತ್ರ ಕೃನಾಲ್ ಪಾಂಡ್ಯ – ಚೆನ್ನೈ ಪಡೆಗೆ ಪಾಂಡ್ಯ ಸವಾಲ್
ಭಾಗ್ಯಲಕ್ಷ್ಮೀ ಸೀರಿಯಲ್ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದ್ದಾಳೆ.. ಅಳುಮುಂಜಿಯಾಗಿದ್ದ ಭಾಗ್ಯ ಈಗ ಕಂಪ್ಲೀಟ್ ಚೇಂಜ್ ಆಗಿದ್ದಾಳೆ.. ಬರೋ ಸವಾಲುಗಳನ್ನ ಕೂಲ್ ಆಗೇ ಫೇಸ್ ಮಾಡ್ಕೊಂಡು, ಮನೆ ಜವಬ್ದಾರಿಯನ್ನ ನಿಭಾಯಿಸ್ತಿದ್ದಾಳೆ. ಹೋಟೇಲ್ ನಲ್ಲಿ ಕೆಲಸ ಕಳೆದುಕೊಂಡ ಭಾಗ್ಯ ಈ ಸಣ್ಣದಾಗಿ ಒಂದು ಬ್ಯುಸಿನೆಸ್ ಶುರುಮಾಡ್ಕೊಂಡಿದ್ದಾಳೆ. ಹಾಸ್ಟೆಲ್ ಹುಡುಗರಿಗೆ ಊಟ ಕೊಟ್ಟು, ಅದನ್ನೇ ಉದ್ಯಮ ಮಾಡಿಕೊಳ್ಳಲು ಭಾಗ್ಯ ರೆಡಿ ಆಗಿದ್ದಾಳೆ. ಉದ್ಯಮ ಮಾಡಲು ಬಂಡವಾಳ ಬೇಕು ಅಂತಾರೆ, ನಾನು ಫ್ರೀ ಊಟ ಕೊಟ್ಟು, ಜನರಿಗೆ ಊಟದ ರುಚಿ ಹಚ್ಚಿಸುವೆ, ಅದೇ ನನಗೆ ಬಂಡವಾಳ ಅಂತ ಭಾಗ್ಯ ಹೇಳುತ್ತಿದ್ದಾಳೆ. ಇದೀಗ ಈ ಬ್ಯುಸಿನೆಸ್ ಆರಂಭಕ್ಕೂ ಮುನ್ನವೇ ಕನ್ನಿಕಾ ಎಂಟ್ರಿ ಕೊಟ್ಟಿದ್ದಾಳೆ.. ಅಲ್ಲೂ ಕೂಡ ಭಾಗ್ಯಗೆ ಅವಮಾನ ಮಾಡಲು ಮುಂದಾಗಿದ್ದಾಳೆ. ಭಾಗ್ಯ ಇವತ್ತು ಈ ಸ್ಥಿತಿಗೆ ಬರೋಕೆ ನಾನೇ ಕಾರಣ ಅಂತ ಕನ್ನಿಕಾ ಬೀಗಿದ್ದಾಳೆ. ಆದ್ರೆ ಭಾಗ್ಯ ಕನ್ನಿಕಾಗೆ ಸರಿಯಾಗೇ ಠಕ್ಕರ್ ಕೊಟ್ಟಿದ್ದಾಳೆ. ನನ್ನ ಕಾಲೆಳೆದು ಕೆಳಗಡೆ ಹಾಕಬಹುದು ಎಂದುಕೊಂಡೋರನ್ನೆಲ್ಲ ತುಳಿದು ಮೇಲೆ ಬರ್ತೀನಿ ಎಂದು ಭಾಗ್ಯ ಟಾಂಗ್ ಕೊಟ್ಟಿದ್ದಾಳೆ. ಭಾಗ್ಯ ಹಾಕಿದ ಸವಾಲು ಕೇಳಿ ಸುಂದರಿ ಶಿಳ್ಳೆ ಹೊಡೆದಿದ್ದಾಳೆ.
ಮತ್ತೊಂದ್ಕಡೆ ಭಾಗ್ಯ ಸೋಲ್ಬೇಕು.. ಆಕೆ ಬೀದಿಗೆ ಬೀಳಬೇಕು ಅಂತಾ ತಾಂಡವ್, ಶ್ರೇಷ್ಠಾ ಏನೇನೋ ತಂತ್ರ ಮಾಡ್ತಾ ಬಂದಿದ್ದಾರೆ.. ಆದ್ರೆ ಇದೇ ಮೊದಲ ಬಾರಿಗೆ ತಾಂಡವ್ ಒಂದೊಳ್ಳೆ ಕೆಲಸ ಮಾಡಿದ್ದಾನೆ.. ತನ್ವಿ ಟ್ರಿಪ್ ವಿಚಾರವಾಗಿ ಭಾಗ್ಯ ನಿರ್ಧಾರವೇ ಸರಿ ಅಂತಾ ಹೇಳಿದ್ದಾನೆ. ಹೌದು, ತನ್ವಿ ಫ್ರೆಂಡ್ಸ್ ಜೊತೆ ಟ್ರಿಪ್‌ಗೆ ಹೋಗ್ಬೇಕು ಅಂತಾ ಪ್ಲ್ಯಾನ್ ಮಾಡಿದ್ಲು.. ಆದ್ರೆ ಭಾಗ್ಯ ಇದಕ್ಕೆ ಒಪ್ಪಿರ್ಲಿಲ್ಲ.. ಹೀಗಾಗಿ ತಾಂಡವ್ ನ ಇದಕ್ಕೆ ಒಪ್ಪಿಸಿ, ಲೆಟರ್ ಗೆ ಸಿಗ್ನೇಚರ್ ಹಾಕಿಸ್ಬೇಕು ಅಂತಾ ಪ್ಲ್ಯಾನ್ ಮಾಡ್ಕೊಂಡಿದ್ಲು.. ಆದ್ರೆ ಈಗ ಆಕೆಯ ಲೆಕ್ಕಾಚಾರ ಉಲ್ಟಾ ಆಗಿದೆ. ತಾಂಡವ್ ಕೂಡ ಇದನ್ನ ಒಪ್ಪಿಲ್ಲ..
ಇದೀಗ ಈ ಸೀರಿಯಲ್ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ.. ಭಾಗ್ಯ ಒಂದೊಂದು ಸಲ ಒಂದೊಂದು ತರ ಇರ್ತಾಳೆ. ಕನ್ನಿಕಾ ಗೆ ದುಡ್ಡು ಜಾಸ್ತಿ ಅದಕ್ಕೆ ಕೊಬ್ಬು ಜಾಸ್ತಿ. ಆದರೆ ಭಾಗ್ಯ ಅಹಂಕಾರದ ಮಾತು ಹಿಡಿಸಲಿಲ್ಲ. ಯಾಕಂದ್ರೆ ಎಲ್ಲ ಸೋಲೇ ಆಗ್ತಿರೋವಾಗ ಇಷ್ಟು ಮಾತಾಡೋದು ಸರಿ ಅಲ್ಲ. ಎಲೆ ಮರೆ ಕಾಯಿ ರೀತಿ ಸೈಲೆಂಟ್ ಆಗಿ ಕೆಲಸ ಮಾಡಬೇಕು, ಗೆಲ್ಲಬೇಕು. ತೋರಿಕೆ ಮಾತುಗಳು ಬೇಡ ಅನಿಸುತ್ತೆ. ಒಂದೇ ಕ್ಯಾರೆಕ್ಟರ್ ಇದ್ರೆ ಚೆನ್ನಾಗಿರುತ್ತೆ ಅನಿಸುತ್ತೆ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ನಾನು, ನನ್ನಿಂದ ಅನ್ನುವ ಅತ್ತೆ. ಮಾತಲ್ಲೇ ಬರಿ ಅತಿ ಬಿಲ್ಡಪ್ ಕೊಡೊ ಭಾಗ್ಯ. ಅಬ್ಬಾ ಆ ಸುನಂದಾ ಮತ್ತು ಸುಂದ್ರಿ ನೋಡಿದ್ರೆ ಮೈ ಎಲ್ಲ ಉರಿಯುತ್ತೆ, ಇಷ್ಟು ವರ್ಷದಿಂದ ಬೀಗರ ಮನೇಲಿ ಇದ್ದೀರಾ.. ನಾಚಿಕೆ ಆಗೋಲ್ವಾ? ಮೊದಲು ಅವ್ರಿಬ್ರನ್ನು ಹೊರಗೆ ಹಾಕಿ ಅಂತಾ ಹೇಳಿದ್ದಾರೆ. ಮತ್ತೆ ಕೆಲವರು. ಭಾಗ್ಯ ಈ ಬ್ಯುಸಿನೆಸ್‌ನಲ್ಲಿ ಗೆದ್ದೇ ಗೆಲ್ತಾಳೆ.. ಶ್ರೇಷ್ಠಾ ಆಟಕ್ಕೆ ಬ್ರೇಕ್ ಹಾಕ್ತಾಳೆ.. ತಾಂಡವ್ ಗೆ ಭಾಗ್ಯನೇ ಬೆಸ್ಟ್ ಅನ್ನಿಸಿ, ಮನೆಗೆ ವಾಪಾಸ್ ಬರ್ತಾನೆ ಅಂತಾ ಹೇಳಿದ್ದಾರೆ.