ತಾಂಡವ್‌ ಐಡಿಯಾ.. ಭಾಗ್ಯ ಬ್ಯುಸಿನೆಸ್​! – ತಾಂಡವ್‌ನಿಂದ ಶ್ರೇಷ್ಠಾ ದೂರ ದೂರ!

ತಾಂಡವ್‌ ಐಡಿಯಾ.. ಭಾಗ್ಯ ಬ್ಯುಸಿನೆಸ್​! – ತಾಂಡವ್‌ನಿಂದ ಶ್ರೇಷ್ಠಾ ದೂರ ದೂರ!

ಶ್ರೇಷ್ಠಾ ಮತ್ತೆ ತಾಂಡವ್‌ ಸೇರ್ಕೊಂಡು ಎಷ್ಟೇ ಕಾಟ ಕೊಟ್ರೂ ಭಾಗ್ಯ ಸೋಲೋ ಮಾತೇ ಇಲ್ಲ.. ಒಂದು ಕೆಲ್ಸ ಹೋದ್ರೆ ಏನಂತೆ.. ಇನ್ನೊಂದು ಕೆಲ್ಸ ಹುಡುಕಿಕೊಂಡು, ಅದ್ರಲ್ಲಿ ಬರೋ ದುಡ್ಡಿನಿಂದ ಮನೆಯವರನ್ನ ಸಾಕ್ತಾ ಬರ್ತಿದ್ದಾಳೆ.. ಜೋಕರ್‌ ಕೆಲ್ಸ ಕಳ್ಕೊಂಡ ಭಾಗ್ಯ ಈಗ ಹೊಸ ಬ್ಯುಸಿನೆಸ್‌ ಶುರುಮಾಡ್ಕೊಂಡಿದ್ದಾಳೆ.. ಅದು ಕೂಡ ತಾಂಡವ್‌ ಕೊಟ್ಟಿರೋ ಐಡಿಯಾದಿಂದ.. ಹಾಗಾದ್ರೆ ತಾಂಡವ್‌ ಗೆ ಭಾಗ್ಯ ಮೇಲೆ ಸಿಟ್ಟಿಲ್ವಾ? ತಾಂಡವ್‌ ಕೊಟ್ಟ ಐಡಿಯಾ ಏನು? ತಾಂಡವ್‌ನ ಶ್ರೇಷ್ಠಾ ಬಿಟ್ಟು ಹೋಗ್ತಾಳಾ? ಸೀರಿಯಲ್‌ ನಲ್ಲಿ ಮುಂದೇನು ಟ್ವಿಸ್ಟ್‌ ಕಾದಿದೆ ಅನ್ನೋದನ್ನ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಕನ್ನಡ ಸೇರಿ ಪ್ರದೇಶಿಕ ಬಾಷೆಯಲ್ಲೇ ವ್ಯವಹಾರ- ಅಮಿತ್ ಶಾ ಘೋಷಣೆ

ಭಾಗ್ಯ ಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯನಿಂದ ಗಂಡ ದೂರ ಆದ್ರೂ ಆಕೆಯ ಫುಲ್‌ ಸ್ಟ್ರಾಂಗ್‌ ಆಗಿದ್ದಾಳೆ.. ಯಾರ ಸಹಾಯವಿಲ್ಲದೇ, ಮನೆಯನ್ನ ನಿಭಾಯಿಸ್ಕೊಂಡು ಹೋಗ್ತಿದ್ದಾಳೆ.. ಸ್ಟಾರ್‌ ಹೋಟೇಲ್‌ ನಲ್ಲಿ ಕೆಲಸ ಹೋದ್ಮೇಲೆ.. ಭಾಗ್ಯ ರೆಸಾರ್ಟ್‌ ವೊಂದರಲ್ಲಿ ಕೆಲಸಕ್ಕೆ ಸೇರಿದ್ಲು.. ಆದ್ರೆ ಶ್ರೇಷ್ಠಾ ತಾಂಡವ್‌ ಕುತಂತ್ರದಿಂದ ಆ ಕೆಲಸವೂ ಹೋಯ್ತು.. ಕೆಲಸ ಹೋಯ್ತು.. ಮುಂದೇನು ಮಾಡೋದು ಅಂತಾ ಭಾಗ್ಯ ಗೋಗರಿತಾಳೆ ಅಂತಾ ತಾಂಡವ್‌ ಶ್ರೇಷ್ಠಾ ಅಂದ್ಕೊಂಡಿದ್ರು.. ಆದ್ರೆ ಭಾಗ್ಯ ಸ್ವಂತ ಉದ್ಯಮಕ್ಕೆ ಕೈ ಹಾಕಿದ್ದಾಳೆ.. ತಾಂಡವ್‌ ಕೊಟ್ಟ ಐಡಿಯಾವನ್ನೇ ಯೂಸ್‌ ಮಾಡ್ಕೊಂಡಿದ್ದಾಳೆ..

ಹೌದು.. ಭಾಗ್ಯ ಕೆಲಸ ಕಳ್ಕೊಳ್ತಿದ್ದಂತೆ ಅಲ್ಲಿಗೆ ತಾಂಡವ್‌ ಹಾಗೂ ಶ್ರೇಷ್ಠಾ ಎಂಟ್ರಿ ಕೊಟ್ಟಿದ್ದಾರೆ.. ಭಾಗ್ಯಳನ್ನ ಸರಿಯಾಗಿ ಹೀಯಾಳಿಸಿದ್ದಾರೆ.. ಶ್ರೇಷ್ಠಾ ನಮ್ಮ ಪ್ಲ್ಯಾನ್‌ ಈ ಸಲ ಬೇಗ ವರ್ಕ್‌ ಆಯ್ತು.. ಮನೆಯಿಂದ ಹೊರಡೆ ಬಿದ್ದೇ ಬೀಳ್ತಾಳೆ ಅಂತಾ ಶ್ರೇಷ್ಠಾ ಹೇಳಿದ್ದಾಳೆ. ಇನ್ನು ತಾಂಡವ್‌, ಈ ಬಿಡಿಗಾಸಿನಲ್ಲಿ ಮನೆ ಇಎಂಐ ಹೇಗೆ ಕಟ್ತೀಯಾ? ಕಷ್ಟ ಆಗಲ್ವಾ? ಭಾಗ್ಯ ತುಂಬಾ ಕಷ್ಟ ಪಡ್ತಿದ್ದೀಯ.. ನಕರ ಅನುಭವಿಸ್ತಿದ್ದೀಯಾ.. ಇನ್ನಾದ್ರೂ ನನ್ನ ಮುಂದೆ ಬಂದು ಕೈಮುಗಿದು ಬೇಡಿಕೋ.. ತಪ್ಪಾಯ್ತು. ಅಂತಾ.. ನಾನು ನಿನಗೆ ಸಹಾಯ ಮಾಡ್ತೀನಿ ಅಂತಾ ಹೇಳಿದ್ದಾನೆ.. ತಾಂಡವ್‌ ಮಾತು ಕೇಳಿದ ಭಾಗ್ಯ ಜೋರಾಗಿ ನಕ್ಕಿದ್ದಾಳೆ.. ಜೋಕ್‌ ತುಂಬಾ ಚೆನ್ನಾಗಿದೆ ಅಂತಾ ಹೇಳಿದ್ದಾಳೆ.. ಆಗ ತಾಂಡವ್‌ ಜೀವನ ಅಂದ್ರೆ ಅಡುಗೆ ಮನೆಯಲ್ಲಿ ಸೌಟ್‌ ಅಲ್ಲಾಡಿಸುವಷ್ಟು ಈಸಿ ಅಂತಾ ಅಂದ್ಕೊಂಡಿದ್ದೀಯಾ ಅಂತಾ ಕೇಳಿದ್ದಾನೆ..  ಅಷ್ಟೊತ್ತಿಗೆ ತಾಂಡವ್‌ ಮಾತಿನಿಂದಲೇ ಭಾಗ್ಯಗೆ ಹೊಸ ಐಡಿಯಾ ಹೊಳೆದಿದೆ. ಹೊಸ ಬ್ಯುಸಿನೆಸ್‌ ಶುರುಮಾಡೋದು ಅಂತಾ ಫಿಕ್ಸ್‌ ಆಗಿದ್ದಾಳೆ

ತಾಂಡವ್‌ ಮಾತು ಕೇಳ್ತಿದ್ದಂತೆ ಭಾಗ್ಯಗೆ ಗುಂಡಣ್ಣನ ಫ್ರೆಂಡ್‌ ಮಾತು ನೆನಪಾಗುತ್ತೆ. ಮನೆಯಿಂದಲೇ ಅವಳು ಅಡುಗೆ ಮಾಡಿ ಹಾಸ್ಟೆಲ್‌ ಹುಡುಗರಿಗೆ, ಆಫೀಸ್‌ನಲ್ಲಿದ್ದವರಿಗೆ ಬಾಕ್ಸ್‌ ಕಳಿಸಿಕೊಡುವ ಐಡಿಯಾ ಭಾಗ್ಯಗೆ ಬರುತ್ತೆ. ಮನೆಗೆ ಬಂದಕೂಡಲೇ ಅದ್ರ ಕೆಲಸ ಶುರುಮಾಡ್ಕೊಂಡಿದ್ದಾಳೆ.. ಅವಳೇ ಪೋಸ್ಟರ್‌ ರೆಡಿ ಮಾಡಿದ್ದಾಳೆ.. ಗುಂಡಣ್ಣ ಹೇಳಿದಂತೆ ಅದಕ್ಕೆ ಕೈತುತ್ತು ಅಂತಾ ಹೆಸರಿಟ್ಟಿದ್ದಾಳೆ.  ಭಾಗ್ಯ ಹೊಸ ಸಾಹಸಕ್ಕೆ ಕುಸುಮಾ ಒಪ್ಪಿಯಾಗಿದೆ. ಆದ್ರೆ, ಸುನಂದಾಗೆ ಮಾತ್ರ ಇದು ಇಷ್ಟ ಆಗಲ್ಲ.. ಭಾಗ್ಯ ಉದ್ಯಮದಲ್ಲಿ ಯಶಸ್ವಿಯಾದರೆ ತಾಂಡವ್‌ ಅವಳನ್ನು ಕ್ಷಮಿಸೋದಿಲ್ಲ, ಇನ್ನೊಂದಿಷ್ಟು ದೂರ ಆಗ್ತಾನೆ ಅನ್ನೋದು ಸುನಂದಾ ವಾದ. ಹೀಗಾಗಿ ಭಾಗ್ಯ ಹೊಸ  ಕೆಲಸಕ್ಕೆ ಸುನಂದಾ ಕಲ್ಲು ಹಾಕಿದರೂ ಆಶ್ಚರ್ಯ ಇಲ್ಲ.

ಇದೀಗ ಸೀರಿಯಲ್‌ ನೋಡಿದ ಫ್ಯಾನ್ಸ್‌ ನಾನಾ ಕಾಮೆಂಟ್‌ ಮಾಡ್ತಿದ್ದಾರೆ. ಈ ಮನೆಯಲ್ಲಿ ಪೂಜಾ, ಸುಂದರಿ, ಕುಸುಮ ಎಲ್ಲರೂ ದಂಡಪಿಂಡಗಳೇ. ರೋಪ್‌ ಹಾಕೋ ಬದಲು ಸಹಾಯ ಮಾಡಬಹುದು. ಆ ಸುನಂದಾ ಮುಖ ನೋಡಿದ್ರೆ ಹೋಗಿ ತಾಂಡವ್‌ಗೆ ಹೇಳ್ಕೊಡೋ ತರ ಇದೆ. ಇದಕ್ಕೂ ಶ್ರೇಷ್ಠಾ ತಾಂಡವ್‌ ಕಲ್ಲು ಹಾಕೋದು ಗ್ಯಾರಂಟಿ ಅಂತಾ ಹೇಳಿದ್ರೆ, ಇನ್ನೂ ಕೆಲವರು ಏನು ಆಗಲ್ಲ ಡೈರೆಕ್ಟರ್ ಅದಕ್ಕೆ ಬೇರೆ ಪ್ಲಾನ್ ಮಾಡ್ಕೊಂಡು ಇರ್ತಾರೆ.. ಭಾಗ್ಯ ಈ ಬಿಸಿನೆಸ್‌ನಲ್ಲಿ ಸಕ್ಸಸ್‌ ಆಗೇ ಆಗ್ತಾಳೆ.. ಇನ್ನು ಒಂದು ವಾರದಲ್ಲೇ ಭಾಗ್ಯ ಅತಿ ಶ್ರೀಮಂತೆ ಆಗ್ತಾಳೆ.. ಇದು ಸೀರಿಯಲ್ ಲೋಕದ ವಿಸ್ಮಯ.. ತಾಂಡವ್‌ ಭಾಗ್ಯ ಹಿಂದೆ ಬಂದೇ ಬರ್ತಾನೆ.. ಶ್ರೇಷ್ಠಾಗೆ ಟಾಟಾ ಬೈ ಬೈ ಹೇಳ್ತೆನೆ ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *