ಕೋಟ್ಯಾಧಿಪತಿಯಾದ ಭಾಗ್ಯಾ! – ಶ್ರೇಷ್ಠಾಗೆ ಕೈ ಕೊಟ್ಟ ತಾಂಡವ್!

ಕಣ್ಣಿಗೆ ಕೂಲಿಂಗ್ ಗ್ಲಾಸ್.. ಮೈತುಂಬಾ ಆಭರಣ.. ಕೈಯಲ್ಲೊಂದು ಸೂಟ್‌ಕೇಸ್.. ಅದ್ರಲ್ಲಿ ಕಂತೆ ಕಂತೆ ಹಣ.. ಇದು ಭಾಗ್ಯ ಹೊಸ ಲುಕ್.. ಭಾಗ್ಯ ಕೈಗೆ ದುಡ್ಡು ಬರ್ತಿದ್ದಂತೆ, ತಾಂಡವ್ ಕೂಡ ಪ್ರತ್ಯಕ್ಷ ಆಗಿದ್ದಾನೆ.. ಭಾಗ್ಯ ಬಳಿ ಹಣವನ್ನ ಬೇಡಿದ್ದಾನೆ.. ಹಾಗಾದ್ರೆ ಭಾಗ್ಯ ಏಕಾಏಕಿ ಕೋಟ್ಯಾಧಿಪತಿ ಆಗಿದ್ದು ಹೇಗೆ? ತಾಂಡವ್ ಗೆ ಶ್ರೇಷ್ಠಾಗಿಂತ ಭಾಗ್ಯನೇ ಬೆಸ್ಟ್ ಅನ್ನಿಸಿತಾ? ಭಾಗ್ಯ ಮುಂದೇನು ಮಾಡ್ತಾಳೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: DC ಕ್ಯಾಪ್ಟನ್ಸಿ ಬೇಡವೆಂದ KL – IPLನಲ್ಲಿ ಜಸ್ಟ್ ಪ್ಲೇಯರ್ ರಾಹುಲ್
ಭಾಗ್ಯಲಕ್ಷ್ಮೀ ಸೀರಿಯಲ್ ಹೊಸ ತಿರುವು ಪಡೆದುಕೊಂಡಿದೆ. ತಾಂಡವ್, ಶ್ರೇಷ್ಠಾ ಜೊತೆ ಸೇರ್ಕೊಂಡು ಭಾಗ್ಯ ವಿರುದ್ಧ ಏನು ಕುತಂತ್ರ ಮಾಡಿದ್ರೂ ಗೆಲ್ಲೋದು ಭಾಗ್ಯನೇ.. ಐದು ತಿಂಗಳಿನಿಂದ ತಾಂಡವ್ ಮನೆಯ ಇಎಂಐ ಕಟ್ಟದೇ ಆಟ ಆಡ್ಸಿದ್ರೂ ಭಾಗ್ಯ ಒಂದೇ ದಿನದಲ್ಲಿ ಸಾಲ ತೀರಿಸಿದ್ಲು. ಇದನ್ನ ತಾಂಡವ್ ಗೆ ಸಹಿಸೋದಿಕ್ಕೆ ಆಗ್ತಿಲ್ಲ.. ಭಾಗ್ಯ ಇಷ್ಟು ಬೇಗ ಹೇಗೆ ಸಾಲ ತೀರಿಸಿದ್ಲು ಅಂತಾ ಆತನಿಗೆ ಕಾಡ್ತಿದೆ.. ಆದ್ರೆ ಭಾಗ್ಯ ಹಾಗೂ ಆಕೆಯ ಮನೆಯವರು ಇದನ್ನ ಸಂಭ್ರಮಿಸ್ತಿದ್ದಾರೆ. ಆದ್ರೀಗ ಭಾಗ್ಯ ದಿಢೀರ್ ಅಂತಾ ಕೋಟ್ಯಾಧಿಪತಿ ಆಗಿದ್ದಾಳೆ.. ಈಗ ಆಕೆಯ ಲುಕ್ ಕಂಪ್ಲೀಟ್ ಚೇಂಜ್ ಆಗಿದೆ.
ಮನೆ ಉಳಿಸಿಕೊಂಡ ಖುಷಿಯಲ್ಲಿ ಭಾಗ್ಯ ಮನೆಯವರು ಇರ್ತಾರೆ. ಇದೇ ಖುಷಿಯಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡ್ತಾ ಭಾಗ್ಯಳನ್ನ ಹೊಗಳ್ತಿರ್ತಾರೆ. ಆದ್ರೆ ಸುಂದ್ರಿ ಮಾತ್ರ ಅವಳ ಲೋಕದಲ್ಲೇ ತೇಲಾಡಿದ್ದಾಳೆ.. ಭಾಗ್ಯ ಇದೇ ತರ ಸಂಪಾದನೆ ಮಾಡಿದ್ರೆ ಹೇಗಿರುತ್ತೆ ಅಂತಾ ಮನೆಯವರ ಮುಂದೆ ಹೇಳಿದ್ದಾಳೆ. ಸುಂದ್ರಿ ಇಮ್ಯಾಜಿನೇಷನ್ ನಲ್ಲಿ ಭಾಗ್ಯಾ ಕೋಟ್ಯಾಧಿಪತಿ ಆಗಿರುತ್ತಾಳೆ, ಅತ್ತೆ ಸೊಸೆ ಇಬ್ಬರೂ ದುಬಾರಿ ಬೆಲೆಯ ಸೀರೆ, ಒಡವೆ , ಕೂಲಿಂಗ್ ಗ್ಲಾಸ್ ಧರಿಸಿರುತ್ತಾರೆ, ಭಾಗ್ಯಾ ಕೈಯಲ್ಲಿ ಹಣದ ಸೂಟ್‌ಕೇಸ್ ಹಿಡಿದುಕೊಂಡು ಬರುತ್ತಾಳೆ. ಅಲ್ಲಿ ತಾಂಡವ್, ಭಾಗ್ಯಾ ಗೆಲುವು ಕಂಡು ಅಳುತ್ತಾ ನಿಂತಿರುತ್ತಾನೆ. ತಾಂಡವ್ ಮುಂದೆ ಬಂದು ನಿಲ್ಲುವ ಭಾಗ್ಯಾ, ಆ ಸೂಟ್‌ಕೇಸನ್ನು ಅವನಿಗೆ ನೀಡಿ ಈ ಮನೆ ಇನ್ಮುಂದೆ ನನ್ನದು, ಈ ಮನೆಯನ್ನು ನಾನು ಖರೀದಿಸಿದ್ದೇನೆ ಹೇಳಿದ್ದಾಳೆ. ಅಷ್ಟೊತ್ತಿಗೆ ಪೂಜಾ ಆಕೆಯನ್ನ ಎಚ್ಚರಿಸಿ ಇದೆಲ್ಲ ಇಮ್ಯಾಜಿನ್ ಮಾಡಲು ಮಾತ್ರ ಖುಷಿ. ಆದರೆ ರಿಯಾಲಿಟಿಗೆ ಮಾತ್ರ ಬಹಳ ಕಷ್ಟ ಎಂದಾಗ, ಸುಂದರಿ ಹಾಗೇನೂ ಆಗುವುದಿಲ್ಲ. ಭಾಗ್ಯ ಖಂಡಿತವಾಗಿಯೂ ಉತ್ತಮ ಸ್ಥಾನಕ್ಕೆ ಹೋಗುತ್ತಾಳೆ. ಅದನ್ನು ನೀನು ನೋಡುತ್ತಿಯಾ ಎಂದು ಹೇಳುತ್ತಾಳೆ. ಇತ್ತ ಭಾಗ್ಯ, ಸುಂದರಿ ಬಳಿ ರಿಯಾಲಿಟಿಯನ್ನು ಹೇಳುತ್ತಾಳೆ. ಬಳಿಕ ಸುಂದರಿ ಸುಮ್ಮನಾಗುತ್ತಾಳೆ.
ಇದೀಗ ಸೀರಿಯಲ್ ನೋಡಿದ ವೀಕ್ಷಕರು ಮಾತ್ರ ನಾನಾ ಕಾಮೆಂಟ್ ಮಾಡಿದ್ದಾರೆ.. ಸುಂದ್ರಿ ಸರಿಯಾಗೇ ಹೇಳಿದ್ದಾಳೆ.. ಭಾಗ್ಯ ಬಾನೆತ್ತರಕ್ಕೆ ಬೆಳೆಯುತ್ತಾಳೆ.. ತಾಂಡವ್ ಗೆ ಶ್ರೇಷ್ಠಾ ಸಹವಾಸ ಸಾಕಾಗುತ್ತೆ.. ಅವಳ ಕಾಟ ತಡಿಯೋಕೆ ಆಗದೇ ವಾಪಾಸ್ ಬಂದೇ ಬರ್ತಾನೆ.. ಬಾಗ್ಯ ಹೇಳಿದಂಗೆ ಕೇಳ್ಕೊಂಡು ಬಿದ್ದಿರ್ತಾನೆ ಅಂತಾ ಕಾಮೆಂಟ್ ಮಾಡಿದ್ದಾರೆ.