ಭಾಗ್ಯ ವಿರುದ್ದ ರಣ ತಾಂಡವ.. ದ್ವೇಷದ ಜ್ವಾಲೆ.. ಆದಿ, ಭಾಗ್ಯ ಪ್ರೀತಿ ಬಲಿ! – ತಾಂಡವ್‌ ಅಸಲಿ ಮುಖ ರಿವೀಲ್‌!

ಭಾಗ್ಯ ವಿರುದ್ದ ರಣ ತಾಂಡವ.. ದ್ವೇಷದ ಜ್ವಾಲೆ.. ಆದಿ, ಭಾಗ್ಯ ಪ್ರೀತಿ ಬಲಿ! – ತಾಂಡವ್‌ ಅಸಲಿ ಮುಖ ರಿವೀಲ್‌!

ನಾನು ಬದಲಾಗಿದ್ದೀನಿ.. ಏನೇ ಕಷ್ಟ ಬಂದ್ರೂ ನಾನು ಜೊತೆಯಾಗಿರ್ತೀನಿ ಅಂತ ತಾಂಡವ್‌ ಭಾಗ್ಯ ಮನೆಗೆ ಬಂದಿದ್ದ. ಆದ್ರೀಗ ತಾಂಡವ್‌ ಮುಖವಾಡ ಕಡೆಗೂ ಬಯಲಾಗಿದೆ. ಭಾಗ್ಯಳ ಮೇಲೆ ಪ್ರೀತಿ ಇರೋದಲ್ಲ.. ಇರೋ ದ್ವೇಷನೇ ಹೆಚ್ಚಾಗಿದೆ ಅನ್ನೋದು ರಿವೀಲ್‌ ಆಗಿದೆ.

ಇದನ್ನೂ ಓದಿ: ಅಪಘಾತದಲ್ಲಿ ಎರಡೂ ಕಾಲು ಕಟ್‌! – ಸ್ಟ್ರೆಚರ್‌ ಬೆಡ್‌ ಮೇಲೆಯೇ ಮಲಗಿ ಪರೀಕ್ಷೆ ಬರೆದ SSLC ವಿದ್ಯಾರ್ಥಿನಿ!

ಭಾಗ್ಯ ಲಕ್ಷ್ಮೀ ಸೀರಿಯಲ್‌ ಈಗ ರೋಚಕ ಘಟ್ಟ ತಲುಪಿದೆ. ಕುತಂತ್ರಿ ಶ್ರೇಷ್ಠಾಗಾಗಿ ತಾಂಡವ್‌ ಅಪ್ಪ, ಅಮ್ಮ, ಮಕ್ಕಳು, ಹೆಂಡತಿಯನ್ನ ಬಿಟ್ಟು ಹೋಗಿದ್ದ. ಆದ್ರೀಗ ಮತ್ತೆ ಬಂದಿದ್ದಾನೆ. ಅದೂ ಕೂಡ ಆದಿ, ಭಾಗ್ಯ ಮದುವೆಯಾಗಲು ನಿರ್ಧರಿಸಿದ ಮೇಲೆಯೇ. ನಾನು ಬದಲಾಗಿದ್ದೀನಿ. ನಾನು ಇನ್ಮುಂದೆ ಇಲ್ಲೇ ಇರ್ತೀನಿ.. ನನ್ನಿಂದ ತಪ್ಪಾಗಿದೆ. ನಾನು ಭಾಗ್ಯ ಜೊತೆಯೇ ಇರ್ತೀನಿ ಅಂತಾ ಪಟ್ಟು ಹಿಡಿದು ಕೂತಿದ್ದ. ಎಷ್ಟರ ಮಟ್ಟಿಗೆ ಅಂದ್ರೆ ಸೀರಿಯಲ್‌ ನೋಡಿದ ವೀಕ್ಷಕರು ಕೂಡ ಅಯ್ಯೋ ಅನ್ನಬೇಕು. ಅಷ್ಟರ ಮಟ್ಟಿಗೆ ತಾಂಡವ್‌ ಡ್ರಾಮಾ ಮಾಡಿದ್ದ. ಆದ್ರೀಗ ತಾಂಡವ್‌ ಬಣ್ಣ ಬಯಲಾಗಿದೆ. ಈಗ ಬರೀ ತಾಂಡವ್‌ ಅಲ್ಲ.. ರುದ್ರ ತಾಂಡವ್‌ ಆಗಿ ಬದಲಾಗಿದ್ದಾನೆ.

ಇಷ್ಟು ದಿನ ಶ್ರೇಷ್ಠಾ ಭಾಗ್ಯ ವಿರುದ್ದ ಏನೇ ಸಂಚು ಮಾಡಿದ್ರು, ಆಪಾದನೆ ಮಾತ್ರ ತಾಂಡವ್‌ ಮೇಲೆ ಬರುತ್ತಿತ್ತು. ಮೊನ್ನೆ ಕಿಡ್ನ್ಯಾಪ್‌ ಡ್ರಾಮಾದಲ್ಲೂ ಹೀಗೆ ಆಯ್ತು.. ಕಿಡ್ನ್ಯಾಪ್‌ ಮಾಡಿರೋದ್ರ ಹಿಂದೆ ಶ್ರೇಷ್ಠಾ ಇದ್ದಾಳೆ ಅನ್ನೋದು ರಿವೀಲ್‌ ಆಗಿತ್ತು. ಬಳಿಕ ಭಾಗ್ಯ ಮನೆಗೆ ಬಂದು ತಾಂಡವ್‌ಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡ್ಲು. ಎಲ್ಲವನ್ನೂ ಮಾಡಿ, ಏನೂ ಮಾಡದವರಂತೆ ಬಂದು ಕೂತಿದ್ದೀರಲ್ಲ, ನಿಮಗೆ ಏನೂ ಅನಿಸಲ್ವಾ? ಎಂದು ಪ್ರಶ್ನೆ ಮಾಡಿದ್ಲು. ವಿಷಯ ಕೈಮೀರಿ ಹೋಗ್ತಿದ್ದಂತೆ ದೇವರ ಮೇಲೆ ಪ್ರಮಾಣ ಮಾಡಿ ತನ್ನ ತಪ್ಪಿಲ್ಲ ಎಂದು ಹೇಳಿದ್ದ. ಆದ್ರೀಗ ತಾಂಡವ್‌ ಬದಲಾಗಿಲ್ಲ.. ಭಾಗ್ಯ ಮೇಲಿನ ದ್ವೇಷ ಮತ್ತಷ್ಟು ಹೆಚ್ಚಾಗಿದೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಭಾಗ್ಯ ಲಕ್ಷ್ಮೀ ಪ್ರೋಮೋದಲ್ಲಿ ತಾಂಡವ್‌ ಒಳ್ಳೆಯವನಾ ಅಂತ ಪ್ರಶ್ನೆ ಮಾಡುವಾಗ ಮನೆ ಮುಂದೆ sorry ಎಂದು ಹೂವಿನಲ್ಲಿ ಬರೆದಿರುವುದನ್ನ ತೋರಿಸಲಾಗಿದೆ. ಆಗ ತಾಂಡವ್‌ ಎಷ್ಟು ಸಲ ಕ್ಷಮೆ ಕೇಳಿದೆ ಎಂದು ಹೇಳಿದ್ದಾನೆ. ಬದಲಾಗಿದ್ದಾನಾ ಎಂದು ಬ್ಯಾಗ್‌ರೌಂಡ್‌ ವಾಯ್ಸ್‌  ಬರ್ತಿದ್ದಂತೆ  ಭಾಗ್ಯ ಫೋಟೋ ಹಿಡಿದು ನಾನು ಬಿಡಲ್ಲ ಎಂದು ಹೇಳಿದ್ದಾನೆ. ಎಲ್ಲ ಸರಿ ಹೋಗುತ್ತಾ ಎನ್ನುವಷ್ಟರಲ್ಲಿ ಮತ್ತೆ ಹಳೇ ತಾಂಡವ್‌ ಆಗಿ ಬದಲಾಗಿದ್ದಾನೆ. ಆತನ ಉಗ್ರ ರೂಪ ತೋರಿಸಲಾಗಿದೆ. ಎಮ್ಮೆ.. ಎಂದು ಹೇಳಿ ಜೋರಾಗಿ ನಗುತ್ತಾ.. ನರಕ ತೋರಿಸುತ್ತೇನೆ ಎಂದು ಹೇಳಿದ್ದಾನೆ. ಇಲ್ಲಿಗೆ ಪ್ರೋಮೋ ಮುಕ್ತಾಯ ಆಗಿದೆ.

ಇದೀಗ ಈ ಪ್ರೋಮೋ ನೋಡಿದಾಗ ಶ್ರೇಷ್ಠಾ ಹಿಂದೆ ಹೋದ ತಾಂಡವ್‌  ಇನ್ನೂ ಬುದ್ದಿ ಕಲಿತಿಲ್ಲ.. ಆತನ ದ್ವೇಷ ಮತ್ತಷ್ಟು ಹೆಚ್ಚಾಗಿದೆ. ಆದಿ, ಭಾಗ್ಯ ಒಂದಾಗ್ಬಾರ್ದು.. ಮದುವೆ ಆಗ್ಬಾರ್ದು.. ಭಾಗ್ಯಳನ್ನ ಸೋಲಿಸಲು.. ಆಕೆಯ ಜೀವನದಲ್ಲಿ ಆಟ ಆಡಲು ಇಷ್ಟೊಂದು ಡ್ರಾಮಾ ಮಾಡ್ತಿದ್ದಾನೆ ಅನ್ನೋದು ರಿವೀಲ್‌ ಆಗಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನಿಂದ ಕೂಡಿರಲಿದೆ. ತಾಂಡವ್‌ ಬದಲಾಗಿಲ್ಲ. ಡ್ರಾಮಾ ಮಾಡ್ತಿದ್ದಾನೆ ಅನ್ನೋದು ಭಾಗ್ಯಗೆ ಗೊತ್ತಾಗುತ್ತಾ? ಸತ್ಯ ಗೊತ್ತಾದ್ರೆ ಭಾಗ್ಯ ಏನ್‌ ಮಾಡ್ತಾಳೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

Shwetha M