ಭಾಗ್ಯಲಕ್ಷ್ಮೀ ಶೂಟಿಂಗ್ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು! – ನಟಿಗೆ ಏನಾಯ್ತು?

ಭಾಗ್ಯಲಕ್ಷ್ಮೀ ಶೂಟಿಂಗ್ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು! – ನಟಿಗೆ ಏನಾಯ್ತು?

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ತಾಂಡವ್‌ ತಾನು ಬದಲಾಗಿದ್ದೇನೆ. ನನಗೆ ಶ್ರೇಷ್ಠಾ ಬೇಡ. ಭಾಗ್ಯ ಜೊತೆ ಜೀವನ ಸಾಗಿಸುತ್ತೇನೆ ಎಂದು ಹೇಳುತ್ತಿದ್ದಾನೆ.  ಇನ್ನು ಅತ್ತ, ಆದಿಯು ಭಾಗ್ಯಾಳ ವಿವಾಹ ಆಗುವ ಪ್ರಯತ್ನದಲ್ಲಿ ಇದ್ದಾನೆ. ಆದ್ರೆ ಶ್ರೇಷ್ಠಾ ಭಾಗ್ಯ ನೆಮ್ಮದಿ ಹಾಳು ಮಾಡಬೇಕು ಅಂತ ತಾಂಡವ್‌ನ ಕಿಡ್ನ್ಯಾಪ್‌ ಮಾಡಿದ್ದಳು. ಬಳಿಕ ಆದಿ ಜೀವ ತೆಗೆಯಲು ಸಂಚು ರೂಪಿಸಿದ್ಲು. ಈ ವೇಳೆ ಭಾಗ್ಯ ಫೈಟಿಂಗ್‌ ಸೀನ್‌ ಕೂಡ ಇತ್ತು. ಆದ್ರೆ ಸೀರಿಯಲ್‌ ಚಿತ್ರೀಕರಣದ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟಾಗಿದೆ. ಸದ್ಯ ಸೀರಿಯಲ್‌ನ ಮೇಕಿಂಗ್ ಸೀನ್ ವೈರಲ್ ಆಗಿದೆ.

ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ಜೀವ ಕೊಟ್ಟ ರಸ್ತೆ ಗುಂಡಿ! – ಅಂತ್ಯಕ್ರಿಯೆಗೆ ಹೊರಟಾಗ ಆಗಿದ್ದೇನು?

ಶ್ರೇಷ್ಠಾ ಆರಂಭದಲ್ಲಿ ತಾಂಡವ್‌ನ ಕಿಡ್ನ್ಯಾಪ್‌ ಮಾಡಿಸಿದ್ಲು. ಆತನನ್ನು ಹುಡುಕುವಾಗ ಆದಿಯನ್ನ ಕೂಡ ಕಿಡ್ನ್ಯಾಪ್‌ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಭ್ಯಾಗ್ಯಾ ಮೇಲೆ ಗೂಂಡಾಗಳು ಅಟ್ಯಾಕ್ ಮಾಡ್ತಾರೆ. ಈ ವೇಳೆ ಗೂಂಡಾಗಳ ವಿರುದ್ದ ಭಾಗ್ಯ ಫೈಟ್‌ ಮಾಡಿದ್ದಾಳೆ. ಈ ವೇಳೆ ನಟಿ ಸುಷ್ಮಾ ತಲೆಗೆ ಪೆಟ್ಟು ಬಿದ್ದಿದೆ. ಸದ್ಯ ಸೀರಿಯಲ್‌ನ ಮೇಕಿಂಗ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋದಲ್ಲಿ ವ್ಯಕ್ತಿಯೋರ್ವ ಹಿಂದಿನಿಂದ ಭಾಗ್ಯಾ ತಲೆಗೆ ದೊಣ್ಣೆಯಿಂದ ಹೊಡೆಯುವ ದೃಶ್ಯ ಇದಾಗಿದೆ. ಭಾಗ್ಯಾ ತಲೆಗೆ ದೊಣ್ಣೆಯಿಂದ ಹೊಡೆಯಲಾಗಿದೆ. ಆದ್ರೆ ಭಾಗ್ಯಾ ತಲೆಗೆ ಕೊಂಚ ಏಟು ಬಿದ್ದಂತೆ ಕಾಣಿಸುತ್ತಿದೆ. ಆದರೆ ಶೂಟಿಂಗ್‌ ಅಲ್ಲಿ ಹೆಚ್ಚಾಗಿ ನಕಲಿ ದೊಣ್ಣೆಯನ್ನೇ ಬಳಕೆ ಮಾಡಲಾಗುತ್ತದೆ. ಹೀಗಾಗಿ ಭಾಗ್ಯಗೆ ಸಣ್ಣ ಪೆಟ್ಟು ಆಗಿದೆ.

Shwetha M

Leave a Reply

Your email address will not be published. Required fields are marked *