ತಾಂಡವ್‌ ಕೈ ಮುರಿದ ಭಾಗ್ಯ! – ಶ್ರೇಷ್ಠಾ ಸೊಕ್ಕು.. ಬೀದಿಗೆ ಬೀಳ್ತಾನಾ?
ಮತ್ತೆ ಮನೆಗೆ ಬಂದ ತಾಂಡವ್‌?

ತಾಂಡವ್‌ ಕೈ ಮುರಿದ ಭಾಗ್ಯ! – ಶ್ರೇಷ್ಠಾ ಸೊಕ್ಕು.. ಬೀದಿಗೆ ಬೀಳ್ತಾನಾ?ಮತ್ತೆ ಮನೆಗೆ ಬಂದ ತಾಂಡವ್‌?

ಭಾಗ್ಯ ಮುಂದೆ ಸೋತು ಸುಣ್ಣವಾದ್ರೂ ತಾಂಡವ್‌ ಗೆ ಬುದ್ದಿ ಬರೋತರ ಕಾಣ್ತಿಲ್ಲ.. ಶ್ರೇಷ್ಠಾ ಜೊತೆ ಸೇರ್ಕೊಂಡು ಭಾಗ್ಯಗೆ ಕೆಟ್ಟದ್ದೇ ಬಯಸ್ತಿರ್ತಾನೆ. ಮನೆ ಇಎಂಐ ಕಟ್ಟದೇ ಆಟ ಆಡಿದ್ದ. ಆದ್ರೆ ಭಾಗ್ಯ ಒಂದೇ ದಿನದಲ್ಲಿ ದುಡಿದು ಐದು ತಿಂಗಳ ಸಾಲವನ್ನ ಕಟ್ಟಿದ್ದಾಳೆ. ಭಾಗ್ಯ ಸಾಲ ಕಟ್ಟಿದ್ದನ್ನ ಕಂಡು ಉರಿ ಕಾರ್ತಿದ್ದ ತಾಂಡವ್‌ ಗೆ ಸರಿಯಾಗೇ ಪಾಠ ಕಲಿಸಿದ್ದಾಳೆ. ಇದೀಗ ಆತನ ಕೈಯನ್ನ ಮುರಿದಿದ್ದಾಳೆ.. ಈ ಮೂಲಕ ತಾಂಡವ್‌ ದುರಹಂಕಾರಕ್ಕೆ ಸರಿಯಾಗೇ ಪೆಟ್ಟು ಕೊಟ್ಟಿದ್ದಾಳೆ.

ಇದನ್ನೂ ಓದಿ: 25 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಭಾರತ – ಚಾಂಪಿಯ‌ನ್ಸ್‌ಗಳಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ!

ಭಾಗ್ಯ ಲಕ್ಷ್ಮೀ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ತಾಂಡವ್‌ ಮುಂದೆ ಭಾಗ್ಯ ಕೊನೆಗೂ ಗೆದ್ದು ಬೀಗಿದ್ದಾಳೆ. ತಾಂಡವ್‌ ಭಾಗ್ಯಳನ್ನ ಸೋಲಿಸ್ಬೇಕು.. ನೀನಿಲ್ಲದೆ, ತನ್ನಿಂದ ಏನು ಆಗಲ್ಲ ಅಂತಾ ಭಾಗ್ಯ ತನ್ನ ಮುಂದೆ ಹೇಳ್ಬೇಕು ಅಂತಾ ತಾಂಡವ್‌ ಏನೇನೋ ಕುತಂತ್ರ ಮಾಡ್ತಿದ್ದಾನೆ. ಇದಕ್ಕೆ ಶ್ರೇಷ್ಠಾ ಕೂಡ ಸಾಥ್‌ ನೀಡ್ತಿದ್ದಾಳೆ. ಇದಕ್ಕಾಗೇ ಆತ ಕಳೆದ 5 ತಿಂಗಳಿನಿಂದ ಹೋಮ್‌ ಲೋನ್‌ ಕಟ್ಟಿರ್ಲಿಲ್ಲ.. ಬಳಿಕ ಮನೆ ಲೋನ್‌ ಕಟ್ಟೋಕೆ ಆಗಲ್ಲ.. ನೀನು  ನನ್ನ ಮುಂದೆ ಮಂಡಿಯೂರಿ ಕೂತು ನಾನು ಸೋತು ಹೋದೆ ಅಂತ ಒಪ್ಪಿಕೊಂಡರೆ ನಾನು ಹಣ ಕಟ್ತೀನಿ ಅಂತ ತಾಂಡವ್‌ ಹೇಳಿದ್ದ. ಆದ್ರೆ ಕುಸುಮಾಗೆ ತನ್ನ ಮಗನಿಗಿಂತ ಸೊಸೆ ಮೇಲೆಯೇ ಹೆಚ್ಚು ನಂಬಿಕೆ.. ನನ್ನ ಸೊಸೆ ಈ ರೀತಿ ಮಾಡೋದಿಲ್ಲ, ಆ ಥರ ಮಾಡೋಕೆ ನಾವು ಬಿಡೋದಿಲ್ಲ.. ಆಕೆ ಮನೆ ಲೋನ್‌ ಹೇಗಾದ್ರೂ ಮಾಡಿ ಕಟ್ಟೇ ಕಟ್ತಾಳೆ ಅಂತಾ ಹೇಳಿದ್ಲು.. ಭಾಗ್ಯ ಬಳಿ ಹಣ ಹೊಂದಿಸೋಕೆ ಆಗೋದಿಲ್ಲ, ಅವಳ ಸೊಕ್ಕು ಮುರಿಯುತ್ತೆ, ನಾನು ಅವಮಾನ ಮಾಡ್ತೀನಿ, ಬಾಯಿಗೆ ಬಂದಹಾಗೆ ಮಾತಾಡ್ತೀನಿ, ಅಪ್ಪ-ಅಮ್ಮ, ಮಕ್ಕಳು ನನ್ನ ಜೊತೆಗೆ ಬರುತ್ತಾರೆ ಅಂತ ತಾಂಡವ್‌ ಕನಸು ಕಾಣುತ್ತಿದ್ದ. ಅಹಂಕಾರದಿಂದ ಬೀಗುತ್ತಿದ್ದ ತಾಂಡವ್‌ ಗೆ ಭಾಗ್ಯ ಸರಿಯಾಗೇ ಶಾಕ್‌ ಕೊಟ್ಟಿದ್ದಾಳೆ. ಭಾಗ್ಯ ಒಂದೇ ದಿನದಲ್ಲಿ ಹಣ ಸಂಪಾದಿಸಿ ಮನೆ ಲೋನ್‌ ಕ್ಲಿಯರ್‌ ಮಾಡಿದ್ದಾಳೆ. ಇದನ್ನು ನೋಡಿ ಶ್ರೇಷ್ಠ, ತಾಂಡವ್‌ ಮುಖ ಇಂಗು ತಿಂದ ಮಂಗನ ಹಾಗೆ ಆಗಿದೆ. ಆದ್ರೂ ತಾಂಡವ್‌ ಸೊಕ್ಕು ಕಡಿಮೆಯಾಗಿಲ್ಲ.. ಭಾಗ್ಯ ಬೀದಿಗೆ ಬರುವ ಹಾಗೆ ಮಾಡ್ತೀನಿ ಅಂತ ತಾಂಡವ್‌ಗೆ ಶ್ರೇಷ್ಠ ಹೇಳಿದ್ದಾಳೆ. ಆ ಮಾತನ್ನು ಕೇಳಿಸಿಕೊಂಡ ಭಾಗ್ಯ, “ಅದು ಅಷ್ಟು ಸುಲಭ ಇಲ್ಲ, ನಾನು ಈ ಮನೆಯವರನ್ನು ಈ ಮನೆಯನ್ನು ಯಾರಿಗೂ ಬಿಟ್ಟುಕೊಡಲ್ಲ, ಉಳಿಸಿಕೊಳ್ತೀನಿ ಎಂದು ಹೇಳಿದ್ದಾಳೆ. ಬಳಿಕ ತಾಂಡವ್‌ ಗೆ ಹ್ಯಾಂಡ್‌ಶೇಕ್‌ ಕೊಟ್ಟು ಕೈ ಮುರಿಯುವ ಹಾಗೆ ಮಾಡಿದ್ದಾಳೆ. ಬಳಿಕ ಶ್ರೇಷ್ಠಾಳನ್ನ ದೂಡ್ಕೊಂಡು ಹೋಗಿದ್ದಾಳೆ. ಇದ್ರಿಂದ ತಾಂಡವ್‌ ಶ್ರೇಷ್ಠಾ ಶಾಕ್‌ ಆಗಿದ್ದಾರೆ. ಆದ್ರೀಗ ಸೀರಿಯಲ್‌ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಿದ್ದಾರೆ. ವಾವ್ ಸೂಪರ್ ಭಾಗ್ಯ. ಇದು ನಮ್ ಭಾಗ್ಯ ಅಂದ್ರೆ. . ತಾಂಡವ್ ಹ್ಯಾಂಡ್ ಶೇಕ್ ಹೆಂಗಿತ್ತು?  ತಾಂಡವ್ ಕೈಮುರ್ದೋಯ್ತಾ?  ಶ್ರೇಷ್ಠಗೂ ಒಂದೂ ಕಪಾಳಕ್ಕೆ ಹೊಡೀಬೇಕಿತ್ತು. ತಾಂಡವ್, ಶ್ರೇಷ್ಠ ಬೀದಿಗೆ ಬೀಳ್ಬೇಕು, ಕೆಟ್ಟವರಿಗೆ ಕೆಟ್ಟದ್ದೇ ಆಗ್ಬೇಕು.. ಈ ರೀತಿ ಸಿನ್‌ಗಳನ್ನು ನೋಡೋಕೆ ಒಂತರ ಮಜಾ ಇರುತ್ತೆ ..  ಶ್ರೇಷ್ಠ ತಾಂಡವ್‌ ಮುಖ ನೋಡೋಕೆ ಆಗ್ತಿಲ್ಲ. ಆದಷ್ಟು ಬೇಗ ಭಾಗ್ಯ ಬೆಳಿಬೇಕು. ತಾಂಡವ್‌ಗೆ ಶ್ರೇಷ್ಠ ಕೆಟ್ಟವಳು, ಇವಳಿಗಿಂತ ಭಾಗ್ಯ ಯಾವುದರಲ್ಲೂ ಕಡಿಮೆ ಇಲ್ಲ ಅನ್ನೋದು ಅರ್ಥ ಆಗ್ಬೇಕು.. ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *