ಭಾಗ್ಯ ನಿರ್ಧಾರಕ್ಕೆ ತಾಂಡವ್‌ ಶಾಕ್.. ಆದಿ ಮುಂದೆ ಬ್ರದರ್‌ ಆಟ ನಡೆಯಲ್ಲ? – ಭಾಗ್ಯ ಜೀವನದಲ್ಲಿ ಶ್ರೇಷ್ಠಾ ಬಿರುಗಾಳಿ!

ಭಾಗ್ಯ ನಿರ್ಧಾರಕ್ಕೆ ತಾಂಡವ್‌ ಶಾಕ್.. ಆದಿ ಮುಂದೆ ಬ್ರದರ್‌ ಆಟ ನಡೆಯಲ್ಲ? – ಭಾಗ್ಯ ಜೀವನದಲ್ಲಿ ಶ್ರೇಷ್ಠಾ ಬಿರುಗಾಳಿ!

ತಾನೀಗ ಬದಲಾಗಿದ್ದೀನಿ. ತಾನು ಒಳ್ಳೆಯವನು ಅಂತ ತಾಂಡವ್‌ ಭಾಗ್ಯ ಮುಂದೆ ಫ್ರೂವ್‌ ಮಾಡಲು ಹರಸಾಹಸ ಪಡುತ್ತಿದ್ದಾನೆ. ಭಾಗ್ಯ ತನ್ನನ್ನು ಗಂಡ ಎಂದು ಒಪ್ಪಿಕೊಳ್ಳಬೇಕು. ಮನೆಯಲ್ಲಿ ಆಶ್ರಯ ಕೊಡಬೇಕು ಅನ್ನೋ ಕಾರಣಕ್ಕೆ ಏನೇನೋ ಸರ್ಕಸ್‌ ಮಾಡುತ್ತಿದ್ದಾನೆ. ಆದ್ರೆ ಭಾಗ್ಯ ತಾಂಡವ್‌ನ ನಂಬೋ ಸ್ಥಿತಿಯಲ್ಲಿಲ್ಲ. ಇತ್ತ ಆದಿ ಕೂಡ ಭಾಗ್ಯ ನಿರ್ಧಾರಕ್ಕೆ ಕಾಯ್ತಿದ್ದಾನೆ. ಇದೀಗ ಭಾಗ್ಯ ನಿರ್ಧಾರ ಏನು? ಮಕ್ಕಳಿಗಾಗಿ ತಾಂಡವ್‌ನ ಒಪ್ಪಿಕೊಳ್ತಾಳಾ ಅಥವಾ ತನಗೆ ಸಪೋರ್ಟಿವ್‌ ಆಗಿರೋ ಆದಿನಾ ಒಪ್ಪಿಕೊಳ್ತಾಳಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲಲ್ಲಿ ಮೂಡಿದೆ.

ಇದನ್ನೂ ಓದಿ: ದೆಹಲಿ, ಬೆಂಗಳೂರು ಆಯ್ತು.. ಈಗ ಮಂಗಳೂರು, ಉಡುಪಿಯಲ್ಲೂ ವಾಯುಗುಣಮಟ್ಟ ಕಳಪೆ!

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಆದಿ, ಭಾಗ್ಯ ಒಂದಾಗ್ಬೇಕು ಅನ್ನುವಷ್ಟರಲ್ಲಿ ತಾಂಡವ್‌ ಎಂಟ್ರಿಕೊಟ್ಟಿದ್ದಾನೆ. ಆತನಿಗೆ ತನ್ನ ತಪ್ಪಿನ ಅರಿವಾಗಿದೆ. ಹೀಗಾಗಿ ಹೆಂಡ್ತಿ, ಮಕ್ಕಳು, ತಂದೆ ತಾಯಿ ಜೊತೆ ಇರಲು ಬಯಸಿದ್ದಾನೆ. ಆದ್ರೆ ಭಾಗ್ಯ ತಾಂಡವ್‌ನ ಒಪ್ಪಿಕೊಳ್ಳೋದಿಕ್ಕೆ ರೆಡಿ ಇಲ್ಲ. ಆತ ತನ್ನ ಜೀವನಕ್ಕೆ ಬಂದ್ರೆ ಮತ್ತೆ ನಕರ ಅನುಭವಿಸಬೇಕು ಅನ್ನೋದು ಭಾಗ್ಯಗೆ ಗೊತ್ತಿದೆ. ಆದ್ರೆ ತಾಂಡವ್‌ ಈಗ ಭಾಗ್ಯಗೆ ಏನು ಬೇಕಾದ್ರೂ ಮಾಡೋದಿಕ್ಕೆ ರೆಡಿ ಇದ್ದಾನೆ..

ಮದುವೆ ಆದಾಗಿಂದ ತಾಂಡವ್, ಭಾಗ್ಯಳನ್ನು ಒಂದು ದಿನವೂ ಖುಷಿಯಿಂದ ನೋಡಿಕೊಂಡಿರ್ಲಿಲ್ಲ. ಮಾತು ಮಾತಿಗೂ ಹೀಯಾಳಿಸುತ್ತಾ, ಆಕೆಯನ್ನ ಬೈಯುತ್ತಾ ಇರ್ತಿದ್ದ. ಇದೆಲ್ಲವನ್ನೂ ಭಾಗ್ಯ ಸಹಿಸಿಕೊಂಡು ಬಂದಿದ್ಲು. ಆದ್ರೀಗ ಭಾಗ್ಯ ಮೊದಲಿನಂತಿಲ್ಲ. ಈಗ ಭಾಗ್ಯ ತುಂಬಾ ಬದಲಾಗಿದ್ದಾಳೆ. ತನ್ನ ಹಕ್ಕುಗಳಿಗಾಗಿ ದಿಟ್ಟ ಹೋರಾಟ ಮಾಡುತ್ತಿದ್ದಾಳೆ. ತಾಂಡವ್ ಮಾಡಿದ ಪ್ರತಿ ತಪ್ಪುಗಳನ್ನು ಎತ್ತಿ ತೋರಿಸಲು ಪ್ರಯತ್ನಿಸುತ್ತಿದ್ದಾಳೆ. ಇದೀಗ ಶ್ರೇಷ್ಠಾ ಸಹವಾಸ ಮಾಡಿದ್ದ ತಾಂಡವ್‌ಗೂ ಈಗ ತನ್ನ ತಪ್ಪಿನ ಅರಿವಾಗಿದೆ.  ಸದಾ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಗುಣ ಹೊಂದಿದ್ದ ತಾಂಡವ್‌ ಈಗ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾನೆ. ಭಾಗ್ಯಗೆ ಇನ್ನೊಂದು ಅವಕಾಶ ಕೊಡು ಎಂದು ಕೇಳಿಕೊಳ್ಳುತ್ತಿದ್ದಾನೆ. ಆದ್ರೆ ತನ್ವಿ, ಸುನಂದಾಳನ್ನ ಬಿಟ್ಟು ತಾಂಡವ್‌ನ ಯಾರೂ ನಂಬುತ್ತಿಲ್ಲ. ಇದೀಗ ತನ್ವಿಯೂ ತಾಂಡವ್‌ಗೆ ಶಾಕ್‌ ಕೊಟ್ಟಿದ್ದಾಳೆ.

ಹೌದು, ತಾಂಡವ್ ತಾನೊಬ್ಬ ಸತ್ಯವಂತ ಎಂದು ಸಾಬೀತುಪಡಿಸಲು ಹರಸಾಹಸ ಪಡುತ್ತಿದ್ದಾನೆ. ಈಗ ಭಾಗ್ಯಾ ಮಾತ್ರವಲ್ಲ, ತನ್ವಿ ಕೂಡ ಅಪ್ಪನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ನಮ್ಮ ಅಪ್ಪ ಬದಲಾಗಿದ್ದಾರೆ ಅಂತ ನಾನು ಹೇಳಿದ್ರೆ ಯಾರೂ ನಂಬುತ್ತಿಲ್ಲ ಎಂದು ಅವಳು ಬೇಸರ ಮಾಡಿಕೊಂಡಿದ್ದಾಳೆ. ಬಳಿಕ ತನ್ವಿ ಕುಸುಮಾ ಮಂದೆಯೇ ಒಂದು ಚಾಲೆಂಜ್‌ ಹಾಕಿದ್ದಾಳೆ. ಅಪ್ಪನ ಬಗ್ಗೆ ಒಂದೇ ಒಂದು ಕಪ್ಪು ಚುಕ್ಕೆ ತೋರಿಸಿದರೂ, ನಾನೇ ಅಪ್ಪನನ್ನು ಮನೆಯಿಂದ ಆಚೆ ಕಳುಹಿಸುತ್ತೇನೆ ಎಂದು ಶಪಥ ಮಾಡಿದ್ದಾಳೆ. ತನ್ವಿ ಮಾತು ಕೇಳಿ ತಾಂಡವ್‌ ಮಾತ್ರ ಅಲ್ಲ, ಮನೆಮಂದಿ ಕೂಡ ಶಾಕ್‌ ಆಗಿದ್ದಾರೆ.  ಇದೀಗ ಕುಸುಮಾ, ಭಾಗ್ಯ ಮುಂದಿನ ಪ್ಲಾನ್ ಏನು? ಕುಸುಮಾ ಗೆ ತಾಂಡವ್‌ನ ಅಸಲಿ ಬುದ್ಧಿ ಚೆನ್ನಾಗಿ ಗೊತ್ತು. ಅವನು ನಾಟಕ ಮಾಡುತ್ತಿದ್ದಾನೆ ಅನ್ನೋದು ಗೊತ್ತು. ಇವತ್ತು ಇಲ್ಲ ನಾಳೆ, ಇವನ ಬಂಡವಾಳ ಆಚೆ ಬರುತ್ತೆ ಎಂದು ಕುಸುಮಾ ಹೇಳಿದ್ದಾಳೆ. ತಾಂಡವ್ನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಕುಸುಮಾ ಮತ್ತು ಭಾಗ್ಯಾ ಈಗ ಒಂದಾಗಿದ್ದಾರೆ. ಮತ್ತೊಂದ್ಕಡೆ ಆದಿ ಭಾಗ್ಯಳನ್ನ ಮದುವೆಯಾಗಲು ಮುಂದಾಗಿದ್ದಾನೆ. ಆದ್ರೆ ತಾಂಡವ್‌ನ ಮನೆಗೆ ಸೇರಿದ್ದು ಆತನಿಗೂ ಶಾಕ್‌ ಆಗಿದೆ. ಇದೀಗ ಭಾಗ್ಯ ಮಕ್ಕಳಿಗಾಗಿ ಆತನನ್ನು ಮನೆಗೆ ಸೇರಿಸಿಕೊಂಡೆ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲ ತಾಂಡವ್‌ ಕೂಡ ಆದಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಆದ್ರೆ ಆದಿ ಕೂಡ ಆತನನ್ನು ನಂಬುತ್ತಿಲ್ಲ.

ಇನ್ನು ತಾಂಡವ್‌ ದೂರ ಆಗ್ತಿದ್ದಂತೆ ಶ್ರೇಷ್ಠಾ ಬಿಲ್ಡಿಂಗ್‌ನಿಂದ ಹಾರುತ್ತಿರುವ ದೃಶ್ಯವನ್ನ ತೋರಿಸಲಾಗಿದೆ. ಶ್ರೇಷ್ಠಾ ಏನಾದ್ಲು? ಆಕೆ ಸಾಯುತ್ತಾಳಾ ಅಥವಾ ಆತ್ಮಹತ್ಯೆ ಮಾಡಿಕೊಂಡಂತೆ ನಾಟಕ ಮಾಡುತ್ತಿದ್ದಾಳಾ? ಒಂದ್ವೇಳೆ ಆಕೆ ಬದುಕಿದ್ರೆ, ಮತ್ತೆ ಭಾಗ್ಯ ಬಾಳಲ್ಲಿ ಹೊಸ ಆಟ ಶುರುಮಾಡುತ್ತಾಳೆ ಅಂತ ವೀಕ್ಷಕರು ಹೇಳ್ತಿದ್ದಾರೆ.

ಒಟ್ಟಿನಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.  ತಾಂಡವ್ ನಿಜವಾಗಿಯೂ ಬದಲಾಗುತ್ತಾನಾ? ಅಥವಾ ಮತ್ತೆ ಹೊಸ ಸಂಚು ರೂಪಿಸುತ್ತಾನಾ? ತಾಂಡವ್ ಈ ಹೊಸ ಚಾಲೆಂಜ್‌ನಲ್ಲಿ ಸೋಲುತ್ತಾನಾ ಅಥವಾ ಗೆದ್ದು, ಭಾಗ್ಯ ಮನೆಯಲ್ಲಿ ಉಳಿದುಕೊಳ್ಳುತ್ತಾನಾ? ಶ್ರೇಷ್ಠಾ ಕತೆ ಏನು ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ.

Shwetha M

Leave a Reply

Your email address will not be published. Required fields are marked *