ಭಾಗ್ಯಗೆ ಪ್ರಪೋಸ್ ಮಾಡಿದ ಆದೀಶ್ವರ್‌.. ಕುಸುಮಾ ಸೊಸೆ ಕಾಲಿಗೆ ಬಿದ್ದ ತಾಂಡವ್‌!
ಗಂಡನೋ.. ಆದಿಯೋ.. ಭಾಗ್ಯ ಯಾರ ಕಡೆ?

ಭಾಗ್ಯಗೆ ಪ್ರಪೋಸ್ ಮಾಡಿದ ಆದೀಶ್ವರ್‌.. ಕುಸುಮಾ ಸೊಸೆ ಕಾಲಿಗೆ ಬಿದ್ದ ತಾಂಡವ್‌!ಗಂಡನೋ.. ಆದಿಯೋ.. ಭಾಗ್ಯ ಯಾರ ಕಡೆ?

ಭಾಗ್ಯ ಜೀವನದಲ್ಲಿ ಇನ್ನೇನು ಎಲ್ಲವೂ ಸರಿಹೋಯ್ತು. ಹೊಸ ಜೀವನ ಶುರುವಾಗುತ್ತೆ ಅನ್ನುವಷ್ಟರಲ್ಲಿ ಇನ್ನೇನೋ ಆಗಿರುತ್ತೆ. ಇದೀಗ ಭಾಗ್ಯ ಮತ್ತೆ ಧರ್ಮಸಂಕಟಕ್ಕೆ ಸಿಲಿಕಿದ್ದಾಳೆ.  ಒಂದ್ಕಡೆ ಆದೀಶ್ವರ್‌ ಭಾಗ್ಯ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ರೆ, ಮತ್ತೊಂದ್ಕಡೆ ತಾಂಡವ್‌ ಮತ್ತೆ ಭಾಗ್ಯ ಹಿಂದೆ ಬಿದ್ದಿದ್ದಾನೆ. ಭಾಗ್ಯ ಕಾಲಿಗೆ ಬಿದ್ದು, ನನ್ನನ್ನ ಒಪ್ಪಿಕೋ ಅಂದಿದ್ದಾನೆ. ಇದೀಗ ಭಾಗ್ಯ ಯಾರನ್ನ ಒಪ್ಪಿಕೊಳ್ಳುತ್ತಾಳೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಇದನ್ನೂ ಓದಿ: ಆಗಿದ್ದು ಮೊಣಕಾಲು ಆಪರೇಷನ್!‌ – ಎಚ್ಚರವಾದಾಗ ಬಾಲಕ ಮಾತನಾಡಿದ್ದು ಫಾರಿನ್‌ ಭಾಷೆ!

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ತಾಂಡವ್‌ನಿಂದ ದೂರವಾದ ಬಳಿಕ ಭಾಗ್ಯ ಹೊಸ ಜೀವನ ಶುರುಮಾಡಿದ್ದಾಳೆ. ಗಂಡ ಬಿಟ್ಟು ಹೋಗಿದ್ರೂ ಕುಗ್ಗದೇ, ಕಷ್ಟಪಟ್ಟು ಮನೆಯ ಜವಾಬ್ದಾರಿಯನ್ನ ನಿಭಾಯಿಸ್ತಾ ಬಂದಿದ್ದಾಳೆ. ಭಾಗ್ಯ ಜೀವನದಲ್ಲಿ ಆದಿ ಎಂಟ್ರಿ ಕೊಟ್ಟಮೇಲಂತೂ ಆಕೆ ಜೀವನ ಕಲರ್‌ಫುಲ್‌ ಆಗಿದೆ. ಖುಷಿಯಿಂದ ಕಾಲ ಕಳಿತಾ ಇದ್ದಾಳೆ. ಇದೀಗ ಆದಿಗೆ ಭಾಗ್ಯ ಮೇಲೆ ಲವ್‌ ಆಗಿದೆ. ಭಾಗ್ಯ ಬರ್ತ್‌ಡೇ ದಿನದಂದೇ ಆದಿ ಪ್ರಪೋಸ್‌ ಮಾಡಿದ್ದಾನೆ. ಇನ್ನೇನು ಭಾಗ್ಯ ಆದಿ ಪ್ರೀತಿಯನ್ನ ಒಪ್ಪಿಕೊಳ್ತಾಳೆ, ಆದಿ ಭಾಗ್ಯ ಒಂದಾಗ್ತಾರೆ ಅನ್ನುವಷ್ಟರಲ್ಲಿ ಸೀರಿಯಲ್‌ ಡೈರೆಕ್ಟರ್‌ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ಇದೀಗ ಭಾಗ್ಯ ಜೀವನದಲ್ಲಿ ಮತ್ತೆ ತಾಂಡವ್‌ ಎಂಟ್ರಿಯಾಗಿದೆ.

ಹೌದು. ಭಾಗ್ಯ ತಾಂಡವ್‌ ಜೊತೆಗೆ ಇದ್ದಾಗ ಆತ ಒಂದು ದಿನವೂ ಹೆಂಡತಿ ಅನ್ನೋಹಾಗೆ ಟ್ರೀಟ್‌ ಮಾಡಿರ್ಲಿಲ್ಲ. ಹೆಜ್ಜೆ ಹೆಜ್ಜೆಗೂ ಎಮ್ಮೆ, ಕತ್ತೆ ಎಂದು ಹೀಯಾಳಿಸ್ತಿದ್ದ. ಅಷ್ಟೇ ಅಲ್ಲ. ಬಾಯಿಗೆ ಬಂದಂತೆ ಬೈದು, ಭಾಗ್ಯಳಿಗೆ ಟಾರ್ಚರ್​ ಕೊಡ್ತಿದ್ದ​. ಅದೆಷ್ಟರ ಮಟ್ಟಿಗೆ ಟಾರ್ಚರ್​ ಕೊಡ್ತಿದ್ದ ಅಂದ್ರೆ ಸೀರಿಯಲ್‌ ನೋಡ್ತಿದ್ದವರಿಗೂ ತಾಂಡವ್‌ ಮೇಲೆ ಸಿಟ್ಟು ಬರ್ತಿತ್ತು. ಅಷ್ಟರ ಮಟ್ಟಿಗೆ ಮಟ್ಟಿಗೆ ತಾಂಡವ್ ಅತಿರೇಕದ ವರ್ತನೆ‌ ತೋರಿಸ್ತಾ ಇದ್ದ. ಆದ್ರೂ ಭಾಗ್ಯ ತಾಂಡವ್‌ ನ ಸಹಿಸಿಕೊಂಡು ಬಂದಿದ್ಲು. ಇನ್ನು ತಾಂಡವ್‌, ಶ್ರೇಷ್ಠಾ ಹಿಂದೆ ಹೋದಾಗಲೂ ಭಾಗ್ಯ ತನ್ನ ಸಂಸಾರ ಉಳಿಸಿಕೊಳ್ಳಲು ಹೋರಾಡಿದ್ಲು. ಆದ್ರೆ ತಾಂಡವ್‌ ಶ್ರೇಷ್ಠಾ ಸೌಂದರ್ಯಕ್ಕೆ ಮರುಳಾಗಿ ಆಕೆಯ ಹಿಂದೆಯೇ ಹೋಗಿದ್ದ. ಬಳಿಕ ಭಾಗ್ಯ ತಾಂಡವ್‌ ಗೆ ಡಿವೋರ್ಸ್‌ ಕೊಟ್ಟು ಹೊಸ ಜೀವನ ಶುರುಮಾಡಿದ್ಲು. ಈ ಹೊತ್ತಲ್ಲೇ ಭಾಗ್ಯ ಜೀವನಕ್ಕೆ ಆದಿ ಆಗಮನವಾಗಿದೆ. ಇದೀಗ ಇವರಿಬ್ಬರು ತುಂಬಾ ಕ್ಲೋಸ್‌ ಆಗಿದ್ದಾರೆ. ಕುಸುಮಾ ಇವರಿಬ್ಬರ ಫ್ರೆಂಡ್‌ಶಿಪ್‌ ನೋಡಿ, ಇವರಿಬ್ಬರ ಮದುವೆ ಮಾಡಿಸಲು ನಿರ್ಧರಿಸಿದ್ದಾಳೆ.  ಇವರಿಬ್ಬರನ್ನ ಒಂದು ಮಾಡಲು ಕುಸುಮಾ ಮಾಡುತ್ತಿರುವ ಪ್ರಯತ್ನ ಅಷ್ಟಿಷ್ಟಲ್ಲ. ಒಂದು ಹಂತದಲ್ಲಿ ಆದಿಯ ಮನಸ್ಸಿನಲ್ಲಿ ಭಾಗ್ಯಳ ಮೇಲೆ ಪ್ರೀತಿ ಮೂಡುವ ಹಾಗೆ ಮಾಡಿದ್ದೂ ಅವಳೇ. ಇದೀಗ ಆದಿಗೆ ಭಾಗ್ಯಳ ಮೇಲೆ ಲವ್​ ಆಗಿದೆ. ಆದರೆ ಭಾಗ್ಯಳಿಗೆ ಆದಿ ಒಳ್ಳೆಯ ಸ್ನೇಹಿತ ಅಷ್ಟೇ. ಆದ್ರೂ ಆದಿ ಧೈರ್ಯದಿಂದ ಭಾಗ್ಯಳಿಗೆ ಪ್ರಪೋಸ್​ ಮಾಡಿದ್ದಾನೆ. ಆದರೆ, ಎಲ್ಲವೂ ಅಂದುಕೊಂಡಂತೆ ಆಗಿಲ್ಲ. ಆದೀಶ್ವರ್‌ ಪ್ರಪೋಸ್‌ ಮಾಡ್ತಿದ್ದಂತೆ ಇತ್ತ ತಾಂಡವ್‌ ಮತ್ತೆ ಭಾಗ್ಯ ಬಳಿ ಬಂದಿದ್ದಾನೆ.

ಹೌದು, ಶ್ರೇಷ್ಠಾ ಹಿಂದೆ ಹೋದ ತಾಂಡವ್‌ಗೆ ಈಗ ಜೀವನವೇ ಸಾಕಾಗಿದೆ. ಯಾಕಾದ್ರೂ ಶ್ರೇಷ್ಠಾ ಹಿಂದೆ ಬಂದೆ ಅಂತ ಆತನಿಗೆ ಅನ್ನಿಸಿದೆ. ಇದೀಗ ಶ್ರೇಷ್ಠಾಳಿಂದಾಗಿ ತಾಂಡವ್‌  ಬೀದಿಪಾಲಾಗಿದ್ದಾನೆ. ಈ ಬೆನ್ನಲ್ಲೇ ​ ಭಾಗ್ಯ ಬಳಿ ಬಂದು ಆಕೆ ಕಾಲು ಹಿಡಿದು ಕ್ಷಮೆ ಕೇಳಿದ್ದಾನೆ. ಎಲ್ಲವನ್ನೂ ಸರಿಮಾಡ್ತೇನೆ. ಕ್ಷಮಿಸಿಬಿಡು ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾನೆ.

ಇದೀಗ ಭಾಗ್ಯ  ಧರ್ಮಸಂಕಟದಲ್ಲಿ ಭಾಗ್ಯ ಸಿಲುಕಿದ್ದಾಳೆ. ಮತ್ತೆ ಬಂದಿರೋ ತಾಂಡವ್​ನಾ ಒಪ್ಪಿಕೊಳ್ಳಬೇಕಾ ಅಥವಾ, ಪ್ರೀತಿಯನ್ನು ಅರಸಿ ಬಂದಿರೋ ಆದಿನಾ ಒಪ್ಪಿಕೊಳ್ಳಬೇಕಾ ಅನ್ನೋ ಗೊಂದಲದಲ್ಲಿದ್ದಾಳೆ ಕುಸುಮಾ ಸೊಸೆ. ಇದೀಗ ಭಾಗ್ಯ ಇಬ್ಬರಲ್ಲಿ ಯಾರನ್ನ ಒಪ್ಪಿಕೊಳ್ತಾಳೆ. ಸೀರಿಯಲ್‌ ಸ್ಟೋರಿಯಲ್ಲಿ ಮುಂದೇನು ಟ್ವಿಸ್ಟ್‌ ಸಿಗಲಿದೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಇದೀಗ ಸೀರಿಯಲ್‌ ನೋಡ್ತಿರೋ ವೀಕ್ಷಕರು ಯಾವುದೇ ಕಾರಣಕ್ಕೂ ತಾಂಡವ್​ನ ಹತ್ತಿರ ಸೇರಿಸಬೇಡ. ನೀನು ಆದಿ ಜೊತೆ ಇದ್ರೆ ಜೀವನಪರ್ಯಂತ ಖುಷಿಯಾಗಿ ಇರ್ತೀಯಾ ಅಂತ ಕಮೆಂಟ್‌ ಮಾಡ್ತಿದ್ದಾರೆ.

Shwetha M