ಕುಸುಮಾ ಎಂಟ್ರಿ.. ಮತ್ತೆ ಒಂದಾದ ಭಾಗ್ಯ ಆದಿ.. ಶ್ರೇಷ್ಠಾ ಪ್ಲ್ಯಾನ್ ಫೇಲ್? – ಆದಿ ಮುಂದೆ ತಾಂಡವ್ ಸತ್ಯ!

ಭಾಗ್ಯಳದ್ದು ಒಂಟಿ ಹೋರಾಟ.. ಗಂಡನನ್ನ ಬಿಟ್ಟು ಬಂದ್ರೂ ಇಡೀ ಮನೆ, ಮನೆಯವರ ಜವಾಬ್ದಾರಿ ನಿಭಾಯಿಸ್ತಿದ್ದಾಳೆ. ಭಾಗ್ಯ ಏಳಿಗೆಯನ್ನ ನೋಡಿ ತಾಂಡವ್ ಶ್ರೇಷ್ಠಾಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಏನಾದ್ರೂ ಕುತಂತ್ರ ಮಾಡಿ, ಭಾಗ್ಯಳನ್ನ ಕುಗ್ಗಿಸಲು ನೋಡ್ತಾರೆ. ಆದ್ರೆ ಭಾಗ್ಯ ಸೋಲೋ ಮಾತೇ ಇಲ್ಲ.. ಏನೇ ಸವಾಲು ಬಂದ್ರೂ ಅದನ್ನ ಫೇಸ್ ಮಾಡಿಕೊಂಡು ಹೋಗ್ತಾಳೆ. ಆದ್ರೀಗ ಭಾಗ್ಯ ಒಂಟಿ ಹೋರಾಟ ಅಂತ್ಯ ಆಗೋ ಕಾಲ ಹತ್ತಿರವಾಗಿದೆ. ಭಾಗ್ಯ ಜೀವನಕ್ಕೆ ಆದಿ ಎಂಟ್ರಿ ಕೊಟ್ಟಾಗಿದೆ. ಇದೀಗ ಆದಿಯಿಂದ ಒಳ್ಳೆಯದ್ದೇ ಆಗಿದೆ. ಆದ್ರೆ ಶ್ರೇಷ್ಠಾ ಕುತಂತ್ರದಿಂದಾಗಿ ಆದಿ ಭಾಗ್ಯಳನ್ನ ಅವಾಯ್ಡ್ ಮಾಡ್ತಿದ್ದಾನೆ.
ಇದನ್ನೂ ಓದಿ: ಮೊಟ್ಟೆ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಾ? – ತಜ್ಞರು ಹೇಳೋದೇನು?
ಭಾಗ್ಯ ಲಕ್ಷ್ಮೀ ಸೀರಿಯಲ್‌ನಲ್ಲಿ ಕತೆ ಮುಂದಕ್ಕೆ ಹೋಗ್ತಾನೇ ಇಲ್ಲ.. ಬರೀ ಭಾಗ್ಯ ಜೀವನದ ಜಂಜಾಟದ ಸುತ್ತನೇ ಸುತ್ತುತಾ ಇದೆ. ಒಂದು ಸಮಸ್ಯೆ ಹೋಯ್ತು ಅಂದಾಗ ಮತ್ತೊಂದು ಸಮಸ್ಯೆ ಎದುರಾಗ್ತಿದೆ. ಇದೀಗ ಶ್ರೇಷ್ಠಾ ಕುತಂತ್ರದಿಂದಾಗಿ ತನ್ವಿ ಕೂಡ ಭಾಗ್ಯಳಿಂದ ದೂರ ಆಗಿದ್ಲು. ಈಗ ತನ್ವಿಗೆ ಶ್ರೇಷ್ಠಾ ಇನ್ನೊಂದು ಮುಖ ಗೊತ್ತಾಗಿದೆ. ಹೀಗಾಗಿ ಆಕೆ ಮತ್ತೆ ಭಾಗ್ಯ ಮನೆಗೆ ಬಂದಿದ್ದಾಳೆ. ಆದ್ರೆ ಶ್ರೇಷ್ಠಾ ಆದೀಶ್ವರ್ ನ ಭಾಗ್ಯಳಿಂದ ದೂರ ಮಾಡಿದ್ದಾಳೆ. ಭಾಗ್ಯಳನ್ನ ಆದೀಶ್ವರ್ ತುಂಬಾ ಅವಾಯ್ಡ್ ಮಾಡ್ತಿದ್ದಾನೆ. ಆಕೆ ಎದುರಿಗೆ ಬರ್ತಿದ್ದಂತೆ ಆತ ಅಲ್ಲಿಂದ ತಪ್ಪಿಸ್ಕೊಂಡು ಹೋಗ್ತಿದ್ದಾನೆ. ಈ ವಿಚಾರ ಈಗ ಕುಸುಮಾಗೆ ಗೊತ್ತಾಗಿದೆ.
ಹೌದು. ಆದಿ ಭಾಗ್ಯಳನ್ನ ಒಂದು ಮಾಡ್ಬೇಕು ಅಂತಾ ಕುಸುಮಾ ಪ್ರಯತ್ನಿಸಿದ್ರೆ, ಈ ಶ್ರೇಷ್ಠಾ ಅವರಿಬ್ಬರನ್ನ ದೂರ ಮಾಡಿದ್ದಾಳೆ. ಆದಿ ತನ್ನೊಂದಿಗೆ ಮಾತನಾಡ್ತಿಲ್ಲ. ತನ್ನಿಂದ ಅವ್ರಿಗೆ ಏನಾದ್ರೂ ಬೇಜಾರು ಆಗಿದ್ಯಾ ಅಂತಾ ಭಾಗ್ಯ ಕುಸುಮಾ ಬಳಿ ಕೇಳಿದ್ದಾಳೆ. ಕುಸುಮಾ ಕೂಡ ಆದಿಯನ್ನ ವಿಚಾರಿಸಿದ್ಲು. ಆದ್ರೆ ಆದಿ ಏನೋ ಒಂದು ಕಾರಣ ಹೇಳಿ ತಪ್ಪಿಸಿಕೊಂಡಿದ್ದ. ಇದೀಗ ಕುಸುಮಾ ಜೊತೆ ಕೂಡ ಆದೀಶ್ವರ್ ಮಾತನಾಡ್ತಿಲ್ಲ. ಇದೀಗ ಫ್ರೆಂಡ್ ಯಾಕೆ ಮಾತಾಡ್ತಿಲ್ಲ.. ಏನಾಯ್ತು ಅಂತಾ ಕುಸುಮಾಗೆ ಯೋಚನೆ ಶುರುವಾಗಿದೆ. ಹೀಗಾಗಿ ಆಕೆ ನೇರವಾಗಿ ಆದಿ ಆಫೀಸ್‌ಗೆ ಹೊಗಿದ್ದಾಳೆ. ಇದೀಗ ಕುಸುಮಾ ಆದಿ ಬಾಯಿ ಬಿಡಿಸೋದಂತೂ ಪಕ್ಕಾ. ಕುಸುಮಾ ಸೊಸೆ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ದ ಆಕ್ಷನ್ ತೆಗೆದುಕೊಳ್ತಾಳೆ. ಇದ್ರಲ್ಲಿ ಶ್ರೇಷ್ಠಾ ಕೈವಾಡ ಇದೆ ಅಂತಾ ಗೊತ್ತಾದ್ರೆ ಸುಮ್ಮೆ ಇರಲ್ಲ.. ಆಕೆಗೆ ತಕ್ಕ ಪಾಠ ಕಲಿಸ್ತಾಳೆ. ಬಳಿಕ ಆದಿಗೂ ಶ್ರೇಷ್ಠಾ ಇನ್ನೊಂದು ಮುಖ ಗೊತ್ತಾಗುವಂತೆ ಮಾಡ್ಬೋದು. ಇದ್ರಿಂದಾಗಿ ಭಾಗ್ಯ ಆದೀಶ್ವರ್ ಫ್ರೆಂಡ್‌ಶಿಪ್ ಮತ್ತೆ ಕಂಟಿನ್ಯೂ ಆಗೋದು ಪಕ್ಕಾ ಆಗಿದೆ.
ಇನ್ನು ಮತ್ತೊಂದ್ಕಡೆ ಆದೀಶ್ವರ್ ಗೆ ಭಾಗ್ಯ ಗಂಡ ತಾಂಡವ್ ಅನ್ನೋದು ಗೊತ್ತಿಲ್ಲ. ಬ್ರದರ್ ಬ್ರದರ್ ಅಂತಾ ಆತನ ಹಿಂದೆ ಸುತ್ತುತಾ ಇದ್ದಾನೆ. ಇದೀಗ ಆದಿ ತಂದೆ ರಾಮ್ ದಾಸ್ ಕಾಮತ್ ಗೆ ಈ ಬ್ರದರ್ ಯಾರು ಅನ್ನೋದು ಕಾಡೋಕೆ ಶುರುವಾಗಿದೆ. ಹೀಗಾಗಿ ಆತ ಯಾರು ಅಂತಾ ವಿಚಾರಿಸ್ತಿದ್ದಾರೆ. ಒಂದ್ವೇಳೆ ಆದೀಶ್ವರ್ ಹೇಳ್ತಿರೋ ಬ್ರದರ್ ತಾಂಡವ್ ಅನ್ನೋದು ಗೊತ್ತಾದ್ರೆ, ಕಾಮತ್ ಆದಿಗೆ ಮಹಾ ಸತ್ಯ ಗೊತ್ತಾಗುವಂತೆ ಮಾಡೋ ಸಾಧ್ಯತೆ ಇದೆ. ತಾಂಡವ್ ಬೇರೆ ಯಾರು ಅಲ್ಲ ಭಾಗ್ಯ ಗಂಡ ಅಂತ ಹೇಳೋ ಸಾಧ್ಯತೆ ಇದೆ. ಈ ವಿಚಾರ ಗೊತ್ತಾದ್ರೆ ಆದೀಶ್ವರ್ ಹೇಗೆ ರಿಯಾಕ್ಟ್ ಮಾಡ್ಬೋದು ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿದೆ.

ನೋಡಿರಿ

