ಶ್ರೇಷ್ಠಾ ಸಂಚು.. ಆದೀ ಭಾಗ್ಯ ಕ್ಲೋಸ್.. ಕುಸುಮಾ ಪ್ಲ್ಯಾನ್.. ಮದ್ವೆ ಫಿಕ್ಸ್? – ತನ್ವಿಗೆ ಗೊತ್ತಾಯ್ತು ಚಿಕ್ಕಮ್ಮ ಕುತಂತ್ರ?

ಶ್ರೇಷ್ಠಾ ಸಂಚು.. ಆದೀ ಭಾಗ್ಯ ಕ್ಲೋಸ್.. ಕುಸುಮಾ ಪ್ಲ್ಯಾನ್.. ಮದ್ವೆ ಫಿಕ್ಸ್? – ತನ್ವಿಗೆ ಗೊತ್ತಾಯ್ತು ಚಿಕ್ಕಮ್ಮ ಕುತಂತ್ರ?

ಭಾಗ್ಯ ನೆಮ್ಮದಿ ಹಾಳು ಮಾಡ್ಬೇಕು.. ಆಕೆ ಸೋಲ್ಬೇಕು.. ಎಲ್ಲರೂ ದೂರ ಆಗ್ಬೇಕು ಅಂತಾ ಅಂತಾ ತಾಂಡವ್‌, ಶ್ರೇಷ್ಠಾ ಮಾಡೋ ಕುತಂತ್ರ ಒಂದೆರಡಲ್ಲ..ಆದ್ರೆ ಕುಸುಮಾ ಸೊಸೆ ಗಟ್ಟಿಗಿತ್ತಿ.. ಎಷ್ಟೇ ಕಷ್ಟ ಬಂದ್ರೂ ಅದನ್ನ ನೀರು ಕುಡಿದಷ್ಟೇ ಈಜಿಯಾಗಿ ಫೇಸ್‌ ಮಾಡ್ತಾಳೆ.. ಗಂಡನನ್ನ ಬಿಟ್ಟು ಒಂಟಿಯಾಗಿ ಜೀವನ ನಡೆಸ್ತಿರೋ ಭಾಗ್ಯ ಈಗ ಜೀವನದಲ್ಲೂ ಸಕ್ಸಸ್‌ ಆಗ್ತಿದ್ದಾಳೆ. ತಾಂಡವ್‌ ಜೊತೆಯಲ್ಲಿ ಇದ್ದಾಗ ನಾಲ್ಕು ಗೋಡೆಗಳ ಮಧ್ಯೆ ಇದ್ದ ಭಾಗ್ಯ ಈಗ ಒಂದು ಕಂಪನಿಯ ಎಂಡಿಯಾಗಿದ್ದಾಳೆ. ಅಷ್ಟರ ಮಟ್ಟಿಗೆ ಬೆಳೆದಿದ್ದಾಳೆ. ಆದ್ರೀಗ ಈ ಎಂಡಿ ಪೋಸ್ಟ್‌ಗೂ ಕುತಂತ್ರಿಗಳ ವಕ್ರ ಕಣ್ಣು ಬಿದ್ದಿದೆ. ಇದ್ರ ಜೊತೆ ಭಾಗ್ಯಳಿಂದ ಮಗಳನ್ನ ಕೂಡ ದೂರ ಮಾಡಿದ್ದಾರೆ.. ಆದ್ರೆ ಇದ್ರಿಂದ ಭಾಗ್ಯ ಆದಿ ಮಾತ್ರ ಫುಲ್‌ ಕ್ಲೋಸ್‌ ಆಗಿದ್ದಾರೆ.. ಈ ಬೆನ್ನಲ್ಲೇ ಕುಸುಮಾ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ..

ಇದನ್ನೂ ಓದಿ:ಅಶ್ವಿನಿ ಗೌಡ Vs ಅಶ್ವಿನಿ ಎಸ್​ಎನ್ ಬಿಗ್‌ ಫೈಟ್‌! – ರಣರಂಗವಾಯ್ತು ಬಿಗ್​​ಬಾಸ್ ಮನೆ

ಭಾಗ್ಯ ಲಕ್ಷ್ಮೀ ಸೀರಿಯಲ್‌ ಕತೆ ಭಾಗ್ಯ ಜೀವನ ಜಂಜಾಟದ ಸುತ್ತವೇ ಸುತ್ತುತಾ ಇದೆ.. ಒಂದು ಕಷ್ಟ ಮುಗಿತು ಅಂದ್ಕೊಳ್ಳುವಾಗ ಇನ್ನೊಂದು ಸಂಕಷ್ಟ ಶುರುವಾಗ್ತಿದೆ.. ತಾಂಡವ್‌ಗೆ ಡಿವೋರ್ಸ್‌ ಕೊಟ್ಟಾದ್ಮೇಲೆ ನೆಮ್ಮದಿಯಾಗಿ ಇರ್ಬೋದು ಎಂದು ಭಾಗ್ಯ ಅಂದ್ಕೊಂಡಿದ್ಲು.. ಆದ್ರೆ ಪಾಪಿ ತಾಂಡವ್‌ ಭಾಗ್ಯಗೆ ತೊಂದರೆ ಕೊಡೋದ್ರಲ್ಲೇ ಯಾವಾಗ್ಲೂ ಬ್ಯುಸಿಯಾಗಿರ್ತಾನೆ.. ಸೇಡು.. ಸೇಡು ಅಂತಾ ಹೇಳ್ಕೊಂಡು ತನ್ನ ಮರ್ಯಾದೆಯನ್ನೇ ಕಳ್ಕೊಳ್ತಿದ್ದಾನೆ. ಕ್ಯಾಂಟೀನ್‌ ಶುರುಮಾಡಿದಾಗ ಅಲ್ಲೂ ಶ್ರೇಷ್ಠಾ ತಾಂಡವ್‌ ಶುರುವಾಗಿತ್ತು. ಆದ್ರೆ ಕುತಂತ್ರಿಗಳ ಪ್ಲ್ಯಾನ್‌ ಫುಲ್‌ ಉಲ್ಟಾ ಆಯ್ತು. ಕ್ಯಾಂಟೀನ್‌ ನ ಚೆನ್ನಾಗೇ ಮುಂದುವರಿಸ್ಕೊಂಡು ಹೋದ್ಲು. ಆದ್ರೀಗ ಭಾಗ್ಯಗೆ ಆದೀಶ್ವರ್ ಜೊತೆಯಾಗಿದ್ದಾನೆ.. ಭಾಗ್ಯ ಒಳ್ಳೆತನ ಗೊತ್ತಾಗ್ತಿದ್ದಂತೆ  ಪ್ರತಿ ಕೆಲಸಕ್ಕೂ ಆದಿ ಸಾಥ್‌ ನೀಡ್ತಿದ್ದಾನೆ.. ಕಷ್ಟದಲ್ಲಿದ್ದಾಗ ಸಹಾಯ ಮಾಡ್ತಿದ್ದಾನೆ.. ಆದಿಯಿಂದಾಗೇ ಭಾಗ್ಯ ಈಗ ಆತನ ಕಂಪನಿಯಲ್ಲಿ ಎಂಡಿಯಾಗಿದ್ದಾಳೆ.

ಆದೀಶ್ವರ್‌ ಕಂಪನಿಯಲ್ಲಿ ಭಾಗ್ಯ ಎಂಡಿಯಾಗಿ ಚೆನ್ನಾಗೇ ಕೆಲಸ ಮಾಡ್ತಿದ್ದಾಳೆ. ಆದ್ರೆ ಇದ್ರಿಂದಾಗಿ ಕುತಂತ್ರಿಗಳು ಉರ್ಕೊಂಡಿದ್ದಾರೆ.. ಕನ್ನಿಕಾಗೆ ಕಂಪನಿಯಿಂದ ದುಡ್ಡು ಹೊಡೆಯಲು ಆಗ್ತಿಲ್ಲ ಅನ್ನೋ ಚಿಂತೆ ಇದ್ರೆ, ತಾಂಡವ್‌ ಭಾಗ್ಯಳನ್ನ ಆ ಪೋಸ್ಟ್‌ ನಿಂದ ತೆಗೆಸ್ಬೇಕು ಅಂತಾ ಅಂದ್ಕೊಂಡಿದ್ದಾನೆ.. ಇನ್ನು ಶ್ರೇಷ್ಠಾಗೆ ತಾಂಡವ್‌ ಚಿಂತೆ ಶುರುವಾಗಿದೆ.. ಭಾಗ್ಯ ತಾಂಡವ್‌ ಒಂದೇ ಕಂಪನಿ ಆಗಿರೋದ್ರಿಂದ ತಾಂಡವ್‌ ಮತ್ತೆ ಭಾಗ್ಯ ಕಡೆ ವಾಲಿದ್ರೆ ಅನ್ನೋ ಭಯ ಶುರುವಾಗಿದೆ. ಹೀಗಾಗಿ ಭಾಗ್ಯ ಕಂಪನಿಗೆ ಮ್ಯಾನೇಜರ್‌ ಆಗಿ ಶ್ರೇಷ್ಠಾ ಸೇರಿಕೊಂಡಿದ್ದಾಳೆ.. ಜೊತೆಗೆ ತನ್ವಿಗೂ ಕೂಡ ಬಲೆ ಬೀಸಿದ್ದಾಳೆ.. ತನ್ವಿಯನ್ನ ಕುತಂತ್ರದಿಂದ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾಳೆ.. ತನ್ವಿ, ಶ್ರೇಷ್ಠಾ ಕ್ಲೋಸ್‌ ಆಗಿರೋದು ನೋಡಿ ಭಾಗ್ಯಗೆ ಶಾಕ್‌ ಆಗಿದೆ.. ಮಗಳು ತನ್ನಿಂದ ದೂರವಾಗಿದ್ದನ್ನ ನೋಡಿ ಕುಸಿದು ಬಿದ್ದಿದ್ದಾಳೆ. ಇದೀಗ ಆದೀಶ್ವರ್‌ ಭಾಗ್ಯಳನ್ನ ಕಾಪಾಡಿದ್ದಾನೆ. ತನ್ವಿ ವಿಚಾರ ಗೊತ್ತಾಗ್ತಿದ್ದಂತೆ ಆಕೆಗೆ ಶ್ರೇಷ್ಠಾ ಇನ್ನೊಂದು ಮುಖ ಗೊತ್ತಾಗುವಂತೆ ಮಾಡಿ, ಮನೆಗೆ ಬರುವಂತೆ ಮಾಡ್ಬೋದು.

ಇನ್ನು ಕುಸುಮಾ ಸದಾ ಸೊಸೆ ಬಗ್ಗೆಯೇ ಚಿಂತಿಸ್ತಾ ಇದ್ದಾಳೆ.. ಭಾಗ್ಯ ಜೀವನದಲ್ಲಿ ಒಳ್ಳೆದಾಗ್ಬೇಕು.. ಆಕೆಗೂ ಜೀವನ ಸಂಗಾತಿ ಹುಡುಕ್ಬೇಕು ಅಂತಾ ಅಂದ್ಕೊಂಡಿದ್ದಾಳೆ.. ಇದೀಗ ಆದ್ರೀಶ್ವರ್‌ ಭಾಗ್ಯಗೆ ಬೆಸ್ಟ್‌ ಜೋಡಿ ಅಂತ ಕುಸುಮಾ ಅಂದ್ಕೊಂಡಿದ್ದಾಳೆ.. ಹೀಗಾಗಿ ಅವ್ರ ಮಧ್ಯೆ ಪ್ರೀತಿ ಶುರುವಾಗ್ಬೇಕು ಎಂದು ಬಯಸ್ತಾ ಇದ್ದಾಳೆ. ಹೀಗಾಗಿ ಆಕೆ ಭಾಗ್ಯ ಆದೀಶ್ವರ್‌ ನ ಟ್ರಿಪ್‌ ಗೆ ಕಳುಹಿಸೋಕೆ ಮುಂದಾಗಿದ್ದಾಳೆ. ಇದಕ್ಕೆ ಆದೀಶ್ವರ್‌ ಒಪ್ಪಿದ್ದಾನೆ.. ಆದ್ರೆ ಭಾಗ್ಯ ಇದಕ್ಕೆ ಒಪ್ತಿಲ್ಲ. ಸೋ ಮುಂದಿನ ದಿನಗಳಲ್ಲಿ ಕುಸುಮಾ ಆದಿ ಜೊತೆ ಭಾಗ್ಯ ಮದ್ವೆ ಮಾಡಿಸೋ ಪಕ್ಕಾ ಆಗಿದೆ. ಒಟ್ಟಾರೆ ಭಾಗ್ಯಲಕ್ಷ್ಮೀ ಸೀರಿಯಲ್‌ ಸ್ಟೋರಿ ಹೊಸ ತಿರುವು ಪಡೆದುಕೊಳ್ಳೋ ಮುನ್ಸೂಚನೆ ಸಿಕ್ತಿದೆ.

Shwetha M