ಭಾಗ್ಯ MD.. ಶ್ರೇಷ್ಠಾ ಮ್ಯಾನೇಜರ್.. ಆದಿಯಿಂದ ಕುಸುಮಾ ಸೊಸೆ ದೂರ? -ಕನ್ನಿಕಾ ಪ್ಲ್ಯಾನ್‌ಗೆ ಶ್ರೇಷ್ಠಾ ತಾಂಡವ್ ಬಲಿ?

ಭಾಗ್ಯ ಮುಂದೆ ಎಷ್ಟು ಸಲ ಸೋತ್ರೂ ಈ ಶ್ರೇಷ್ಠಾ, ತಾಂಡವ್, ಕನ್ನಿಕಾಗೆ ಬುದ್ದಿಬರೋ ಹಾಗೆ ಕಾಣ್ತಿಲ್ಲ.. ಭಾಗ್ಯಳನ್ನ ಸೋಲಿಸ್ಬೇಕು.. ಎಲ್ಲರ ಮುಂದೆ ಕೆಟ್ಟವಳನ್ನಾಗಿ ಮಾಡ್ಬೇಕು ಅಂತ ಈ ಕುತಂತ್ರಿಗಳು ಏನಾದ್ರೂ ಒಂದು ಮಾಡ್ತಾ ಇರ್ತಾರೆ. ಆದ್ರೆ ಕುಸುಮಾ ಸೊಸೆ ಬರೋ ಸವಾಲುಗಳನ್ನ ಧೈರ್ಯದಿಂದ ಫೇಸ್ ಮಾಡ್ತಾ ಜೀವನ ಸಾಗಿಸ್ತಿದ್ದಾಳೆ. ಇದೀಗ ಭಾಗ್ಯ ಆದಿ ಮನಸ್ಸು ಗೆದ್ದಿದ್ದಲ್ಲದೇ, ಆತನ ಆಫೀಸ್ ಗೆ ಎಂಡಿ ಆಗಿದ್ದಾಳೆ. ಆದ್ರೀಗ ಆದೀ ಭಾಗ್ಯ ದೂರ ಆಗ್ತಾರಾ ಎಂಬ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಯಾಕಂದ್ರೆ ಭಾಗ್ಯ ಹಿಂದೆ ದೊಡ್ಡ ಷಡ್ಯಂತರ ನಡಿತಾ ಇದೆ.
ಇದನ್ನೂ ಓದಿ:ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಕೆಎಲ್ – ಗೋವಾ ಗಾರ್ಡಿಯನ್ಸ್‌ನ ಸಹ-ಮಾಲೀಕರಾದ ರಾಹುಲ್
ಭಾಗ್ಯ ಲಕ್ಷ್ಮೀ ಸೀರಿಯಲ್ ಈಗ ಹೊಸ ತಿರುವು ಪಡೆದುಕೊಳ್ತಿದೆ. ಆರಂಭದಲ್ಲಿ ಹಾವು ಮುಂಗುಸಿಯಂತೆ ಕಿಟ್ಟಾಡ್ತಿದ್ದ ಆದ್ರೀಶ್ವರ್ ಭಾಗ್ಯ ಈಗ ತುಂಬಾ ಕ್ಲೋಸ್ ಆಗಿದ್ದಾರೆ. ಭಾಗ್ಯ ಎಲ್ಲಿ ಹೋದ್ರೂ, ಏನ್ ಮಾಡಿದ್ರೂ ಆದಿ ಜೊತೆಯಾಗಿ ನಿಲ್ತಿದ್ದಾನೆ. ಆದ್ರೆ ಕನ್ನಿಕಾ ಭಾಗ್ಯಳಿಂದ ಆದಿಯನ್ನ ದೂರ ಮಾಡ್ಬೇಕು ಅಂತ ಒಂದಲ್ಲ ಒಂದು ಷಡ್ಯಂತರ ಮಾಡ್ತಾನೆ ಇದ್ದಾಳೆ. ಭಾಗ್ಯ ವಿರುದ್ಧದ ಷಡ್ಯಂತರಕ್ಕೆ ತಾಂಡವ್, ಶ್ರೇಷ್ಠಾ ಕೂಡ ಸಾಥ್ ನೀಡ್ತಾ ಬಂದಿದ್ದಾರೆ. ಆದ್ರೆ ಭಾಗ್ಯ ಎಲ್ಲಾ ಸವಾಲುಗಳನ್ನ ಫೇಸ್ ಮಾಡಿ, ಆದೀಶ್ವರ್ ನ ಟ್ರಸ್ಟ್ ಗೆ ಎಂಡಿ ಆಗಿದ್ದಾಳೆ. ಕೆಲ ಬೇರೆ ಶುರುಮಾಡಿದ್ದಾಳೆ. ಟ್ರಸ್ಟ್ ನ ಚೆನ್ನಾಗಿ ನಡೆಸ್ಬೇಕು.. ಯಾವುದೇ ಕೆಟ್ಟ ಹೆಸರು ಬರ್ಬಾರ್ದು ಅಂತಾ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾಳೆ. ಆದ್ರೀಗ ಆದೀಶ್ವರ್, ಭಾಗ್ಯ ಮೇಲೆ ಕುತಂತ್ರಿಗಳ ವಕ್ರ ದೃಷ್ಟಿ ಬಿದ್ದಿದೆ. ಇದೀಗ ಆದಿ ಭಾಗ್ಯ ದೂರ ಆಗ್ತಾರಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ.
ಭಾಗ್ಯಾ ಈಗ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್ನ ಎಂಡಿ ಆಗಿ ಅಧಿಕಾರ ಸ್ವೀಕರಿಸಿದ್ದಾಳೆ. ಅಚ್ಚುಕಟ್ಟಾಗಿ ಕೆಲಸ ಮಾಡ್ತಿದ್ದಾಳೆ. ಇದನ್ನ ನೋಡಿ ಕನ್ನಿಕಾ ಸರಿಯಾಗೇ ಉರ್ಕೊಂಡಿದ್ದಾಳೆ. ಇದ್ರ ಮಧ್ಯೆ ಈಗ ಶ್ರೇಷ್ಠಾ ಕೂಡ ಎಂಟ್ರಿಕೊಟ್ಟಿದ್ದಾಳೆ. ಯಾಕಂದ್ರೆ ತಾಂಡವ್- ಭಾಗ್ಯ ಒಂದೇ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನ ಶ್ರೇಷ್ಠಾಗೆ ಸಹಿಸಿಕೊಳ್ಳೋದಿಕ್ಕೆ ಆಗ್ತಿಲ್ಲ. ತಾಂಡವ್ ಎಲ್ಲಿ ತನ್ನ ಕೈತಪ್ಪಿ ಹೋಗ್ತಾನೆ ಅನ್ನೋ ಭಯ ಶುರುವಾಗಿದೆ. ಹೀಗಾಗಿ ಶ್ರೇಷ್ಠಾ ಭಾಗ್ಯ ವಿರುದ್ಧ ಸೇಡು ತೀರಿಸಿಕೊಳ್ಬೇಕು. ಆಕೆಯನ್ನ ಆ ಕಂಪನಿಯಿಂದ ಹೊರಹಾಕಬೇಕೆಂದು ಪಣತೊಟ್ಟಿದ್ದಾಳೆ. ಮೊನ್ನೆಯಷ್ಟೇ ತನ್ವಿಯನ್ನ ಶ್ರೇಷ್ಠಾ ಟಾರ್ಗೆಟ್ ಮಾಡಿದ್ಲು. ಇದೀಗ ಶ್ರೇಷ್ಠಾ ಭಾಗ್ಯಳನ್ನೇ ಟಾರ್ಗೆಟ್ ಮಾಡಿದ್ದಾಳೆ. ಈಗ ಭಾಗ್ಯ ಆಫೀಸ್‌ನಲ್ಲೇ ಶ್ರೇಷ್ಠಾ ಮ್ಯಾನೇಜರ್ ಆಗಿದ್ದಾಳೆ.
ಭಾಗ್ಯಾಳನ್ನು ಹೇಗಾದರು ಮಾಡಿ ಆ ಆಫೀಸ್ನಿಂದ ಹೊರಹಾಕಬೇಕು.. ಇಲ್ಲದಿದ್ರೆ ತನಗೆ ತೊಂದ್ರೆ ಫಿಕ್ಸ್ ಅನ್ನೋದು ಶ್ರೇಷ್ಠಾಗೆ ಅರಿವಾಗಿದೆ. ಹೀಗಾಗಿ ಕನ್ನಿಕಾಗೆ ಕಾಲ್ ಮಾಡಿ, ಆದಿ ಆಫೀಸ್ ನಲ್ಲಿ ಮ್ಯಾನೇಜರ್ ಪೋಸ್ಟ್ ಕೊಡಿಸುವಂತೆ ಕೇಳಿದ್ದಾಳೆ. ಇದಕ್ಕೆ ಕನ್ನಿಕಾ ಕೂಡ ಒಪ್ಪಿದ್ದಾಳೆ. ಬಳಿಕ ಆದಿ ಬಳಿ ಬಂದು ಮ್ಯಾನೇಜರ್ ಪೋಸ್ಟ್ ಗೆ ಶ್ರೇಷ್ಠಾಳನ್ನ ಸೇರಿಸುವಂತೆ ಆದಿ ಬಳಿ ಕೇಳಿದ್ದಾಳೆ. ಆದಿ ಇದನ್ನ ಭಾಗ್ಯ ಬಳಿ ಹೇಳಿದ್ದಾನೆ. ಕನ್ನಿಕಾ ಹೇಳಿದ್ದಾರೆ ಅಂದ್ರೆ ಒಳ್ಳೆಯವರೇ ಇರ್ತಾರೆ ಎಂದು ಕೆಲಸಕ್ಕೆ ಬರ್ಲಿ ಎಂದು ಭಾಗ್ಯ ಹೇಳಿದ್ದಾಳೆ. ಆದ್ರೆ ಕೆಲಸಕ್ಕೆ ಜಾಯಿನ್ ಆಗ್ತಿರೋದು ಶ್ರೇಷ್ಠಾ ಅಂತಾ ಗೊತ್ತಿಲ್ಲ. ಇದೀಗ ಆದಿ ಆಫೀಸ್ ನಲ್ಲಿ ಭಾಗ್ಯ ಎಂಡಿ ಆದ್ರೆ, ಶ್ರೇಷ್ಠಾ ಮ್ಯಾನೇಜರ್ ಆಗಿದ್ದಾಳೆ. ಆದ್ರೀಗ ಭಾಗ್ಯ ಸ್ಥಾನಕ್ಕೆ ಆಪತ್ತು ಎದುರಾಗಿದೆ.
ಭಾಗ್ಯ ಎಂಡಿ ಆಗಿರೋದು ಶ್ರೇಷ್ಠಾ, ಕನ್ನಿಕಾ, ತಾಂಡವ್ ಗೆ ಇಷ್ಟ ಇಲ್ಲ. ಇದೀಗ ಶ್ರೇಷ್ಠಾ ಆಫೀಸ್ ಗೆ ಎಂಟ್ರಿ ಕೊಡ್ತಿದ್ದಂತೆ ಏನಾದ್ರೂ ತೊಂದರೆ ಕೊಡೋದು ಪಕ್ಕಾ. ಆಫೀಸ್ ನಲ್ಲಿ ಫ್ರಾಡ್ ಕೆಲಸ ಮಾಡಿ, ಭಾಗ್ಯ ಮೇಲೆ ಆರೋಪ ಹೊರಿಸಬಹುದು. ಬಳಿಕ ಆದೀಶ್ವರ್ ಗೆ ಭಾಗ್ಯ ಮೇಲೆ ಬ್ಯಾಡ್ ಇಮೇಜ್ ಬರುವಂತೆ ಮಾಡ್ಬೋದು. ಇದ್ರಿಂದಾಗಿ ಆದೀ ಭಾಗ್ಯ ದೂರ ಆಗೋ ಸಾಧ್ಯತೆ ಇದೆ ಎಂದು ಸೀರಿಯಲ್ ಪ್ರೇಮಿಗಳು ಕಮೆಂಟ್ ಮಾಡ್ತಿದ್ದಾರೆ.
ಒಟ್ಟಿನಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ಈಗ ಸಾಕಷ್ಟು ಕ್ಯೂರಿಯಾಸಿಟಿ ಮೂಡಿದೆ. ತನ್ನ ಆಫೀಸ್ ಗೆ ಮ್ಯಾನೇಜರ್ ಆಗಿ ಬಂದಿರೋದು ಶ್ರೇಷ್ಠಾ ಅನ್ನೋದು ಗೊತ್ತಾದ್ರೆ ಭಾಗ್ಯ ಏನ್ ಮಾಡ್ಬೋದು? ಶ್ರೇಷ್ಠಾಗೆ ಸರಿಯಾಗಿ ಪಾಠ ಕಲಿಸ್ಬೋದಾ? ಶ್ರೇಷ್ಠಾ ಮುಂದೇನು ಮಾಡ್ತಾಳೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

