ಆದೀಶ್ವರ್‌ ಗೆ ಮದ್ವೆ ಪ್ರಪೋಸಲ್!.. ಭಾಗ್ಯ ಜೊತೆ ಮದ್ವೆ ಮಾಡಿಸ್ತಾಳಾ ಅತ್ತೆ? – ಉದ್ಯಮಿ ಆದಿ ಇನ್ನು ಫ್ಯಾಮಿಲಿ ಮ್ಯಾನ್?

ಆದೀಶ್ವರ್‌ ಗೆ ಮದ್ವೆ ಪ್ರಪೋಸಲ್!.. ಭಾಗ್ಯ ಜೊತೆ ಮದ್ವೆ ಮಾಡಿಸ್ತಾಳಾ ಅತ್ತೆ? – ಉದ್ಯಮಿ ಆದಿ ಇನ್ನು ಫ್ಯಾಮಿಲಿ ಮ್ಯಾನ್?

ಭಾಗ್ಯಗೆ ಚಾಲೆಂಜ್‌ ಮಾಡಿರೋ ಆದಿ ಲಕ್ಷುರಿ ಲೈಫ್‌ ಬಿಟ್ಟು ಈಗ ಮಿಡಲು ಕ್ಲಾಸ್‌ ಜೀವನ ಶುರುಮಾಡಿದ್ದಾನೆ. ದಿನಕ್ಕೆ ಲೆಕ್ಕವಿಲ್ಲದಷ್ಟು ಖರ್ಚು ಮಾಡ್ತಿದ್ದ ಆತ ಈಗ ಒಂದು ರುಪಾಯಿ ಖರ್ಚು ಮಾಡ್ಬೇಕಂದ್ರೂ ಹತ್ತು ಸಲ ಯೋಚನೆ ಮಾಡುವಂತಾಗಿದೆ. ಮಿಡಲ್‌ ಕ್ಲಾಸ್‌ ಜೀವನಕ್ಕೆ ಆದೀಶ್ವರ್‌ ಹೊಂದಿಕೊಳ್ತಾ ಇದ್ದಾನೆ. ಆದ್ರೀಗ ಆದಿಗೆ ಕಂಕಣ ಭಾಗ್ಯ ಕೂಡಿ ಬಂತಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ. ಆದಿಗೆ ಮದುವೆ ಪ್ರಪೋಸಲ್‌ ಬಂದಿದೆ. ಕುಸುಮಾ ಆದೀಶ್ವರ್‌ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾಳೆ. ಇದೀಗ ಭಾಗ್ಯ ಜೊತೆ ಆದೀಶ್ವರ್‌ ಮದುವೆ ನಡೆಯುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಇದನ್ನೂ ಓದಿ:  ಕಿಚ್ಚನ ಹುಟ್ಟುಹಬ್ಬದಂದೇ ಬಿಗ್ ಬಾಸ್‌ನಿಂದ ಬಿಗ್ ಸರ್‌ಪ್ರೈಸ್ ! – ಈ ದಿನ ಸೀಸನ್‌ 12 ಆರಂಭ

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಆದೀಶ್ವರ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಅದರಂತೆ ಆದೀ ಭಾಗ್ಯ ಮನೆಗೆ ಬಂದಿದ್ದಾನೆ. ಈ ವೇಳೆ ಭಾಗ್ಯ ಆತನಿಗೆ ಕಂಡೀಷನ್‌ ಬೇರೆ ಹಾಕಿದ್ದಾಳೆ. ಇದಕ್ಕೆಲ್ಲಾ ಓಕೆ ಅಂದ ಆದೀಶ್ವರ್‌ ಏಳು ದಿನಗಳ ಚಾಲೆಂಜ್ ಅನ್ನು ಶುರುಮಾಡಿದ್ದಾನೆ. ಆದ್ರೀಗ ಆದೀಶ್ವರ್‌ ಗೆ ದಿನದ ಖರ್ಚಿಗೆ ಹಣ ಸಾಲ್ತಿಲ್ಲ. ಒಂದು ರೂಪಾಯಿ ಖರ್ಚು ಮಾಡ್ಬೇಕಂದ್ರೂ ಹತ್ತು ಸಲ ಯೋಚಿಸುವಂತೆ ಆಗಿದೆ.   ಹೀಗಾಗಿ ಹೋಟೆಲ್​ನಲ್ಲಿ ಊಟ ಮಾಡುವುದು ಬಿಟ್ಟು ತಾನೇ ತರಕಾರಿ ತಂದು ಅಡುಗೆ ಮಾಡಿದ್ದಾನೆ. ಇನ್ನು ಆಫೀಸ್‌ ಗೆ ಹೋದ್ರೆ ಮತ್ತೆ ಹಣ ಖರ್ಚಾಗುತ್ತೆ ಅಂತಾ  ಮನೆಯಿಂದಲೇ ಕೆಲಸ ಮಾಡ್ತಿದ್ದಾನೆ, ಆಫೀಸ್ ಜವಾಬ್ದಾರಿಯನ್ನ ತಾಂಡವ್ ಗೆ ಕೊಟ್ಟಿದ್ದಾನೆ..

ಇನ್ನು ಭಾಗ್ಯ ಹಾಗೂ ತಾಂಡವ್‌ ಹೆಜ್ಜೆ ಹೆಜ್ಜೆಗೂ ಜೊತೆಯಾಗ್ತಿದ್ದಾರೆ. ತರಕಾರಿ ತರಲು ಕೂಡ ಒಟ್ಟಿಗೆ ಹೋಗಿದ್ದಾರೆ, ಆದಿಗೆ ತರಕಾರಿ ತೆಗೆದುಕೊಳ್ಳಲು ಭಾಗ್ಯ ಸಹಾಯ ಮಾಡಿದ್ದಾಳೆ. ಬಳಿಕ ಒಟ್ಟಿಗೆ ಮನೆಗೆ ಹೋಗಿದ್ದಾರೆ. ನಂತರ ಆದೀ ಅಡುಗೆ ಮಾಡಲು ಶುರುಮಾಡಿದ್ದಾನೆ. ಆದೀ ಅಡುಗೆಯಲ್ಲಿ ಎಕ್ಸ್​ಪರ್ಟ್ ಅಲ್ಲ.. ಹೀಗಾಗಿ ಮಧ್ಯಾಹ್ನಕ್ಕೂ ಮುನ್ನ ಅಡುಗೆಗೆ ಕುಳಿತ ಆದೀ ಅಡುಗೆ ಮಾಡಿ ಮುಗಿಸುವಾಗ ಸಂಜೆ ಆಗಿದೆ. ಈ ವೇಳೆ ಕುಸುಮಾ ಅಲ್ಲಿಗೆ ಬಂದಿದ್ದಾಳೆ. ಆಗ ಮಿಡಲ್‌ ಕ್ಲಾಸ್‌ ಫ್ಯಾಮಿಲಿ ಎಂಥಾ ಕಾಂಪ್ಲಿಕೇಡೆಡ್‌ ಲೈಫ್‌ ಅಲ್ವಾ? ತರಕಾರಿ ತರ್ಬೇಕು.. ಅಡುಗೆ ಮಾಡ್ಬೇಕು.. ಎಲ್ಲಾ ಕೆಲಸ ಮಾಡ್ಕೋಬೇಕು.. ಇದೆಲ್ಲಾ ಹೇಗೆ ನಿಭಾಯಿಸ್ತಾರೋ ಎಂದು ಹೇಳಿದ್ದಾನೆ ಆದೀಶ್ವರ್‌.. ಆಗ ಕುಸುಮಾ ಮದ್ವೆ ಆಗೋ ಮೂಲಕ ಅಂತಾ ಹೇಳಿದ್ದಾಳೆ. ಬಳಿಕ ಮದ್ವೆ ಆದ್ರೆ ಹೇಗೆಲ್ಲಾ ಲೈಫ್‌ ಲೀಡ್‌ ಮಾಡ್ಬೋದು ಅಂತಾ ಕುಸುಮಾ ಹೇಳಿದ್ದಾಳೆ. ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ಕುಸುಮಾ ಆದಿ ಜೊತೆ ಭಾಗ್ಯ ಮದುವೆ ಮಾಡಿಸೋದು ಪಕ್ಕಾ.. ಆರಂಭದಿಂದಲೂ ಆತನಿಗೆ ಬಕೆಟ್‌ ಹಾಕ್ತಾ ಬರ್ತಿದ್ದಾಳೆ ಅಂತಾ ಕಮೆಂಟ್‌ ಮಾಡಿದ್ದಾರೆ.

ಇನ್ನು.. ಈವೆಲ್ಲದ್ರ ಮಧ್ಯೆ ಆದೀ ತಾಂಡವ್​ಗೆ ಆಫೀಸ್​​ನಲ್ಲಿ ಮೀಟಿಂಗ್ ಅಟೆಂಡ್ ಆಗ್ಬೇಕು.. ಪ್ರಾಜೆಕ್ಟ್ ಬಗ್ಗೆ ಪ್ರೆಸೆಂಟೇಷನ್ ಮಾಡುವಂತೆ ಹೇಳಿದ್ದ. ಅದರಂತೆ ಬಂದ ಕ್ಲೈಂಟ್ ಜೊತೆ ತಾಂಡವ್ ಪ್ರೆಸೆಂಟೇಷನ್ ಮಾಡಲು ಶುರುಮಾಡಿದ್ದಾನೆ. ಆದರೆ, ಇಲ್ಲಿ ತಾಂಡವ್​ಗೆ ಆದೀಶ್ವರ್ ಇಲ್ಲದೆ ಗಲಿಬಿಲಿ ಆಗಿದೆ. ಕೆಲವೊಂದನ್ನು ಎಕ್ಸ್​ಪ್ಲೇನ್ ಮಾಡಲು ಸಾಧ್ಯವಾಗಲಿಲ್ಲ.. ಇದರಿಂದ ಬಂದ ಕ್ಲೈಂಟ್​ಗಳು ಕೋಪಗೊಂಡಿದ್ದಾರೆ.  ಇವತ್ತಿನ ಮೀಟಿಂಗ್ ವೇಸ್ಟ್ ಆಯಿತು.. ನೆಕ್ಸ್ ಪ್ರೆಸೆಂಟೇಷನ್ ಮಾಡುವಾಗ ಸರಿಯಾಗಿ ಪ್ರಿಪೇರ್ ಆಗಿ ಬನ್ನಿ ಎಂದು ಕ್ಲೈಂಟ್​ಗಳು ತಾಂಡವ್​ನ ಮುಖಕ್ಕೆ ಹೊಡೆದಂತೆ ಹೇಳಿ ಕಳುಹಿಸಿದ್ದಾರೆ. ಇದೀಗ ಆದೀಶ್ವರ್‌ ಕೂಡ ತಾಂಡವ್‌ ಮೇಲೆ ಕೋಪ ಮಾಡಿಕೊಳ್ಳೋ ಸಾಧ್ಯತೆ ಇದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.

Shwetha M