ಭಾಗ್ಯಳಿಗಾಗಿ ಬಸ್ ಚೇಸ್ – ಟ್ರೋಲ್ ಆಗೋ ಸೀನ್ ಬೇಕಿತ್ತಾ?
ಭಾಗ್ಯ ಹೊಸ ಅವತಾರ ಶೀಘ್ರದಲ್ಲೇ..!

ಭಾಗ್ಯಳಿಗಾಗಿ ಬಸ್ ಚೇಸ್ – ಟ್ರೋಲ್ ಆಗೋ ಸೀನ್ ಬೇಕಿತ್ತಾ?ಭಾಗ್ಯ ಹೊಸ ಅವತಾರ ಶೀಘ್ರದಲ್ಲೇ..!

ಸಿನಿಮಾಗಳಲ್ಲಿ ಸ್ಟಂಟ್ ಮಾಡೋದು, ವಾಸ್ತವಕ್ಕೆ ದೂರವಾಗಿರೋ ಸಾಹಸ ಮಾಡೋದು ಕಾಮನ್. ಆದ್ರೆ, ಈಗೀಗ ಸೀರಿಯಲ್‌ಗಳಲ್ಲೂ ಕೂಡಾ ಇದೇ ರೀತಿಯ ಸೀನ್‌ಗಳು ಕಂಡುಬರುತ್ತಿವೆ. ಈ ಸೀನ್‌ಗಳು ಪ್ರೇಕ್ಷಕರಿಗೆ ಹಿಡಿಸುತ್ತೋ ಬಿಡುತ್ತೋ, ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ತಾಗೇ ಟ್ರೋಲ್ ಆಗ್ತಿದೆ. ಇದೀಗ ಭಾಗ್ಯಲಕ್ಷ್ನೀ ಸೀರಿಯಲ್ ಸರದಿ. ಭಾಗ್ಯಲಕ್ಷ್ಮೀ ಸೀರಿಯಲ್‌ ಅದೊಂದು ಸೀನ್‌ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.

ಇದನ್ನೂ ಓದಿ: 15 ವರ್ಷ.. 10 ಪಂದ್ಯ.. 95 ರನ್ – ಬ್ಯಾಟಿಂಗ್ ಮರೆತ್ರಾ JADEJA?

ಕಷ್ಟಕ್ಕೂ ಭಾಗ್ಯಳಿಗೂ ಬಿಡಿಸಲಾರದ ನಂಟು. ಬಹುಶಃ ಭಾಗ್ಯ ಕಷ್ಟಪಡುವ ಸೀನ್ ಇದ್ದರೆ, ಕಷ್ಟವೇ ಇವಳ ಸುತ್ತ ಸುತ್ತುತ್ತಾ ಇದ್ದರೆ, ಕಣ್ಣೀರು ಹಾಕುತ್ತಾ ಇದ್ರೆ ಟಿಆರ್‌ಪಿ ಜಾಸ್ತಿಯಾಗುತ್ತೆ ಅನ್ನೋ ಲೆಕ್ಕಚಾರದಲ್ಲಿ ಸೀರಿಯಲ್ ಕಥೆ ಸಾಗುತ್ತಿದೆ. ಹೀಗಾಗಿ ಸೀರಿಯಲ್‌ನಲ್ಲಿ ಭಾಗ್ಯಂಗೆ ಗಂಡ ತಾಂಡವ್ ಕಷ್ಟ ಕೊಡೋದು ತಪ್ಪಲ್ಲ. ಭಾಗ್ಯ ನೋವಲ್ಲಿರುವುದು ಮುಗಿಯಲ್ಲ. ಅತ್ತೆ ಎಷ್ಟೇ ಹೆಗಲು ಕೊಟ್ರೂ ಭಾಗ್ಯ ಗೋಳು ಮುಗಿಯೋದೇ ಇಲ್ಲ. ಕಥೆ ಹೀಗಿರುವಾಗ ಭಾಗ್ಯಳ ಕಥೆ ಈಗ ಫೈವ್ ಸ್ಟಾರ್ ಹೋಟೆಲ್ ಗೆ ಬಂದು ನಿಂತಿದೆ. ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಯಾರದ್ದೋ ಹೆಸರಿನಲ್ಲಿ ಸೇರಿಕೊಂಡುಬಿಟ್ಟಿದ್ದಳು. ಖುದ್ದು ಅವಳಿಗೂ ವಿಷಯ ಗೊತ್ತಿರಲಿಲ್ಲ. ಆದರೆ ಅಸಲಿಯತ್ತು ಗೊತ್ತಾಗುತ್ತಿದ್ದಂತೆಯೇ ಅವಳನ್ನು ಕೆಲಸದಿಂದ ಹೊರಹಾಕುವ ಪ್ರಯತ್ನ ನಡೆದಿದೆ.

ಯಾವ ಕೆಲಸ ಕೊಟ್ಟರೂ ಸರಿ ಮಾಡುತ್ತೇನೆ, ಅಡುಗೆ ಕೆಲಸ ಕೊಡಿ ಎಂದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಕಾರಣ, ಅವಳಿಗೆ ಇಂಗ್ಲಿಷ್​ ಬರಲ್ಲ, ಸೀರೆಯುಟ್ಟೇ ಬರುತ್ತಾಳೆ ಎಂಬ ಕಿರಿಕ್. ಭಾಗ್ಯ ಹೋಟೆಲ್​ನವರಿಗೆ ಕಾಡಿ ಬೇಡಿದರೂ ಅವರಿಗೆ ಕರುಣೆ ಬರುವುದಿಲ್ಲ. ಆದ್ರೆ, ಭಾಗ್ಯಳ ಗೋಳು ನೋಡಿ ವೀಕ್ಷಕರಿಗೆ ತಲೆ ಚಿಟ್ಟು ಹಿಡಿದು ಹೋಗಿತ್ತು. ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಆದ್ರೂ ಕೂಡಾ ಸ್ಟಾರ್​ ಹೋಟೆಲ್​ನ ಮೇನ್​ ಶೆಫ್​ ಭಾಗ್ಯಳಿಗೆ ವಾರ್ನಿಂಗ್ ಮಾಡಿ ಆಚೆ ಹಾಕಿಯೇ ಬಿಟ್ಟಿದ್ರು. ಅಷ್ಟರಲ್ಲಿಯೇ ಖ್ಯಾತ ಪತ್ರಕರ್ತರೊಬ್ಬರ ಎಂಟ್ರಿಯಾಗುತ್ತದೆ. ಅವರಿಗೆ ಒತ್ತು ಶ್ಯಾವಿಗೆ ಬೇಕಾಗಿರುತ್ತದೆ. ಇದನ್ನು ಕೇಳಿದವರಿಗೆ ಪಕ್ಕದ ಚಿಕ್ಕ ಹೋಟೆಲ್​ನಿಂದ ಖರೀದಿ ಮಾಡುವ ಪಾಡು ಈ ಸ್ಟಾರ್​ ಹೋಟೆಲ್​ನವರದ್ದು. ಆದರೆ ಅಲ್ಲಿ ಅವರಿಗೆ ಸಿಗುವುದಿಲ್ಲ. ಅಷ್ಟರಲ್ಲಿಯೇ  ಮಧ್ಯೆ ಪ್ರವೇಶಿಸುವ ಭಾಗ್ಯ ತನಗೆ ಇದು ಚೆನ್ನಾಗಿ ಮಾಡುವುದು ಗೊತ್ತು. ನಾನು ಮಾಡುತ್ತೇನೆ ಎಂದರೂ ಮುಖ್ಯಸ್ಥ ಆಕೆಯನ್ನು ಹೀಯಾಳಿಸುತ್ತಾನೆ. ಒತ್ತು ಶ್ಯಾವಿಗೆ ಮಾಡಿಕೊಟ್ಟು ಹೋಟೆಲ್​ನವರ ಭಯದಿಂದ ಅಲ್ಲಿಂದ ಕಾಲ್ಕೀಳುತ್ತಾಳೆ ಭಾಗ್ಯ.

ಪತ್ರಕರ್ತರಿಗೆ ಭಾಗ್ಯಳ ಒತ್ತುಶ್ಯಾವಿಗೆ ಇಷ್ಟವಾಗುತ್ತದೆ. ಆದರೆ ಇಲ್ಲೇ ಇದ್ದರೆ ಪೊಲೀಸರನ್ನು ಕರೆಸುತ್ತೇನೆ ಎಂದು ಮುಖ್ಯಸ್ಥ ಹೆದರಿಸಿದ್ದರಿಂದ ಭಾಗ್ಯ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾಳೆ. ಪತ್ರಕರ್ತ ಶ್ಯಾವಿಗೆಯನ್ನು ಹೊಗಳಿ ಕೊಂಡಾಡಿದ ಬಳಿಕ, ಭಾಗ್ಯ ಎಲ್ಲಿ ಎಂದು ಕೇಳಿದಾಗ ಭಾಗ್ಯ ಬಸ್​ ಹತ್ತಿಕೊಂಡು ಹೋಗಿರೋ ವಿಚಾರ ಗೊತ್ತಾಗುತ್ತದೆ. ಆಗ ಹೋಟೆಲ್​ ಸಿಬ್ಬಂದಿ ಭಾಗ್ಯ ಹತ್ತಿಕೊಂಡು ಹೋಗಿದ್ದ ಬಸ್​ ಹಿಂದೆ ಓಡುತ್ತಾರೆ. ಸ್ಟಾರ್ ಹೋಟೆಲ್ ಸಿಬ್ಬಂದಿ ಬಸ್ ಹಿಂದೆ ಓಡೋಡಿಕೊಂಡೇ ಬಂದು ಬಸ್ ನ್ನ ಕ್ಯಾಚ್ ಮಾಡ್ತಾರೆ. ಇಂಥಾ ಒಂದು ಸೀನ್ ಇಲ್ಲಿ ಬೇಕಿತ್ತಾ ಎಂಬ ಬಗ್ಗೆ ಟ್ರೋಲ್ ಆಗ್ತಿದೆ. ಯಾರಿಗಾದ್ರೂ ಬಸ್ ಹಿಂದೆ ಅಷ್ಟು ದೂರ ಓಡೋಕ್ಕಾಗುತ್ತಾ. ಅಂತೂ ಭಾಗ್ಯ ಸಿಗುತ್ತಾಳೆ.

ಆಕೆಯನ್ನು ಕರೆದುಕೊಂಡು ಬಂದಾಗ ಪತ್ರಕರ್ತ ಭಾಗ್ಯಳನ್ನು ಹೊಗಳುತ್ತಾರೆ. ಕೊನೆಗೆ ಭಾಗ್ಯಳಿಗೆ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಗುತ್ತದೆ. ಅವಳಿಗಾಗಿ ರೂಲ್ಸ್​ ಕೂಡ ಚೇಂಜ್​ ಮಾಡಲಾಗುತ್ತದೆ. ಇನ್ನು ಮುಂದೆ ಕನ್ನಡದಲ್ಲಿಯೇ ಆರ್ಡರ್​ ಪಡೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಭಾಗ್ಯಳ ಭಾಗ್ಯದ ಬಾಗಿಲು ಕೊನೆಗೂ ತೆರೆಯುತ್ತದೆ. ಇದು ಈಗ ವೀಕ್ಷಕರಿಗೆ ಸಮಾಧಾನ ತಂದಿದೆ. ಆದ್ರೆ, ಸೀರಿಯಲ್‌ಗಳಲ್ಲಿ ಇಂಥಾ ಅಸಹಜ ಸೀನ್‌ಗಳು ಬೇಕಿತ್ತಾ ಅನ್ನೋದೇ ವೀಕ್ಷಕರ ಪ್ರಶ್ನೆ.

Shwetha M

Leave a Reply

Your email address will not be published. Required fields are marked *