ಆದಿಗಾಗಿ ಮಿಡಿದ ಭಾಗ್ಯ ಹೃದಯ! –  1 ಚಾಲೆಂಜ್..‌ ಒಂದಾದ ಜೋಡಿ?
ತಾಂಡವ್‌ಗೆ ಶಾಕ್‌ ಕೊಟ್ಟ ಆದೀಶ್ವರ್?‌  

ಆದಿಗಾಗಿ ಮಿಡಿದ ಭಾಗ್ಯ ಹೃದಯ! –  1 ಚಾಲೆಂಜ್..‌ ಒಂದಾದ ಜೋಡಿ?ತಾಂಡವ್‌ಗೆ ಶಾಕ್‌ ಕೊಟ್ಟ ಆದೀಶ್ವರ್?‌  

ಭಾಗ್ಯ ಲೈಫ್‌ ನಲ್ಲಿ ಆದೀಶ್ವರ್‌ ಎಂಟ್ರಿಯಾಗಿದೆ. ಈಗ ತುಂಬಾನೇ ಕ್ಲೋಸ್‌ ಆಗಿದ್ದಾರೆ.. ಭಾಗ್ಯ ಎಲ್ಲಿ ಹೋದ್ರೂ, ಏನು ಮಾಡಿದ್ರೂ ಆದೀಶ್ವರ್‌ ಜೊತೆಗಿರ್ತಾನೆ.. ಆದ್ರೀಗ ಭಾಗ್ಯಳನ್ನ ಇಂಪ್ರೆಸ್‌ ಮಾಡ್ಬೇಕು ಎಂದು ಆದಿ ಮಿಡಲ್‌ ಕ್ಲಾಸ್‌ ಜೀವನ ಶುರುಮಾಡಿದ್ದಾನೆ.. ಇದೀಗ ಆದೀಶ್ವರ್‌ ಹಾಕಿರೋ ಚಾಲೆಂಜ್‌ ಕಂಪ್ಲೀಟ್‌ ಮಾಡ್ತಾರಾ ಅಥವಾ ಅರ್ಧಕ್ಕೆ ಸ್ಟಾಪ್‌ ಮಾಡ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಆದ್ರೀಗ ಆದಿಗಾಗಿ ಭಾಗ್ಯ ಹೃದಯ ಮಿಡಿದಿದೆ.. ಇದೀಗ ಆದೀಶ್ವರ್‌ ಧ್ಯಾನದಲ್ಲಿ ಕುಸುಮಾ ಸೊಸೆ ಇದ್ದಾಳೆ.

ಇದನ್ನೂ ಓದಿ: ಏಷ್ಯಾಕಪ್ ನಲ್ಲಿ MI & KKR ದರ್ಬಾರ್ – 2 ಫ್ರಾಂಚೈಸಿಗಳಲ್ಲೇ ಅರ್ಧ ಟೀಂ ಫೈನಲ್

ಭಾಗ್ಯ ಲಕ್ಷ್ಮೀ ಸೀರಿಯಲ್‌ ಸ್ಟೋರಿ ಸದ್ಯ ಆದೀಶ್ವರ್‌, ಭಾಗ್ಯ ಸುತ್ತವೇ ಸುತ್ತಾತಾ ಇದೆ. ಆರಂಭದಲ್ಲಿ ಆದೀಶ್ವರ್‌ ಭಾಗ್ಯಳನ್ನ ಹೇಟ್‌ ಮಾಡ್ತಿದ್ರೂ, ಈಗ ಆಕೆ ಒಳ್ಳೆಯವಳು.. ಸ್ವಾಭಿಮಾನಿ ಅನ್ನೋದು ಗೊತ್ತಾಗಿದೆ. ಇನ್ನು ಭಾಗ್ಯ ಆದಿಗೆ  ಕೈತಪ್ತಿದ್ದ ಪ್ರಾಜೆಕ್ಟ್‌ನ ಸಿಗುವಂತೆ ಮಾಡಿದ್ಲು.. ಹೀಗಾಗಿ ಆದಿ ಆಕೆಗೆ 25 ಲಕ್ಷ ರೂಪಾಯಿ ಗಿಫ್ಟ್‌ ನೀಡಿದ್ದ, ಆದ್ರೆ ಇದು ಬೇಡ ಅಂತಾ ಭಾಗ್ಯ ಹೇಳಿದ್ದಾಳೆ. ಆದೀ ಎಷ್ಟು ಹೇಳಿದ್ರೂ ಆಕೆ ತೆಗೆದುಕೊಳ್ಳಲು ರೆಡಿಯಿಲ್ಲ.. ಹೀಗಾಗಿ ಆದಿ ಭಾಗ್ಯಗೆ ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಅದರಂತೆ ಆದೀ ಭಾಗ್ಯ ಮನೆಗೆ ಬಂದು ಏಳು ದಿನಗಳ ಚಾಲೆಂಜ್ ಅನ್ನು ಆದೀ ಶುರುಮಾಡಿದ್ದಾನೆ. ಆದ್ರೆ ಆಧಿ ಆರಂಭದಲ್ಲೇ ರೋಸಿ ಹೋಗಿದ್ದಾನೆ.

ಹೌದು.. ಆದಿ ಮನೆಗೆ ಬರ್ತಿದ್ದಂತೆ ಭಾಗ್ಯ ಕಂಡೀಷನ್‌ ಮೇಲೆ ಕಂಡೀಷನ್‌ ಹಾಕಿದ್ದಾಳೆ. ದಿನದಲ್ಲಿ150 ರೂಪಾಯಿಗಿಂತ ಹೆಚ್ಚಿ ಖರ್ಚು ಮಾಡದಂತೆ ಹಾಗೂ ಸಾಮಾನ್ಯ ಮಿಡಲ್ ಕ್ಲಾಸ್ ಜನರಂತೆ ಇರಬೇಕು ಎಂದಿದ್ದಾಳೆ. ಬಳಿಕ ಧೂಳು ತುಂಬಿರೋ ರೂಮ್‌ ನ ಕೊಟ್ಟಿದ್ದಾಳೆ. ಆದೀಶ್ವರ್‌ ಮನೆ ಕ್ಲೀನ್‌ ಮಾಡುವುದ್ರಲ್ಲೇ ಸುಸ್ತಾಗಿದ್ದಾನೆ. ಬಳಿಕ ಸಿಂಪಲ್‌ ಆಗೇ ಆಫೀಸ್‌ಗೂ ಹೋಗಿದ್ದಾನೆ. ಆದೀಶ್ವರ್‌ ಹೊಸ ಅವತಾರ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಆದಿ ಬಸ್‌ನಲ್ಲಿ ಆಫೀಸ್‌ ಗೆ ಬಂದಿರೋದು ನೋಡಿ, ತಾಂಡವ್‌ ಕೂಡ ಶಾಕ್‌ ಆಗಿದ್ದಾನೆ. ಆದಿ ಬ್ರೋ ಆ ಹೆಂಗಸಿಗೋಸ್ಕರ ನೀವು ಇಷ್ಟೆಲ್ಲ ಮಾಡಬೇಕಾ ಎಂದು ಎಂದು ಕೇಳಿದ್ದಾನೆ. ಅದಕ್ಕೆ ಆದೀ ಇದೆಲ್ಲಾ ಮಾಡ್ಲೇಬೇಕು ಅಂತಾ ಹೇಳಿದ್ದಾನೆ. ಅದಾದ ಬಳಿಕ ಮೀಟಿಂಗ್‌ ಕೂಡ ಆದಿ ಅಟೆಂಡ್‌ ಆಗಿದ್ದಾನೆ. ಮೀಟಿಂಗ್ ಮುಗಿದ ಬಳಿಕ ಆದೀಶ್ವರ್, ತಾಂಡವ್​ಗೆ ಮತ್ತೊಂದು ಶಾಕ್ ಕೊಟ್ಟಿದ್ದಾನೆ. ನಾಳೆಯಿಂದ ನಾನು ವರ್ಕ್ ಫ್ರಂ ಹೋಮ್ ಮಾಡುತ್ತೇನೆ.. ನೀವು ಕಂಪನಿಗೆ ಬಂದು ಹೆಚ್ಚಿನ ವ್ಯವಹಾರ ನೋಡಬೇಕಾಗುತ್ತದೆ ಎಂದಿದ್ದಾನೆ.

ಇನ್ನು ಆದೀಶ್ವರ್‌ ರಾತ್ರಿ ಮನೆಗೆ ಬರ್ತಿದ್ದಂತೆ ಭಾಗ್ಯಗೆ ಗೊತ್ತಾಗದಂತೆ ಕುಸುಮಾ ಆತನಿಗೆ ತಿಂಡಿ ಕೊಡಲು ಹೊರಟಿದ್ಲು. ಆದರೆ, ಇದು ಭಾಗ್ಯ ಕಣ್ಣಿಗೆ ಬಿದ್ದಿದೆ. ನೀವು ಈ ರೀತಿ ಮಾಡುವುದು ಸರಿಯಿಲ್ಲ ಅತ್ತೆ.. ಅವರಿಗೆ ಕಷ್ಟ ಆಗುತ್ತೆ ಅಂತ ಅಂದ್ರೆ ಈ ಚಾಲೆಂಜ್ ಬಿಟ್ಟು ಆ ಹಣವನ್ನು ತೆಗೆದುಕೊಂಡು ಹೋಗಲು ಹೇಳಿ ಎಂದಿದ್ದಾಳೆ. ಸದ್ಯ ಆದೀಶ್ವರ್​ ಮೊದಲ ದಿನವನ್ನು ಹೇಗೋ ಕಷ್ಟಪಟ್ಟು ಕಳೆದಿದ್ದಾನೆ. ಆದ್ರೀಗ ಆದೀಶ್ವರ್‌ ಅವಸ್ಥೆ ನೋಡಿ.. ಭಾಗ್ಯ ಬೇಜಾರು ಮಾಡಿಕೊಂಡಿದ್ದಾಳೆ.. ಆದಿಗಾಗಿ ಭಾಗ್ಯ ಹೃದಯ ಮಿಡಿದಿದೆ. ಇದೀಗ ಈ ಚಾಲೆಂಜ್‌ ಮೂಲಕ ಭಾಗ್ಯ ಮನಸ್ಸನ್ನ ಗೆಲ್ತಾನಾ? ಇವರಿಬ್ರು ಒಂದಾಗ್ತಾರಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಆದ್ರೆ ಈ ವಿಚಾರ ಆದಿ ಮನೆಯವರಿಗೆ ಗೊತ್ತಿಲ್ಲ. ಒಂದ್ವೇಳೆ ಇದು ಕನ್ನಿಕಾಗೆ  ಗೊತ್ತಾದ್ರೆ ಆದಿ, ಜೊತೆ ಭಾಗ್ಯಳಿಗೂ ಕ್ಲಾಸ್‌ ತೆಗೆದುಕೊಳ್ಳೋದು ಪಕ್ಕಾ.. ಆದ್ರೆ ಭಾಗ್ಯಗಾಗಿ ಆದಿ ಇಷ್ಟೆಲ್ಲಾ ಮಾಡೋದನ್ನ ನೋಡಿ ತಾಂಡವ್‌ ಮಾತ್ರ ಸರಿಯಾಗೇ ಉರ್ಕೊಳ್ತಿದ್ದಾನೆ.

Shwetha M