ಭಾಗ್ಯ ಹಿಂದೆ ಬಿದ್ದ ಆದೀಶ್ವರ್!‌ – ತಾಂಡವ್‌ ಗೆ ಮಾಜಿ ಹೆಂಡ್ತಿದ್ದೇ ಚಿಂತೆ!
ಶ್ರೇಷ್ಠಾ ತಾಂಡವ್‌ ಬ್ರೇಕ್‌ಅಪ್?

ಭಾಗ್ಯ ಹಿಂದೆ ಬಿದ್ದ ಆದೀಶ್ವರ್!‌ – ತಾಂಡವ್‌ ಗೆ ಮಾಜಿ ಹೆಂಡ್ತಿದ್ದೇ ಚಿಂತೆ!ಶ್ರೇಷ್ಠಾ ತಾಂಡವ್‌ ಬ್ರೇಕ್‌ಅಪ್?

ಭಾಗ್ಯ ದಡ್ಡಿ.. ತನ್ನಿಷ್ಟದಂತೆ ಬದುಕ್ತಾ ಇಲ್ಲ ಅಂತಾ ತಾಂಡವ್‌ ಶ್ರೇಷ್ಠಾ ಹಿಂದೆ ಹೋಗಿದ್ದ. ಭಾಗ್ಯ ಕೂಡ ತಾಂಡವ್‌ ಕಳ್ಳಾಟ ಗೊತ್ತಾಗ್ತಿದ್ದಂತೆ ಡಿವೋರ್ಸ್‌ ಕೊಟ್ಟಿದ್ಲು.. ಆದ್ರೆ ಶ್ರೇಷ್ಠಾಳನ್ನ ಮದ್ವೆ ಆದ ತಾಂಡವ್‌ ಗೆ ನೆಮ್ಮದಿಯೇ ಇಲ್ಲ ಅನ್ನೋ ತರ ಆಗಿದೆ. ಇದೀಗ ಭಾಗ್ಯ ಹಿಂದೆ ಆದೀಶ್ವರ್‌ ಕೂಡ ಬಿದ್ದಿದ್ದಾನೆ. ಇದನ್ನ ತಾಂಡವ್‌ಗೆ ಸಹಿಸೋದಿಕ್ಕೆ ಆಗ್ತಿಲ್ಲ.. ಹೀಗಾಗಿ ತಾಂಡವ್‌ಗೆ ಭಾಗ್ಯಳದ್ದೇ ಚಿಂತೆ ಶುರುವಾಗಿದೆ.. ಇತ್ತ ಶ್ರೇಷ್ಠಾಗೂ ತಾಂಡವ್‌ ಮೇಲೆ ಅನುಮಾನ ಶುರುವಾಗಿದೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಭೀಕರ ಮೇಘಸ್ಫೋಟಕ್ಕೆ 60 ಸಾ*ವು, ನೂರಾರು ಜನ ಮಿಸ್ಸಿಂಗ್ – ನಾಪತ್ತೆಯಾದವರಿಗೆ ಸರ್ಚಿಂಗ್

ಭಾಗ್ಯಲಕ್ಷ್ಮೀ ಸೀರಿಯಲ್‌ ಸ್ಟೋರಿ ಸದ್ಯ ಮಹಾ ತಿರುವು ಪಡೆದುಕೊಳ್ಳೋ ಮುನ್ಸೂಚನೆ ಸಿಕ್ಕಿದೆ. ಕುಸುಮಾ ಒತ್ತಾಯಕ್ಕೆ ಮಣಿದು ತಾಂಡವ್‌ ಭಾಗ್ಯಳನ್ನ ಮದುವೆ ಆಗಿದ್ದ.. ಆಕೆಯನ್ನ ಕಂಡ್ರೆ ಆಗ್ತಿರ್ಲಿಲ್ಲ.. ಆದ್ರೂ ಕೂಡ  ಭಾಗ್ಯ ಜೊತೆ ಹತ್ತು ಹದಿನೈದು ವರ್ಷ ಸಂಸಾರ ನಡೆಸಿದ್ದ. ಬಳಿಕ ತಾಂಡವ್ ಶ್ರೇಷ್ಠಾ ಹಿಂದೆ ಬಿದ್ದಿದ್ದ..‌ ಆದ್ರೆ ಈ ವಿಚಾರ ಗೊತ್ತಾಗ್ತಿದ್ದಂತೆ ತಾಂಡವ್‌ಗೆ ಭಾಗ್ಯ ಡಿವೋರ್ಸ್‌ ಕೊಟ್ಟಿದ್ಲು.. ಆದ್ರೆ ಡಿವೋರ್ಸ್‌ ಕೊಟ್ರೂ ತಾಂಡವ್‌ ಕಾಟ ಕಡಿಮೆಯಾಗಿಲ್ಲ. ಶ್ರೇಷ್ಠಾ ಜೊತೆ ಸೇರ್ಕೊಂಡು ಸದಾ ತೊಂದರೆ ಕೊಡ್ತಾನೆ ಇದ್ದಾನೆ. ಆದ್ರೆ ಭಾಗ್ಯ ಗಟ್ಟಿಗಿತ್ತಿ.. ಯಾರ ಸಹಾಯವಿಲ್ಲದೇ ಎಲ್ಲಾ ಜವಾಬ್ದಾರಿಯನ್ನ ನಿಭಾಯಿಸ್ತಿದ್ದಾಳೆ. ಇದೀಗ ಭಾಗ್ಯ ಭಾಳಿಗೆ ಆದೀಶ್ವರ್‌ ಎಂಟ್ರಿಯಾಗಿದೆ. ಆದಿ, ಭಾಗ್ಯ ಬಾಂಧವ್ಯ ಗಟ್ಟಿಯಾಗಿದೆ. ಆದ್ರೆ ಇದನ್ನ ನೋಡಿ ತಾಂಡವ್‌ ಸರಿಯಾಗೆ ಉರ್ಕೊಂಡಿದ್ದಾನೆ. ಇದೀಗ ತಾಂಡವ್‌ಗೆ ಭಾಗ್ಯಳ ಚಿಂತೆ ಶುರುವಾಗಿದೆ. ಇದೀಗ ಶ್ರೇಷ್ಠಾಗೆ ತಾಂಡವ್‌ ಮೇಲೆ ಅನುಮಾನ ಶುರುವಾಗಿದೆ.

ಹೌದು.. ಭಾಗ್ಯ ಹಾಗೂ ಆದೀಶ್ವರ್‌ ಫುಲ್‌ ಕ್ಲೋಸ್‌ ಆಗಿದ್ದಾರೆ. ಭಾಗ್ಯಾಳ ಕೃಪೆಯಿಂದ ಆದೀಶ್ವರ್‌ ಕೈ ತಪ್ಪುತ್ತಿದ್ದ ದೊಡ್ಡ ಪ್ರಾಜೆಕ್ಟ್ ಪುನಃ ಸಿಕ್ಕಿದೆ. ಇದ್ರಿಂದಾಗಿ ಆದೀಶ್ವರ್‌ ಫುಲ್‌ ಖುಷಿಯಾಗಿದ್ದಾನೆ ಆಕೆಗೆ 25 ಲಕ್ಷ ರೂಪಾಯಿ ಗಿಫ್ಟ್‌ ಕೊಡಲು ಮುಂದಾಗಿದ್ದಾನೆ. ಇದ್ರಿಂದಾಗಿ ಕುತಂತ್ರಿಗಳು ಸರಿಯಾಗೇ ಉರಿದುಕೊಂಡಿದ್ದಾರೆ.. ಆದ್ರೀಗ ಶ್ರೇಷ್ಠಾಗೆ ತಾಂಡವ್ ಮೇಲೆ ಅನುಮಾನ ಮೂಡಲು ಶುರುವಾಗಿದೆ. ಪದೇ ಪದೇ ತಾಂಡವ್-ಭಾಗ್ಯ ಮುಖಾಮುಖಿ ಆಗುತ್ತಿದ್ದಾರೆ. ಇದನ್ನ ಶ್ರೇಷ್ಠಾಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದ ಶ್ರೇಷ್ಠಾ ಕೆರಳಿ ಕೆಂಡವಾಗಿದ್ದಾಳೆ. ಅಷ್ಟೇ ಅಲ್ಲದೆ ಶ್ರೇಷ್ಠಾ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿರುವುದು ತಾಂಡವ್​ಗೆ ಕೋಪ ತರಿಸಿದೆ. ಇದೆಲ್ಲ ಈಗ ದೊಡ್ಡ ಜಗಳಕ್ಕೆ ಕಾರಣವಾಗಿದೆ.

ಹೌದು, ತಾಂಡವ್‌ ಈಗ ಆದೀಶ್ವರ್‌ ಜೊತೆ ಕೈಜೋಡಿಸಿದ್ದಾನೆ. ಆದೀಶ್ವರ್‌ ನ ಕಂಡ್ರೆ ತಾಂಡವ್‌ಗೆ ಸಿಕ್ಕಾಪಟ್ಟೆ ಗೌರವ.. ಆದಿ ಬ್ರೋ ಆದಿ ಬ್ರೋ ಅಂತಾ ಹಿಂದೆಯೇ ಸುತ್ತಾಡ್ತಿರ್ತಾನೆ.. ಮನೆಗೆ ಬಂದ್ಮೇಲೂ ಶ್ರೇಷ್ಠಾ ಜೊತೆ ತಾಂಡವ್‌ ಸರಿಯಾಗಿ ಮಾತನಾಡಲ್ಲ.. ಹೀಗಾಗಿ ಶ್ರೇಷ್ಠಾಗೆ ತಾಂಡವ್‌ ಮೇಲೆ ಅನುಮಾನ ಶುರುವಾಗಿದೆ. ಯಾವಾಗ ನೋಡಿದರೂ ಕೂಡ ನನ್ನನ್ನು ಅಸಡ್ಡೆಯಿಂದ ಕಾಣುವ ತಾಂಡವ್‌ ಮನಸ್ಸು ಬದಲಾಯಿಸಿ ಭಾಗ್ಯ ಹಿಂದೆ ಹೋಗ್ತಾನೆ ಅನ್ನೋ ಭಯ ಅವಳಿಗೆ ಶುರುವಾಗಿದೆ. ಇದ್ರಿಂದಾಗೇ ಬೆಳಗ್ಗೆ ಎದ್ದ ತಕ್ಷಣ ಇಬ್ಬರ ನಡುವೆ ಜಗಳ ಶುರುವಾಗುತ್ತಿದೆ. ತಾಂಡವ್ ಹೊರಗಡೆ ಹೋಗಿ ಫೋನ್​ನಲ್ಲಿ ಮಾತನಾಡಿದರೆ, ಇವನು ಭಾಗ್ಯ ಜೊತೆಯೇ ಮಾತನಾಡುತ್ತಿರಬಹುದು ಅಂತಾ ಶ್ರೇಷ್ಠಾ ಅಂದ್ಕೊಳ್ತಿದ್ದಾಳೆ. ಬಳಿಕ ತಾಂಡವ್​ನ ಫೋನ್ ಚೆಕ್ ಮಾಡಿದ್ದಾಳೆ. ಅಲ್ಲದೆ ಭಾಗ್ಯಾಗೆ ಕಾಲ್ ಮಾಡಿ ನನ್ನ-ನನ್ನ ಗಂಡನ ವಿಚಾರಕ್ಕೆ ಬರಬೇಡ ಎಂದು ಹೇಳಿ ಮನಬಂದಂತೆ ಬೈದಿದ್ದಾಳೆ. ಜೊತೆಗೆ ಭಾಗ್ಯ ಮಕ್ಕಳಿಗೂ ಬೈದಿದ್ದಾಳೆ. ಶ್ರೇಷ್ಠಾ ಕಾಲ್ ಮಾಡಿ ಮಕ್ಕಳಿಗೆ ಬೈದಿದ್ದಕ್ಕೆ ತಾಂಡವ್‌ ಕೋಪಗೊಂಡಿದ್ದಾನೆ. ನನ್ನ ಮಕ್ಕಳ ಬಗ್ಗೆಯೂ ಮಾತನಾಡಿದ್ದೀಯಾ.. ಅವರ ಬಗ್ಗೆ ಮಾತನಾಡುವ ಹಕ್ಕು ನಿನಗಿಲ್ಲ ಎಂದು ಸರಿಯಾಗೇ ಮಂಗಳಾರತಿ ಮಾಡಿದ್ದಾನೆ. ಇದೀಗ ತಾಂಡವ್‌ ತನ್ನಿಂದ ಕೈತಪ್ಪಿ ಹೋಗ್ತಿದ್ದಾನೆ.. ಮತ್ತೆ ಭಾಗ್ಯ ಮನೆಗೆ ಹೋಗ್ತಾನೆ ಅನ್ನೋ ಭಯ ಶ್ರೇಷ್ಠಾಗೆ ಶುರುವಾಗಿದೆ.

ಇತ್ತ ಆದೀಶ್ವರ್-ಭಾಗ್ಯ ದಿನೇ ದಿನೆ ಹತ್ತಿರವಾಗುತ್ತಲೇ ಇದ್ದಾರೆ. ಭಾಗ್ಯಾಗೆ ಯಾವುದೇ ರೀತಿಯ ತೊಂದರೆ ಆಗದಂತೆ ಆದೀ ನೋಡಿಕೊಳ್ಳುವುದು ಖಚಿತ. ಆದ್ರೆ ಭಾಗ್ಯ ವಿಚಾರವಾಗಿ ಶ್ರೇಷ್ಠಾ ಹಾಗೂ ತಾಂಡವ್‌ ಮಧ್ಯೆ ಮನಸ್ತಾಪ ಹೆಚ್ಚಾಗ್ತಾನೆ ಇದೆ. ಇವರಿಬ್ಬರ ಜಗಳ ಯಾವ ಹಂತಕ್ಕೆ ಹೋಗುತ್ತದೆ ಎಂಬುದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ ಭಾರಿ ಕುತೂಹಲದಿಂದ ಕೂಡಿರಲಿದೆ.

Shwetha M