ಭಾಗ್ಯಗೆ 25 ಲಕ್ಷ ಆದೀಶ್ವರ್ ಗಿಫ್ಟ್! – ಆದಿ ಪ್ಲ್ಯಾನ್‌ಗೆ ತಾಂಡವ್ ಥಂಡಾ!

ಭಾಗ್ಯ ಕೆಟ್ಟವಳು ಅಂತಾ ಆದೀಶ್ವರ್ ಮುಂದೆ ಪ್ರೂವ್ ಮಾಡಲು ತಾಂಡವ್ ಮಾಡೋ ಕುತಂತ್ರ ಅಷ್ಟಿಷ್ಟಲ್ಲ.. ಆದ್ರೆ ತಾಂಡವ್ ಏನೇ ಮಾಡೋಕೆ ಹೋದ್ರೂ ಅದು ಆತನಿಗೇ ಉಲ್ಟಾ ಹೊಡಿತಿದೆ. ಇದೀಗ ಭಾಗ್ಯ ಆದೀಶ್ವರ್ ಕಂಪನಿಗೆ ಆಗ್ತಿದ್ದ ದೊಡ್ಡ ಲಾಸ್‌ನ ತಪ್ಪಿಸಿದ್ದಾಳೆ. ಇದ್ರಿಂದಾಗಿ ಆದೀಶ್ವರ್ ಫುಲ್ ಇಂಪ್ರೆಸ್ ಆಗಿದ್ದಾನೆ.. ಭಾಗ್ಯಗೆ ಸ್ಪೆಷಲ್ ಆಗೇ ಗಿಪ್ಟ್ ಕೊಡ್ಬೇಕು ಅಂತಾ ಹೊರಟಿದ್ದಾನೆ.. ಆದ್ರೆ ತಾಂಡವ್ ಇದನ್ನ ತಡಿಯೋದಿಕ್ಕೆ ಪ್ರಯತ್ನಿಸ್ತಿದ್ದಾನೆ. ಆದ್ರೀಗ ಆದೀಶ್ವರ್ ಭಾಗ್ಯಗೆ ಕೊಟ್ಟ ಗಿಫ್ಟ್ ನೋಡಿ ತಾಂಡವ್‌ಗೆ ಹಾರ್ಟ್ ಅಟ್ಯಾಕ್ ಆಗೋದೊಂದು ಮಾತ್ರ ಬಾಕಿ.
ಇದನ್ನೂ ಓದಿ: ಬೆಂಗಳೂರಲ್ಲಿ ತಲೆ ಎತ್ತಲಿದೆ ಬಹುದೊಡ್ಡ ಸ್ಟೇಡಿಯಂ – 75 ಎಕರೆ.. ₹1,650 ಕೋಟಿ.. ಜಾಗ ಎಲ್ಲಿ?
ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಆದೀಶ್ವರ್ ಭಾಗ್ಯ ಭಾಂದವ್ಯ ಒಂದಲ್ಲ ಒಂದು ವಿಚಾರಕ್ಕೆ ಗಟ್ಟಿಯಾಗ್ತಿದೆ. ಆರಂಭದಲ್ಲಿ ಭಾಗ್ಯಳನ್ನ ಶತ್ರುವಿನಂತೆ ಟ್ರೀಟ್ ಮಾಡ್ತಿದ್ದ ಆದೀಶ್ವರ್‌ಗೆ ಈಗ ಭಾಗ್ಯ ಒಳ್ಳೆಯವಳು ಅಂತಾ ಗೊತ್ತಾಗಿದೆ. ಭಾಗ್ಯ ಒಳ್ಳೆ ಗುಣಕ್ಕೆ ಆದೀಶ್ವರ್ ಮನಸೋತಿದ್ದಾನೆ. ಭಾಗ್ಯಾಳ ಸ್ವಾಭಿಮಾನ – ನಿಷ್ಕಲ್ಮಶ ಮನಸ್ಸು ಆದಿಗೆ ಇಷ್ಟವಾಗಿದೆ. ಇದನ್ನೆಲ್ಲ ಮೀರಿಸುವಂತೆ ಆದೀಗೆ ಕೈ ತಪ್ಪುತ್ತಿದ್ದ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿದೆ. ಕೋಟಿ ಕೋಟಿ ಪ್ರಾಜೆಕ್ಟ್ ಭಾಗ್ಯ ಇಲ್ಲದಿದ್ದರೆ ಆದೀಗೆ ಸಿಗುತ್ತಿರಲಿಲ್ಲ. ಹೀಗಾಗಿ ಆದೀಗೆ ಈಗ ಭಾಗ್ಯ ದೇವರಂತಾಗಿದ್ದಾಳೆ. ಇಷ್ಟೆಲ್ಲ ಸಹಾಯ ಮಾಡಿರುವ ಭಾಗ್ಯಾಗೆ ಏನಾದರು ದೊಡ್ಡದು ಗಿಫ್ಟ್ ನೀಡಬೇಕು ಎಂದು ಆದೀ ಮುಂದಾಗಿದ್ದಾನೆ. ಇದಕ್ಕಾಗಿ ಆದೀಶ್ವರ್ ತಾಂಡವ್ ಹೆಲ್ಪ್ ತೆಗೆದುಕೊಂಡಿದ್ದಾನೆ. ಆದ್ರೀಗ ಭಾಗ್ಯಗೆ ಆದೀಶ್ವರ್ ಕೊಡೊ ಗಿಫ್ಟ್ ಕೇಳಿ ತಾಂಡವ್, ಕನ್ನಿಕಾ, ಶ್ರೇಷ್ಠಾ ಮೂವರು ಶಾಕ್ ಆಗಿದ್ದಾರೆ.
ತಾಂಡವ್-ಆದೀ ಒಂದು ಬಹುದೊಡ್ಡ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಇದರ ಅಪ್ರೂವಲ್ ಹಾಗೂ ಇನ್ವೆಸ್ಟ್ಮೆಂಟ್ಗೆ ಒಂದು ಮೀಟಿಂಗ್ ಕರೆದಿರುತ್ತಾರೆ. ಆದರೆ, ಈ ಮೀಟಿಂಗ್ಗೆ ಬರುವ ಬರದಲ್ಲಿ ತಾಂಡವ್ ಒಂದು ಫೈಲ್ ಅನ್ನು ಮಿಸ್ ಮಾಡಿದ್ದಾನೆ. ಇದನ್ನ ಕಂಡ ಭಾಗ್ಯ ಫೈಲ್ ಅನ್ನು ಆಫೀಸ್ಗೆ ತಂದುಕೊಟ್ಟಿದ್ದಾಳೆ. ಸರಿಯಾದ ಸಮಯಕ್ಕೆ ಭಾಗ್ಯ ಫೈಲ್ ತಂದುಕೊಟ್ಟು ಆ ಪ್ರಾಜೆಕ್ಟ್ ಅಪ್ರೂವ್ ಆಗಿ ಎಲ್ಲರೂ ಖುಷಿ ಪಡುತ್ತಾರೆ. ಭಾಗ್ಯಳಿಂದಾಗಿ ದೊಡ್ಡ ಪ್ರಾಜೆಕ್ಟ್ ಸಿಕ್ಕಿದೆ.. ಈ ಫೈಲ್ ಸಿಕ್ಕಿಲ್ಲ ಅಂದ್ರೆ ತುಂಬಾ ಲಾಸ್ ಆಗ್ತಿತ್ತು ಅಂತಾ ಆದೀಶ್ವರ್ ಹೇಳಿದ್ದಾನೆ. ಬಳಿಕ ಭಾಗ್ಯಗೆ ಥ್ಯಾಂಕ್ಸ್ ಕೂಡ ಹೇಳಿದ್ದಾನೆ. ಇದೀಗ ಆದೀಶ್ವರ್ ಭಾಗ್ಯಗೆ ಥ್ಯಾಂಕ್ಸ್ ಹೇಳಿದ್ರೆ ಸಾಕಾಗಲ್ಲ.. ಏನಾದ್ರೂ ಗಿಫ್ಟ್ ಕೊಡ್ಬೇಕು ಅಂತಾ ಅಂದ್ಕೊಂಡಿದ್ದಾನೆ. ಭಾಗ್ಯಗೆ ಏನ್ ಕೊಡ್ಬೋದು ಅಂತಾ ಆದೀಶ್ವರ್ ತಾಂಡವ್ ಬಳಿ ಕೇಳಿದ್ದಾನೆ. ಆಗ ತಾಂಡವ್ ಸ್ವೀಟ್ ಕೊಟ್ರೆ ಸಾಕು ಅಂತಾ ಉರ್ಕೊಂಡೇ ಹೇಳಿದ್ದಾನೆ. ಆದ್ರೆ ಇದಕ್ಕೆ ಆದೀಶ್ವರ್ ಒಪ್ಪಿಲ್ಲ.. ಏನಾದ್ರೂ ದೊಡ್ಡದಾಗೇ ಗಿಫ್ಟ್ ಕೊಡ್ಬೇಕು ಅಂತಾ ಹೇಳಿದ್ದಾನೆ.. ಬಳಿಕಾ ಪೂಜಾ, ಕುಸುಮಾ ಬಳಿ ಕೂಡ ವಿಚಾರಿಸಿದ್ದಾನೆ.. ಆದ್ರೆ ಅವರಿಬ್ರು ಕೂಡ, ಭಾಗ್ಯ ಸ್ವಾಭಿಮಾನಿ. ಏನ್ ಕೊಟ್ರೂ ಆಕೆ ತೆಗೆದುಕೊಳ್ಳೋದಿಲ್ಲ ಅಂತಾ ಹೇಳಿದ್ದಾರೆ. ಇವರ ಮಾತು ಕೇಳಿ ಆದೀಗೆ ಭಾಗ್ಯ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಇದೀಗ ಆದಿ ಒಂದು ದೊಡ್ಡ ನಿರ್ಧಾರಕ್ಕೆ ಬಂದಿದ್ದಾನೆ. ಭಾಗ್ಯಾಗೆ 25 ಲಕ್ಷ ರೂಪಾಯಿ ಕೊಡಲು ನಿರ್ಧರಿಸಿದ್ದಾನೆ. ಇದನ್ನ ಆದೀ ಫಸ್ಟ್ ತಾಂಡವ್‌ಗೆ ಹೇಳಿದ್ದಾನೆ. ನಾನು ಭಾಗ್ಯಾಗೆ ಏನಾದರು ವ್ಯಾಲ್ಯುವೆಬಲ್ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೇನೆ.. ಅವಳಿಂದಲೇ ನಮ್ಮ ಪ್ರಾಜೆಕ್ಟ್ ಅಪ್ರೂವ್ ಆಗಿರೋದು ಅಲ್ವಾ ಅಂತಾ ಆದೀಶ್ವರ್ ಹೇಳಿದ್ದಾನೆ.. ತಾಂಡವ್‌ಗೆ ಕೋಪ ಬಂದರೂ ಅದನ್ನು ತೋರಿಸದೆ, ಹೌದು ಹೌದು.. ಅನ್ನುತ್ತಾನೆ.. ಬಳಿಕ ಆದೀಶ್ವರ್ ನಾನು ಭಾಗ್ಯಗೆ ಒಂದು 25 ಲಕ್ಷ ಕ್ಯಾಶ್ ಕೊಡ್ವೇಕು ಅಂತಾ ಇದ್ದೀನಿ ಅಂತಾ ಹೇಳಿದ್ದಾನೆ. ಆದೀ ಮಾತು ಕೇಳಿ ತಾಂಡವ್‌ಗೆ ಶಾಕ್ ಆಗಿದೆ. ಏನು ಲಕ್ಷದಲ್ಲ.. ಅಂತ ಚಿಕ್ಕ ಕೆಲಸಕ್ಕೆ ಇಷ್ಟೆಲ್ಲ ಬೇಡ ಎಂದು ಹೇಳುತ್ತಾನೆ. ಆಗ ಆದೀ ಇಲ್ಲ ಇದನ್ನ ನಾನು ನನ್ನ ಶೇರ್ನಲ್ಲೇ ಕೊಡುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಈ ವಿಚಾರ ಆದೀ ಮನೆಯವರ ಬಳಿ ಕೂಡ ಹೇಳುತ್ತಾನೆ. ಇದನ್ನ ಕೇಳಿ ಕನ್ನಿಕಾಗೂ ಶಾಕ್ ಆಗಿ ಉರಿದುಕೊಂಡಿದ್ದಾಳೆ. ಅತ್ತ ಶ್ರೇಷ್ಠಾಗೂ ಇದು ಗೊತ್ತಾಗಿದೆ. ಇದೀಗ ಯಾವುದೇ ಕಾರಣಕ್ಕೂ ಭಾಗ್ಯಾಗೆ ಆ ಗಿಫ್ಟ್ ಸಿಗ್ಬಾರ್ದು ಅಂತಾ ಕುತಂತ್ರಿಗಳು ಪ್ಲ್ಯಾನ್ ಮಾಡ್ತಿದ್ದಾರೆ. ಆದ್ರೆ ಬಾಗ್ಯ ಈ ಗಿಫ್ಟ್ ನ ತಗೊಳೋದು ಡೌಟ್.. ಯಾಕಂದ್ರೆ ಆಕೆ ಯಾವತ್ತೂ ಹಣ, ಒಡವೆಗಳಿಗೆ ಆಸೆ ಪಟ್ಟವಳಲ್ಲ.. ಆದ್ರೆ ಕುತಂತ್ರಿಗಳು ಮಾತ್ರ ಸರಿಯಾಗೇ ಉರಿದುಕೊಂಡಿದ್ದಾರೆ. ಇದೀಗ ಸೀರಿಯಲ್ ನೋಡಿದ ವೀಕ್ಷಕರು ತಾಂಡವ್ ಹಣದ ಆಸೆಗಾದ್ರೂ ಭಾಗ್ಯ ಮನೆಗೆ ವಾಪಾಸ್ ಬರ್ಬೋದು ಅಂತಾ ವೀಕ್ಷಕರು ಹೇಳ್ತಿದ್ದಾರೆ.

ನೋಡಿರಿ

