ಆದಿ ಜೊತೆ ಭಾಗ್ಯ 2ನೇ ಮದ್ವೆ? – ಮದುವೆಗೆ ಕುಸುಮಾ ಗ್ರೀನ್ ಸಿಗ್ನಲ್!
ಶ್ರೇಷ್ಠಾಳನ್ನ ನಂಬಿ ಕೆಟ್ಟ ತಾಂಡವ್!

ತಾಂಡವ್ಗೆ ಡಿವೋರ್ಸ್ ಕೊಟ್ಟ ಬಳಿ ಭಾಗ್ಯ ಬಾಳಲ್ಲಿ ಒಳ್ಳೆಯದ್ದೇ ನಡಿತಾ ಇದೆ. ಅಳುಮುಂಜಿಯಾಗಿದ್ದ ಭಾಗ್ಯ ಈಗ ಫುಲ್ ಸ್ಟ್ರಾಂಗ್ ಆಗಿದ್ದಾಳೆ. ಮನೆ, ಮಕ್ಕಳ ಜವಾಬ್ದಾರಿಯನ್ನ ಸರಿಯಾಗೇ ನಿಭಾಯಿಸ್ತಿದ್ದಾಳೆ ಕುಸುಮಾ ಸೊಸೆ. ಇದೀಗ ಕುಸುಮಾಗೆ ಏಕಾಏಕಿ ಜ್ಞಾನೋದಯವಾಗಿದೆ. ಇದೀಗ ಕುಸುಮಾ ಸೊಸೆಗೆ 2ನೇ ಮದುವೆ ಮಾಡಿಸೋದಿಕ್ಕೆ ಮುಂದಾದ್ಲಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ.
ಇದನ್ನೂ ಓದಿ: KL ಮೇಲೆ ಲಕ್ನೋ ಸೂಪರ್ ಜೇಂಟ್ಸ್ ದ್ವೇಷ – ಫೋಟೋಗಳಲ್ಲೂ ಸಣ್ಣತನ ಬೇಕಿತ್ತಾ?
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ರೋಚಕ ಘಟ್ಟ ತಲುಪಿದೆ. ತಾಂಡವ್ ನಿಂದ ದೂರವಾದ ಭಾಗ್ಯ ಈಗ ಏಕಾಂಗಿಯಾಗಿದ್ದಾಳೆ. ಮನೆ ನಿಭಾಯಿಸಲು, ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯ ಕಷ್ಟಪಟ್ಟು ದುಡಿತಾ ಇದ್ದಾಳೆ. ಗಂಡನಿಂದ ದೂರ ಆಗಿದ್ರೂ ಕೂಡ ತಾಂಡವ್ ಒಂದಲ್ಲ ಒಂದು ಕಷ್ಟ ಕೊಡ್ತಾನೆ ಇದ್ದಾನೆ.. ಆದ್ರೆ ಭಾಗ್ಯ ಇದಕ್ಕೆ ಒಂಚೂರು ತಲೆ ಕೆಡಿಸಿಕೊಳ್ತಿಲ್ಲ.. ತಾಂಡವ್ ಎಷ್ಟೇ ಕಷ್ಟ ಕೊಟ್ರೂ ಕೂಡ ಅದನ್ನ ಸವಾಲಾಗಿ ತೆಗೆದುಕೊಳ್ತಿದ್ದಾಳೆ.. ಬ್ಯುಸಿನೆಸ್ ಚೆನ್ನಾಗಿ ನಡಿತಾ ಇದ್ದಂತೆ ಪೂಜಾ, ಕಿಶನ್ ಮದುವೆಯನ್ನೂ ಅದ್ದೂರಿಯಾಗಿ ಮಾಡಿದ್ಲು. ಇದೀಗ ಪೂಜಾ ಗಂಡನ ಮನೆಯಲ್ಲಿ ಖುಷಿಯಾಗಿದ್ದಾಳೆ. ಆದ್ರೀಗ ಕುಸುಮಾಗೆ ಭಾಗ್ಯಗೆ ಭವಿಷ್ಯದ ಚಿಂತೆ ಕಾಡ್ತಿದೆ.. ಇದೀಗ ಭಾಗ್ಯಗೆ ಎರಡನೇ ಮದುವೆ ಮಾಡಿಸ್ತಾಳಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡಿದೆ.
ಕುಸುಮಾ ಮಾರ್ಕೆಟ್ ಗೆ ಹೋಗಿ ಬರುವಾಗ ತಾಯಿ ಮಗಳು ಇಬ್ರು ಸಿಕ್ತಾರೆ.. ಏನಾಯ್ತು ಅಂತಾ ವಿಚಾರಿಸಿದಾ ನನಗೆ ಡಿವೋರ್ಸ್ ಆಯ್ತು ಅಂತಾ ಹೇಳಿದ್ದಾಳೆ. ಬಳಿಕ ಆಕೆಯ ತಾಯಿ.. ನಾನಿನ್ನು ಉದುರೋಗ ಎಲೆ.. ನಾನು ಹೋದ್ಮೇಲೆ ನಿನ್ನನ್ನ ಯಾರು ನೋಡಿಕೊಳ್ತಾರೆ ಎಂದು ಆಕೆಗೆ ಹೇಳಿದ್ದಾರೆ. ಆ ತಾಯಿಯ ಮಾತು ಕುಸುಮಾಗೆ ತಟ್ಟಿದೆ. ಕುಸುಮಾಗೆ ಈಗ ಭಾಗ್ಯ ಜೀವನದ ಚಿಂತೆ ಕಾಡಿದೆ.. ಇದೀಗ ಮನೆಗೆ ಬಂದು ಕೂಡ ಅದನ್ನೇ ಯೋಚಿಸ್ತಿದ್ದಾಳೆ. ಆ ಹುಡುಗಿಯಂತೆ ಭಾಗ್ಯ ಪರಿಸ್ಥಿತಿ ಕೂಡ ಬಂದು ಬಿಟ್ರೆ ಹೇಗೆ ಅಂತ ಕುಸುಮಾ ಗಂಡನ ಬಳಿ ಕೇಳಿದ್ದಾಳೆ. ಬಳಿಕ ತನ್ವಿ ಹಾಗೂ ಗುಂಡಣ್ಣನ ಬಳಿ ದೊಡ್ಡವರಾದ್ಮೇಲೆ ಏನ್ ಆಗ್ತೀರಾ? ಅಮ್ಮನನ್ನ ನೋಡಿಕೊಳ್ಳೋದು ಯಾರು ಅಂತಾ ಕೇಳಿದ್ದಾಳೆ. ಆಗ ಇಬ್ಬರು ಅಮ್ಮನನ್ನ ನೋಡಿಕೊಳ್ಳಲು ನೀವಿದ್ದೀರಲ್ಲ ಅಂತಾ ಹೇಳಿದ್ದಾರೆ. ಮಕ್ಕಳ ಮಾತು ಕೇಳಿ ಕುಸುಮಾ ಶಾಕ್ ಆಗಿದ್ದಾಳೆ. ಇದೀಗ ಭಾಗ್ಯ ಎರಡನೇ ಮದುವೆ ಮಾಡಿಸೋದು ಫಿಕ್ಸ್ ಅಂತಾ ಸೀರಿಯಲ್ ವೀಕ್ಷಕರು ಹೇಳ್ತಿದ್ದಾರೆ.
ಹೌದು.. ಕುಸುಮಾಗೆ ಈಗ ಸೊಸೆಯದ್ದೇ ಚಿಂತೆ.. ನಾವು ಹೋದ ಬಳಿಕ ಭಾಗ್ಯಳನ್ನ ಯಾರು ನೋಡಿಕೊಳ್ಳೋದು ಅನ್ನೋದು ಆಕೆಗೆ ಕಾಡ್ತಾ ಇದೆ.. ಹೀಗಾಗಿ ಕುಸುಮಾ ದಿಟ್ಟ ನಿರ್ಧಾರ ಕೈಗೊಳ್ತಾಳಾ? ಸೊಸೆಗೆ ಎರಡನೇ ಮದುವೆ ಮಾಡಿಸೋ ಯೋಚನೆ ಮಾಡ್ತಾಳಾ ಅನ್ನೋ ಕೂರಿಯಾಸಿಟಿ ಮೂಡಿದೆ. ಒಂದ್ವೇಳೆ ಕುಸುಮಾ ಭಾಗ್ಯಗೆ ಎರಡನೇ ಮದ್ವೆ ಮಾಡಿಸೋದಾದ್ರೆ ಹುಡುಗ ಆದೀಶ್ವರ್ ಅಂತಾ ವೀಕ್ಷಕರು ಹೇಳ್ತಿದ್ದಾರೆ. ಯಾಕಂದ್ರೆ ಆದೀಶ್ವರ್ ಕುಸುಮಾ ಮನಸ್ಸು ಗೆದ್ದಾಗಿದೆ.. ಕುಸುಮಾ ಮೂರ್ಹೊತ್ತು ಎಷ್ಟು ಒಳ್ಳೆ ಹುಡುಗ ಅಂತಾ ಹೇಳ್ತಾನೇ ಇರ್ತಾಳೆ.. ಇನ್ನು ಭಾಗ್ಯಗೂ ಆದೀಶ್ವರ್ ಒಳ್ಳೆತನ ಗೊತ್ತಾಗಿದೆ.. ಈಗಾಗಲೇ ತುಂಬಾ ಕ್ಲೋಸ್ ಆಗಿದ್ದಾರೆ.. ಆದೀಶ್ವರ್ಗೂ ಭಾಗ್ಯ ಮೇಲೆ ಒಳ್ಳೆಯ ಅಭಿಪ್ರಾಯ ಇದೆ. ಹೀಗಾಗಿ ಆದೀಶ್ವರ್ ಭಾಗ್ಯ ಮದುವೆ ನಡೆದೇ ನಡೆಯುತ್ತೆ.. ಇನ್ನು ಭಾಗ್ಯಗೆ ಕೈಕೊಟ್ಟು ಶ್ರೇಷ್ಠಾ ಹಿಂದೆ ಹೋದ ತಾಂಡವ್ ಸ್ಥಿತಿ ಕೆಟ್ಟದಾಗಿದೆ.. ಸದ್ಯದಲ್ಲೇ ಆತ ಬೀದಿಗೆ ಬೀಳ್ತಾನೆ..

ನೋಡಿರಿ

