ಆದಿ ಎದುರೇ ಸಿಕ್ಕಿಬಿದ್ದ ತಾಂಡವ್! – ಭಾಗ್ಯ ಗಂಡ ಅನ್ನೋ ಸತ್ಯ ರಿವೀಲ್?
ಕುಸುಮಾ ಸೊಸೆಯಿಂದ ಆದಿ ದೂರ!

ಭಾಗ್ಯಳನ್ನ ಸೋಲಿಸ್ಬೇಕು ಅಂತ ತಾಂಡವ್ ಎಷ್ಟೇ ಪ್ರಯತ್ನ ಪಟ್ರೂ ಅದು ಸಾಧ್ಯವಾಗ್ತಿಲ್ಲ.. ಹೋದಲೆಲ್ಲಾ ತಾಂಡವ್‌ಗೆ ಹಿನ್ನಡೆಯಾಗ್ತಿದೆ. ಇದೀಗ ತಾಂಡವ್ ಬಣ್ಣ ಆದೀಶ್ವರ್ ಮುಂದೆ ಬಯಲಾಗಿದೆ. ಪೂಜಾ ಬರ್ತ್‌ಡೇ ಪಾರ್ಟಿಯಲ್ಲಿ ಏನಾಯ್ತು ಅನ್ನೋದು ಆದಿಗೆ ಗೊತ್ತಾಗಿದೆ. ಇನ್ನು ತಾಂಡವ್ ಭಾಗ್ಯ ಗಂಡ ಅನ್ನೋದು ಗೊತ್ತಾದ್ರೆ ಆದೀಶ್ವರ್ ಏನ್ ಮಾಡ್ಬೋದು ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಹಾಗಾದ್ರೆ ತಾಂಡವ್‌ಗೆ ಕಾದಿದ್ಯಾ ಮಾರಿ ಹಬ್ಬ.. ಆದೀಶ್ವರ್ ತಾಂಡವ್ ಜೊತೆಗಿನ ಬ್ಯುಸಿನೆಸ್ ಡೀಲ್‌ನ ಕ್ಯಾನ್ಸಲ್ ಮಾಡಿಕೊಳ್ತಾನಾ? ಸೀರಿಯಲ್‌ನಲ್ಲಿ ಮುಂದೇನು ಟ್ವಿಸ್ಟ್ ಕಾದಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ಮಾತ್ರ JDS ಬಳಸಿಕೊಳ್ಳುತ್ತಿದೆ – JDS ಮೇಲೆ ಮತ್ತೆ ಜಿ.ಟಿ. ದೇವೇಗೌಡರ ಮನಿಸು
ಭಾಗ್ಯಲಕ್ಷ್ಮೀ ಸೀರಿಯಲ್ ಸ್ಟೋರಿ ಈಗ ಹೊಸ ತಿರುವು ಪಡೆದುಕೊಂಡಿದೆ. ಸೋತು ಸುಣ್ಣವಾದ್ರೂ ತಾಂಡವ್, ಶ್ರೇಷ್ಠಾಗೆ ಬುದ್ದಿ ಬರೋ ಹಾಗೆ ಕಾಣ್ತಿಲ್ಲ.. ಭಾಗ್ಯಳನ್ನ ಸೋಲಿಸ್ಬೇಕು ಅನ್ನೋ ಹುಚ್ಚು ಕೂಡ ಕಡಿಮೆಯಾಗ್ತಿಲ್ಲ.. ಭಾಗ್ಯ ವಿರುದ್ಧ ಒಂದಲ್ಲ ಒಂದು ಷಂಡ್ಯಂತರ ಮಾಡ್ತಾನೆ ಬಂದಿದ್ದಾರೆ.. ಇದಕ್ಕೆ ಕನ್ನಿಕಾ ಕೂಡ ಸಾಥ್ ನೀಡ್ತಿದ್ದಾಳೆ. ಆರಂಭದಲ್ಲಿ ಆದೀಶ್ವರ್ ಕೂಡ ಕನ್ನಿಕಾ ಮಾತನ್ನ ನಂಬಿ ಆಕೆಯ ತಾಳಕ್ಕೆ ತಕ್ಕಂತೆ ಕುಣಿತಾ ಇದ್ದ.. ಸತ್ಯಕ್ಕೆ ಸಾವಿಲ್ಲ.. ಸುಳ್ಳಿಗೆ ಜಯವಿನ್ನ ಅನ್ನೋ ಹಾಗೇ.. ಈಗ ಆದೀಶ್ವರ್ ಗೆ ಎಲ್ಲವೂ ಗೊತ್ತಾಗಿದೆ. ಇದೀಗ ಆದೀಶ್ವರ್ ಮುಂದೆ ಕನ್ನಿಕಾ ಮಾತ್ರವಲ್ಲ ತಾಂಡವ್ ಮುಖವಾಡ ಕೂಡ ಬಯಲಾಗಿದೆ.
ಪೂಜಾ ಕಿಶನ್ ನ ಮದುವೆ ಆಗ್ಬಾರ್ದು ಅಂತ ಕುತಂತ್ರಿಗಳು ಸಾಕಷ್ಟು ಷಡ್ಯಂತರ ಮಾಡಿದ್ರು.. ಆದ್ರೆ ಎಲ್ಲವೂ ಪ್ಲ್ಯಾನ್ ಉಲ್ಟಾ ಆಯ್ತು.. ಆದೀಶ್ವರ್ ಗೆ ಕೂಡ ಭಾಗ್ಯ ಒಳ್ಳೆಯವಳು ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ ಆದೀಶ್ವರ್ ಭಾಗ್ಯ ಫ್ರೆಂಡ್‌ಶಿಪ್ ಕೂಡ ಶುರುವಾಗಿದೆ. ಹೀಗಾಗಿ ಆದೀಶ್ವರ್ ಪೂಜಾ ಬರ್ತ್‌ಡೇಗೆ ಭಾಗ್ಯ ಮನೆಗೆ ಹೋಗಿ ಇನ್‌ವೈಟ್ ಮಾಡಿದ್ದ.. ಇದೇ ಪಾರ್ಟಿಗೆ ಆದೀಶ್ವರ್ ತನ್ನ ಬ್ಯುಸಿನೆಸ್ ಪಾರ್ಟ್ನರ್ ತಾಂಡವ್ನನ್ನೂ ಕರೆದಿದ್ದಾನೆ. ಆದ್ರೆ ಆದಿಗೆ ತಾಂಡವ್ ಭಾಗ್ಯ ಗಂಡ ಎನ್ನುವುದು ಗೊತ್ತಿಲ್ಲ. ತಾಂಡವ್ಗೂ ಪೂಜಾ ಇವನ ಮನೆಯ ಸೊಸೆಯಾಗಿ ಹೋಗಿದ್ದಾಳೆ ಎನ್ನುವುದು ತಿಳಿದಿಲ್ಲ. ಹೀಗಾಗಿ ತಾಂಡವ್ ಶ್ರೇಷ್ಠಾಳನ್ನ ಕರ್ಕೊಂಡು ಬರ್ತ್‌ಡೇ ಪಾರ್ಟಿಗೆ ಬಂದಿದ್ದ.. ಆದ್ರೆ ಅಲ್ಲಿ ಭಾಗ್ಯಳನ್ನು ನೋಡಿ ತಾಂಡವ್‌ಗೆ ಮತ್ತಷ್ಟು ಉರಿ ಹೊತ್ತಿಕೊಂಡಿದೆ. ಹೀಗಾಗಿ ತಾಂಡವ್, ಶ್ರೇಷ್ಠಾ ಭಾಗ್ಯಗೆ ಅವಮಾನ ಮಾಡಿದ್ದಾರೆ.. ದೊಡ್ಡವರ ಮನೆಯನ್ನು ಹುಡುಕಿ ಅವರನ್ನು ಬುಟ್ಟಿಗೆ ಹಾಕೋದು, ಅವರ ಮನೆ ಹುಡುಗರನ್ನು ಹುಡುಕಿ ತಂಗಿಗೆ ಮದುವೆ ಮಾಡಿಕೊಡುವುದು.. ಇದಕ್ಕೆ ಮೊದಲ ಬಕ್ರಾ ನಾನು.. ಈಗ ಕಿಶನ್.. ಅಕ್ಕ-ತಂಗಿ ಸೇರ್ಕೊಂಡು ಒಬ್ಬರ ಜೀವನ ಹಾಳು ಮಾಡೋಕೆ ಏನು ಬೇಕಾದ್ರು ನಾಟಕ ಮಾಡ್ತೀರಿ ಅಲ್ವಾ ಎಂದಿದ್ದಾನೆ. ಇದನ್ನ ಕೇಳಿದ ಭಾಗ್ಯ ತಾಳ್ಮೆ ಕಳ್ಕೊಂಡಿದ್ದಾಳೆ. ಎಲ್ಲರ ಮುಂದೆಯೇ ಭಾಗ್ಯ ತಾಂಡವ್‌ಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದನ್ನು ಕನ್ನಿಕಾ ನೋಡಿದ್ದಾಳೆ. ಸಿಕ್ಕಿದ್ದೇ ಚಾನ್ಸ್ ಎಂದು ಕನ್ನಿಕಾ ಆದೀ ಬಳಿ ಹೋಗಿ ಭಾಗ್ಯ ಬಂದ ಗೆಸ್ಟ್ನ ಕಪಾಳಕ್ಕೆ ಹೊಡೆದಿದ್ದಾಳೆ ಎಂದು ಹೇಳಿದ್ದಾಳೆ. ಇದ್ರಿಂದಾಗಿ ಆದಿ ಭಾಗ್ಯ ಮೇಲೆ ಮತ್ತೆ ಬೇಜಾರು ಮಾಡಿಕೊಂಡಿದ್ದ.. ಆದ್ರೀಗ ಆದೀಶ್ವರ್ ಗೆ ಸತ್ಯ ಗೊತ್ತಾಗಿದೆ. ಭಾಗ್ಯಳ ತಪ್ಪಿಲ್ಲ ಅನ್ನೋದು ಆತನಿಗೆ ಮನವರಿಕೆ ಆಗಿದೆ.
ಮನೆ ಕೆಲಸದಾಕೆ ಬರ್ತ್‌ಡೇ ಪಾರ್ಟಿಯಲ್ಲಿ ಏನಾಯ್ತು ಅನ್ನೋದನ್ನ ಆದೀಶ್ವರ್ ಗೆ ತಿಳಿಸಿದ್ದಾಳೆ. ಭಾಗ್ಯಳದ್ದು ತಪ್ಪಿಲ್ಲ.. ತಾಂಡವ್ ಹಾಗೂ ಶ್ರೇಷ್ಠಾ ಜಗಳ ಶುರುಮಾಡಿದ್ದು ಅಂತಾ ಹೇಳಿದ್ದಾಳೆ.. ಇದೀಗ ಭಾಗ್ಯ ಮೇಲಿನ ಮುನಿಸು ಮಾಯವಾಗಿದೆ. ಆದ್ರೀಗ ಆದೀಶ್ವರ್ ತಾಂಡವ್ ಶ್ರೇಷ್ಠಾಳನ್ನ ಭಾಗ್ಯ ಮನೆಗೆ ಬರುವಂತೆ ಹೇಳಿದ್ದಾನೆ. ಬಳಿಕ ನೀವು ತಪ್ಪು ಮಾಡಿದ್ದೀರಿ. ಭಾಗ್ಯ ಬಳಿ ಕ್ಷಮೆ ಕೇಳಿ ಅಂತ ಹೇಳಿದ್ದಾನೆ. ಇದೀಗ ತಾಂಡವ್ ಶ್ರೇಷ್ಠಾ ಭಾಗ್ಯ ಬಳಿ ಕ್ಷಮೆ ಕೇಳ್ತಾರಾ ಅಂತ ಕಾದುನೋಡ್ಬೇಕು. ಒಂದ್ವೇಳೆ ಕ್ಷಮೆ ಕೇಳಿಲ್ಲ ಅಂದ್ರೆ ತಾಂಡವ್ ಜೊತೆ ಮಾಡಿಕೊಂಡಿದ್ದ ಬ್ಯುಸಿನೆಸ್ ಡೀಲ್ ಕ್ಯಾನ್ಸಲ್ ಮಾಡಿಕೊಳ್ಳೋ ಸಾಧ್ಯತೆ ಇದೆ.. ಇನ್ನು ಆದೀಶ್ವರ್ ಗೆ ಇನ್ನೊಂದು ಸತ್ಯ ಗೊತ್ತಾದ್ರೆ ಕಷ್ಟ ಅಂತ ವೀಕ್ಷಕರು ಹೇಳ್ತಿದ್ದಾರೆ. ಆದೀಶ್ವರ್ ಗೆ ಭಾಗ್ಯ ಮೇಲೆ ಸ್ಪೆಷಲ್ ಫೀಲಿಂಗ್ ಶುರುವಾಗಿತ್ತು.. ಆದ್ರೆ ಆತನಿಗೆ ತಾಂಡವ್ ಭಾಗ್ಯ ಗಂಡ ಅಂತ ಇನ್ನೂ ಗೊತ್ತಿಲ್ಲ. ಒಂದ್ವೇಳೆ ಆದೀಶ್ವರ್ ಗೆ ಈ ಸತ್ಯ ಗೊತ್ತಾದ್ರೆ ಭಾಗ್ಯಳಿಂದ ದೂರ ಆಗೋ ಸಾಧ್ಯತೆ ಇದೆ ಅಂತ ವೀಕ್ಷಕರು ಹೇಳ್ತಿದ್ದಾರೆ.. ಒಟ್ಟಿನಲ್ಲಿ ಸೀರಿಯಲ್ ಸ್ಟೋರಿಯಲ್ಲಿ ಹೊಸ ಟ್ವಿಸ್ಟ್ ಕಾದಿರೋದಂತೂ ಸ್ಪಷ್ಟವಾಗಿ ಗೊತ್ತಾಗ್ತಿದೆ.

ನೋಡಿರಿ

