ಆದಿ ಮಾತು.. ಭಾಗ್ಯ ಇಂಪ್ರೆಸ್.. ಸೊಸೆ ಮದ್ವೆ ಮಾಡಿಸ್ತಾಳಾ ಕುಸುಮಾ? – ಭಾಗ್ಯಲಕ್ಷ್ಮೀಗೆ ಶ್ರೇಷ್ಠಾ ಗುಡ್ಬೈ?

ಬರೀ ಕಷ್ಟಗಳನ್ನೇ ಫೇಸ್ ಮಾಡ್ತಾ ಬಂದಿರೋ ಭಾಗ್ಯ ಬಾಳಲ್ಲಿ ಈಗ ಒಳ್ಳೆ ದಿನಗಳು ಆಗಿದೆ.. ತಾಂಡವ್ ಬಿಟ್ಟು ಹೋದ ಮೇಲಂತೂ ಭಾಗ್ಯ ಫುಲ್ ಸ್ಟ್ರಾಂಗ್ ಆಗಿದ್ದಾಳೆ. ಎಷ್ಟೇ ಕಷ್ಟ ಬಂದ್ರೂ ಕುಗ್ಗದೇ ಮುನ್ನುಗ್ತಿದ್ದಾಳೆ. ಇದೀಗ ಭಾಗ್ಯ ಜೀವನಕ್ಕೆ ಆದೀಶ್ವರ್ ಆಗಮನವಾಗಿದೆ. ಇವರಿಬ್ರ ಫ್ರೆಂಡ್ಶಿಪ್ ಕೂಡ ಶುರುವಾಗಿದೆ. ಇದೀಗ ಭಾಗ್ಯಳಿಗಿಂತ ಮೊದಲೇ ಆದಿ ಕುಸುಮಾ ಮನ ಗೆದ್ದಿದ್ದಾನೆ. ಕುಸುಮಾ ಆದೀಶ್ವರ್ನ ಮಾತು ಮಾತಿಗೂ ಹೊಳ್ತಿದ್ದಾಳೆ. ಇದೀಗ ಆದಿನಾ ಕುಸುಮಾ ಹೊಗಳ್ತಿರೋದು ನೋಡಿದ್ರೆ, ಸೊಸೆ ಮದುವೆನಾ ಈಕೆಯೇ ಮುಂದೆ ನಿಂತು ಮಾಡ್ತಾಳಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಇದೀಗ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಇರೋದು ಫಿಕ್ಸ್.. ಮತ್ತೊಂದ್ಕಡೆ ಶ್ರೇಷ್ಠಾ ಪಾತ್ರ ಸೀರಿಯಲ್ನಲ್ಲಿ ಕಾಣಿಸಿಕೊಳ್ತಿಲ್ಲ.. ಶ್ರೇಷ್ಠಾ ಪಾತ್ರಕ್ಕೆ ನಟಿ ಗುಡ್ಬೈ ಹೇಳಿದ್ರಾ ಅನ್ನೋ ಪ್ರಶ್ನೆ ಕಾಡ್ತಿದೆ.
ಇದನ್ನೂ ಓದಿ: OVEL ಪಿಚ್.. INDಗೆ ಚಾಲೆಂಜ್ – ಮಸ್ಟ್ ವಿನ್ ಮ್ಯಾಚ್ ಗೆಲುವು ಕಷ್ಟ?
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ಹೊಸ ತಿರುವು ಪಡೆದುಕೊಳ್ತಿದೆ. ಇಷ್ಟು ದಿನ ಈ ಸೀರಿಯಲ್ನಲ್ಲಿ ತಾಂಡವ್, ಶ್ರೇಷ್ಠಾ ರಂಪಾಟ, ಭಾಗ್ಯ ಹೋಳಾಟವನ್ನೇ ತೋರಿಸಲಾಗ್ತಿತ್ತು.. ಆದ್ರೆ ಭಾಗ್ಯ ತಾಂಡವ್ಗೆ ಡಿವೋರ್ಸ್ ಕೊಟ್ಟಾಗಿನಿಂದ ಆತನ ಸ್ಥಿತಿ ಕೆಟ್ಟದಾಗಿದೆ. ಶ್ರೇಷ್ಠಾ ಹಿಂದೆ ಹೋದ ತಾಂಡವ್ ಕೆಲಸ ಇಲ್ಲದೇ ಖಾಲಿ ಕೈಯಲ್ಲಿ ಕೂತಿದ್ದಾನೆ. ಆದ್ರೂ ಆತನ ಅಹಂಕಾರ ಕಡಿಮೆ ಆಗಿಲ್ಲ.. ಭಾಗ್ಯಗೆ ಒಂದಲ್ಲ ಒಂದು ತೊಂದರೆ ಕೊಡ್ತಾ ಬಂದಿದ್ದಾನೆ. ಆದ್ರೀಗ ಭಾಗ್ಯ ಲೈಫ್ನಲ್ಲಿ ಆದಿ ಎಂಟ್ರಿ ಕೊಟ್ಟಿದ್ದಾನೆ. ಆರಂಭದಲ್ಲಿ ಭಾಗ್ಯನ ಶತ್ರುವಿನಂತೆ ಟ್ರೀಟ್ ಮಾಡಿದ್ರೂ ಈಗ ಆಕೆಯ ಒಳ್ಳೆಯನ ಆತನಿಗೆ ಗೊತ್ತಾಗಿದೆ. ಆದರೆ, ಭಾಗ್ಯಳ ಸ್ವಾಭಿಮಾನ – ನಿಷ್ಕಲ್ಮಶ ಮನಸ್ಸು ಆದಿಗೆ ಅರ್ಥವಾಗಿದೆ. ಹೀಗಾಗೇ ಕಾರ್ ಟಯರ್ ಪಂಚರ್ ಆದಾಗ ಆದೀಶ್ವರ್ ಹೆಲ್ಪ್ ಮಾಡಿದ್ದ. ಅದಾದ ಬಳಿಕ ದೇವಸ್ಥಾನದಲ್ಲೂ ತಾಳಿ ವಿಚಾರವಾಗಿ ಪುರೋಹಿತರಿಗೆ ಬುದ್ಧಿ ಮಾತು ಹೇಳಿದ್ದ. ಇದೀಗ ಆದೀಶ್ವರ್ ಮೇಲೆ ಕುಸುಮಾ ಭಾಗ್ಯಗೂ ಒಳ್ಳೆಯ ಅಭಿಪ್ರಾಯ ಬಂದಿದೆ. ಕುಸುಮಾ ಅಂತೂ ಆದೀಶ್ವರ್ನ ದಿನವಿಡಿ ಹೊಗ್ತಾಳಾ ಇರ್ತಾಳೆ. ಎಷ್ಟು ಒಳ್ಳೆ ಹುಡುಗ ಅಂತ ಪದೇ ಪದೇ ಹೇಳ್ತಿರ್ತಾಳೆ. ಇದೀಗ ಕುಸುಮಾ ತನ್ನ ಸೊಸೆಗೆ ಆದೀಶ್ವರ್ ಜೊತೆ ಮದುವೆ ಮಾಡಿಸೋದು ಪಕ್ಕಾ ಅಂತ ಹೇಳ್ತಿದ್ದಾರೆ ವೀಕ್ಷಕರು.
ಇದೀಗ ಭಾಗ್ಯ ಆದೀಶ್ವರ್ ಕ್ಲೋಸ್ ಆಗಿದ್ದು, ತಾಂಡವ್ಗೆ ಶಾಕ್ ಆಗಿದೆ.. ಯಾಕಂದ್ರೆ ಆದೀಶ್ವರ್ ಮೂಲಕ ಭಾಗ್ಯಳನ್ನ ಸೋಲಿಸ್ಬೇಕು ಅಂತ ತಾಂಡವ್ ಅದ್ಕೊಂಡಿದ್ದ. ಆದ್ರೀಗ ಭಾಗ್ಯ ಬಗ್ಗೆ ಆದೀಶ್ವರ್ ಚೆನ್ನಾಗಿ ತಿಳಿದುಕೊಂಡಿದ್ದಾನೆ. ಹೀಗಾಗಿ ತಾಂಡವ್ ಗೆ ಇಲ್ಲೂ ಹಿನ್ನಡೆಯಾಗಿದೆ. ಇನ್ನು ಭಾಗ್ಯಗೆ ಏನಾದ್ರೂ ಕೆಟ್ಟದು ಮಾಡಿದ್ರೆ, ಆದೀಶ್ವರ್ ತಾಂಡವ್ ಜೊತೆಗಿನ ಬ್ಯುಸಿನೆಸ್ ಡೀಲ್ ನ ಕ್ಯಾನ್ಸಲ್ ಮಾಡಿಕೊಳ್ಳೋ ಸಾಧ್ಯತೆ ಇದೆ. ಹೀಗಾಗೇ ಭಾಗ್ಯ – ಆದಿ ಮದುವೆ ಆಗಬೇಕು. ಆಗ ತಾಂಡವ್ ಸೊಕ್ಕು ಕಮ್ಮಿ ಆಗುತ್ತೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.
ಮತ್ತೊಂದ್ಕಡೆ ಶ್ರೇಷ್ಠಾ ಪಾತ್ರದ ಕತೆ ಏನು ಅಂತಾ ಸೀರಿಯಲ್ ಪ್ರೇಮಿಗಳು ಕೇಳ್ತಿದ್ದಾರೆ. ಹಲವು ದಿನಗಳಿಂದ ಶ್ರೇಷ್ಠಾ ಪಾತ್ರ ಸೀರಿಯಲ್ನಲ್ಲಿ ಕಾಣಿಸಿಕೊಳ್ತಿಲ್ಲ. ತಾಂಡವ್ ಮಾತ್ರ ಆಗಾಗ ಕಾಣಿಸಿಕೊಳ್ತಿದ್ದಾನೆ. ಪೂಜಾ ಮದುವೆ ನಿಲ್ಲಿಸ್ಬೇಕು ಅಂತಾ ಶ್ರೇಷ್ಠಾ ಕೂಡ ಆರಂಭದಲ್ಲಿ ಪ್ಲ್ಯಾನ್ ಮಾಡಿದ್ಲು. ಇದೇ ವಿಚಾರವಾಗಿ ಭಾಗ್ಯಗೂ ಸಾಕಷ್ಟು ತೊಂದರೆ ಕೊಟ್ಟಿದ್ಲು. ಆದ್ರೆ ಪೂಜಾ ಮದುವೆ ವೇಳೆ ಕೂಡ ಶ್ರೇಷ್ಠಾ ಪಾತ್ರ ಮಿಸ್ಸಿಂಗ್. ಇದೀಗ ಶ್ರೇಷ್ಠಾ ಪಾತ್ರಕ್ಕೆ ಕಾವ್ಯ ಗೌಡ ಗುಡ್ಬೈ ಹೇಳಿದ್ರಾ ಅಂತಾ ಸೀರಿಯಲ್ ಫ್ಯಾನ್ಸ್ ಕೇಳ್ತಿದ್ದಾರೆ. ಆದ್ರೆ ಈ ಬಗ್ಗೆ ನಟಿ ಕಾವ್ಯ ಆಗ್ಲೀ, ವಾಹಿನಿ ಆಗ್ಲೀ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.. ನಟಿ ಕಾವ್ಯ ಗೌಡ ಸದ್ಯ ಕಾಟ್ಲೆ ಕಿಚನ್ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೋ ಮುಗಿದ ಬಳಿಕ ಮತ್ತೆ ಸೀರಿಯಲ್ನಲ್ಲಿ ಕಾಣಿಸಿಕೊಳ್ಬೋದು ಅಂತಾ ಹೇಳಲಾಗ್ತಿದೆ.

ನೋಡಿರಿ

