ಆದಿ ಹೃದಯ ಗೆದ್ದ ಭಾಗ್ಯ.. ಬ್ಯುಸಿನೆಸ್‌ ಅಲ್ಲ ಲೈಫ್‌ ಪಾರ್ಟ್‌ನರ್‌? – ಬೀದಿಗೆ ಬೀಳ್ತಾನಾ ತಾಂಡವ್?

ಆದಿ ಹೃದಯ ಗೆದ್ದ ಭಾಗ್ಯ.. ಬ್ಯುಸಿನೆಸ್‌ ಅಲ್ಲ ಲೈಫ್‌ ಪಾರ್ಟ್‌ನರ್‌? – ಬೀದಿಗೆ ಬೀಳ್ತಾನಾ ತಾಂಡವ್?

ಭಾಗ್ಯ ಕೆಟ್ಟವಳು.. ದುಡ್ಡಿಗಾಗಿ ಪೂಜಾ ಹಾಗೂ ಕಿಶನ್‌ ಮದುವೆ ಮಾಡಿಸಲು ಹೊರಟಿದ್ದಾಳೆ ಅಂತ ಆದೀಶ್ವರ್‌ ಇಷ್ಟು ದಿನ ಅಂದ್ಕೊಂಡಿದ್ದ.. ಆದ್ರೀಗ ಭಾಗ್ಯ ಒಳ್ಳೆತನ ಬಯಲಾಗಿದೆ.. ಕನ್ನಿಕಾ ಕೆಟ್ಟವಳು ಅನ್ನೋದು ಕೂಡ ಗೊತ್ತಾಗಿದೆ.. ಇದೀಗ ಆದೀಶ್ವರ್‌ ಭಾಗ್ಯಗೆ ಮಂಡಿಯೂರಿ ಕ್ಷಮೆ ಕೇಳಿದ್ದಾನೆ.. ಇದೀಗ ಭಾಗ್ಯ ಜೊತೆ ಆದೀಶ್ವರ್‌ ಫ್ರೆಂಡ್‌ಶಿಪ್‌ ಶುರುವಾಗೋದು ಫಿಕ್ಸ್..‌ ಇನ್ಮುಂದೆ ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್‌ ಕೂಡ ಕಾದಿದೆ.

ಇದನ್ನೂ ಓದಿ: ಬೀಚ್‌ನಲ್ಲಿ ಐಷಾರಾಮಿ ಕಾರಿನ ಜೊತೆ ಸ್ಟಂಟ್‌! – ಆಮೇಲೆ ಏನಾಯ್ತು ಗೊತ್ತಾ?

ಭಾಗ್ಯ ಲಕ್ಷ್ಮೀ ಸೀರಿಯಲ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.. ಸ್ವಾಭಿಮಾನಿ ಭಾಗ್ಯ ತಾಂಡವ್‌ನಿಂದ ದೂರವಾಗಿ ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಹೊಸ ಬ್ಯುಸಿನೆಸ್‌ ಕೈ ಹಿಡಿಯುತ್ತಿದ್ದಂತೆ ತಂಗಿ ಮದುವೆ ಮಾಡಿಸಲು ಹೊರಟಿದ್ಲು. ಕಿಶನ್‌ ಹಾಗೂ ಪೂಜಾ ಮದುವೆ ಮಾಡಿಸಲು ಮುಂದಾಗಿದ್ಲು.. ಆದ್ರೆ ಕನ್ನಿಕಾ ಕುತಂತ್ರದಿಂದ ಸಾಕಷ್ಟು ಕಷ್ಟ ಎದುರಾಯಿತು.. ಕನ್ನಿಕಾ ಆದೀಶ್ವರ್‌ ನ ಕರೆಸಿ ಈ ಮದುವೆ ನಿಲ್ಲಿಸಲು ಪ್ಲ್ಯಾನ್‌ ಮಾಡಿದ್ಲು. ಭಾಗ್ಯ ಕೆಟ್ಟವಳು.. ದುಡ್ಡಿಗಾಗಿ ಈ ಮದುವೆ ಮಾಡಿಸುತ್ತಿದ್ದಾಳೆ. ಪೂಜಾ ಈ ಮನೆಗೆ ಬಂದ್ರೆ ಮನೆ ಎರಡು ಭಾಗ ಆಗುತ್ತೆ ಅಂತಾ ಹೇಳಿದ್ಲು.. ಹೀಗಾಗಿ ಆದೀಶ್ವರ್‌ ಮದುವೆ ನಿಲ್ಲಿಸಲು ಹೊರಟಿದ್ದ.. ಆದ್ರೆ ಈಗ ಆದೀಶ್ವರ್‌ಗೆ ಎಲ್ಲಾ ಸತ್ಯ ಗೊತ್ತಾಗಿದೆ.. ಆದೀಶ್ವರ್‌ ತನ್ನ ತಪ್ಪಿಗೆ ಭಾಗ್ಯ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ್ದಾನೆ..

ಇಷ್ಟು ದಿನ ಕನ್ನಿಕಾ ಹೇಳೋದೆಲ್ಲಾ ನಿಜ ಅಂತಾ ಆದೀಶ್ವರ್‌ ಅಂದ್ಕೊಂಡಿದ್ದ.. ಹೀಗಾಗಿ ಭಾಗ್ಯಳನ್ನ ಕಂಡ್ರೆ ಉರಿದು ಬೀಳ್ತಿದ್ದ.. ಯಾರು ಎಷ್ಟೇ ಹೇಳಿದ್ರೂ ಆದೀಶ್ವರ್‌ ಅದನ್ನ ನಂಬೋದಿಕ್ಕೆ ತಯಾರಿರ್ಲಿಲ್ಲ.. ಇತ್ತ ಕನ್ನಿಕಾ ಕೂಡ ಇದನ್ನೇ ಅಡ್ವಾಂಟೇಜ್‌ ಆಗಿ ತೆಗೆದುಕೊಂಡಿದ್ಲು.. ಇಲ್ಲ ಸಲ್ಲದ ಡ್ರಾಮಾ ಮಾಡಿ ಅಣ್ಣನನ್ನ ನಂಬಿಸ್ತಿದ್ಲು..  ಮದುವೆಯಾದ್ಮೇಲೂ ಪೂಜಾಗೆ ಟಾರ್ಚರ್‌ ಕೊಡ್ತೀವಿ.. ನೆಮ್ಮದಿಯಾಗಿ ಇರೋಕೆ ಬಿಡಲ್ಲ ಅಂತಾ ಮೀನಾಕ್ಷಿ ಹಾಗೂ ಕನ್ನಿಕಾ  ಮಾತನಾಡಿಕೊಂಡಿದ್ರು.. ಇದನ್ನ ಭಾಗ್ಯ ಕೇಳಿಸಿಕೊಂಡು ಕಿಶನ್ – ಪೂಜಾ ಮದುವೆಯನ್ನ ಭಾಗ್ಯ ನಿಲ್ಲಿಸಿದಳು. ಅಕ್ಕನ ಮಾತನ್ನ ಪೂಜಾ ಮೀರಲಿಲ್ಲ. ಅಕ್ಕನ ಒಪ್ಪಿಗೆ ಇಲ್ಲದೆ ಹಸೆಮಣೆ ಏರೋಕೆ ಪೂಜಾ ತಯಾರಿರಲಿಲ್ಲ. ಇದನ್ನೆಲ್ಲಾ ನೋಡಿ ಮೀನಾಕ್ಷಿ ಹಾಗೂ ಕನ್ನಿಕಾಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತು.. ಆದ್ರೆ ಅಷ್ಟೊತ್ತಿಗೆ ವೈಷ್ಣವ್‌  ಹಾಗೂ ಕುಸುಮಾ ಆದೀಶ್ವರ್‌ ಕಣ್ಣು ತೆರೆಸಿದ್ದಾರೆ.. ಭಾಗ್ಯ ಒಳ್ಳೆಯವಳು ಅನ್ನೋದನ್ನ ಮನದಟ್ಟು ಮಾಡಿದ್ದಾರೆ. ಇದೀಗ ಆದೀಶ್ವರ್‌ಗೆ ಜ್ಞಾನೋದಯವಾಗಿದೆ. ಭಾಗ್ಯ ದುಡ್ಡಿಗೆ ಆಸೆ ಪಡುವವಳಲ್ಲ ಅನ್ನೋದು ಆದೀಶ್ವರ್‌ಗೆ ಮನವರಿಕೆ ಆಗಿದೆ. ಹೀಗಾಗಿ, ಮದುವೆ ಮನೆಯಲ್ಲಿ ಆದೀಶ್ವರ್‌  ಎಲ್ಲರೆದುರು ಭಾಗ್ಯಗೆ ಮಂಡಿಯೂರಿ  ಕ್ಷಮೆ ಕೇಳಿದ್ದಾನೆ.

ಹೌದು.. ಪೂಜಾಳನ್ನ ಮಂಟಪದಿಂದ ಕರೆದುಕೊಂಡು ಹೋಗಲು ಭಾಗ್ಯ ಮುಂದಾದಳು. ಅಷ್ಟರಲ್ಲಿ ಭಾಗ್ಯಳನ್ನ ತಡೆದದ್ದು ಆದೀಶ್ವರ್. ನಾನು ಈವರೆಗೂ ಯಾವುದೇ ತಪ್ಪು ನಿರ್ಧಾರಗಳನ್ನ ಮಾಡಿರಲಿಲ್ಲ. ನನ್ನಿಂದ ಯಾವುದೇ ತಪ್ಪುಗಳಾಗಿರಲಿಲ್ಲ. ಆದರೆ, ನಿಮ್ಮನ್ನ ನಾನು ತಪ್ಪಾಗಿ ಭಾವಿಸಿದೆ. ನಿಮಗೆ ನಾನು ತುಂಬಾ ಅವಮಾನ ಮಾಡಿದ್ದೇನೆ. ಹಣದ ಆಫರ್‌ ಮಾಡಿದ್ದೆ. ತುಂಬಾ ಪರೀಕ್ಷೆ ಮಾಡಿದ್ದೆ. ದಯವಿಟ್ಟು ನನ್ನನ್ನ ಕ್ಷಮಿಸಿ  ಎಂದು ಕಣ್ಣೀರು ಹಾಕುತ್ತಾ ಭಾಗ್ಯ  ಕ್ಷಮೆ ಕೇಳಿದಾನೆ.. ಆದೀಶ್ವರ್ ಸಹ ಭಾಗ್ಯ ಪರವಾಗಿ ನಿಂತಿದ್ದನ್ನ ನೋಡಿ ಕನ್ನಿಕಾ ಹಾಗೂ ಮೀನಾಕ್ಷಿ ಶಾಕ್‌ ಆಗಿದ್ದಾನೆ.. ಇಷ್ಟಕ್ಕೆ ಸುಮ್ಮನಾಗದ ಆದೀಶ್ವರ್‌ ಕನ್ನಿಕಾ ಹಾಗೂ ಮೀನಾಕ್ಷಿಯನ್ನ ಭಾಗ್ಯಗೆ ಕ್ಷಮೆ ಕೇಳುವಂತೆ ಹೇಳಿದ್ದಾನೆ. ಕನ್ನಿಕಾ ಹಾಗೂ ಮೀನಾಕ್ಷಿ ಇಷ್ಟ ಇಲ್ಲದಿದ್ರೂ ಕ್ಷಮೆ ಕೇಳಿದ್ದಾನೆ. ಬಳಿಕ ಪೂಜಾಳನ್ನ ಚೆನ್ನಾಗಿ ನೋಡಿಕೊಳ್ಳುವುದಾಗಿ ಭಾಗ್ಯಗೆ ಆದೀಶ್ವರ್ ಮಾತು ಕೊಟ್ಟಿದ್ದಾನೆ. ಇದೀಗ ಆದೀಶ್ವರ್ ಕ್ಷಮೆ ಕೇಳಿದ್ಮೇಲೆ ಭಾಗ್ಯ ಮನಸ್ಸು ಹಗುರವಾಗಿದೆ. ಬಳಿಕ ಇಬ್ಬರ ಮದುವೆ ಕೂಡ ಮಾಡಿಸಿದ್ದಾನೆ ಆದೀಶ್ವರ್..‌

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಿದ್ದಾರೆ. ಭಾಗ್ಯ ಆದೀಶ್ವರ್‌ ಹೃದಯ ಗೆದ್ದಾಯ್ತು. ಇನ್ಮುಂದೆ ಇಬ್ಬರ ಫ್ರೆಂಡ್‌ಶಿಪ್‌ ಶುರುವಾಗುತ್ತೆ. ಇನ್ನು ತಾಂಡವ್‌ ಕೆಟ್ಟವನು ಅನ್ನೋದು ಆದೀಶ್ವರ್‌ ಗೆ ಗೊತ್ತಾಗಿದೆ. ಹೀಗಾಗಿ ಆತನ್ನ ಬ್ಯುಸಿನೆಸ್‌ನಿಂದ ಆದೀಶ್ವರ್‌ ಕೈ ಬಿಡ್ಬೋದು. ಅದಾದ್ಮೇಲೆ ಭಾಗ್ಯ ಬ್ಯುಸಿನೆಸ್‌ ಆದೀಶ್ವರ್‌ ಸಹಾಯ ಮಾಡ್ಬೋದು. ಬಳಿಕ ಭಾಗ್ಯ ಮೇಲೆ ಆದೀಶ್ವರ್‌ಗ ಲವ್‌ ಆಗೋದು ಪಕ್ಕಾ ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.

Shwetha M