ಪೂಜಾ ಮದ್ವೆ ನಿಲ್ಲಿಸಿದ ಭಾಗ್ಯ.. ಕಿಶನ್ ಪ್ರೀತಿ ಗೆಲ್ಲಿಸ್ತಾನಾ ಆದೀಶ್ವರ್?

ಭಾಗ್ಯ ಬುದ್ದಿಂತೆಯೋ.. ದಡ್ಡಿಯೋ ಒಂದು ಗೊತ್ತಾಗ್ತಿಲ್ಲ.. ಇಷ್ಟು ದಿನ ಪೂಜಾ ಕಿಶನ್ ಮದುವೆ ನಿಲ್ಲಿಸಲು ಕುತಂತ್ರಿಗಳು ಸಾಕಷ್ಟು ಪ್ಲ್ಯಾನ್ ಮಾಡಿದ್ರು.. ಆದ್ರೆ ಭಾಗ್ಯ ತಾನು ತಂಗಿಯ ಪ್ರೀತಿ ಗೆಲ್ಲಿಸ್ತೀನಿ.. ಏನೇ ಕಷ್ಟ ಬಂದ್ರೂ ಪೂಜಾ ಕಿಶನ್ ಮದುವೆ ಮಾಡಿಸ್ತೀನಿ ಅಂತಾ ಪಣ ತೊಟ್ಟಿದ್ಲು.. ಭಾಗ್ಯ ನಡೆ ನೋಡಿದ ವೀಕ್ಷಕರು ಈಕೆ ದಿಟ್ಟ ಹೆಣ್ಣು.. ಏನೇ ಆದ್ರೂ ತಂಗಿ ಮದುವೆ ಮಾಡೇ ಮಾಡ್ತಾಳೆ.. ಕುತಂತ್ರಿಗಳ ಪ್ಲ್ಯಾನ್ ಉಲ್ಟಾ ಮಾಡ್ತಾಳೆ ಅಂತಾ ಅಂದ್ಕೊಂಡಿದ್ರು. ಆದ್ರೀಗ ಸೀರಿಯಲ್ ಡೈರೆಕ್ಟರ್ ವೀಕ್ಷಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.. ಪೂಜಾ ಹಸೆಮಣೆ ಏರೋದಿಕ್ಕೂ ಮುನ್ನವೇ ಮದುವೆ ನಿಂತಿದೆ. ಮದುವೆ ನಿಲ್ಲಿಸಿದ್ದು ಆದೀಶ್ವರ್, ತಾಂಡವ್, ಕನ್ನಿಕಾ ಅಲ್ಲ.. ಭಾಗ್ಯಳೇ ಮುದ್ದು ತಂಗಿಯ ಮದುವೆ ನಿಲ್ಲಿಸಿದ್ದಾಳೆ.
ಇದನ್ನೂ ಓದಿ: ಕಾಂತಾರ ಸಿನಿಮಾ ಎದುರು ಬಾಲಿವುಡ್ ನಟರ ಅಗ್ನಿಪರೀಕ್ಷೆ – ಒಂದೇ ದಿನ ಬಿಗ್‌ಬಜೆಟ್ ಸಿನಿಮಾಗಳು ರಿಲೀಸ್
ಭಾಗ್ಯಲಕ್ಷ್ಮೀ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಕಳೆದ ಹಲವು ದಿನಗಳಿಂದ ಪೂಜಾ ಕಿಶನ್ ಮದುವೆ ಡ್ರಾಮಾ ನಡಿತಾ ಇತ್ತು. ಪೂಜಾ ಮೇಲೆ ಕಿಶನ್ ಗೆ ಲವ್ ಆಗಿತ್ತು. ಈ ವಿಚಾರ ಗೊತ್ತಾಗಿ ಪೂಜಾ ಮದುವೆಯನ್ನ ಕಿಶನ್ ಜೊತೆ ಮಾಡ್ಬೇಕು ಅಂತಾ ಭಾಗ್ಯ ಹಾಗೂ ಕುಸುಮಾ ಅಂದ್ಕೊಂಡ್ರು. ಭಾಗ್ಯ ಕುಸುಮಾ ಪರೀಕ್ಷೆಯಲ್ಲಿ ಕಿಶನ್ ಪಾಸ್ ಕೂಡ ಆಗಿದ್ದ. ಅದಾದ್ಮೇಲೆ ಗೊತ್ತಾಯ್ತು ಕಿಶನ್ ಕನ್ನಿಕಾ ಅಣ್ಣ ಅಂತಾ.. ಆದ್ರೂ ತಂಗಿ ಪ್ರೀತಿಸಿದ ಹುಡುಗನ ಜೊತೆಯೇ ಮದುವೆ ಮಾಡಿಸ್ತೀನಿ ಅಂತಾ ಪಣ ತೊಟ್ಲು.. ಆದ್ರೆ ಇಲ್ಲೂ ಕನ್ನಿಕಾ ಕುತಂತ್ರಿ ಬುದ್ದಿ ತೋರಿಸಿದ್ಲು.. ಪೂಜಾ ಕಿಶನ್ ಮದುವೆ ನಿಲ್ಲಿಸಲು ಆದೀಶ್ವರ್‌ನ ಮನೆಗೆ ಕರೆಸಿಕೊಂಡ್ಲು.. ಭಾಗ್ಯ ಮನೆಯವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ಲು. ಭಾಗ್ಯ ಮನೆಯವರು ಕೆಟ್ಟವರು.. ನಮ್ಮ ಶ್ರೀಮಂತಿಕೆಯನ್ನ ನೋಡಿ ಈ ಮದುವೆ ಮಾಡ್ತಿದ್ದಾರೆ ಅಂತಾ ಆದೀಶ್ವರ್ ಬಳಿ ಹೇಳಿದ್ಲು.. ಕನ್ನಿಕಾ ಹೇಳಿದ ಮಾತನ್ನ ಆದೀಶ್ವರ್ ನಂಬಿದ್ದ.. ಆದ್ರೆ ಬರು ಬರುತ್ತಾ ಆದೀಶ್ವರ್ ಗೆ ಭಾಗ್ಯ ಒಳ್ಳೆತನ ಗೊತ್ತಾಗಿದೆ. ಆದೀಶ್ವರ್ ಈ ಮದುವೆಗೆ ಗ್ರೀನ್ ಸಿಗ್ನಲ್ ಕೊಡ್ತಾನೆ.. ಭಾಗ್ಯಗೆ ಇಲ್ಲೂ ಜಯ ಸಿಗುತ್ತೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಸೀರಿಯಲ್ ಡೈರೆಕ್ಟರ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.. ಪೂಜಾ ಮದುವೆ ನಿಂತಿದೆ.. ಭಾಗ್ಯಳೇ ತಂಗಿ ಮದುವೆಯನ್ನ ನಿಲ್ಲಿಸಿದ್ದಾಳೆ.
ಕಲರ್ಸ್ ಕನ್ನಡ ವಾಹಿನಿ ಸೀರಿಯಲ್ ಪ್ರೋಮೋ ರಿಲೀಸ್ ಮಾಡಿದೆ. ಪೂಜಾಳನ್ನ ಲಕ್ಷ್ಮೀ, ಕುಸುಮಾ ಮಂಟಪಕ್ಕೆ ಕರ್ಕೊಂಡು ಬರ್ತಿದ್ರು.. ಅಷ್ಟೊತ್ತಿಗೆ ಮಹಾ ತಿರುವು ಎದುರಾಗಿದೆ.. ಪೂಜಾ ಕಿಶನ್ ಏಳು ಹೆಜ್ಜೆ ಇಡೋಕು ಮುನ್ನವೇ ಭಾಗ್ಯ ಮಹಾ ಹೆಜ್ಜೆ ಇಟ್ಟಿದ್ದಾಳೆ. ಪೂಜಾಳನ್ನ ಮಂಟಪ ಬಳಿ ಕರ್ಕೊಂಡು ಬರ್ತಿದ್ದಂತೆ ಪೂಜಾ ನೀನು ಹಸೆಮಣೆಯಲ್ಲಿ ಕೂರೋದು ಬೇಡ.. ಪೂಜಾ ಈ ಮದುವೆ ಆಗ್ತಿಲ್ಲ ಅಷ್ಟೇ ಅಂತಾ ಹೇಳಿದ್ದಾಳೆ.. ಈ ಪ್ರೋಮೋ ನೋಡಿದ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ. ಭಾಗ್ಯಗೆ ಸಡನ್ ಆಗಿ ಏನಾಯ್ತು? ತಂಗಿ ಮದುವೆ ಮಾಡ್ತೀನಿ ಅಂತಾ ಶಪತ ಮಾಡಿದ್ದ ಭಾಗ್ಯ ಮನಸು ಬದಲಾಯಿಸಿದ್ದು ಯಾಕೆ? ಕನ್ನಿಕಾ ಮತ್ತೀನ್ನೇನು ಕುಂತ್ರಂತ್ರ ಮಾಡಿದ್ಲು? ಮದುವೆಯಾಗಿ ಮನೆಗೆ ಬಂದ ಪೂಜಾ ನೆಮ್ಮದಿಯಿಂದ ಇರಲ್ಲ ಅಂತಾ ಕನ್ನಿಕಾ ಅತ್ತೆ ಜೊತೆ ಹೇಳಿದನ್ನ ಕೇಳಿಸ್ಕೊಂಡು ಈ ಮದುವೆ ಬೇಡ ಅಂತಾ ಹೇಳಿದ್ಲಾ? ಮುರಿದು ಬಿದ್ದ ಮದುವೆಯನ್ನ ಮತ್ತೆ ಮುಂದೆ ನಿಂತು ಯಾರು ಮಾಡಿಸ್ತಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡಿದೆ.
ಇದೀಗ ಸೀರಿಯಲ್ ಪ್ರೋಮೋ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ಭಾಗ್ಯ ಪೂಜಾ ಕಿಶನ್ ಮದುವೆಯನ್ನ ನಿಲ್ಲಿಸಿದ್ರು, ಆದೀಶ್ವರ್ ಈ ಮದುವೆಯನ್ನ ಮಾಡಿಸ್ತಾನೆ.. ಯಾಕಂದ್ರೆ ಭಾಗ್ಯ ಒಳ್ಳೆತನ ಆತನಿಗೆ ಗೊತ್ತಾಗಿದೆ.. ಭಾಗ್ಯಳಂತೆ ಪೂಜಾ ಕೂಡ ಒಳ್ಳೆವಳು.. ಮನೆಯನ್ನ ಮುರಿಯಲ್ಲ ಅನ್ನೋ ನಂಬಿಕೆ ಹುಟ್ಟುತ್ತಾ ಇದೆ.. ಇದೀಗ ಆತನೇ ಮುಂದೆ ನಿಂತು ಪೂಜಾ ಕಿಶನ್ ಮದುವೆ ಮಾಡಿಸ್ಬೋದು.. ಇಲ್ಲ ಅಂದ್ರೆ ಕನ್ನಿಕಾ ತಂದೆ ಕಾಮತ್ ಈ ಮದುವೆ ಮಾಡಿಸ್ಬೋದು ಅಂತಾ ಕಾಮೆಂಟ್ ಮಾಡ್ತಿದ್ದಾರೆ.

ನೋಡಿರಿ

