ತಾಂಡವ್‌, ಆದೀಶ್ವರ್‌ ಕ್ಲೋಸ್.. ತಾಂಡವ್‌ನಿಂದಲೇ ಭಾಗ್ಯಗೆ ಮದ್ವೆ? – ಆದೀಶ್ವರ್‌ ಬಲೆಗೆ ಬಿದ್ದ ಭಾಗ್ಯ ಗಂಡ!

ತಾಂಡವ್‌, ಆದೀಶ್ವರ್‌ ಕ್ಲೋಸ್.. ತಾಂಡವ್‌ನಿಂದಲೇ ಭಾಗ್ಯಗೆ ಮದ್ವೆ? – ಆದೀಶ್ವರ್‌ ಬಲೆಗೆ ಬಿದ್ದ ಭಾಗ್ಯ ಗಂಡ!

ಭಾಗ್ಯಗೆ ಕಷ್ಟ ಒಂದಾ ಎರಡಾ? ತಾಂಡವ್‌ ತನ್ನ ಲೈಫ್‌ನಿಂದ ದೂರ ಆದ್ಮೇಲೆ ನೆಮ್ಮದಿಯಾಗಿರ್ಬೋದು ಅಂತ ಆಕೆ ಅಂದ್ಕೊಂಡಿದ್ಲು. ಆದ್ರೆ ತಾಂಡವ್‌ ಶ್ರೇಷ್ಠಾ ಜೊತೆ ಸೇರ್ಕೊಂಡು ಏನಾದ್ರೂ ಕುಂತ್ರ ಮಾಡ್ತಾನೆ ಇರ್ತಾನೆ.. ಆದ್ರೀಗ ಏನ್‌ ಆಗ್ಬಾರ್ದಿತ್ತೋ ಅದೇ ಆಗಿದೆ.. ಇದೀಗ ತಾಂಡವ್‌ ಜೊತೆ ಆದೀಶ್ವರ್‌ ಕೂಡ ಕೈ ಜೋಡಿಸಿದ್ದಾನೆ. ಇದೀಗ ಭಾಗ್ಯ ನೆಮ್ಮದಿ ಮತ್ತೆ ಹಾಳಾಗೋದು ಪಕ್ಕಾ.

ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ಎತ್ತಿನಭುಜಕ್ಕೆ ನೋ ಎಂಟ್ರಿ! – 1 ತಿಂಗಳು ಚಾರಣಕ್ಕೆ ಬ್ರೇಕ್!

ಭಾಗ್ಯಲಕ್ಷ್ಮೀ ಸೀರಿಯಲ್‌ ಸ್ಟೋರಿ ಹೊಸ ತಿರುವು ಪಡೆದುಕೊಂಡಿದೆ. ಪೂಜಾ ಕಿಶನ್‌ ಮದುವೆಯಿಂದಾಗಿ ಶ್ರೇಷ್ಠಾ, ತಾಂಡವ್‌ ಸೈಡ್‌ಲೈನ್‌ ಆಗಿದ್ರು.. ಪೂಜಾ ಕಿಶನ್‌ ಮದುವೆ ಮಾಡಿಸಲು ಭಾಗ್ಯ ಕುಸುಮಾ ಒದ್ದಾಡ್ತಿದ್ರೆ, ಇತ್ತ ಕನ್ನಿಕಾ ಮಾತು ಕೇಳ್ಕೊಂಡು ಆದೀಶ್ವರ್‌ ಮದುವೆ ನಿಲ್ಲಿಸಲು ಪಣ ತೊಟ್ಟಿದ್ದ. ಆದ್ರೀಗ ತಾಂಡವ್‌ ಜೊತೆ ಆದೀಶ್ವರ್‌ ಕೈ ಜೋಡಿಸಿದ್ದಾನೆ. ಇದೀಗ ತಾಂಡವ್‌ ಹಾಗೂ ಆದೀಶ್ವರ್‌ ಬ್ಯುಸಿನೆಸ್‌ ಪಾರ್ಟ್ನರ್‌ ಆಗಿದ್ದಾರೆ.

ಹೌದು, ತಾಂಡವ್‌ ಭಾಗ್ಯಳಿಂದ ದೂರ ಆಗಿ ಶ್ರೇಷ್ಠಾಳ ಜೊತೆ ಹೋಗಿದ್ದ. ಆದ್ರೂ ಭಾಗ್ಯಳಿಗೆ ಕಷ್ಟ ಕೊಡೋದನ್ನ ನಿಲ್ಲಿಸಿರ್ಲಿಲ್ಲ. ತಾಂಡವ್‌ ಆಫೀಸ್‌ ನಲ್ಲಿ ಭಾಗ್ಯ ಕಾಂಟೀನ್‌ ಓಪನ್‌ ಮಾಡಿದಾಗ ಶ್ರೇಷ್ಠಾ ಹಾಗೂ ತಾಂಡವ್‌ ಆಕೆಗೆ ಅವಮಾನ ಮಾಡಿದ್ರು. ಇದ್ರಿಂದಾಗಿ ಅವರಿಬ್ರು ಕೆಲಸ ಕಳೆದುಕೊಂಡಿದ್ರು. ಅದಾದ್ಮೇಲೆ ಭಾಗ್ಯ ಬಾಸ್‌ ಮನವೊಲಿಸಿ, ಮತ್ತೆ ಅವರಿಬ್ರಿಗೆ ಕೆಲಸ ಸಿಗುವಂತೆ ಮಾಡಿದ್ಲು.. ಇದೇ ವಿಚಾರವನ್ನ ಇಟ್ಕೊಂಡು ತಾಂಡವ್‌ ಕೊಲೀಗ್ಸ್‌ ಆತನಿಗೆ ತಮಾಷೆ ಮಾಡಿದ್ರು. ಆದ್ರೆ ತಾಂಡವ್‌ ಇರೋ ಕೆಲಸವನ್ನ ಕೂಡ ಬಿಟ್ಟು ಹೋದ. ಇದೀಗ ಕೆಲಸ ಇಲ್ಲದೇ ಅಲಿತಾ ಇದ್ದಾನೆ.. ಬ್ಯುಸಿನೆಸ್‌ ಮಾಡ್ತೀನಿ ಅಂತಾ ಓಡಾಡ್ತಾ ಇದ್ದಾನೆ. ಆದ್ರೆ ಯಾವ ಕಂಪನಿಯೂ ಈತನ ಐಡಿಯಾವನ್ನ ಒಪ್ಪಿಕೊಂಡಿರ್ಲಿಲ್ಲ. ಇದೀಗ ಆದೀಶ್ವರ್‌ ತಾಂಡವ್‌ ನ ಪ್ಲ್ಯಾನ್‌ ಕೇಳಿ ಎಕ್ಸಲೆಂಟ್‌ ಅಂತಾ ಹೇಳಿದ್ದಾನೆ.

ಕಂಪನಿಯೊಂದ್ರಲ್ಲಿ ತಾಂಡವ್‌ ಆತನ ಪ್ರಾಜೆಕ್ಟ್‌ ಪ್ರೆಸೆಂಟ್‌ ಮಾಡ್ತಿದ್ದ. ಈ ವೇಳೆ ಆದೀಶ್ವರ್‌ ಅಲ್ಲಿಗೆ ಎಂಟ್ರಿಕೊಟ್ಟಿದ್ದಾನೆ. ತಾಂಡವ್‌ ಪ್ಲ್ಯಾನ್‌ಗೆ ಆದೀಶ್ವರ್‌ ಕ್ಲೀನ್‌ ಬೋಲ್ಡ್‌ ಆಗಿದ್ದಾನೆ. ಬ್ರಿಲಿಯೆಂಟ್..‌ ನಿಜವಾಗ್ಲೂ ಈ ಐಡಿಯಾ ತುಂಬಾ ಚೆನ್ನಾಗಿದೆ. ಈ ಐಡಿಯಾವನ್ನ ನಾನು ತೆಗೆದುಕೊಳ್ತೀನಿ ಅಂತಾ ಹೇಳಿದ್ದಾನೆ. ಆದ್ರೆ ತಾಂಡವ್‌ ಹಾಗೂ ಆದೀಶ್ವರ್‌ ಒಂದಾಗಿದ್ದು ಮಾತ್ರ ಹಿನ್ನಡೆಯಾಗಿದೆ. ಭಾಗ್ಯ ಮಾಜಿ ಗಂಡ ತಾಂಡವ್‌ ಅಂತಾ ಗೊತ್ತಾದ್ರೆ ತಂಡವ್‌ ಮುಂದೇನು ಮಾಡ್ತಾನೆ? ಇವನ ಜೊತೆ ಸೇರ್ಕೊಂಡು ಭಾಗ್ಯಗೆ ಮತ್ತಷ್ಟು ಕಷ್ಟ ಕೊಡ್ತಾನಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ. ಇದೀಗ ಸೀರಿಯಲ್‌ ಪ್ರೋಮೋ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಿದ್ದಾರೆ.

ಆದೀಶ್ವರ್‌ ಹಾಗೂ ತಾಂಡವ್‌ ಒಂದಾಗಿದ್ದು ಒಳ್ಳೆಯದ್ದೇ ಆಯ್ತು.. ಭಾಗ್ಯಳ ಒಳ್ಳೆತನ ಆದೀಶ್ವರ್‌ ಗೆ ಗೊತ್ತಾದಾಗ ಆಕೆಯ ಮೇಲೆ ಈತನಿಗೆ ಲವ್‌ ಆಗುತ್ತೆ. ಆಗ ತಾಂಡವ್‌ ಸಹಾಯವನ್ನ ಆದೀಶ್ವರ್‌ ಪಡಿತಾನೆ ಅಂತಾ ಕೆಲವರು ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಪಾಪ.. ಭಾಗ್ಯ..  ಎಲ್ಲಾ ಸವಾಲನ್ನು ಎದುರಿಸಿ ಮೇಲೆ ಬರುತ್ತಿದ್ದಾಳೆ..  ಇದನ್ನೇ ನಾರಿ ಶಕ್ತಿ ಅಂತ ಹೇಳುವುದು.. ಮಹಿಳೆಯೊಬ್ಬಳಿಂದಲೇ ಎಲ್ಲಾ ಸವಾಲನ್ನು ಎದುರಿಸಲು ಸಾಧ್ಯ.. ತಾಂಡವ್‌ನಂತಹ ಗಂಡ ಯಾರಿಗೂ ಸಿಗೋದು ಬೇಡ ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M