ಪೂಜಾ ಮದ್ವೆ ವೇಳೆ ಅರಳುತ್ತಾ ಪ್ರೀತಿ? – ಭಾಗ್ಯ ಸರಳತೆಗೆ ಆದೀಶ್ವರ್‌ ಫಿದಾ?
ಶ್ರೇಷ್ಠಾಗೂ ಕೈಕೊಟ್ಟ ತಾಂಡವ್‌?

ಪೂಜಾ ಮದ್ವೆ ವೇಳೆ ಅರಳುತ್ತಾ ಪ್ರೀತಿ? – ಭಾಗ್ಯ ಸರಳತೆಗೆ ಆದೀಶ್ವರ್‌ ಫಿದಾ?ಶ್ರೇಷ್ಠಾಗೂ ಕೈಕೊಟ್ಟ ತಾಂಡವ್‌?

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಈಗ ಪೂಜಾ ಕಿಶನ್‌ ಮದುವೆಯೇ ಹೈಲೈಟ್..‌ ಮದುವೆ ಸಂಭ್ರಮಕ್ಕಿಂತ ಅಲ್ಲಿ ಗೋಳಾಟವೇ ಮುಗಿಯುತ್ತಿಲ್ಲ.. ಎಂಗೇಜ್‌ಮೆಂಟ್‌ ಆಗಿದ್ರೂ, ಕನ್ನಿಕಾ ಆದೀಶ್ವರ್‌ ಸೇರ್ಕೊಂಡು ಮದುವೆ ನಿಲ್ಲಿಸಲು ಪ್ಲ್ಯಾನ್‌ ಮಾಡಿದ್ದಾರೆ. ಇತ್ತ ಕಿಶನ್‌ ಯಾರಿಗೂ ಹೇಳದೆ ಪೂಜಾಳನ್ನ ಮದುವೆಯಾಗಲು ಕರ್ಕೊಂಡು ಹೋಗಿದ್ದಾನೆ. ಆದ್ರೀಗ ಪೂಜಾ ಕಿಶನ್‌ ಮದ್ವೆಗಿಂತ ಮುಂದೆ ಮತ್ತೊಂದು ಪ್ರೀತಿ ಅರಳುತ್ತಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡಿದೆ.. ಇದೀಗ ಭಾಗ್ಯ ಮೇಲೆ ಆದೀಶ್ವರ್‌ ಗೆ ಲವ್‌ ಆಗೋದು ಪಕ್ಕಾ ಅಂತಾ ವೀಕ್ಷಕರೇ ಭವಿಷ್ಯ ನುಡಿತಿದ್ದಾರೆ.

ಇದನ್ನೂ ಓದಿ: ಅವಧಿಪೂರ್ವ ಮುಂಗಾರು ಮಳೆ – ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಜೂನ್‌ನಲ್ಲೇ KRS ಡ್ಯಾಂ ಭರ್ತಿ

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ಹೊಸ ತಿರುವು ಪಡೆದುಕೊಳ್ಳೋ ಮುನ್ಸೂಚನೆ ಕಾಣ್ತಾ ಇದೆ. ಭಾಗ್ಯ ಪೂಜಾ ಕಿಶನ್‌ ಮದುವೆ ಮಾಡಿಸುತ್ತೇನೆ ಎಂದು ಹೊರಟಿದ್ದಾಳೆ. ಆದ್ರೆ ಈ ಮದುವೆಗೆ ಕನ್ನಿಕಾ ವಿಲನ್‌ ಆಗಿದ್ದಾಳೆ. ಪೂಜಾ ಕಿಶನ್‌ ಮದುವೆ ನಿಲ್ಲಿಸಲು ಆಕೆಯ ಅಣ್ಣ ಆದೀಶ್ವರ್‌ ನ ಮನೆಗೆ ಕರೆಸಿಕೊಂಡಿದ್ದಾಳೆ.. ಈ ಮನೆಗೆ ಪೂಜಾ ಮದುವೆ ಆಗಿ ಬಂದ್ರೆ ಈ ಮನೆ ಒಡೆದುಹೋಗುತ್ತೆ. ಆಕೆ ದುಡ್ಡಿಗಾಗಿ ಕಿಶನ್‌ ನ ಮದುವೆ ಆಗ್ತಿದ್ದಾಳೆ ಅಂತಾ ಕಟ್ಟು ಕತೆ ಕಟ್ಟಿದ್ದಾಳೆ. ಇದನ್ನ ಆದೀಶ್ವರ್‌ ಕೂಡ ನಂಬಿದ್ದಾನೆ. ಹೀಗಾಗಿ ಆತ ಈ ಮದುವೆ ನಿಲ್ಲಿಸಬೇಕುಂದು ಹೊರಟಿದ್ದಾನೆ. ಈ ಮದುವೆ ನಡೆಯೋಕೆ ಸಾಧ್ಯವೇ ಇಲ್ಲ ಅಂತಾ ಹೇಳಿದ್ದಾನೆ.. ಆದ್ರೀಗ ಕಿಶನ್‌ ಪೂಜಾಳನ್ನ ಮನೆಯಿಂದ ಆಚೆ ಕರ್ಕೊಂಡು ಹೋಗಿದ್ದಾನೆ. ಆಕೆಗೂ ಹೇಳದೆ ಮದುವೆ ಆಗಲು ಹೊರಟಿದ್ದಾನೆ.. ಇವೆಲ್ಲದ್ರ ಮಧ್ಯೆ ಮತ್ತೊಂದು ಪ್ರೀತಿ ಚಿಗುರುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಹೌದು, ಭಾಗ್ಯ ಹಾಗೂ ಆದೀಶ್ವರ್‌ ಆರಂಭದಿಂದಲೂ ಕಿತ್ತಾಡುತ್ತಾ ಬಂದಿದ್ದಾರೆ.  ಸಿಕ್ಕ ಸಿಕ್ಕ ವಿಷಯಕ್ಕೆ ಜಗಳ ಆಡ್ತಿದ್ರು.. ಆದ್ರೀಗ ಪೂಜಾ ಅಕ್ಕ ಭಾಗ್ಯ ಅನ್ನೋದು ಗೊತ್ತಾಗಿ ಆತನ ಸಿಟ್ಟು ಜಾಸ್ತಿಯಾಗಿದೆ. ಹೀಗಾಗಿ ಭಾಗ್ಯ ಮೇಲೆ ಪದೇ ಪದೇ ರೇಗಾಡುತ್ತಾ ಬಂದಿದ್ದಾನೆ.. ಆದ್ರೆ ಭಾಗ್ಯ ಎಲ್ಲವನ್ನೂ ಕೂಲ್‌ ಆಗೇ ಹಾಂಡಲ್‌ ಮಾಡ್ತಿದ್ದಾಳೆ.. ಆದೀಶ್ವರ್‌ ಹಣ ಆಮೀಷ ಒಡ್ಡಿದ್ರು ಆಕೆ ಬಗ್ಗಲಿಲ್ಲ.. ಸ್ವಾಭಿಮಾನದ ಉತ್ತರ ಕೊಟ್ಟು ಬಂದಿದ್ಲು.. ಈಗ ತಂಗಿ ಪ್ರೀತಿಯನ್ನ ಗೆಲ್ಲಿಸಿಕೊಡಲು ಆಕೆ ಹರಸಾಹಸ ಪಡ್ತಿದ್ದಾಳೆ. ಈಕೆಯ ಸತ್ಯ ಒಂದಲ್ಲ ಒಂದು ದಿನ ಆದೀಶ್ವರ್‌ ಗೆ ಗೊತ್ತಾಗುತ್ತೆ. ಪಕ್ಕಾ ಆಕೆಯ ಸರಳತೆಗೆ ಆದೀಶ್ವರ್‌ ಫಿದಾ ಆಗ್ತಾನೆ.. ಬಳಿಕ ಆದೀಶ್ವರ್‌  ಪ್ರೀತಿಯಲ್ಲಿ ಬಿದ್ದೇ ಬೀಳ್ತಾನೆ ಅನ್ನೋದು ವೀಕ್ಷಕರ ವಾದ.. ಆದ್ರೆ ಆದೀಶ್ವರ್‌ ಗೆ ಭಾಗ್ಯ ಮೇಲೆ ಲವ್‌ ಆದ್ರೂ ಆಕೆ ಒಪ್ಪಿಕೊಳ್ಳಲ್ಲ.. ಯಾಕಂದ್ರೆ ಆಕೆಗೆ ಸಾಕಷ್ಟು ಕಷ್ಟಗಳನ್ನ ಫೇಸ್‌ ಮಾಡಿದ್ದಾಳೆ.. ಮಕ್ಕಳೂ ಕೂಡ ಬೆಳೆದಿದ್ದಾರೆ.. ಮನೆ ಜವಾಬ್ದಾರಿಯೆಲ್ಲಾ ಆಕೆ ಮೇಲಿರುವಾಗ ಆಕೆ ಈ ಪ್ರೀತಿನಾ ಒಪ್ಪಿಕೊಳ್ಳಲ್ಲ ಅನ್ನೋದು ವೀಕ್ಷಕರ ವಾದ..

ಇನ್ನು ಮತ್ತೊಂದ್ಕಡೆ  ತಾಂಡವ್‌ನ ಮದುವೆಯಾದ ಶ್ರೇಷ್ಠಾ ಈಗ ಪೇಚಿಗೆ ಸಿಲುಕಿದ್ದಾಳೆ.. ಯಾಕಾದ್ರೂ ಇವನನ್ನ ಮದುವೆ ಆದೆ ಅನ್ನೋ ತರ ಆಗಿದೆ ಆಕೆಯ ಪರಿಸ್ಥಿತಿ.. ಮದುವೆಗೂ ಮುನ್ನ ತಾಂಡವ್‌ ಹನಿ ಹನಿ ಅಂತಾ ಶ್ರೇಷ್ಠಾ ಹಿಂದೆ ಮುಂದೆ ಓಡಾಡ್ತಾ ಇದ್ದ.. ಆದ್ರೀಗ ತಾಂಡವ್‌ ಗೆ ಶ್ರೇಷ್ಠಾ ಜೊತೆ ಅಡ್ಜೆಸ್ಟ್‌ ಆಗಲ್ಲ.. ಸರಿಯಾದ ಊಟ ಕೂಡ ಸಿಗ್ತಿಲ್ಲ.. ಮತ್ತೊಂದ್ಕೆಡೆ ಆತ ಇರೋ ಕೆಲಸ ಕೂಡ ಕಳ್ಕೊಂಡಿದ್ದಾನೆ.. ಇದೀಗ ಶ್ರೇಷ್ಠಾ ಮೇಲೆಯೇ ರಾಗಾಡ್ತಾ ಇರ್ತಾನೆ.. ಇದೀಗ ಶ್ರೇಷ್ಠಾ ತಾಂಡವ್‌ನ ಬಿಟ್ಟು ಹೋಗ್ತಾಳೆ.. ಬಳಿಕ ತಾಂಡವ್‌ ಭಾಗ್ಯಳೇ ಗತಿ ಅಂತಾ ಮನೆಗೆ ವಾಪಾಸ್‌ ಬರೋ ಸಾಧ್ಯತೆ ಇದೆ.. ಮುಂದಿನ ದಿನಗಳಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ ಸಾಕಷ್ಟು ತಿರುವುಗಳನ್ನ ಪಡ್ಕೊಳ್ಳೋದಂತೂ ಪಕ್ಕಾ.

Shwetha M