ಭಾಗ್ಯ ಮೇಲೆ ಆದೀಶ್ವರ್‌ಗೆ ಲವ್.. ಉದ್ಯಮಿ ಕೈ ಹಿಡಿತಾಳಾ ಕುಸುಮಾ ಸೊಸೆ! – ತಾಂಡವ್ Vs ಆದೀಶ್ವರ್.. ಯಾರು ಬೆಸ್ಟ್?

ಭಾಗ್ಯಗೆ ಒಂದು ಕಷ್ಟ ತಪ್ಪಿತು ಅಂದಾಗ ಮತ್ತೊಂದು ಸಂಕಷ್ಟ ಶುರುವಾಗಿರುತ್ತೆ. ಇದೀಗ ಪೂಜಾ ಕಿಶನ್ ಮದ್ವೆ ಮಾಡ್ಬೇಕು ಅಂತಾ ಹೊರಟಿದ್ದಾಳೆ. ಆದ್ರೆ ವಿಘ್ನಗಳೇ ಮುಗಿಯುತ್ತಿಲ್ಲ.. ಕಿಶನ್ ಪೂಜಾ ಮದುವೆ ನಿಲ್ಲಿಸಲು ಆದೀಶ್ವರ್ ಮುಂದಾಗಿದ್ದಾನೆ. ಆಗಾಗ ಭಾಗ್ಯ ಜೊತೆ ಕಿರಿಕ್ ಮಾಡಿಕೊಳ್ತಿದ್ದಾನೆ. ಆದ್ರೆ ಭಾಗ್ಯ ಆತನ ಮನವೊಲಿಸುತ್ತಿದ್ದಾಳೆ. ಆದ್ರೆ ಆದೀಶ್ವರ್ ಕೋಪ ಕಡ್ಮೆ ಆಗ್ತಿಲ್ಲ.. ಇದೀಗ ಭಾಗ್ಯ ಮೇಲೆ ಆದೀಶ್ವರ್ ಗೆ ಲವ್ ಆಗುತ್ತಾ ಅನ್ನೋ ಕುತೂಹಲ ವೀಕ್ಷಕರಿಗೆ ಮೂಡಿದೆ..
ಇದನ್ನೂ ಓದಿ: ವಲಸೆ ನೀತಿ ವಿರೋಧಿಸಿ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನೆ – 2,000 ನ್ಯಾಷನಲ್ ಗಾರ್ಡ್ ನಿಯೋಜಿಸಿದ ಟ್ರಂಪ್..!
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ ಪೂಜಾ, ಕಿಶನ್ ಮದುವೆ ಮಾಡಿಸಲು ಭಾಗ್ಯ ಮುಂದಾಗಿದ್ದಾಳೆ. ಆರಂಭದಲ್ಲಿ ತಾಂಡವ್, ಹಾಗೂ ಶ್ರೇಷ್ಠಾ ಈ ಮದುವೆಗೆ ಅಡ್ಡಿ ಆಗಿದ್ರು.. ಕಿಶನ್ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿ, ಮದುವೆ ನಿಲ್ಲಿಸಲು ಮುಂದಾಗಿದ್ರು. ಅದ್ರೆ ಕಿಶನ್ ಒಳ್ಳೆಯವನು ಅಂತಾ ಕುಸುಮಾ ಹಾಗೂ ಭಾಗ್ಯಗೆ ಗೊತ್ತಾಗುತ್ತೆ. ಆದ್ರೆ ಕಿಶನ್ ಕನ್ನಿಕಾ ಅಣ್ಣ ಅಂತಾ ಗೊತ್ತಿರೋದಿಲ್ಲ.. ಈ ವಿಚಾರ ಗೊತ್ತಾದಾಗ ಭಾಗ್ಯ ಮನೆಯವರು ಶಾಕ್ ಆಗಿದ್ರು.. ಆದ್ರೂ ಪೂಜಾಗೋಸ್ಕರ್ ಈ ಮದ್ವೆಗೆ ಒಪ್ಪಿದ್ದಾರೆ. ಕನ್ನಿಕಾ ತಂದೆ ತಾನು ಮುಂದೆ ನಿಂತು ಮದ್ವೆ ಮಾಡಿಸ್ತೇನೆ ಅಂತಾ ಮಾತು ಕೊಟ್ಟಿದ್ದಾರೆ. ಆದ್ರೆ ಕನ್ನಿಕಾ ತನ್ನ ದೊಡ್ಡಣ್ಣ ಆದೀಶ್ವರ್ ಮನೆಗೆ ಕರೆಸಿ ಮದ್ವೆ ನಿಲ್ಲಿಸಲು ಹೇಳಿದ್ದಾಳೆ. ಇದೀಗ ಆದೀಶ್ವರ್ ಭಾಗ್ಯ ಜೊತೆ ಪದೇ ಪದೇ ಕಿರಿಕ್ ಮಾಡಿಕೊಳ್ತಿದ್ದಾನೆ. ಈ ಮದುವೆ ನಡೆಯೋದೇ ಇಲ್ಲ ಅಂತಾ ಕಡಾಕಂಡಿತವಾಗಿ ಹೇಳಿದ್ದಾನೆ. ಆದ್ರೀಗ ಆದೀಶ್ವರ್ ಗೆ ಭಾಗ್ಯ ಮೇಲೆ ಲವ್ ಆಗುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಹೌದು.. ಕನ್ನಿಕಾ ಆದೀಶ್ವರ್ ಗೆ ಭಾಗ್ಯ ಮನೆಯವರ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಾಳೆ. ದುಡ್ಡಿಗಾಗಿ ಪ್ರೀತಿಯ ನಾಟಕವಾಡಿದ್ದಾರೆ. ಈ ಮನೆಯನ್ನ ಒಡೆಯಲು ಈತ ಡ್ರಾಮಾ ಮಾಡ್ತಿದ್ದಾರೆ ಅಂತಾ ಸುಳ್ಳು ಹೇಳಿದ್ದಾಳೆ. ತನ್ನ ಮನೆಯನ್ನ ಹೇಗಾದ್ರೂ ಮಾಡಿ ಉಳಿಸಿಕೊಳ್ಬೇಕು ಅಂತಾ ಆದ್ರೀಶ್ವರ್ ವಿದೇಶದಿಂದ ಊರಿಗೆ ಬಂದಿದ್ದಾನೆ. ಕಿಶನ್ ಪೂಜಾ ಮದುವೆ ಹೇಗಾದ್ರೂ ಮಾಡಿ ನಿಲ್ಲಿಸ್ಬೇಕು ಅಂತಾ ಮುಂದಾಗಿದ್ದಾನೆ. ಭಾಗ್ಯ, ಕುಸುಮಾಗೆ ಆದೀಶ್ವರ್ ಕಿಶನ್ ಅಣ್ಣ ಅಂತಾ ಗೊತ್ತಿರ್ಲಿಲ್ಲ. ಹೀಗಾಗಿ ಆತನ ಜೊತೆ ಭಾಗ್ಯ ಹಾಗೂ ಕುಸುಮಾ ಆರಂಭದಿಂದಲೂ ಕಿರಿಕ್ ಮಾಡಿಕೊಂಡಿದ್ರು. ಇದ್ರಿಂದಾಗಿ ಆಧೀಶ್ವರ್ ಸಿಟ್ಟು ಜಾಸ್ತಿಯಾಗಿದೆ. ಇದೀಗ ಆಧೀಶ್ವರ್ ಭಾಗ್ಯಳನ್ನ ಬೆಟ್ಟ ಬರುವಂತೆ ಹೇಳಿದ್ದಾನೆ. ಈ ಮದ್ವೆಯನ್ನ ನಿಲ್ಲಿಸು ಬೇಕಾಷ್ಟು ದುಡ್ಡು ಕೊಡ್ತೇನೆ ಅಂತಾ ಭಾಗ್ಯ ಮೇಲೆ ಹಣವನ್ನ ಸುರಿದ್ದಿದ್ದಾನೆ. ಆದ್ರೀಗ ವೀಕ್ಷಕರು ಬೇರೆಯೇ ಲೆಕ್ಕಾಚಾರ ಹಾಕಿದ್ದಾರೆ.. ಇಂದಿನ ದುಷ್ಮನ್‌ಗಳು ನಾಳೆ ಜೋಡಿ ಆಗ್ತಾರೆ ಅಂತಾ ಕಾಮೆಂಟ್ ಮಾಡ್ತಿದ್ದಾರೆ.
ಹೌದು.. ಕಿಶನ್ ಹಾಗೂ ಪೂಜಾ ಲವ್ ಶುರುವಾಗಿದ್ದು ಕೂಡ ಹೀಗೆ.. ಆರಂಭದಲ್ಲಿ ಇವರಿಬ್ರು ತುಂಬಾ ಕಿತ್ತಾಡ್ತಿದ್ರು.. ಬರು ಬರುತ್ತಾ ಇಬ್ಬರೂ ಕ್ಲೋಸ್ ಆದ್ರು.. ಇವರಿಬ್ರ ಸ್ನೇಹ ಪ್ರೀತಿಗೆ ತಿರುಗಿತು. ಭಾಗ್ಯ ವಿಚಾರದಲ್ಲೂ ಹೀಗೆ ಆಗುತ್ತೆ.. ಆಧೀಶ್ವರ್ ಗೆ ಭಾಗ್ಯ ಮೇಲೆ ಲವ್ ಆಗುತ್ತೆ ಅಂತಾ ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ.
ಇನ್ನು ತಾಂಡವ್ ಕೆಲಸ ಕಳೆದುಕೊಂಡಿದ್ದ ವೇಳೆ ಭಾಗ್ಯ ಮಾತನಾಡಿ ಮತ್ತೆ ಕೆಲಸ ಸಿಗುವಂತೆ ಮಾಡಿದ್ಲು. ಇದನ್ನೇ ಹಿಡ್ಕೊಂಡು ಎಲ್ಲರೂ ತಾಂಡವ್‌ನ ಹೀಯಾಳಿಸ್ತಿದ್ರು.. ಇದ್ರಿಂದ ಸಿಟ್ಟಿಗೆದ್ದ ತಾಂಡವ್ ಈಗ ಕೆಲಸ ಬಿಟ್ಟಿದ್ದಾನೆ. ಕೆಲಸಕ್ಕೆ ರಿಸೈನ್ ಮಾಡಿ.. ಡೈರೆಕ್ಟ್ ಭಾಗ್ಯ ಮನೆಗೆ ಬಂದಿದ್ದಾನೆ.. ಅಷ್ಟೇ ಅಲ್ಲ ಭಾಗ್ಯ ಮೇಲೆ ಕೂಗಾಡಿದ್ದಾನೆ. ಇದೀಗ ಕೆಲಸ ಬಿಟ್ಟ ತಾಂಡವ್‌ನ ಗತಿ ಏನು? ಕೆಲಸವಿಲ್ಲದ ತಾಂಡವ್‌ನ ಶ್ರೇಷ್ಠಾ ಬಿಟ್ಟು ಹೋಗ್ತಾಳಾ ಅನ್ನೋ ಕ್ಯೂರಿಯಾಸಿಟಿ ಎಲ್ಲರನ್ನ ಕಾಡ್ತಿದೆ.. ಒಟ್ಟಿನಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ನ ಮುಂಬರುವ ಎಪಿಸೋಡ್‌ಗಳು ಟಿಸ್ಟ್ ಅಂಡ್ ಟರ್ನ್‌ನಿಂದ ಕೂಡಿದೆ.

ನೋಡಿರಿ

