ಭಾಗ್ಯ ಬಾಳಲ್ಲಿ ಹೊಸ ಹೀರೋ! – ಅಕ್ಕ – ತಂಗಿ.. ಫಸ್ಟ್‌ ಯಾರ ಮದುವೆ?

ಭಾಗ್ಯ ಬಾಳಲ್ಲಿ ಹೊಸ ಹೀರೋ! – ಅಕ್ಕ – ತಂಗಿ.. ಫಸ್ಟ್‌ ಯಾರ ಮದುವೆ?

ಯಾರ ಸಮಸ್ಯೆ ಬಗೆಹರಿದ್ರೂ ಈ ಭಾಗ್ಯಗೆ ಕಷ್ಟ ತಪ್ಪಿದ್ದಲ್ಲ. ಒಂದಾದ ಮೇಲೊಂದು ಸಂಕಷ್ಟ ಬರ್ತಾ ಇದೆ. ತಾಂಡವ್‌ ನ ಬಿಟ್ಟು ಬಂದ ಭಾಗ್ಯ ಈಗ ಹೇಗೋ ಜೀವನ ಕಟ್ಟಿಕೊಳ್ತಿದ್ದಾಳೆ. ಇದೀಗ ಪೂಜಾಗೆ ಮದ್ವೆ ಮಾಡಿಸಲು ಮುಂದಾಗಿದ್ದಾಳೆ. ಆದ್ರೆ ಇಲ್ಲೂ ಕೂಡ ಭಾಗ್ಯಗೆ ಸಂಕಷ್ಟ ತಪ್ಪಿಲ್ಲ. ಪೂಜಾ ಮದುವೆ ನಿಲ್ಲಿಸಲು ಕುತಂತ್ರಿಗಳು ಪ್ಲ್ಯಾನ್‌ ಮಾಡಿದ್ದಾರೆ. ಇದೀಗ ಭಾಗ್ಯಗೆ ಕಾಟ ಕೊಡಲು ಮತ್ತೊಬ್ಬನ್ನ ಕರ್ಸಿದ್ದಾಳೆ ಭಾಗ್ಯ.

ಇದನ್ನೂ ಓದಿ: ಮತ್ತೆ ಕೋರ್ಟ್‌ ಮೆಟ್ಟಿಲೇರಿದ ದಾಸ – ವಿದೇಶಕ್ಕೆ ತೆರಳಲು ಅನುಮತಿ ಕೋರಿ ದರ್ಶನ್‌ ಅರ್ಜಿ

ಭಾಗ್ಯಲಕ್ಷ್ಮೀ ಸೀರಿಯಲ್‌ ಹೊಸ ಹೊಸ ತಿರುವು ಪಡೆದುಕೊಳ್ತಿದ್ದು,  ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಕಳೆದ ಕೆಲವು ವಾರಗಳಿದ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಭಾಗ್ಯಾಳ ತಂಗಿ ಪೂಜಾಳ ಮದುವೆ ಹೊಸ ತಿರುವನ್ನೇ ಪಡೆದುಕೊಂಡಿದೆ. ಪೂಜಾ ಮದುವೆ ಆಗುವ ಹುಡುಗ ಕಿಶನ್ ಭಾಗ್ಯಾಳ ಬದ್ಧವೈರಿ ಕನ್ನಿಕಾಳ ಸ್ವಂತ ಅಣ್ಣ. ಈ ವಿಚಾರ ತಿಳಿದು ಭಾಗ್ಯ ಮನೆಯವರಿಗೆ ಶಾಕ್ ಆಗಿದ್ದಾರೆ. ಆದ್ರೂ ಪೂಜಾ ಕಿಶನ್‌ಗೋಸ್ಕರ ಮದುವೆ ಮಾಡಿಸ್ತೀನಿ ಅಂತಾ ಭಾಗ್ಯ ಹೊರಟಿದ್ದಾಳೆ. ಈ ಮದ್ವೆಗೆ ಕನ್ನಿಕಾ ಒಪ್ಪಿಗೆ ಸೂಚಿಸಿದ್ದಾರೆ. ಆದ್ರೀಗ ಸೀರಿಯಲ್‌ ಡೈರೆಕ್ಟರ್‌ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ಸೀರಿಯಲ್‌ಗೆ ಈಗ ಹೊಸ ಪಾತ್ರ ಎಂಟ್ರಿ ಆಗಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ, ಸ್ಯಾಂಡಲ್‌ ವುಡ್‌ ನಟ ಹರೀಶ್ ರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಪೂಜಾ ಕಿಶನ್‌ ಮದುವೆ ಮಾತುಕತೆ ಮಾಡಲು ಭಾಗ್ಯ ಮತ್ತು ಆಕೆಯ ಮನೆಯವರು ಕನ್ನಿಕಾ ಮನೆಗೆ ಬಂದಿದ್ದಾರೆ. ಈ ವೇಳೆ ಕನ್ನಿಕಾ ಅವ್ರಿಗೆ ಅವಮಾನ ಮಾಡಿದ್ದಾಳೆ.  ಪೂಜಾ ಈ ಮನೆ ಸೊಸೆಯಾಗಿ ಬರೋಕೆ ನಾನು ಯಾವುದೇ ಕಾರಣಕ್ಕೂ ಬಿಡಲ್ಲ ಎನ್ನುತ್ತಾಳೆ. ಕನ್ನಿಕಾ ಮಾತುಗಳಿಂದ ಕೆರಳುವ ಪೂಜಾ, ನೀನೇನು ಹೇಳುವುದು ನನ್ನ ಕಾಲಿನ ಧೂಳು ಕೂಡ ಈ ಮನೆಯನ್ನು ಸೋಕಲ್ಲ ಎಂದು ಹೇಳುತ್ತಾಳೆ. ನಿನ್ನಂತ ಮನೆಹಾಳಿ ಇರುವ ಮನೆಗೆ ನಾನು ಬರಲ್ಲ ಎನ್ನುತ್ತಾಳೆ. ಪೂಜಾ ಮಾತುಗಳಿಂದ ಇನ್ನಷ್ಟು ಕೋಪ ಮಾಡಿಕೊಳ್ಳುವ ಕನ್ನಿಕಾ, ಎಲ್ಲರನ್ನು ಮನೆಯಿಂದ ಆಚೆ ಹಾಕುವಂತೆ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಹೇಳಿದ್ದಾಳೆ.  ಇದ್ರಿಂದಾಗಿ ಭಾಗ್ಯ ಮನೆಯವರು ವಾಪಾಸ್‌ ಮನೆಗೆ ಹೋಗಿದ್ದಾರೆ. ಅಷ್ಟೊತ್ತಿಗೆ ಕನ್ನಿಕಾ ತಂದೆ ರಾಮ್‌ದಾಸ್ ಕಾಮತ್ ಎಂಟ್ರಿ ಕೊಟ್ಟಿದ್ದಾರೆ.

ಕಿಶನ್ ಲವ್‌ ವಿಚಾರ ಗೊತ್ತಾಗ್ತಿದ್ದಂತೆ ರಾಮ್​ದಾಸ್ ಭಾಗ್ಯ ಮನೆಗೆ ಬಂದಿದ್ದಾರೆ. ನಮ್ಮ ಮನೆಯಲ್ಲಿ ನಿಮಗೆ ಅವಮಾನವಾಗಿದೆ. ಅದಕ್ಕೆ ನಾನು ಕ್ಷಮೆ ಕೇಳುತ್ತಿದ್ದೇನೆ. ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ. ಇವತ್ತು ಆಗಿರುವ ವಿಷಯವನ್ನೆಲ್ಲ ಮರೆತು ಬಿಡಿ ಆ ಮನೆಯಲ್ಲಿ ನಿನ್ನ ತಂಗಿ ಪೂಜಾ ನೆಮ್ಮದಿಯಿಂದ ಸುಖವಾಗಿ ಆರಾಮಾಗಿ ಇರುತ್ತಾಳೆ. ಅವಳಿಗೆ ಯಾವುದೇ ಸಮಸ್ಯೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆಯನ್ನು ಕೊಡುತ್ತಾರೆ.  ಆದ್ರೆ ಕನ್ನಿಕಾ ಮಾತ್ರ ಬೇರೆ ಪ್ಲ್ಯಾನ್‌ ಮಾಡಿದ್ದಾಳೆ. ಕನ್ನಿಕಾ ಈ ಮದ್ವೆ ನಿಲ್ಲಿಸಲು ಆಕೆಯ ಮತ್ತೊಬ್ಬ ಅಣ್ಣನನ್ನ ಕರ್ಸಿದ್ದಾಳೆ. ಇದೀಗ ಕನ್ನಿಕಾ ಮನೆಗೆ ಆದೀಶ್ವರ್‌ ಎಂಟ್ರಿಯಾಗಿದ್ದಾನೆ. ಈ ಮೂಲಕ ಭಾಗ್ಯಾ ಎದುರು ಇನ್ನೊಬ್ಬ ಖಳನಾಯಕನ ಎಂಟ್ರಿಯಾಗಿದೆ.

ಕನ್ನಿಕಾ ಇಲ್ಲಸಲ್ಲದ ಸುಳ್ಳಿನ ಕಥೆ ಕಟ್ಟಿ ಆದೀಶ್ವರ್​ಗೆ ಹೇಳಿದ್ದಾಳೆ. ಎಲ್ಲಿ ನಮ್ಮ ಫ್ಯಾಮಿಲಿ ಒಡೆದೋಗುತ್ತೋ ಅನ್ನೋ ಭಯದಿಂದ ತುಂಬಾ ವರ್ಷದಿಂದ ವಿದೇಶದಲ್ಲಿದ್ದ ಆದೀಶ್ವರ್‌ ದಿಢೀರ್ ಎಂದು ಮನೆಗೆ ಬರುತ್ತಾನೆ. ಆದೀಶ್ವರ್‌ ಬರೋ ವಿಚಾರ ತಿಳಿದು, ಆತನನ್ನು ಸ್ವಾಗತಿಸಿಲು ಆರತಿ ತಟ್ಟೆ ಎಲ್ಲ ರೆಡಿಯಾಗಿದೆ. ಸದ್ಯ ಇಲ್ಲಿಂದ ಭಾಗ್ಯ ಲಕ್ಷ್ಮೀ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಆದೀಶ್ವರ್‌ ಪಾತ್ರದಲ್ಲಿ ಹರೀಶ್ ರಾಜ್​ ಕಾಣಿಸಿಕೊಂಡಿದ್ದು, ಭಾಗ್ಯಾಗೆ ಮುಂದೆ ಏನೆಲ್ಲ ಸಂಕಷ್ಟ ಎದುರಾಗಲಿದೆ ಎಂಬುದು ನೋಡಬೇಕಿದೆ.

ಇದೀಗ ಆದೀಶ್ವರ್‌ ಎಂಟ್ರಿಯಾಗ್ತಿದ್ದಂತೆ ವೀಕ್ಷಕರು ಬೇರೆಯೇ ಲೆಕ್ಕಾಚಾರ ಹಾಕ್ತಿದ್ದಾರೆ. ಈತನ ಎಂಟ್ರಿ ಆಗ್ತಿದ್ದಂತೆ ಭಾಗ್ಯ ಲೈಫ್‌ ಟರ್ನಿಂಗ್‌ ಪಾಯಿಂಟ್‌ ಶುರುವಾಗುತ್ತೆ. ಬಳಿಕ ಈತನೇ ಭಾಗ್ಯ ಹಿಂದೆ ಬೀಳೋ ಚಾನ್ಸ್‌ ಇದೆ. ಇವನೇ ಭಾಗ್ಯಳ ಎರಡನೇ ಗಂಡ ಆಗ್ತಾನೆ ಅಂತಾ ಹೇಳ್ತಿದ್ದಾರೆ. ಇದೀಗ ಆದೀಶ್ವರ್‌ ಎಂಟ್ರಿಯಿಂದ ಸೀರಿಯಲ್‌ನಲ್ಲಿ ಏನೆಲ್ಲಾ ಟ್ವಿಸ್ಟ್‌ ಸಿಗಲಿದೆ ಅಂತಾ ಸೀರಿಯಲ್‌ ಫ್ಯಾನ್ಸ್‌ ಕುತೂಹಲದಿಂದ ಕಾಯ್ತಿದ್ದಾರೆ.

Shwetha M

Leave a Reply

Your email address will not be published. Required fields are marked *