ಭಾಗ್ಯಗೆ 2 ನೇ ಮದುವೆ ಫಿಕ್ಸ್? – ಸೊಸೆಗೆ ಗಂಡು ಹುಡುಕಿದ ಕುಸುಮಾ

ಭಾಗ್ಯ ನೆಮ್ಮದಿಯಿಂದ ಇದ್ರೆ ತಾಂಡವ್ ಗೆ ಸಹಿಸಿಕೊಳ್ಳೋದಿಕ್ಕೆ ಆಗಲ್ಲ.. ಹೀಗಾಗಿ ಆಕೆಗೆ ಒಂದಲ್ಲ ಒಂದು ತೊಂದರೆ ಕೊಡ್ತಾ ಇರ್ತಾನೆ. ಇದೀಗ ಪೂಜಾ ಮದುವೆಗೂ ತಾಂಡವ್ ಅಡ್ಡಿಯಾಗಿದ್ದಾನೆ. ಗಂಡಿನ ಕಡೆಯವರು ಮನೆಗೆ ಬರ್ತಿದ್ದಂತೆ ತಾಂಡವ್ ಅಲ್ಲಿ ಹೊಸ ಡ್ರಾಮಾ ಮಾಡಿದ್ದಾನೆ. ಇದೀಗ ಕುಸುಮಾ ತನ್ನ ಮುದ್ದಿನ ಸೊಸೆಗೆ ಎರಡನೇ ಮದುವೆ ಮಾಡ್ತಾಳಾ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರಗೆ ಪ್ರತಿಯಾಗಿ ಭಾರತದ ಮೇಲೆ ದಾಳಿ – ಪಾಕ್ ನ 3 ಯುದ್ಧ ವಿಮಾನ, 50 ಮಿಸೈಲ್ ಢಮಾರ್!
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ ಈಗ ಎಲ್ಲಾ ಕಷ್ಟಗಳನ್ನ ಧೈರ್ಯದಿಂದ ಫೇಸ್ ಮಾಡಿ ಒಂದು ಹಂತಕ್ಕೆ ಬಂದಿದ್ದಾಳೆ. ತಾಂಡವ್ ಆಫೀನ್‌ನಲ್ಲೇ ಕ್ಯಾಂಟೀನ್ ಶುರುಮಾಡಿದ್ದಾಳೆ. ಆದ್ರೆ ಭಾಗ್ಯಳನ್ನ ಅವಮಾನ ಮಾಡಿದ್ದಕ್ಕೆ ಶ್ರೇಷ್ಠಾ ತಾಂಡವ್ ಕೆಲಸ ಕಳ್ಕೊಂಡಿದ್ರು. ತಾಂಡವ್ ದುರಹಂಕಾರ ತೋರಿಸಿದ್ರಿಂದ ಆತನಿಗೆ ಬೇರೆಲ್ಲೂ ಕೆಲಸ ಸಿಕ್ಕಿರ್ಲಿಲ್ಲ. ಇದನ್ನ ನೋಡಿ ಖುಷಿಪಡ್ಕೊಂಡು ಸುಮ್ಮನಿರ್ಬೇಕಿದ್ದ ಭಾಗ್ಯ, ಮತ್ತೆ ಪುಣ್ಯಕೋಟಿ ಆಗೋಕೆ ಹೊರಟಳು. ಬಾಸ್ ಬಳಿ ಮಾತನಾಡಿ.. ಮತ್ತೆ ಶ್ರೇಷ್ಠಾ – ತಾಂಡವ್‌ಗೆ ಕೆಲಸ ಕೊಡಿಸಿದಳು. ಆದ್ರೀಗ ಭಾಗ್ಯಗೆ ತಾಂಡವ್ ಮತ್ತೆ ಅಡ್ಡಿ ಆಗಿದ್ದಾನೆ. ಅಷ್ಟೇ ಅಷ್ಟೇ ಅಲ್ಲ ಪೂಜಾ ಮದುವೆಗೂ ತೊಂದರೆ ಕೊಡ್ತಿದ್ದಾನೆ.
ಹೌದು, ಭಾಗ್ಯ ಜೀವನ ಒಂದು ಹಂತಕ್ಕೆ ತಲುಪಿದೆ. ಎಲ್ಲವೂ ಒಂದು ಹಂತಕ್ಕೆ ಬರ್ತಿದ್ದಂತೆ ಭಾಗ್ಯ ಪೂಜಾಗೆ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಅಷ್ಟೇ ಅಲ್ಲ ಹುಡುಗಿ ನೋಡುವ ಶಾಸ್ತ್ರ ಕೂಡ ನಡೆದಿದೆ. ಭಾಗ್ಯ ಪೂಜಾ ಬಗ್ಗೆ ಇರೋದನ್ನೇ ಹುಡುಗನ ಕಡೆಯವರ ಮುಂದೆ ಹೇಳಿದ್ಲು.. ಇನ್ನೇನು ಮದುವೆ ಮಾತುಕತೆ ಶುರು ಮಾಡ್ಬೇಕು ಅನ್ನುವಷ್ಟರಲ್ಲಿ ತಾಂಡವ್ ವಂದು ಎಲ್ಲಾ ಹಾಳು ಮಾಡಿದ್ದಾನೆ. ಭಾಗ್ಯ ಗಂಡ ಬಿಟ್ಟವಳು ಎಂದು ಆತ ಹೀಯಾಳಿಸೋಕೆ ಆರಂಭಿಸಿದ. ತಾಂಡವ್ ಹೀಯಾಳಿಸೋದನ್ನ ನೋಡಿ ‘ಈ ಸಂಬಂಧ ಬೇಡ’ ಅಂತ ಗಂಡಿನ ಕಡೆಯವರು ಎದ್ದು ಹೊರಟರು. ಅದರಿಂದ ತಾನೇ ಗೆದ್ದೆ ಅಂತ ಜಂಭದಲ್ಲಿ ಮೆರೆದಿದ್ದಾನೆ. ಗಂಡನನ್ನು ಬಿಟ್ಟು ಹೇಗಿರ್ತೀಯಾ ಅಂತ ನಾನೂ ನೋಡ್ತೀನಿ ಅಂತ ತಾಂಡವ್ ಭಾಗ್ಯಗೆ ಸವಾಲು ಹಾಕಿದ್ದಾನೆ. ಬಳಿಕ ಮನೆಗೆ ಹೋದ ತಾಂಡವ್ ಮತ್ತೆ ಫೋನ್ ಮಾಡಿ ಭಾಗ್ಯಗೆ ಅವಮಾನ ಮಾಡಿದ್ದಾನೆ. ಈ ವೇಳೆ ಭಾಗ್ಯ ಸರಿಯಾಗೇ ಮಂಗಳಾರತಿ ಮಾಡಿದ್ದಾಳೆ. ಇದೀಗ ಭಾಗ್ಯಗೆ ಎರಡನೇ ಮದುವೆ ಫಿಕ್ಸ್ ಅಂತಾ ಸೀರಿಯಲ್ ಪ್ರೇಮಿಗಳು ಹೇಳ್ತಿದ್ದಾರೆ,.
ಹೌದು, ತಾಂಡವ್ ಪದೇ ಪದೇ ಭಾಗ್ಯ ಗಂಡ ಬಿಟ್ಟವಳು ಅಂತಾ ಹೀಯಾಳಿಸುತ್ತಾ ಬಂದಿದ್ದಾನೆ. ಪೂಜಾಳನ್ನ ನೋಡಲು ಬಂದಾಗಲೂ ಹೀಗೇ ಹೇಳಿ ಗಂಡಿನ ಕಡೆಯವರು ಎದ್ದು ಹೋಗುವಂತೆ ಮಾಡಿದ್ದ. ಇದೀಗ ಕುಸುಮಾ ತನ್ನ ಮುದ್ದಿನ ಸೊಸೆಗೆ ಎರಡನೇ ಮದುವೆ ಮಾಡಿಸೋದು ಪಕ್ಕಾ.. ಆಕೆ ಮೆಚ್ಚಿದ ಹುಡುನ ಜೊತೆಯೇ ಮದುವೆ ಮಾಡಿಸ್ತಾಳೆ ಅಂತಾ ವೀಕ್ಷಕರು ಹೇಳ್ತಿದ್ದಾರೆ, ಇನ್ನೂ ಕೆಲವರು ಭಾಗ್ಯಗೇ ಹೀಗೆ ಆಗ್ಬೇಕು, ಯಾಕೆಂದ್ರೆ ಇವನಿಗೆ ಕೆಲಸ ಹುಡುಕೋದ್ರಲ್ಲಿ ಪುರುಸೊತ್ತು ಇರ್ತಿರ್ಲಿಲ್ಲ.. ಈಗ ಇವಳೇ ಕೆಲಸ ಕೊಡಿಸಿ ಸಂಕಷ್ಟ ಸಿಲುಕಿದ್ದಾಳೆ. ’ಇದೆಲ್ಲಾ ಸೀರಿಯಲ್‌ನಲ್ಲಿ ಮಾತ್ರ ಅನ್ಸುತ್ತೆ. ನಿಜ ಜೀವನದಲ್ಲಿ ಯಾವ ಹೆಣ್ಣೂ ಇಷ್ಟೆಲ್ಲ ಸಹಿಸ್ಕೊಳಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.