ಕೆಲಸಕ್ಕಾಗಿ ತಾಂಡವ್ ಪರದಾಟ.. – ಭಾಗ್ಯ ಕಾಲು ಹಿಡಿದು ಕ್ಷಮೆ ಕೇಳ್ತಾನಾ?
ತಾಂಡವ್‌ಗೆ ಬೈ ಬೈ ಹೇಳಿದ ಶ್ರೇಷ್ಠಾ?

ತಾಂಡವ್ ಈಗ ದಾರಿ ತಪ್ಪಿದ ಮಗ.. ಯಾವಾಗ ಭಾಗ್ಯಳನ್ನ ಬಿಟ್ಟು ಬಂದ್ನೋ.. ಅಲ್ಲಿಂದ ಆತನ ಟೈಮ್ ಕೆಟ್ಟೋಗಿದೆ.. ಹೆಜ್ಜೆ ಹೆಜ್ಜೆಗೂ ಸೋಲು ಅನುಭವಿಸ್ತಾ ಬಂದಿದ್ದಾನೆ. ಶ್ರೇಷ್ಠಾಳನ್ನ ಮದುವೆಯಾದ ಬಳಿಕ ತಾಂಡವ್ ಗೆ ಒಳ್ಳೆ ಊಟಕ್ಕೂ ಗತಿ ಇಲ್ಲ.. ಆದ್ರೂ ಜಂಭ ಬಿಡಲ್ಲ.. ಭಾಗ್ಯಗೆ ಅವಮಾನ ಮಾಡ್ತಾನೆ ಬಂದಿದ್ದಾನೆ. ಭಾಗ್ಯಳನ್ನ ಹೀಯಾಳಿಸಿದ್ದಕ್ಕೆ ತಾಂಡವ್ ಹಾಗೂ ಶ್ರೇಷ್ಠಾ ಕೆಲಸ ಕಳ್ಕೊಂಡಿದ್ದಾರೆ.
ಇದನ್ನೂ ಓದಿ: ಡಿಸಿ ವಿರುದ್ಧ ಗೆದ್ದ ಕೆಕೆಆರ್ – ಕೋಲ್ಕತ್ತಾ ಪ್ಲೇ ಆಫ್ ಕನಸು ಇನ್ನೂ ಜೀವಂತ!
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ ಈಗ ಹಂತ ಹಂತವಾಗಿ ಸಕ್ಸಸ್ ಕಾಣ್ತಿದ್ದಾಳೆ. ಮನೆಯಿಂದಲೇ ಬ್ಯುಸಿನೆಸ್ ಶುರುಮಾಡಿದ್ದಾಕೆ ಈಗ ಕ್ಯಾಂಟಿನ್ ನಡೆಸುತ್ತಿದ್ದಾಳೆ. ತಾಂಡವ್ ಆಫೀಸ್ ನಲ್ಲೇ ಕ್ಯಾಂಟೀನ್ ನಡೆಸ್ತಿದ್ದಾಳೆ. ಭಾಗ್ಯ ಯಶಸ್ಸು ನೋಡಿದ ತಾಂಡವ್ ಹಾಗೂ ಶ್ರೇಷ್ಠಾ ಫುಲ್ ಉರ್ಕೊಂಡಿದ್ದಾರೆ. ಹೀಗಾಗಿ ಕ್ಯಾಂಟೀನ್ ಇನೋಗ್ರೇಷನ್ ದಿನವೇ ಭಾಗ್ಯ ಗೆ ಶ್ರೇಷ್ಠಾ ಹಾಗೂ ತಾಂಡವ್ ಅವಮಾನ ಮಾಡಿದ್ರು.. ಭಾಗ್ಯ ಬಗ್ಗೆ ಮನಬಂದಂತೆ ಮಾಡನಾಡಿದ್ರಿಂದ ತಾಂಡವ್ ಹಾಗೂ ಶ್ರೇಷ್ಠಾ ಕೆಲಸ ಕಳೆದುಕೊಳ್ಳುವಂತೆ ಆಗಿತ್ತು. ಇದೀಗ ತಾಂಡವ್ ಕೆಲಸಕ್ಕಾಗಿ ಪರದಾಡ್ತಿದ್ದಾನೆ.
ಹೌದು, ಭಾಗ್ಯಗೆ ಅವಮಾನ ಮಾಡಿದ್ದಕ್ಕೆ ಬಾಸ್ ತಾಂಡವ್ ಹಾಗೂ ಶ್ರೇಷ್ಠಾಳನ್ನ ಕೆಲಸದಿಂದ ತೆಗೆದುಹಾಕಿದ್ರು.. ಅದಾದ್ಮೇಲೆ ಬಾಸ್ ಬಳಿ ತಾನು ಬೆಸ್ಟ್ ಎಂಪ್ಲಾಯ್.. ತನ್ನಿಂದ ನಿಮಗೆ ತುಂಬಾ ಪ್ರಾಫಿಟ್ ಬಂದಿದೆ. ನನ್ನ ಯಾಕೆ ಕೆಲಸದಿಂದ ತೆಗೆದ್ರಿ ಅಂತಾ ಪ್ರಶ್ನೆ ಮಾಡಿದ್ದಾನೆ. ಆದ್ರೆ ಬಾಸ್ ಕಂಪನಿಯಲ್ಲಿ ಕೆಲ್ಸ ಮಾಡಿದ್ರೆ ಸಾಲದು.. ಒಳ್ಳೆ ಗುಣ ಬೇಕು.. ಸಂಬಂಧಗಳಿಗೆ ಬೆಲೆ ಕೊಡಬೇಕು ಅಂದಿದ್ದಾರೆ. ಅಷ್ಟೊತ್ತಿಗೆ ಶ್ರೇಷ್ಠಾ ರೂಲ್ಸ್ ಬಗ್ಗೆ ಮಾತನಾಡಿದ್ದಾಳೆ.. ಆಗ ಬಾಸ್ ಹೆಂಡತಿ ಆಕೆಗೂ ಸರಿಯಾಗಿ ಮಂಗಳಾರತಿ ಮಾಡಿ ಗೆಟ್‌ಔಟ್ ಎಂದು ಹೇಳಿದ್ದಾರೆ. ಇದೀಗ ತಾಂಡವ್ ಕೆಲಸ ಹುಡುಕ್ತಿದ್ದಾನೆ.. ಕೆಲಸದ ಆಫರ್ ಏನೋ ಆತನಿಗೆ ಬರ್ತಿದೆ.. ಆದ್ರೆ ಆತ ಕಂಪನಿ ಬಳಿ ತನ್ನನ್ನ ತಾನೇ ಹೊಗಳ್ತಿದ್ದಾನೆ.. ಬಳಿಕ ನಿಮ್ಮಂತಹ ಸಣ್ಣ ಪುಟ್ಟ ಕಂಪನಿಯಲ್ಲಿ ವರ್ಕ್ ಮಾಡಿದ್ರೆ ಪೆಸ್ಟೀಜ್ ಏನಾಗ್ಬೇಕು.. ನಾನು ನಿಮ್ಮ ಕಂಪನಿಯಲ್ಲಿ ವರ್ಕ್ ಮಾಡಲ್ಲ ಅಂತಾ ಹೇಳಿದ್ದಾನೆ. ತಾಂಡವ್ ವರ್ತನೆ ಈಗ ಆತನಿಗೆ ಕಂಟಕವಾಗ್ತಿದೆ.. ಇದೀಗ ಆತನಿಗೆ ಸುಲಭಕ್ಕೆ ಕೆಲಸ ಸಿಗೋದು ಡೌಟ್.. ಆತ ತಗ್ಗಿ ಬಗ್ಗಿ ನಡೆದ್ರೇನೆ ಒಳ್ಳೆದಾಗೋದು..
ಇದೀಗ ಸೀರಿಯಲ್ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ತಾಂಡವ್ ಬುದ್ಧಿ ಬರೋದೆ ಇಲ್ಲ ಅಂತಾ ಕಾಣುತ್ತೆ.. ಹೋದಲೆಲ್ಲಾ ಹೀಗೆ ದರ್ಪ ತೋರಿಸಿದ್ರೆ ಈ ಜನ್ಮದಲ್ಲೂ ಕೆಲಸ ಸಿಗಲ್ಲ.. ಕೆಲಸ ಇಲ್ಲ ಅಂತಾ ಶ್ರೇಷ್ಠಾ ಆತನನ್ನ ಬಿಟ್ಟು ಹೋಗ್ತಾಳೆ.. ಕಡೆಗೆ ಆತನಿಗೆ ಭಾಗ್ಯನೇ ಗತಿ.. ಭಾಗ್ಯ ಕಾಲಿಡ್ಕೊಂಡು ಆತ ಕ್ಷಮೆ ಕೇಳ್ತಾನೆ.. ಅವಳಿಂದಾನೇ ಮತ್ತೆ ಆತನಿಗೆ ಕೆಲಸ ಸಿಗುತ್ತೆ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.. ಇನ್ನೂ ಕೆಲವರು, ಇಷ್ಟೊಂದು ಬಿಲ್ಡಪ್ ತಾಗೊಳವ್ನು ಇಷ್ಟು ವರ್ಷಗಳಲ್ಲಿ ಸ್ವಂತ ಕಂಪೆನಿ ಕಟ್ಟಬಹುದಿತ್ತಲ್ವ… ಬೇರೆಯವರ ಕೈ ಕೆಳಗಡೆ ಯಾಕೆ ಕೆಲ್ಸ ಮಾಡಬೇಕಿತ್ತು.. ಹೊಟ್ಟೆಗೆ ಊಟ ಇಲ್ಲದ ಪರಿಸ್ಥಿತಿನ ಅವರಿಬ್ಬರೂ ಎದುರಿಸಬೇಕು.. ತಾಂಡವ್ ಮತ್ತು ಶ್ರೇಷ್ಠ ಗೆ ಕೆಲಸ ಸಿಗಬಾರದು ಅಂತಾ ಹೇಳಿದ್ದಾರೆ.