ಭಾಗ್ಯ ಬ್ಯುಸಿನೆಸ್‌ಗೆ ಬೆಪ್ಪಾದ ತಾಂಡವ್ – ಶ್ರೇಷ್ಠಾ ಫುಡ್ ಆರ್ಡರ್ ಆಟ ರಿವೀಲ್
ಭಾಗ್ಯಗೆ ಎಷ್ಟೇ ಕೆಟ್ಟದು ಮಾಡಲು ಹೊರಟ್ರು ತಾಂಡವ್ ಹಾಗೂ ಶ್ರೇಷ್ಠಾ ಸೋಲ್ತಾನೆ ಬರ್ತಿದ್ದಾರೆ. ಒಂದಲ್ಲ ಒಂದು ವಿಚಾರವಾಗಿ ತಾಂಡವ್ ಭಾಗ್ಯ ಮುಂದೆ ಸಿಕ್ಕಿ ಬೀಳ್ತಿದ್ದಾನೆ. ಇದೀಗ ಊಟದ ವಿಚಾರದಲ್ಲೂ ಹೀಗೆ ಆಗಿದೆ. ಭಾಗ್ಯ ಮುಂದೆ ತಾಂಡವ್ ಸೋಲೊಪ್ಪುವಂತೆ ಆಗಿದೆ. ಇತ್ತ ಕುಸುಮಾ ಕನ್ನಿಕಾಗೆ ಸರಿಯಾಗೇ ಶಾಕ್ ಕೊಟ್ಟಿದ್ದಾಳೆ. ಕನ್ನಿಕಾ ಆಫೀಸ್ ಗೆ ಹೋಗಿ ದೊಡ್ಡ ಡ್ರಾಮಾ ಮಾಡಿದ್ದಾಳೆ. ಕನ್ನಿಕಾ ಕೆಟ್ಟವಳು ಅಂತಾ ಎಲ್ಲರ ಮುಂದೆ ಬಯಲು ಮಾಡಿದ್ದಾಳೆ.
ಇದನ್ನೂ ಓದಿ: RCBಗೆ ಅಯ್ಯರ್ ಬರದಿದ್ದೇ ಅದೃಷ್ಟ -₹23.50 ಕೋಟಿ ವೇಸ್ಟ್ ಆಗುತ್ತಿತ್ತಾ?
ಭ್ಯಾಗ್ಯಲಕ್ಷ್ಮೀ ಸೀರಿಯಲ್ ಸ್ಟೋರಿ ಭಾಗ್ಯ ಅಡುಗೆ ಸುತ್ತಲೇ ಸುತ್ತಿತ್ತಿದೆ. ಇದ್ದ ಎಲ್ಲಾ ಕೆಲ್ಸ ಕಳ್ಕೊಂಡಿರೋ ಭಾಗ್ಯ ಹೊಸ ಬ್ಯುಸಿನೆಸ್ ಶುರುಮಾಡ್ಕೊಂಡಿದ್ದಾಳೆ. ಕೈತುತ್ತು ಮೂಲಕ ಅನೇಕರ ಹೊಟ್ಟೆ ತುಂಬಿಸುತ್ತಿದ್ದಾಳೆ. ಆದ್ರೆ ಭಾಗ್ಯ ಮೇಲೆ ಸೇಡು ತೀರಿಸಿಕೊಳ್ಳಲು ತಾಂಡವ್, ಶ್ರೇಷ್ಠಾ ಹಾಗೂ ಕನ್ನಿಕಾ ಜೊತೆ ಸೇರ್ಕೊಂಡಿದ್ದಾರೆ. ಭಾಗ್ಯ ಹೊಸ ಬ್ಯುಸಿನೆಸ್ ನ ಸ್ಟಾಪ್ ಮಾಡ್ಬೇಕು ಅಂತಾ ಕನ್ನಿಕಾ ಏನೇನೋ ಕುತಂತ್ರ ಮಾಡಿದ್ಲು.. ಭಾಗ್ಯ ಮನೆಗೆ ಫುಡ್ ಆಫೀಸರ್ಸ್ ರೈಡ್ ಮಾಡಿಸಿದ್ಲು.. ಆದ್ರೆ ಭಾಗ್ಯ ಕನ್ನಿಕಾ ಆಟಕ್ಕೆ ಬ್ರೇಕ್ ಹಾಕಿಸಿದ್ದಾಳೆ. ಫುಡ್ ಆಫೀಸರ್ ಬಣ್ಣ ಬಯಲು ಮಾಡಿ ಮೇಲಾಧಿಕಾರಿಗಳಿಗೆ ತಿಳಿಸಿದ್ದಾಳೆ. ಬಳಿಕ ಫುಡ್ ಆಫೀಸರ್ ಭಾಗ್ಯಗೆ ಲೈಸನ್ಸ್ ಕೊಟ್ಟಿದ್ದಾರೆ. ಆದ್ರೀಗ ಕುಸುಮಾ ಕನ್ನಿಕಾಗೆ ಸರಿಯಾಗೇ ಪಾಠ ಕಲಿಸಲು ಮುಂದಾಗಿದ್ದಾಳೆ. ಹೀಗಾಗಿ ಕುಸುಮಾ ಕನ್ನಿಕಾ ಆಫೀಸ್ ನಲ್ಲಿ ಹೊಸ ಆಟ ಶುರುಮಾಡ್ಕೊಂಡಿದ್ದಾಳೆ.
ಕುಸುಮಾ 30 ಜನರಿಗೆ ಅಡುಗೆ ಮಾಡುವಂತೆ ಭಾಗ್ಯಗೆ ಹೇಳಿದ್ದಾಳೆ. ಬಳಿಕ ಚೆನ್ನಾಗಿ ರೆಡಿಯಾಗಿ ಸೊಸೆಗೂ ರೆಡಿಯಾಗುವಂತೆ ಹೇಳಿದ್ದಾಳೆ. ಅತ್ತೆ ಹೇಳಿದನ್ನ ಭಾಗ್ಯ ಕೂಡ ಚಾಚು ತಪ್ಪದೇ ಮಾಡಿದ್ದಾಳೆ. ಬಳಿಕ ಕುಸುಮಾ ಭಾಗ್ಯ ಹಾಗೂ ಸುಂದರಿ ಜೊತೆ ಕನ್ನಿಕಾ ಆಫೀಸ್ ಬಂದಿದ್ದಾಳೆ. ಕನ್ನಿಕಾ ಆಫೀಸ್‌ನಲ್ಲಿ ಕೆಲ್ಸ ಮಾಡುವವರಿಗೆ ಊಟ ಕೊಟ್ಟಿದ್ದಾಳೆ. ಬಳಿಕ ಈ ನಿಮ್ಮ ಬಾಸ್ ಕೆಳಗೆ ಕೆಲ್ಸ ಮಾಡಿದ್ರೆ ಒಳ್ಳೆ ಜೀವನ, ದೊಡ್ಡ ದೊಡ್ಡ ಕನಸುಗಳು ಇವೆಲ್ಲಾ ಕನಸಾಗೆ ಉಳಿಯುತ್ತೆ.. ಕನ್ನಿಕಾ ಎದುರೇ ನಿಮ್ಮ ಬಾಸ್ ಕೆಟ್ಟವಳು. ಜಗತ್ತಲ್ಲಿ ಮಾಡಬಾರದ ಕೆಲ್ಸ ಮಾಡಿದ್ದಾಳೆ. ಇನ್ನೊಬ್ರ ಲೈಪ್ ಹಾಳು ಮಾಡ್ತಾಳೆ ಅಂತಾ ಕುಸುಮಾ ಹೇಳಿದ್ದಾಳೆ. ಇದ್ರಿಂದ ಕನ್ನಿಕ ಕಂಪನಿಯಲ್ಲಿ ಕೆಲ್ಸ ಮಾಡೋರು ಶಾಕ್ ಆಗಿದ್ದಾರೆ.
ಮತ್ತೊಂದ್ಕಡೆ ಭಾಗ್ಯಗೆ ಲೈಸನ್ಸ್ ಸಿಕ್ತಿದ್ದಂತೆ ತಾಂಡವ್ ಫುಲ್ ಉರ್ಕೊಂಡಿದ್ದಾನೆ. ಹೀಗಾಗಿ ಆಕೆಗೆ ಅವಮಾನ ಮಾಡ್ಬೇಕು ಅಂತಾ ಭಾಗ್ಯ ಬಳಿ ಓಡೋಡಿ ಬಂದಿದ್ದಾನೆ. ಭಾಗ್ಯ ಮಾಡಿದ ಅಡುಗೆಯನ್ನೇ ತಂದು.. ಜಗತ್ತಲ್ಲಿ ಚೆನ್ನಾಗಿ ಅಡುಗೆ ಮಾಡೋಳು ನೀನೇ ಅಂತಾ ಕೊಚ್ಚಿಕೊಳ್ತಿದ್ಯಲ್ಲ.. ನಿನ್ನಕ್ಕಿಂತ ಚೆನ್ನಾಗಿ ಅಡುಗೆ ಮಾಡೋರು ಇದ್ದಾರೆ ಅಂತಾ ಭಾಗ್ಯ ಮಾಡಿರೋ ಅಡುಗೆಯನ್ನೇ ತಂದು ಕೊಟ್ಟಿದ್ದಾನೆ, ಆದ್ರೆ ಭಾಗ್ಯ ತಾಂಡವ್ ಗೆ ಶಾಕ್ ಕೊಟ್ಟಿದ್ದಾಳೆ. ತನ್ನ ಅಡುಗೆ ಬ್ಯುಸಿನೆಸ್‌ನ ಪೋಸ್ಟರ್ ತಂದು ತಾಂಡವ್ ಕೈಗೆ ಕೊಟ್ಟಿದ್ದಾಳೆ. ಇದ್ರಿಂದ ತಾಂಡವ್ ಫುಲ್ ಶಾಕ್ ಆಗಿದ್ದಾನೆ. ಶ್ರೇಷ್ಠಾ ಆರ್ಡರ್ ಮಾಡ್ತಿದ್ದಿದ್ದು ಇಲ್ಲಿಂದಲೇ ಅಂತಾ ಗೊತ್ತಾಗಿದೆ. ಇದೀಗ ಭಾಗ್ಯ ತಾಂಡವ್ ಭಾಗ್ಯ ಬ್ಯುಸಿನೆಸ್ ಗೆ ಗ್ರೀನ್ ಸಿಗ್ನಲ್ ಕೊಡೋ ಚಾನ್ಸ್ ಇರುತ್ತೆ. ಯಾಕಂದ್ರೆ ಶ್ರೇಷ್ಠಾ ಮಾಡೋ ಅಡುಗೆ ತಿನ್ನೋಕೆ ಆಗಲ್ಲ. ಹೋಟೆಲ್ ಅಡುಗೆ ತಿಂದ್ರೆ ಆತನಿಗೆ ಫುಡ್ ಪಾಯಿಸನ್ ಆಗೋ ಸಾಧ್ಯತೆ ಇರುತ್ತೆ. ಹೀಗಾಗಿ ಆತ ಇನ್ನು ಭಾಗ್ಯ ಬ್ಯುಸಿನೆಸ್ ಆತ ತೊಂದರೆ ಕೊಡ್ಲಿಕ್ಕೆ ಇಲ್ಲ.

ನೋಡಿರಿ

