ಭಗಾಯ ಕೆಲಸ ಕಿತ್ತುಕೊಂಡ್ಲಾ ಭಾಗ್ಯ? – ಕುಸುಮಾ ಓವರ್ ಆ ಆಯ್ತಾ?
ಅತ್ತೆ ಸೊಸೆಯರ ಫಜೀತಿ ಎಲ್ಲೀವರೆಗೆ?
ಭಾಗ್ಯ ಲಕ್ಷ್ಮೀ ಸೀರಿಯಲ್ ನಲ್ಲಿ ಅತ್ತೆ ಸೊಸೆ ಈಗ ಕೆಲಸಕ್ಕೆ ಸೇರಿದ್ದಾರೆ. ಕುಸುಮಾ ಸಣ್ಣ ಹೋಟೇಲ್ ನಲ್ಲಿ ಕೆಲಸಕ್ಕೆ ಸೇರಿದ್ರೆ ಭಾಗ್ಯ 5 ಸ್ಟಾರ್ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಫಸ್ಟ್ ಡೇ ನೆ ಇಬ್ಬರು ಕೆಲಸಕ್ಕೆ ತಡವಾಗಿ ಹೋಗಿದ್ದಾರೆ.. ಕೆಲಸಕ್ಕೆ ತಡವಾಗಿ ಬಂದರೂ ಕುಸುಮಾ ಹೋಟೆಲ್ ಕೆಲಸಗಾರರು, ಮ್ಯಾನೇಜರ್‌ನನ್ನು ದಬಾಯಿಸಿ ಕೆಲಸ ಶುರು ಮಾಡುತ್ತಾಳೆ. ಇತ್ತ ಭಾಗ್ಯಾ ತಾನು ಏನು ಕೆಲಸ ಮಾಡಬೇಕು ಎಂದು ಕೂಡಾ ತಿಳಿಯದೆ ಹೋಟೆಲ್‌ಗೆ ಎಂಟ್ರಿ ಕೊಡುತ್ತಾಳೆ. ಇವಳನ್ನ ಮ್ಯಾನೇಜರ್ ಪ್ರಶ್ನೆ ಮಾಡಿದಾಗ ಏನು ಹೇಳಬೇಕೆಂದು ಗೊತ್ತಾಗದೆ ಗಾಬರಿಯಾಗುತ್ತಾಳೆ. ಬಳಿಕ ಏನೋ ಒಂದು ಕಾರಣವೆಂದರೆ ಹೇಳಿ ಸಮಜಾಯಿಷಿ ನೀಡುತ್ತಾಳೆ.. ಆದ್ರೆ ಈಗ ವೀಕ್ಷಕರಿಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿವೆ.. ಭಾಗ್ಯ ಹೇಗೆ ಭಗಾಯ ಆದ್ಲು? ಇಂಟರ್ವ್ಯೂ ನಲ್ಲಿ ಭಾಗ್ಯನಾ ಹೇಗೆ ಸೆಲೆಕ್ಟ್ ಮಾಡಿದ್ರು? ಸೀರಿಯಲ್ ಟೀಂ ಯಾಕೆ ಇಷ್ಟೊಂದು ಎಡವಟ್ಟು ಮಾಡತ್ತಿದೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿವೆ..
ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಟೀಂ ಗೆ ಎದುರಾಯ್ತು ಹೊಸ ಸಂಕಷ್ಟ! – ಶೂಟಿಂಗ್ ಮುಂದೂಡಿದ ಟೀಮ್!
ಕುಸುಮಾ ಹಾಗೂ ಭಾಗ್ಯ ಮೊದಲ ದಿನವೇ ಕೆಲಸಕ್ಕೆ ಲೇಟ್ ಆಗಿ ಬಂದಿದ್ದಾರೆ.. ಲೇಟ್ ಆಗಿ ಬಂದಿದ್ದನ್ನ ಪ್ರಶ್ನೆ ಮಾಡ್ತಾರೆ.. ಇನ್ನುಮುಂದೆ ಕೆಲಸಕ್ಕೆ ಸರಿಯಾಗಿ ಬರಬೇಕು ಅಂತಾ ಹೇಳಿ ಕೆಲಸ ಮಾಡುವಂತೆ ಹೇಳ್ತಾರೆ. ಮೊದಲ ದಿನ ಭಾಗ್ಯಾಗೆ ಯೂನಿಫಾರ್ಮ್ ನೀಡಲಾಗಿದೆ. ಆದರೆ ಅದನ್ನು ಹೇಗೆ ಧರಿಸಬೇಕು ಎಂಬೆಲ್ಲಾ ಗೊಂದಲದಲ್ಲಿದ್ದಾಳೆ ಭಾಗ್ಯ. ಹಿತಾಳನ್ನು ಈ ಬಗ್ಗೆ ಕೇಳಿದಾಗ, ಭಾಗ್ಯ ಎಂದರೆ ಬೇರೆ ಯಾರೋ ಎಂದು ತಿಳಿದುಕೊಂಡಿರುವ ಆಕೆ, ಏನು ತಮಾಷೆ ಮಾಡುತ್ತಿದ್ದೀರಾ ಎನ್ನುತ್ತಲೇ ನಕ್ಕಿದ್ದಾಳೆ. ಅದೇ ವೇಳೆ ಇನ್ನೊಬ್ಬಳು ಕೆಲಸದಾಕೆ ಬಂದು ಭಗಾಯಾ ಮೇಡಂ ಎಂದು ಮಾತನಾಡಿಸುತ್ತಾಳೆ. ನಾನು ಭಗಾಯಾ ಅಲ್ಲ ಭಾಗ್ಯ ಎನ್ನುತ್ತಾಳೆ ಭಾಗ್ಯ. ನಂತರ ಆಕೆ ಭಾಗ್ಯಳನ್ನು ಇನ್ನಾರೋ ಎಂದು ತಿಳಿದುಕೊಂಡು, ನಮ್ಮ ಕಾಲೇಜಿನಲ್ಲಿ ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ. ನಮ್ಮ ಸೀನಿಯರ್ಸ್ ನಿಮ್ಮ ಬಗ್ಗೆ ಮಾತನಾಡುತ್ತಾರೆ, ನಿಮ್ಮ ಬಗ್ಗೆ ಹೇಳುತ್ತಿರುತ್ತಾರೆ. ನೀವು ಕನ್ನಡದವರು ಎಂದು ತಿಳಿದು ತುಂಬಾ ಸಂತೋಷವಾಯಿತು ಎಂದು ಹೇಳಿ ಹೋಗುತ್ತಾಳೆ. ಈಗ ಭಾಗ್ಯ ಕಕ್ಕಾಬಿಕ್ಕಿಯಾಗುತ್ತಾಳೆ.
ಇಲ್ಲೇನೋ ಎಡವಟ್ಟು ನಡೆಯುತ್ತಿದೆ ಎಂದು ಭಾಗ್ಯಳಿಗೆ ಎನ್ನಿಸಿದರೂ ಅದೇನು ಎಂದು ತಿಳಿಯುವುದೇ ಇಲ್ಲ. ತನ್ನನ್ನು ಬೇರೆ ಯಾರೋ ಎಂದು ಅಂದುಕೊಂಡಿದ್ದಾರೆ ಎನ್ನುವುದನ್ನೂ ತಿಳಿಯದೇ ಭಾಗ್ಯ ಫುಲ್ ಕನ್ಫ್ಯೂಸ್ ಆಗುತ್ತಾಳೆ. ನಂತರ ಡ್ರೆಸ್ ಮಾಡಿಕೊಳ್ಳಲು ಕೋಣೆಯೊಳಕ್ಕೆ ಹೋಗುತ್ತಾಳೆ. ಹೊಸ ಡ್ರೆಸ್ನಲ್ಲಿ ಭಾಗ್ಯ ಹೇಗೆ ಕಾಣಿಸಬಹುದು ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದರೆ, ಈ ಭಗಾಯಾ ಯಾರು ಎಂಬ ಪ್ರಶ್ನೆ ಮೂಡುತ್ತಿದೆ. ಭಗಾಯಾ ಎಂಬಾಕೆಯನ್ನೇ ಭಾಗ್ಯ ಎಂದು ಅಂದುಕೊಂಡಿದ್ದಾರಾ? ಅವಳೇ ಎಂದುಕೊಂಡು ಭಾಗ್ಯಳಿಗೆ ಕೆಲಸ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಭಾಗ್ಯಲಕ್ಷ್ಮಿ ಸೀರಿಯಲ್ ಫ್ಯಾನ್ಸ್ ಮುಂದಿದೆ. ಒಂದು ವೇಳೆ ಅಸಲಿ ಭಗಾಯಾ ಬಂದರೆ ಭಾಗ್ಯಳ ಕಥೆ ಏನಾಗುತ್ತದೆ? ಸುಳ್ಳು ಹೇಳಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಎಂದು ಅವಮಾನ ಮಾಡಲಾಗುತ್ತದೆಯೇ ಎಂಬ ಆತಂಕವೂ ಅಭಿಮಾನಿಗಳದ್ದು. ಇನ್ನು ಸೀರಿಯಲ್ ಫ್ಯಾನ್ಸ್ ಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿವೆ. 5 ಸ್ಟಾರ್ ಹೋಟೆಲ್ ಅಂದ ಮೇಲೆ ಕೆಲಸಕ್ಕೆ ಸೂಕ್ತ ವ್ಯಕ್ತಿಯನ್ನೇ ಆಯ್ಕೆ ಮಾಡ್ಬೇಕು.. ಇಂಟರ್ವ್ಯೂ ನಲ್ಲಿ ಆ ವ್ಯಕ್ತಿ ಕೆಲಸಕ್ಕೆ ಸಮರ್ಥರಾಗಿ ಇದ್ದಾರೆಯೇ? ಅವರಿಗೆ ಯಾವ ಯಾವ ಭಾಷೆ ಗೊತ್ತಿದೆ? ಕೆಲಸ ಸರಿಯಾಗಿ ಮಾಡಲು ಬರುತ್ತಾ? ಹೀಗೆ ಎಲ್ಲವನ್ನೂ ಕೆಳಲಾಗುತ್ತೆ. ಆದ್ರೆ ಭಾಗ್ಯ ಇಂಟರ್ವ್ಯೂನಲ್ಲಿ ಭಾಗ್ಯಗೆ ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಾ ಎಂದು ಕೇಳಲಾಗುತ್ತದೆ. ಅದಕ್ಕೆ ಆಕೆ ಕನ್ನಡದಲ್ಲೇ ಮಾತನಾಡುತ್ತಾಳೆ. ಈ ವೇಳೆಯೂ ಭಾಗ್ಯಗೆ ಇಂಗ್ಲಿಷ್ ಬರಲ್ಲ.. ಆಕೆ ಈ ಕೆಲಸಕ್ಕೆ ಸಮರ್ಥಳಲ್ಲಾ ಅಂತ ಇಂಟರ್ವ್ಯೂ ಮಾಡುತ್ತಿರುವವರಿಗೆ ಗೊತ್ತಾಗಿಲ್ಲ. ಅವರು ಬಂದವರು ಅಷ್ಟೊಂದು ದಡ್ಡರಾ ಅಂತಾ ವೀಕ್ಷಕರು ಕೇಳ್ತಾ ಇದ್ದಾರೆ..
ಇನ್ನು ಇಂಟರ್ವ್ಯೂನಲ್ಲಿ ಪ್ರಶ್ನೆ ಕೇಳಿರುವುದು ಅಡುಗೆ ಮಾಡಲು ಬರುತ್ತಾ ಅಂತ .. ಕೆಲಸಕ್ಕೆ ತೆಗೊಂಡಿದ್ದು ಚೆಫ್ ಆಗಿ.. ಮಾಡೋದು ವೈಟರ್ ಕೆಲ್ಸಾ ನಾ…. ಒಂದು ಭಾಷೆ ಗೊತ್ತಿಲ್ಲದಾಗಿನ ಅಭಿನಯ ಬೇರೆ… ಪೆದ್ದುತನದ ಅಭಿನಯ ಬೇರೆ ಅಂತ ಭಾಗ್ಯಳಿಗೆ ಡೈರಕ್ಟರ್ ಹೇಳಿಕೊಡ್ಬೇಕು …ನೋಡೋರು ಮೂರ್ಖರಲ್ಲ ಅಂತಾ ಒಬ್ಬರು ಹೇಳಿದ್ರೆ.. ಇನ್ನೊಬ್ಬರು ಅತ್ತೆಯೆ ವಾಸಿ.. ಅದ್ಯಾಕೆ ಭಾಗ್ಯ ಬೆಬೆಬೆ ಅಂತ ಆಗುತ್ತಾಳೋ ದೇವರೇ ಬಲ್ಲ.. ಪಾಪ.. ಮದುವೆ ಆದಾಗಿನಿಂದ ಗಂಡನ ಹತ್ತಿರ ಮಾತನ್ನು ಕೇಳಿ ಕೇಳಿ ಹಾಗಾಗಿ ಹೋಗಿದ್ದಾಳೆ ಸ್ವಂತಿಕೆ ಇಲ್ಲವೇ ಇಲ್ಲ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನು ತನ್ವಿ ಇಂಗ್ಲೀಷ್ ಮೀಡಿಯಂನಲ್ಲಿ ಓದಿದ್ದು. ಭಾಗ್ಯ ಕೂಡ ಅದೇ ಸ್ಕೂಲ್ ಭಾಗ್ಯ ಓದಿದ್ದು.. ಇಂಗ್ಲಿಷ್ ಬರದವಳು ಅದು ಹೇಗೆ 10 ನೇ ಕ್ಲಾಸ್ ಪಾಸ್ ಆದ್ಲು ಅಂತ ವೀಕ್ಷಕರು ಕೇಳ್ತಿದ್ದಾರೆ.
ಇನ್ನೂ ಭಗಾಯಳ ಕೆಲಸ ಭಾಗ್ಯಾಗೆ ಸಿಕ್ಕಿದೆ ಅಂತಾ ತೋರಿಸಲಾಗಿದೆ.. ಆದ್ರೆ ವೀಕ್ಷಕರು ಭಗಾಯ ಅನ್ನೋ ಹೆಸ್ರು ಇದ್ಯಾ? ಅದ್ಯಾಕೆ ಸ್ಕ್ರಿಪ್ಟ್ ರೈಟರ್ ಭಗಾಯ ಅಂತಾ ಹೆಸ್ರು ಇಟ್ಟಿದ್ದಾರೆ? ಗೂಗಲ್ ಮಾಡಿದ್ರೂ ಇಂತಾ ಹೆಸ್ರು ಸಿಗ್ತಿಲ್ಲಾ? ವಿಕ್ಷಕರನ್ನು ಮಂಗ ಮಾಡಲು ಹೀಗೆಲ್ಲಾ ಮಾಡ್ಬೇಕಾ ಅಂತಾ ಪ್ರಶ್ನೆ ಮಾಡಿದ್ದಾರೆ..
ಇನ್ನು ಕುಸುಮಾ ಕೆಲ್ಸಕ್ಕೆ ಹೋದ ದಿನವೇ ಅಲ್ಲಿರುವವರಿಗೆ ದಬಾಯಿಸುತ್ತಾಳೆ.. ಮ್ಯಾನೇಜರ್, ಸೀನಿಯರ್ ಅಂತಾನೂ ನೋಡದೇ ತನ್ನ ದರ್ಪ ತೋರಿಸುತ್ತಾರೆ.. ಸಾಮಾನ್ಯವಾಗಿ ಮೊದಲ ದಿನ ಕೆಲಸಕ್ಕೆ ಹೋದಾಗ ಎಲ್ಲರಿಗೂ ಸ್ವಲ್ಪ ಭಯ ಇರುತ್ತೆ.. ಇನ್ನು ಅಲ್ಲಿ ಸೀನಿಯರ್ಸ್ ಮುಂದೆ ತಗ್ಗಿ ಬಗ್ಗಿ ನಡೆದುಕೊಳ್ಳುತ್ತೇವೆ.. ಆದ್ರೆ ಕುಸುಮಾ ಮೊದಲ ದಿನವೇ ಅಲ್ಲಿ ದಮಾಯಿಸುತ್ತಿರುವುದು ಆಭಾಸವಾಗಿ ಕಾಣಿಸುತ್ತಿದೆ.. ಕುಸುಮಾ ಓವರ್ ಆಕ್ಟಿಂಗ್ ನಿಲ್ಲಿಸಲಿ ಅಂತಾ ವೀಕ್ಷಕರು ಹೇಳ್ತಾ ಇದ್ದಾರೆ..
ಇನ್ನು ಕುಸುಮಾ ಭಾಗ್ಯ ಇಬ್ಬರು ಮನೆಯಲ್ಲಿ ಸುಳ್ಳು ಹೇಳಿ ಕೆಲಸಕ್ಕೆ ಹೋಗ್ತಿದ್ದಾರೆ. ಮನೆಯವರಿಗೆ ಇವರಿಬ್ಬರು ಕೆಲಸಕ್ಕೆ ಹೋಗುವುದು ಗೊತ್ತಿಲ್ಲ.. ಇಬ್ಬರೂ ಬೆಳಿಗ್ಗೆ ಹೋಗಿ ಸಂಜೆ ಮನೆಗೆ ಬರುವುದನ್ನು ನೋಡುವ ತಾಂಡವ್ ಮತ್ತು ಮನೆಯವರ ಎದುರು ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ ಈ ಅತ್ತೆ- ಸೊಸೆ ಎನ್ನುವುದು ಮುಂದಿರುವ ಕುತೂಹಲ.