ಭಾಗ್ಯಲಕ್ಷ್ಮೀ ಮಹಾಸಂಚಿಕೆ ಸಂಕಟ! – ಮದುವೆ ಕಾರ್ಡ್‌ ಗಾಗಿ ತಾಂಡವ್‌ ಹೋರಾಟ
ವೀಕ್ಷಕರ ಭಾವನೆಗೆ ಬೆಲೆಯೇ ಇಲ್ವಾ?

ಭಾಗ್ಯಲಕ್ಷ್ಮೀ ಮಹಾಸಂಚಿಕೆ ಸಂಕಟ! – ಮದುವೆ ಕಾರ್ಡ್‌ ಗಾಗಿ ತಾಂಡವ್‌ ಹೋರಾಟವೀಕ್ಷಕರ ಭಾವನೆಗೆ ಬೆಲೆಯೇ ಇಲ್ವಾ?

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಭಾಗ್ಯಲಕ್ಷ್ಮೀ ಸೀರಿಯಲ್ ನ ಕತೆ ರೋಚಕ ತಿರುವು ಪಡೆದುಕೊಂಡಿದೆ.. ಮನೆ ನಡೆಸಲು ಭಾಗ್ಯ, ಕುಸುಮಾ ಕೆಲಸಕ್ಕೆ ಸೇರಿದ್ದಾರೆ.. ಆದ್ರೆ ತಾಂಡವ್ ಮಾತ್ರ ಶ್ರೇಷ್ಠಾ ಹಿಂದೆ ಸುತ್ತಾಡುತ್ತಾ ಮಜಾ ಮಾಡ್ತಾ ಇದ್ದಾನೆ.. ಶ್ರೇಷ್ಠ ತಾಂಡವ್ ನ ಮದುವೆ ಆಗ್ಬೇಕು ಅಂತ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾನೆ.. ಈಗ ತಾಂಡವ್ ಶೇಷ್ಠಾ ಮದುವೆ ಕಾರ್ಡ್ ಭಾಗ್ಯ ಕೈಗೆ ಸಿಕ್ಕಿದೆ..  ಶ್ರೇಷ್ಠ, ತಾಂಡವ್ ಮದುವೆ ವಿಚಾರ ಭಾಗ್ಯ, ಕುಸುಮಾಗೆ ಗೊತ್ತಾಗತ್ತಾ ಅನ್ನೋದನ್ನ ಸೀರಿಯಲ್ ನಲ್ಲಿ ತೋರಿಸಲಾಗುತ್ತಿದೆ.. ಹೀಗಾಗಿ ಕಳೆದ ನಾಲ್ಕು ದಿನಗಳಿಂದ ಒಂದು ಗಂಟೆಯ ಮಹಾಸಂಚಿಕೆ ಪ್ರಸಾರ ಮಾಡಲಾಗ್ತಿದೆ.. ಆದ್ರೆ ಇದೀಗ ಈ ಮಹಾಸಂಚಿಕೆ ವೀಕ್ಷಕರಿಗೆ ನಿರಾಸೆ ಮೂಡಿಸಿದೆ.. ಸೀರಿಯಲ್ ತಂಡದ ವಿರುದ್ದ ಗರಂ ಆಗಿದ್ದಾರೆ.. ಅಷ್ಟಕ್ಕೂ ಸೀರಿಯಲ್ ಫ್ಯಾನ್ಸ್ ಸಿಟ್ಟಾಗಿದ್ದೇಕೆ? ಭಾಗ್ಯಗೆ ತಾಂಡವ್ ಮದುವೆ ವಿಚಾರ ಗೊತ್ತಾಗುತ್ತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಬ್ಬಬ್ಬಾ.. ಹಾವುಗಳೊಂದಿಗೆ ಟೈಮ್‌ ಪಾಸ್‌ ಮಾಡುತ್ತಾಳೆ ಈ ಮಹಿಳೆ!

ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಕಳೆದ ನಾಲ್ಕು  ದಿನಗಳಿಂದ ಮಹಾಸಂಚಿಕೆ ಪ್ರಸಾರ ಆಗುತ್ತಿದೆ. ಈ ಸೀರಿಯಲ್ ನಲ್ಲಿರುವ ಅತ್ತೆ ಸೊಸೆ ಕಾಂಬೀನೇಷನ್ ಎಲ್ಲರಿಗೂ ಇಷ್ಟ.. ಸೊಸೆಗೆ ಏನೇ ಕಷ್ಟ ಬಂದರೂ  ಕುಸುಮಾ ಜೊತೆಯಾಗಿ ನಿಲ್ಲುತ್ತಾಳೆ. ಮಗ ಅಂತಾನೂ ನೋಡದೇ ತಾಂಡವ್ ಗೂ  ಗ್ರಹಚಾರ ಬಿಡಿಸ್ತಾಳೆ. ಸಂಸಾರ ಸರಿಯಾಗಬೇಕೆಂದರೆ ಮಗ ಸೊಸೆ ಸರಿಯಾಗಿರಬೇಕೆಂದೆ ಬಯಸುತ್ತಾಳೆ.  ಕುಸುಮಾ ಮಗನನ್ನು ಎಷ್ಟು ಕಂಟ್ರೋಲ್ ಮಾಡಿದ್ರು ಕೂಡ.. ತಾಂಡವ್ ಹಳಿ ತಪ್ಪಿಯಾಗಿದೆ.

ಈಗ ಶ್ರೇಷ್ಠ ತಾಂಡವ್ ಮದುವೆ ಆಗಲು ಮುಂದಾಗಿದ್ದಾರೆ.‌ ಇವ್ರ  ಮದುವೆಯ‌ ಆಹ್ವಾನ ಪತ್ರಿಕೆ ರೆಡಿಯಾಗಿದ್ದು, ಅದನ್ನು ದೇವಸ್ಥಾನದಲ್ಲಿ ಪೂಜೆ ಮಾಡಿಸಲಾಗಿತ್ತು. ಆದ್ರೆ ಆಹ್ವಾನ ಪತ್ರಿಕೆ ದೇವಸ್ಥಾನಕ್ಕೆ ಅದೇ ಟೈಮ್‌ಗೆ ಬಂದಿದ್ದ ಭಾಗ್ಯ ಬ್ಯಾಗ್ ಸೇರಿದೆ. ಮದುವೆ ಕಾರ್ಡ್ ನಲ್ಲಿ ಬರೀ ಹೆಸ್ರು, ಮದುವೆ ದಿನಾಂಕ, ವಿಳಾಸ ಇರ್ತಿದ್ರೆ ತಾಂಡವ್ ಅಷ್ಟೊಂದು ತಲೆಬಿಸಿ ಮಾಡಿಕೊಳ್ತಿರ್ಲಿಲ್ಲ.. ಆದ್ರೆ ಶ್ರೇಷ್ಠ ಅವರಿಬ್ಬರ ಫೋಟೋನ ಮದುವೆ ಇನ್ವಿಟೇಷನ್ ಕಾರ್ಡ್ ನಲ್ಲಿ ಹಾಕಿಸಿದ್ದಾಳೆ.. ಆ ಆಹ್ವಾನ ಪತ್ರಿಕೆ ಭಾಗ್ಯ, ಕುಸುಮಾ ಕಣ್ಣಿಗೆ ಯಾವುದೇ ಕಾರಣಕ್ಕೂ  ಬೀಳಬಾರದು.. ಬಿದ್ರೆ ತನ್ನ ಕತೆ ಮುಗೀತು.. ಹೇಗಾದರೂ ಮಾಡಿ ಮದುವೆ ಕಾರ್ಡ್ ಅನ್ನ ತಾನು ಭಾಗ್ಯ ಬಾಗ್ ನಿಂದ ತಗೋಬೇಕು  ಅಂತ ತಾಂಡವ್ ಪ್ರಯತ್ನಪಡುತ್ತಾನೆ.. ಆದ್ರೆ ಆತನ ಪ್ರಯತ್ನ ನೀರಲ್ಲಿ ಹೋಮ ಆದಂತಾಗಿದೆ.. ಕಾರ್ಡ್ ತರಲು ಹೋಗಿ ಭಾಗ್ಯ ಕೈಯಲ್ಲಿ ಸಿಕ್ಕಿಬಿದ್ದಿದ್ದು.. ಬಂದ ದಾರಿಗೆ ಸುಂಕ ಇಲ್ಲ ಅಂತಾ ಬರಿ ಕೈಯಲ್ಲಿ ವಾಪಸ್ ಹೋಗಿದ್ದಾನೆ.‌.  ಈ‌ ಕತೆಯನ್ನೇ ಮಹಾಸಂಚಿಕೆಯಾಗಿ ಪ್ರಸಾರ ಮಾಡಲಾಗ್ತಿದೆ. ಇದರಲ್ಲಿ ತಾಂಡವ್ ಸಿಕ್ಕಿಬೀಳ್ತಾನಾ? ತಾಂಡವ್ -ಶ್ರೇಷ್ಠ ಲವ್, ಮದುವೆ ಸ್ಟೋರಿ ಕುಸುಮ, ಭಾಗ್ಯಗೆ ಗೊತ್ತಾಗತ್ತಾ ಎಂಬ ಪ್ರಶ್ನೆಯನ್ನು ಹೈಲೈಟ್ ಮಾಡಿ ಮಹಾ ಸಂಚಿಕೆಯಲ್ಲಿ ತೋರಿಸಲಾಗಿದೆ.

ಮಹಾಸಂಚಿಕೆ ಅಂದಾಗ ವೀಕ್ಷಕರಿಗೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಭಾಗ್ಯಾಳಿಗೆ ನ್ಯಾಯ ಸಿಗುತ್ತೆ.. ಕಥೆಯಲ್ಲಿ ಏನಾದರೂ ಇಂಟ್ರೆಸ್ಟಿಂಗ್ ಆಗಿರಬಹುದು ಎಂದೇ ಒಂದು ಗಂಟೆಗಳ ಕಾಲ ಸೀರಿಯಲ್ ವೀಕ್ಷಕರು ಸೀರಿಯಲ್ ನೋಡಿದ್ದಾರೆ. ಆದರೆ ವೀಕ್ಷಕರ ನಿರೀಕ್ಷೆ ಸುಳ್ಳಾಗಿದೆ. ಒಂದು ಗಂಟೆಯ ಮಹಾಸಂಚಿಕೆ ಪೂರ್ತಿ  ಕಾರ್ಡ್ ಹುಡುಕಾಟ ವನ್ನೇ ತೋರಿಸಲಾಗಿದೆ. ಶ್ರೇಷ್ಠ ಟಾರ್ಚರ್ ಕೊಡುವ ಕೆಲಸವೂ ಕಂಟಿನ್ಯೂ ಆಗಿದೆ. ಪ್ರೇಕ್ಷಕರು ಮಹಾಸಂಚಿಕೆಗೆ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.  ಪ್ರತಿದಿನದ ಅರ್ಧ ಗಂಟೆ ಸಂಚಿಕೆಯೆನ್ನೇ ಎಳೆದಿದ್ದಾರೆ ಎಂದು ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಾನಾ ಕಾಮೆಂಟ್ ಹಾಕುತ್ತಿದ್ದಾರೆ..  ನೀವು ಎಷ್ಟೇ ಮಹಾಸಂಚಿಕೆ ಮಾಡಿದ್ರು.. ನಿಜ ಹೊರಗೆ ಬರಲ್ಲ.. ಅಂತಾ ಕೆಲವರು ಹೇಳಿದ್ರೆ ಇನ್ನೂ ಕೆಲವರು ಮಹಾಸಂಚಿಕೆ ಅಂತ ಕೊಡ್ತಾರೆ ಅದರಲ್ಲಿ ಏನು ಟ್ವಿಸ್ಟ್ ಇರಲ್ಲ, ಏನು ಇರಲ್ಲ, ಸುಮ್ಮನೆ ನೋಡಬೇಕು. ಪ್ರೇಕ್ಷಕರ ಭಾವನೆಗಳಿಗೂ ಬೆಲೆ ಇದೆ, ಅವರಿಂದಾನೆ ನೀವು ಇರೋದು.. ದಯವಿಟ್ಟು ಅವರ ಭಾವನೆಗಳಿಗೆ ಬೆಲೆ ಕೊಡಿ.. ಅಂತಾ ಸೀರಿಯಲ್ ಟೀಮ್ ಗೆ ಮನವಿ ಮಾಡಿಕೊಂಡಿದ್ದಾರೆ.. ಆದರೆ ಸೀರಿಯಲ್‌ನವರು‌ ಮಾತ್ರ ವೀಕ್ಷಕರನ್ನು‌ ಸತಾಯಿಸುವುದರಲ್ಲೆ ಮಜಾ ತೆಗೆದುಕೊಳ್ಳುತ್ತಿರುವಂತಿದೆ.. ಈ ಖುಷಿಗೆ ಮಹಾ ಸಂಚಿಕೆ ಬೇಕಾ ಎನ್ನುವುದೇ ಇಲ್ಲಿರುವ ಪ್ರಶ್ನೆ..

Shwetha M