ಭಾಗ್ಯಳಿಗೆ ಆದಿ ಮೇಲೆ ಅರಳಿದ ಪ್ರೀತಿ – ತಾಂಡವ್ ಕೈ ತಪ್ಪಿದ ಪ್ರೇಮಭಾಗ್ಯ

ಭಾಗ್ಯಳಿಗೆ ಆದಿ ಮೇಲೆ ಅರಳಿದ ಪ್ರೀತಿ – ತಾಂಡವ್ ಕೈ ತಪ್ಪಿದ ಪ್ರೇಮಭಾಗ್ಯ

ಭಾಗ್ಯಲಕ್ಷ್ಮಿ  ಸೀರಿಯಲ್‌ನಲ್ಲಿ ಇದೀಗ ಭಾಗ್ಯಳ ಮನದಲ್ಲಿ ಪ್ರೀತಿ ಅರಳುವ ಸಮಯ ಬಂದಾಗಿದೆ. ಜೊತೆಗೆ ಅರಳಿದ ಪ್ರೀತಿಗೆ ಅರ್ಥಕೊಡುವ ಸಮಯ ಬಂದಾಗಿದೆ. ಇದು ನಿಜವಾಗಲೂ ವೀಕ್ಷಕರು ಕಾಯುತ್ತಿದ್ದ ಗಳಿಗೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: ​ಲಕ್ಷ್ಮೀ ನಿವಾಸ ಸೀರಿಯಲ್‌ಗೆ ನಟಿ ಗುಡ್‌ಬೈ! – ನೀಲು ಪಾತ್ರಕ್ಕೆ ಹೊಸ ನಟಿ ಎಂಟ್ರಿ!

ಆದಿ ಮತ್ತು ತಾಂಡವ್.. ಭಾಗ್ಯ ಹೃದಯ ಮಿಡಿಯುವುದು ಯಾರಿಗಾಗಿ ಎಂಬ ಕುತೂಹಲ ಹೆಚ್ಚಾಗಿದೆ. ಕೊನೆಗೂ ಭಾಗ್ಯಳ ಮನಸು ಆದಿಗೆ ಕೊಟ್ಟಾಗಿದೆ. ಇದೀಗ ಭಾಗ್ಯ ತನ್ನ ಬದುಕಿನ ಎರಡನೇ ಅಧ್ಯಾಯಕ್ಕೆ ಕಾಲಿಡುವ ಗಳಿಗೆ ಬಂದಾಗಿದೆ. ಆದಿಯ ಪ್ರೀತಿ, ಬದಲಾದ ತಾಂಡವ್ ನಡುವೆ ತೊಳಲಾಡ್ತಿದ್ದ ಭಾಗ್ಯ ಕೊನೆಗೂ ತನ್ನ ಬದುಕಿನ ವಿಚಾರದಲ್ಲಿ ಬಹುದೊಡ್ಡ ತೀರ್ಮಾನ ಕೈಗೊಂಡಿದ್ದಾರೆ. ಗಂಡ ಹೇಗೇ ಇದ್ದರೂ ಅದನ್ನು ಹೆಂಡತಿಯಾದವಳು ಸಹಿಸಿಕೊಂಡು ಹೋಗಬೇಕು ಎನ್ನುವ ಭಾಗ್ಯಳ ಅಮ್ಮ, ಅಪ್ಪ ಬದಲಾಗಿದ್ದಾನೆ- ಅವನನ್ನು ಒಪ್ಪಿಕೋ ಎನ್ನುವ ಭಾಗ್ಯಳ ಮಗಳು, ಈ ನೀಚಬುದ್ಧಿಯವ ಯಾವತ್ತೂ ಬದಲಾಗಲ್ಲ, ನೀನು ಆದಿಯನ್ನೇ ಮದುವೆಯಾಗು ಎನ್ನುವ ಅತ್ತೆ, ಅಪ್ಪ ಸರಿಯಲ್ಲ- ಅವನು ಒಳ್ಳೆಯವನಲ್ಲ ಎನ್ನುವ ಮಗ, ಎಲ್ಲದ್ದಕ್ಕೂ ತಟಸ್ಥನಾಗಿ ನಿಂತವ ಭಾಗ್ಯಳ ಮಾವ… ಇವೆಲ್ಲರ ನಡುವಿನ ಭಾಗ್ಯಳ ತೊಳಲಾಟ ನೋಡಿ ವೀಕ್ಷಕರು ಕೂಡಾ ಅಯ್ಯೋ ಪಾಪ ನಮ್ಮ ಭಾಗ್ಯ ಅಂತಾ ಮರುಗುತ್ತಿದ್ದರು. ಕೊನೆಗೂ ಈ ಎಲ್ಲಾ ಗೊಂದಲದಿಂದ ಭಾಗ್ಯಳಿಗೆ ಈಗ ಮುಕ್ತಿ ಸಿಕ್ಕಿದೆ. ಕೊನೆಗೂ ಆದಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ ಭಾಗ್ಯ. ನೀವು ನಂಗೆ ಇಷ್ಟ ಎಂದು ಆದಿ ಬಳಿ ಭಾಗ್ಯ ತನ್ನ ನಿರ್ಧಾರ ಹೇಳಿದ್ದಾರೆ. ಭಾಗ್ಯಳ ಮನಸಿನ ಮಾತು ಕೇಳಿ ಆದಿ ನಾಚಿ ನೀರಾಗಿದ್ದಾನೆ.

ಇದೀಗ ಭಾಗ್ಯಳ ನಿರ್ಧಾರ ಮಗಳು ತನ್ವಿಗೆ ಇಷ್ಟವಾಗುತ್ತಾ?, ಗಂಡ ತಾಂಡವ್ ಏನು ಮಾಡುತ್ತಾನೆ? ಶ್ರೇಷ್ಠಾ ಕಥೆ ಏನಾಯಿತು? ಇವೆಲ್ಲಾ ಗೊಂದಲಗಳಿಗೆ ಸೀರಿಯಲ್‌ನಲ್ಲಿ ಉತ್ತರ ಸಿಗುತ್ತಾ ಕಾದುನೋಡಬೇಕಿದೆ.

Sulekha

Leave a Reply

Your email address will not be published. Required fields are marked *