ಶ್ರೇಷ್ಠಾಗೆ ಹೊಸ ಬಾಯ್‌ ಫ್ರೆಂಡ್?‌ – ತಾಂಡವ್‌ ಉರಿಗೆ ಭಾಗ್ಯ ಮದ್ದು!   
ಲವ್ವರ್‌ ಗಿಂತ ಹೆಂಡ್ತಿನೇ ಬೆಸ್ಟ್‌!

ಶ್ರೇಷ್ಠಾಗೆ ಹೊಸ ಬಾಯ್‌ ಫ್ರೆಂಡ್?‌ – ತಾಂಡವ್‌ ಉರಿಗೆ ಭಾಗ್ಯ ಮದ್ದು!   ಲವ್ವರ್‌ ಗಿಂತ ಹೆಂಡ್ತಿನೇ ಬೆಸ್ಟ್‌!

ಭಾಗ್ಯ ಗೋಳು ಮುಗಿಲ್ಲ.. ತಾಂಡವ್‌ ಶ್ರೇಷ್ಠಾ ಹಿಂದೆ ಸುತ್ತೋದು ಬಿಡಲ್ಲ.. ಇದು ಭಾಗ್ಯಲಕ್ಷ್ಮೀ ಸೀರಿಯಲ್‌ ಸದ್ಯದ ಸ್ಟೋರಿ.. ಶ್ರೇಷ್ಠಾ ಹಾಗೂ ಕನ್ನಿಕಾ ಪ್ಲ್ಯಾನ್‌ ನಿಂದಾಗಿ ಭಾಗ್ಯ ಕೆಲಸ ಬಿಡುವಂತೆ ಆಗಿದೆ. ಇದೀಗ ಭಾಗ್ಯ ಜೀವನಕ್ಕೆ ಮುಂದೇನು ಮಾಡೋದು ಅನ್ನೋ ಚಿಂತೆಯಲ್ಲಿದ್ರೆ, ತಾಂಡವ್‌ ಗೆ ಈಗ ಬೇರೆಯದ್ದಕ್ಕೆ ಟೆನ್ಷನ್‌ ಶುರುವಾಗಿದೆ.. ಇದೀಗ ಶ್ರೇಷ್ಠಾ ತನ್ನ ಗೆಳೆಯನ ಮೂಲಕ ತಾಂಡವ್‌ ಗೆ ಸರಿಯಾಗೇ ಉರಿಸಿದ್ದಾಳೆ.. ಇದ್ರಿಂದಾಗಿ ತಾಂಡವ್‌ ಆಕೆಯ ಮೇಲೆ ಸಿಟ್ಟಾಗಿದ್ದಾನೆ.. ಹಾಗ್ರಾದ್ರೆ ತಾಂಡವ್‌ ಶ್ರೇಷ್ಠಾ ಸಹವಾಸ  ಬಿಡ್ತಾನಾ? ಭಾಗ್ಯನೇ ಬೆಸ್ಟ್‌ ಅಂತಾ ತಾಂಡವ್‌ ಗೆ ಅನ್ಸುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ಆಡದಿದ್ರೆ CUP ಗೆಲ್ಲಲ್ಲ – ಚಾಂಪಿಯನ್ಸ್ ಟ್ರೋಫಿ ಆಸೆ ಕಮರಿತಾ?

ಭಾಗ್ಯಲಕ್ಷ್ಮೀ ಸೀರಿಯಲ್‌ ಸದ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ.. ಶೆಫ್‌ ಭಾಗ್ಯ ಈಗ ನಾರ್ಮಲ್‌ ಭಾಗ್ಯ ಆಗಿದ್ದಾಳೆ.. ಕನ್ನಿಕಾ, ಶ್ರೇಷ್ಠಾ ಪ್ಲ್ಯಾನ್‌ ನಿಂದ ಕೆಲಸ ಕಳೆದುಕೊಳ್ಳುವಂತೆ ಆಗಿದೆ. ಇದೀಗ ಕೆಲಸ ಕಳೆದುಕೊಂಡಿರುವ ಭಾಗ್ಯಗೆ ಮನೆ ಜವಬ್ದಾರಿ, ಮಕ್ಕಳ ಸ್ಕೂಲ್‌ ಫೀಸ್‌ ಎಲ್ಲವನ್ನು ನಿಭಾಯಿಸೋದು ದೊಡ್ಡ ಸವಾಲ್‌ ಆಗಿದೆ.. ಇದೀಗ  ತನ್ವಿ, ತಾಂಡವ್ ಸಹಾಯ ಪಡೆದುಕೊಂಡು ಫೀಸ್ ಭರ್ತಿ ಮಾಡಿದ್ದಾಳೆ. ಈ ವಿಷಯ ತಿಳಿದ ಭಾಗ್ಯಗೆ, ಮಗಳು ತನ್ನಿಂದ ದೂರವಾಗ್ತಾಳಾ ಅನ್ನೋ ಆತಂಕ ಶುರುವಾಗಿದೆ. ಹೀಗೆ ಮುಂದೆ ಒಬ್ಬೊಬ್ಬರೇ ನನ್ನ ಜೊತೆ ಬರುತ್ತಾರೆ. ಮುಂದೆ ನೀನು ಒಬ್ಬಳೇ ಇರಬೇಕು ಎಂದು ತಾಂಡವ್ ಭವಿಷ್ಯ ನುಡಿದಿದ್ದಾನೆ. ಇನ್ನೊಂದ್ಕಡೆ ಭಾಗ್ಯಗೆ ಎಲ್ಲೂ ಕೆಲಸ ಸಿಗುತ್ತಿಲ್ಲ.  ಹೀಗೆ ಮುಂದುವರಿದ್ರೆ ಮನೆಯ ಪರಿಸ್ಥಿತಿ ಏನು ಎಂದು ಕುಸುಮಾ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ. ಭಾಗ್ಯಾಗೆ ಹೊಸ ಕೆಲಸ ಸಿಗುತ್ತಾ ಅಥವಾ ತನ್ನದೇ ಸ್ವಂತ ಹೋಟೆಲ್ ಆರಂಭಿಸುತ್ತಾಳಾ ಅನ್ನೋದು ವೀಕ್ಷಕರ ಮುಂದಿರುವ ಕುತೂಹಲ.

ಇನ್ನು ತಾಂಡವ್‌ ಗೆ ಶ್ರೇಷ್ಠಾ ಗೆಳಯ ಸರಿಯಾಗೆ ಉರಿಸಿದ್ದಾನೆ. ತಾಂಡವ್ ಮತ್ತು ಶ್ರೇಷ್ಟಾ ಊಟಕ್ಕಾಗಿ ಹೋಟೆಲ್‌ಗೆ ಹೋಗಿರ್ತಾರೆ. ತಾಂಡವ್ ಶ್ರೇಷ್ಠಾ ಜೊತೆ  ಟೈಮ್‌ ಸ್ಪೆಂಡ್‌ ಮಾಡ್ಬೇಕು ಅಂದ್ಕೊಂಡಿರ್ತಾನೆ. ಈ ಹೊತ್ತಲ್ಲೇ  ಅಲ್ಲಿಗೆ ಶೇಷ್ಠಾಳ ಕಾಲೇಜು ಫ್ರೆಂಡ್‌ ಬರ್ತಾನೆ. ಶೇಷ್ಠಾ ತನ್ನ ಕಾಲೇಜ್‌ ಫ್ರೆಂಡ್‌ ನ ನೋಡ್ತಿದ್ದಂತೆ  ಫುಲ್ ಖುಷಿಯಾಗಿದ್ದಾಳೆ. ಶ್ರೇಷ್ಠಾಗೆ ಇಷ್ಟವಾದ ಆಹಾರವನ್ನ ಆರ್ಡರ್ ಮಾಡುತ್ತಾನೆ. ಇದರಿಂದ ಶ್ರೇಷ್ಠಾ ಫುಲ್ ಇಂಪ್ರೆಸ್ ಆಗುತ್ತಾಳೆ. ಇಷ್ಟಕ್ಕೆ ಸುಮ್ಮನಾಗದ ಗೆಳೆಯ, ತಾಂಡವ್‌ಗೂ ಡ್ರೆಸಿಂಗ್ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡುತ್ತಾನೆ. ಇದರಿಂದ ತಾಂಡವ್ ಕೋಪಗೊಳ್ಳುತ್ತಾನೆ. ಗೆಳೆಯ ಹೋದ ಬಳಿಕ ಶೇಷ್ಠಾಗೆ ತಾಂಡವ್ ವಾರ್ನ್ ಮಾಡುತ್ತಾನೆ.  ಇನ್ಮುಂದೆ ನಾವು ಜೊತೆಯಲ್ಲಿರುವಾಗ ನಿನ್ನ ಗೆಳೆಯ ಬಂದ್ರೆ ನಾನು ಎದ್ದು ಹೋಗುತ್ತೇನೆ. ನಾನು ಬೇಕು ಅಂದ್ರೆ ನಮ್ಮ ಬಳಿಗೆ ನಿನ್ನ ಗೆಳೆಯನಿಗೆ ಬರಬೇಡ ಎಂದು ಹೇಳು. ನನಗೆ ಈ ರೀತಿಯ ವರ್ತನೆ ಇಷ್ಟವಾಗಿಲ್ಲ ಎಂದು ತಾಂಡವ್ ಹೇಳಿದ್ದಾನೆ. ಇದಕ್ಕೆ ಪ್ರತಿಯಾಗಿ, ಆತ ಇರೋದೇ ಹಾಗೆ. ನೀನ್ಯಾಕೆ ಇಷ್ಟೊಂದು ಜಲಸ್ ಆಗ್ತಿದೆಯಾ ಎಂದು ಶ್ರೇಷ್ಠಾ ಹೇಳಿದ್ದಾಳೆ. ಈ ದೃಶ್ಯದಿಂದ ತಾಂಡವ್ ಮತ್ತು ಶ್ರೇಷ್ಠಾ ಪ್ರೀತಿಗೆ ಆಕೆಯ  ಗೆಳೆಯನೇ ವಿಲನ್ ಆಗಬಹುದು.

ಇನ್ನು ದಿಟ್ಟತನಕ್ಕೆ ಹೆಸರುವಾಸಿಯಾಗಿರೋ ಭಾಗ್ಯ ಪದೇ ಪದೇ ಕಣ್ಣೀರು ಹಾಕೋದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಧಾರಾವಾಹಿ ನಾಯಕಿ ಗೆಲ್ಲಬೇಕು ಎಂಬವುದು ವೀಕ್ಷಕರ ಅಭಿಪ್ರಾಯ. ಆದ್ರೆ ಧಾರಾವಾಹಿ ವೀಕ್ಷಕರು ಊಹೆಗೂ ಮೀರಿ ಪ್ರತಿ ಸಂಚಿಕೆಯಲ್ಲಿಯೂ ಹೊಸ ತಿರುವು ಪಡೆದುಕೊಳ್ಳುತ್ತಿರುತ್ತದೆ. ಇತ್ತ ಜೀವನಕ್ಕೆ ಆಸರೆಯಾಗಿದ್ದ ಕೆಲಸವನ್ನು ಕಳೆದುಕೊಂಡು ಭಾಗ್ಯ ಕಂಗಾಲಾಗಿದ್ದಾಳೆ. ತಾಂಡವ್ ಹೊಟ್ಟೆ ಉರಿದುಕೊಂಡಿದ್ದನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ತಾಂಡವ್‌ ಹೊಟ್ಟೆ ಉರಿ ಮತ್ತು ಭಾಗ್ಯಳ ಕಸಿವಿಸಿ ಕಂಡು ಕೆಲ ವೀಕ್ಷಕರು ಸಾಕಪ್ಪಾ ಸಾಕು ಅಂತಿದ್ದಾರೆ. ಮತ್ತೆ ಕೆಲವರು ಶ್ರೇಷ್ಠಾ ತಾಂಡವ್‌ ಗೆ ಕೈ ಕೊಟ್ಟು ಹೋಗ್ತಾಳೆ.. ಮುಂದೆ ತಾಂಡವ್‌ ಗೆ ಭಾಗ್ಯಳೇ ಗತಿ.. ತಾಂಡವ್‌ ಪ್ರಾಬ್ಲಂ ಗೆ ಭಾಗ್ಯಾಳೇ ಮದ್ದು ಆಗ್ತಾಳೆ ಎಂದು ಹೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *