ತಾಂಡವ್‌ ಮುಂದೆ ಸೋತ ಭಾಗ್ಯ.. “ನಾನು ಭಾಗ್ಯ” ಅಭಿಯಾನ ಮರೆತ್ರಾ? – ಶ್ರೇಷ್ಠಾ ಆಟ.. ಕುಸುಮಾ ಗಪ್‌ ಚುಪ್‌

ತಾಂಡವ್‌ ಮುಂದೆ ಸೋತ ಭಾಗ್ಯ.. “ನಾನು ಭಾಗ್ಯ” ಅಭಿಯಾನ ಮರೆತ್ರಾ? – ಶ್ರೇಷ್ಠಾ ಆಟ.. ಕುಸುಮಾ ಗಪ್‌ ಚುಪ್‌

ಭಾಗ್ಯ ತಾಂಡವ್‌ ಗೆ ಡಿವೋರ್ಸ್‌ ಕೊಡ್ತೇನೆ ಅಂತಾ ಹೇಳಿದ್ದೇ ಹೇಳಿದ್ದು.. ಅದು ದೊಡ್ಡ ಸಂಚಲನವನ್ನೇ ಸೃಷ್ಠಿಸಿತ್ತು.. ಶಭಾಷ್‌ ಭಾಗ್ಯ.. ಇನ್ನುಮುಂದೆ ಎಲ್ಲವೂ ಚೇಂಜ್..‌ ಭಾಗ್ಯ ನಡೆದಿದ್ದೇ ದಾರಿ ಅನ್ನೋ ತರ ಬಿಲ್ಡಪ್‌ ಬೇರೆ ಕೊಟ್ಟಿದ್ರು.. ನಾನು ಭಾಗ್ಯ ಅನ್ನೋ ಅಭಿಯಾನ ಕೂಡ ಶುರು ಮಾಡ್ಕೊಂಡಿದ್ರು.. ಆದ್ರೀಗ ಸೀರಿಯಲ್‌ ಡೈರೆಕ್ಟರ್‌ ಗೆ ಎಲ್ಲವೂ ಮರೆತು ಹೋಗ್ತಿದ್ಯಾ ಅನ್ನೋದು ವೀಕ್ಷಕರ ಪ್ರಶ್ನೆ.. ಯಾಕಂದ್ರೆ ಭಾಗ್ಯ ರೆಬಲ್‌ ಆಗಿಲ್ಲ.. ಮತ್ತೆ ಅಳುಮುಂಜಿಯಾಗಿದ್ದಾಳೆ.. ಸೋತು ತಾಂಡವ್‌, ಶ್ರೇಷ್ಠಾ ಮುಂದೆ ಶರಣಾಗಿದ್ದಾಳೆ.

ಇದನ್ನೂ ಓದಿ: ಡ್ರೆಸ್ಸಿಂಗ್ ರೂಂ ರೂಲ್ಸ್.. ಸರ್ಫರಾಜ್ ಭವಿಷ್ಯ ಖತಂ? – ತಪ್ಪು ಮುಚ್ಚಿಕೊಳ್ಳಲು ಗಂಭೀರ್ ಆಟ?

ಭಾಗ್ಯ ಲಕ್ಷ್ಮೀ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ ತಾಂಡವ್‌ ಗೆ ಡಿವೋರ್ಸ್‌ ಕೊಡ್ತೇನೆ.. ಸ್ವಂತ ಕಾಲಿನಲ್ಲಿ ನಿಂತು ಮನೆ ಜವಾಬ್ದಾರಿಯನ್ನ ನಿರ್ವಹಿಸುತ್ತೇನೆ ಅಂತಾ ಹೇಳಿದ್ಲು.. ಭಾಗ್ಯ ಡೈಲಾಗ್‌.. ಸೀರಿಯಲ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನ ಹುಟ್ಟು ಹಾಕಿತ್ತು. ಗಂಡನಿಂದ ಕಣ್ಣೀರು ಹಾಕುತ್ತಿದ್ದ ಭಾಗ್ಯಾ, ಧೈರ್ಯವಾಗಿ ನಿಲ್ಲುವುದಕ್ಕೆ ಶುರು ಮಾಡಿದ್ದಳು. ಓದಿಲ್ಲದೆ ಇದ್ದರೇನಂತೆ ನಂಗೆ ಗೊತ್ತಿರುವ ಕಲೆಯಿಂದಾನೇ ಕೆಲಸ ಹುಡುಕುತ್ತೇನೆಂದು ಪಣ ತೊಟ್ಟಿದ್ಲು.. ಇದಕ್ಕೆ ಕುಸುಮಾ ಸಾಥ್‌ ನೀಡಿದ್ಲು.. ಹೀಗಾಗಿ ಶ್ರೇಷ್ಠಾಳನ್ನ ತಾಂಡವ್‌ ನಿಂದ ದೂರ ಮಾಡ್ಬೇಕು ಅಂತ ಅತ್ತೆ ಸೊಸೆ ಸೇರ್ಕೊಂಡು ದೊಡ್ಡ ಪ್ಲ್ಯಾನ್‌ ಮಾಡಿದ್ರು.. ಅದಕ್ಕಾಗೇ ಬೀದಿಲಿ ಹೋಗೋ ಮಾರಿನಾ ಮನೆಗೆ ಕರೆಸಿಕೊಂಡ್ರು ಎಂಬಂತೆ ಶ್ರೇಷ್ಠಾಳನ್ನ ಮನೆಗೆ ಸೇರಿಸಿಕೊಂಡಿದ್ರು. ಕುಸುಮಾ ಮೂರ್ಹೊತ್ತು ಸೊಸೆ.. ಸೊಸೆ ಅಂತಾ ಶ್ರೇಷ್ಠಾಳನ್ನ ಕರೆಯೋದೇನು.. ಆಕೆಗೆ ಮನೆ ಜವಾಬ್ದಾರಿ ಕೊಟ್ಟು ಮನೆ ಕೆಲಸ ಮಾಡಿಸಿದ್ದೇ ಮಾಡಿಸಿದ್ದು.. ಇದು ಶ್ರೇಷ್ಠಾಗೆ ತಲೆ ಕೆಟ್ಟು ಹೋಗುವಂತೆ ಮಾಡಿತ್ತು.. ಆದ್ರೆ ಈ ಖತರ್ನಾಕ್‌ ಶ್ರೇಷ್ಠಾ ಭಾಗ್ಯ ಕುಸುಮಾಗೆ ಸರಿಯಾಗೇ ಚಳ್ಳೆಹಣ್ಣು ತಿನ್ನಿಸಿದ್ದಾಳೆ.

ಹೌದು, ತಾಂಡವ್‌ ಅಷ್ಟು ಬೇಗ ಬದಲಾಗಲ್ಲ.. ಶ್ರೇಷ್ಠಾಳನ್ನ ಬಿಟ್ಟುಕೊಡಲ್ಲ..  ಮಾತಲ್ಲಿ ಹೇಳಿದರೆ ಆತನಿಗೆ ಅರ್ಥ ಆಗೋದಿಲ್ಲ ಅನ್ನೋದು ಕುಸುಮಾಗೆ ಅರ್ಥವಾಗಿತ್ತು. ಅದಕ್ಕೆ ಶ್ರೇಷ್ಠಾಳನ್ನು ಮನೆಗೆ ಕರೆತಂದಾಗ ಅವಳನ್ನೆ ಓಡಿಸುವ ಪ್ಲ್ಯಾನ್ ಮಾಡಿದ್ರು. ಆರಂಭದಲ್ಲಿ  ಪ್ಲ್ಯಾನ್ ತುಂಬಾ ಚೆನ್ನಾಗಿಯೇ ಇತ್ತು. ಆದರೆ ಸತ್ಯ ನಾರಾಯಣ ಪೂಜೆ ಆದ್ಮೇಲೆ ಎಲ್ಲವೂ ಬದಲಾಗಿದೆ.  ಅಮ್ಮನಿಗೆ ಎದುರು ಮಾತಾಡ್ತೀಯ ಅಂತ ತಾಂಡವ್, ಶ್ರೇಷ್ಠಾಗೇನೆ ಕಪಾಳಕ್ಕೆ ಹೊಡೆದಿದ್ದ. ಆದ್ರೆ ಈಗ ಶ್ರೇಷ್ಠಾ ಹೇಳಿದ ಮಾತುಗಳನ್ನ ಕೇಳಿಕೊಂಡು ಮತ್ತೆ ಅಪ್ಪ ಅಮ್ಮನ ವಿರುದ್ಧ ತಿರುಗಿ ಬಿದ್ದಿದ್ದಾನೆ. ನಾವು ಮನೆ ಬಿಟ್ಟು ಹೋಗ್ತೀವಿ ಅಂತ ಲಗೇಜು ಸಮೇತ ಬಂದು ನಿಂತಿದ್ದಾರೆ.

ಭಾಗ್ಯಾ ಇತ್ತೀಚೆಗೆ ತನ್ನ ಗಂಡನನ್ನೇ ನಡುಗಿಸಿದ್ದಳು. ಅಳು ಮುಂಜಿ ಭಾಗ್ಯಾಳನ್ನ ನೋಡಿ ತುಂಬಾ ದಿನ ಆಗಿತ್ತು. ಆದರೆ ತಾಂಡವ್, ಶ್ರೇಷ್ಠಾಳನ್ನ ತಬ್ಬಿಕೊಂಡಿದ್ದು ನೋಡಿ ಕಣ್ಣೀರಿಟ್ಟಳು. ಇದು ಸಹಜ ಬಿಡಿ. ಸಂಸಾರ ಸರಿ ಮಾಡಿಕೊಳ್ಳಬೇಕು ಎಂದು ಹೋರಾಡುತ್ತಿರುವ ಭಾಗ್ಯಾಗೆ ಗಂಡ ಕಣ್ಣ ಮುಂದೆಯೇ ತಪ್ಪು ದಾರಿ ಹಿಡಿದರೆ ನೋವಾಗದೆ ಇರಲಾರದು. ಆದರೆ ವೀಕ್ಷಕರಿಗಿರುವ ತಾನೂ ವೀಕ್ ಅನ್ನೋದನ್ನ ಭಾಗ್ಯಾಳೆ ಮತ್ತೆ ಮತ್ತೆ ಪ್ರೂವ್ ಮಾಡುತ್ತಿರುವ ಸನ್ನಿವೇಶವೂ ನಿರ್ಮಾಣವಾಗುತ್ತಿದೆ. ತಾಂಡವ್ ನೋಡಿ ಸುಮ್ಮನೆ ಆಗ್ತಾಳೆ, ಶ್ರೇಷ್ಠಾಳ ರಾದ್ಧಾಂತ ನೋಡಿ ಸೈಲೆಂಟ್ ಆಗಿ ಹೋಗ್ತಾಳೆ. ಇದನ್ನ ಸ್ವೀಕರಿಸುವುದಕ್ಕೆ ಭಾಗ್ಯಾ ಅಭಿಮಾನಿಗಳಿಂದ ಆಗ್ತಾ ಇಲ್ಲ. ಇದೀಗ ನಾನು ಭಾಗ್ಯ ಅಭಿಯಾನ ಏನಾಯ್ತು ಅಂತಾ ವೀಕ್ಷಕರು ಕೇಳ್ತಿದ್ದಾರೆ.

ಹೌದು.. ಕಲರ್ಸ್ ಕನ್ನಡ ಇತ್ತೀಚೆಗೆ ‘ನಾನು ಭಾಗ್ಯಾ’ ಎಂಬ ಅಭಿಯಾನ ಶುರು ಮಾಡಿತ್ತು. ಅಂದ್ರೆ‌ ಭಾಗ್ಯಾ ತನ್ನ ಜೀವನದ ಮುಖ್ಯ ಘಟ್ಟದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ವಿಚಾರವದು. ಗಂಡನೇ ಬೇಡ ಎಂದು ಡಿವೋರ್ಸ್ ಪೇಪರ್ ಬಿಸಾಡಿ ಬಂದ ದಿನ ಅದು. ಭಾಗ್ಯಾಳಂತ ಅದೆಷ್ಟೋ ಹೆಣ್ಣು ಮಕ್ಕಳಿಗೆ ಇದು ಸ್ಪೂರ್ತಿಯಾಗಿತ್ತು. ಬಳಿಕ ಸೀರಿಯಲ್‌ ನಾಯಕಿಯರು ಅವ್ರ ಕತೆ ಹೇಳೋದು.. ಭಾಗ್ಯಗೆ ಆಲ್‌ ದ ಬೆಸ್ಟ್‌ ಹೇಳೋದು.. ವೀಕ್ಷಕರ ಬಳಿಯೂ ನಿಮ್ಮ ಕತೆ ಹೇಳಿ ಅಂತಾ ಕೇಳೋದು.. ಹೀಗೇ ಏನೇನೋ ವಿಭಿನ್ನ ಪ್ರಯತ್ನ ಮಾಡಲಾಗಿತ್ತು.. ಇದ್ರಿಂದಾಗಿ  ಮುಂದೆ ಭಾಗ್ಯಾಳ ಗಟ್ಟಿ ನಿರ್ಧಾರಗಳು ಬದುಕನ್ನು ಬದಲಾಯಿಸುತ್ತವೆ ಎಂದೇ ಭಾವಿಸಲಾಗಿತ್ತು. ಭಾಗ್ಯಾಳೇ ತಾಂಡವ್ ನ ಬದಲಾಯಿಸುತ್ತಾಳೆ, ಸಂಸಾರ ಸರಿಯಾಗುತ್ತೆ ಎಂದು ಭಾವಿಸಿದ್ರೆ ಎಲ್ಲವೂ ಉಲ್ಟಾ ಆಗಿದೆ. ಮತ್ತದೇ ಜಗಳ, ತಾಂಡವ್ ಗಲಾಟೆ, ಭಾಗ್ಯಾಗೆ ಡಿವೋರ್ಸ್‌ ಸುದ್ದಿಯದ್ದೇ ಸದ್ದು.  ಇದೀಗ ಭಾಗ್ಯ ಕುಗ್ಗಿ ಹೋಗಿದ್ದಾಳೆ.. ಇಷ್ಟೆಲ್ಲಾ ಆದ್ರೂ ಕುಸುಮಾಗೆ ತಾಂಡವ್‌ ಮೇಲೆಯೇ ನಂಬಿಕೆ.. ಈಗ ಏನೂ ಆಗಿಲ್ಲ.. ತಾಂಡವ್‌ ಮತ್ತೆ ವಾಪಾಸ್‌ ಬಂದೇ ಬರ್ತಾನೆ ಅಂತಾ ಹೇಳಿದ್ದಾಳೆ.

ಆದ್ರೀಗ ವೀಕ್ಷಕರು ಈ ಟ್ವಿಸ್ಟ್‌ ನೋಡಿ ಅಸಮಧಾನ ಹೊರ ಹಾಕಿದ್ದಾರೆ.. ಸೀರಿಯಲ್‌ ಡೈರೆಕ್ಟರ್‌ ನಾನು ಭಾಗ್ಯ ಅಭಿಯಾನವನ್ನೇ ಮರೆತು ಬಿಟ್ರಾ ಅಂತಾ? ಅದ್ಯಾಕೆ ಜನರಿಗೆ ಒಳ್ಳೆ ಸಂದೇಶ ನೀಡಲ್ಲ.. ಸೀರಿಯಲ್‌ ನಲ್ಲಿ ಏನು ಬರಿಬೇಕು ಅಂತಾ ಗೊತ್ತಾಗಿಲ್ಲ ಅಂದ್ರೆ ಧಾರವಾಹಿ ನಿಲ್ಲಿಸಿ ಬಿಡಿ.. ಅದು ಬಿಟ್ಟು ತಲೆ ಬುಡ ಇಲ್ಲದ ಟ್ವಿಸ್ಟ್‌ ತರಬೇಡಿ.. ಡಿವೋರ್ಸ್‌ ಕೊಡೋದು.. ಪ್ರತಿನಿತ್ಯ ಜಗಳ ಆಡೋದು.. ಇದ್ರಿಂದ ಸಮಾಜಕ್ಕೆ ಏನ್‌ ಸಂದೇಶ ನೀಡ್ತಿದ್ದೀರಾ?  ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ನಾನು ಭಾಗ್ಯ ಅಂತ ಬಿಲ್ಡಪ್ ಕೊಟ್ಟು.. ಈಗ ದೌರ್ಭಾಗ್ಯ ಅಂತ ತೋರಿಸ್ತಿದ್ದಾರೆ. ಅಷ್ಟಕ್ಕೂ ಹಳಸಿದ ಅನ್ನ ತಿನ್ನೋ ಗತಿ ಭಾಗ್ಯಗೆ ಮತ್ತೆ ಯಾಕೆ. ಲಕ್ಷ ಸಂಬಳ ಇರೋಳಿಗೆ ಸಿಂಗಲ್‌ ಪೇರೆಂಟ್ ಆಗಿ ಬದುಕಿ ತೋರಿಸೋಕೆ ಬರಲ್ವಾ? ಅಂತಾ ಕೇಳಿದ್ದಾರೆ. ಮತ್ತೆ ಕೆಲವರು ಅತ್ತೆಯಾಗಿ ಕುಸುಮ ನಿಜಕ್ಕೂ ಗ್ರೇಟ್. ಇಂತಹ ಅತ್ತೆ  ಇದ್ರೆ ಸೊಸೆಯ ಬಾಳಿಗೆ ಸ್ವಲ್ಪವಾದ್ರೂ ಚೈತನ್ಯ ಸಿಗತ್ತೆ. ಧೈರ್ಯ ಬರತ್ತೆ. ಸೊಸೆಯ ಬಾಳಿಗೆ ಯಾವ ಅತ್ತೆಯೂ ಮುಳ್ಳಾಗ ಬಾರದು. ಧಾರಾವಾಹಿ ಕಳಪೇನೇ.. ಆದರೆ ಅತ್ತೆಯಾಗಿ ಕುಸುಮ ಗ್ರೇಟ್ ಅಂತಾ ಹೇಳಿದ್ರೆ, ಕೆಲವರು ಕುಸುಮ ಬರೂ ತಾನು ತನ್ನ ಮಗನ ಬಗ್ಗೆ ಯೋಚಿಸುತ್ತಾಳೆ. ಭಾಗ್ಯ ಳ ಒಳಿತಿನ ಬಗ್ಗೆ ಯೋಚನೆ ಇಲ್ಲಾ.. ಇಂತಹ ಅತ್ತೆ ಇದ್ರೆ ಇನ್ನೆಲ್ಲಿ ಈ ಧಾರಾವಾಹಿ ನೋಡಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗೋದು ಅಂತಾ ಹೇಳಿದ್ದಾರೆ. ‌

Shwetha M

Leave a Reply

Your email address will not be published. Required fields are marked *