ಕುಸುಮಾ ಕೆಟ್ಟ ಅತ್ತೆನಾ? – ಸೊಸೆ ಇರೋದು ಮನೆ ಕೆಲ್ಸಕ್ಕಾ?
ಭಾಗ್ಯ ಸಂಸಾರ ಸರಿ ಮಾಡ್ತಾಳಾ?

ಕುಸುಮಾ ಕೆಟ್ಟ ಅತ್ತೆನಾ? – ಸೊಸೆ ಇರೋದು ಮನೆ ಕೆಲ್ಸಕ್ಕಾ?ಭಾಗ್ಯ ಸಂಸಾರ ಸರಿ ಮಾಡ್ತಾಳಾ?

ತಾಂಡವ್‌ ಮೇಲಿನ ಹುಚ್ಚು, ಭಾಗ್ಯ ಮೇಲಿನ ಸೇಡು ಶ್ರೇಷ್ಠಾಗೆ ಹೋಗೋ ತರ ಕಾಣ್ತಿಲ್ಲ. ಏನೇನೋ ಡ್ರಾಮಾ ಮಾಡಿ ಈಗ ಶ್ರೇಷ್ಠಾ ಭಾಗ್ಯ ಮನೆಗೆ ಬಂದಾಗಿದೆ. ಆಕೆಗೆ ಸೊಸೆ ಅನ್ನೋ ಬಿರುದು ಸಿಕ್ಕಿದೆ.. ಕುಸುಮಾ ಬಾಯ್ತುಂಬ ಸೊಸೆ ಸೊಸೆ ಎಂದು ಕರೆದಿದ್ದು ನೋಡಿ ಶ್ರೇಷ್ಠಾ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು.. ಆದ್ರೆ ಸೊಸೆ ಅಂತ ಕರಿತಾ ಕುಸುಮಾ ಕೊಡ್ತಿರೋ ಕಾಟಕ್ಕೆ ಶ್ರೇಷ್ಠಾ ಸುಸ್ತಾಗಿ ಹೋಗಿದ್ದಾಳೆ.. ಇದು ವೀಕ್ಷಕರಿಗೂ ಮಜಾ ಸಿಕ್ತಿದೆ.. ಆದ್ರೀಗ ವೀಕ್ಷಕರು ಅದ್ಯಾಕೋ ಸೀರಿಯಲ್‌ ಮೇಲೆ ಅಸಮಧಾನ ಹೊರ ಹಾಕಿದ್ದಾರೆ.. ಕುಸುಮಾಗೆ ಸೊಸೆ ಮುಖ್ಯ ಅಲ್ಲ.. ಮನೆಗೆ ಒಬ್ಲು ಕೆಲಸದವಳು ಮಾತ್ರ ಬೇಕು ಅಂತಾ ಸೀರಿಯಲ್‌ ಫ್ಯಾನ್ಸ್‌ ಹೇಳ್ತಿದ್ದಾರೆ.

ಇದನ್ನೂ ಓದಿ: ವಾಸಿಯಾಗದ ಬೆನ್ನು ನೋವು – ಆಪರೇಷನ್​ಗೆ ಒಪ್ಪಿಗೆ ಕೊಟ್ಟ ದಾಸ!

ಭಾಗ್ಯಲಕ್ಷ್ಮೀ ಸೀರಿಯಲ್‌ ರೋಚಕ ತಿರುವು ಪಡೆದುಕೊಂಡಿದೆ. ಸದಾ ಗಂಡನ ಬೈಗಳ ಕೇಳ್ತಾ, ಅಳ್ತಾ ನಾಲ್ಕು ಗೋಡೆಗಳ ಮಧ್ಯೆ ಇರ್ತಿದ್ದ ಭಾಗ್ಯ ಈಗ ಫುಲ್‌ ಚೇಂಜ್‌ ಆಗಿದ್ದಾಳೆ.. ಇದೀಗ ಇಡೀ ಮನೆಯವರನ್ನ ನೋಡಿಕೊಳ್ಳುವ ಜವಾಬ್ದಾರಿಯನ್ನ ಭಾಗ್ಯ ಹೊತ್ಕೊಂಡಿದ್ದಾಳೆ.. ಆದ್ರೆ ತಾಂಡವ್‌ ಮುದ್ದಾದ ಹೆಂಡ್ತಿ, ಮಕ್ಕಳನ್ನ ಬಿಟ್ಟು ಶ್ರೇಷ್ಠಾ ಹಿಂದೆ ಬಿದ್ದಿದ್ದಾನೆ. ಶ್ರೇಷ್ಠಾಳನ್ನ ಮದುವೆಯಾಗಲು ಹೋಗಿ ಅಡಕತ್ತರಿಯಲ್ಲಿ ಬಿದ್ದಿದ್ದಾನೆ.. ಇತ್ತ ಶ್ರೇಷ್ಠಾ ತಾಂಡವ್‌ ಬೇಕೇ ಬೇಕು ಅಂತ ಹಠ ಮಾಡಿ, ಆತ್ಮಹತ್ಯೆ ಡ್ರಾಮಾ ಮಾಡಿದ್ಲು.. ತಾಂಡವ್‌ ನ ಬ್ಲ್ಯಾಕ್‌ ಮೇಲ್‌  ಮಾಡಿ ಈಗ ಭಾಗ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಮನೆಗೆ ಬಂದ ಶ್ರೇಷ್ಠಾಗೆ ಮಹಾಮಂಗಳಾರತಿ ಆಗುತ್ತೆ ಅಂತಾ ತಾಂಡವ್‌ ಅಂದ್ಕೊಂಡಿದ್ದ.. ಆದ್ರೆ ಭಾಗ್ಯ ಹಾಗೂ ಕುಸುಮಾ ಆರತಿ ಮಾಡಿ ಮನೆಗೆ ಕರೆಸಿಕೊಂಡ್ರು.. ಅಷ್ಟೇ ಅಲ್ಲ ಭಾಗ್ಯ ಈ ಮನೆಯ ಅಥಿತಿ.. ಶ್ರೇಷ್ಠಾ ಈ ಮನೆಯ ಸೊಸೆ ಅಂತಾ ಕುಸುಮಾ ಅನೌನ್ಸ್‌ ಮಾಡಿದ್ಲು.. ಇದ್ರಿಂದ ತಾಂಡವ್‌ ಶ್ರೇಷ್ಠಾ ಫುಲ್‌ ಖುಷಿಯಾದ್ರು.. ಆದ್ರೆ ಅಲ್ಲೇ ಇರೋದು ಟ್ವಿಸ್ಟ್‌ ಅಂತಾ ಅವರಿಬ್ಬರಿಗೆ ಗೊತ್ತಿರ್ಲಿಲ್ಲ..

ಹೌದು, ಶ್ರೇಷ್ಠಾ ಮನೆಗೆ ಬಂದಾಗಿಂದ ಸೊಸೆ ಸೊಸೆ ಅಂತ ಕುಸುಮಾ,ಆಕೆಗೆ ನೀಡ್ತಿರುವ ಟಾರ್ಚರ್ ಮಾತ್ರ ವೀಕ್ಷಕರಿಗೆ ಸಿಕ್ಕಾಪಟ್ಟೆ ಮಜಾ ನೀಡ್ತಿದೆ. ಮುಳ್ಳನ್ನು ಮುಳ್ಳಿನಿಂದ್ಲೇ ತೆಗೆಯಬೇಕು ಎನ್ನುವ ರೂಲ್ಸ್ ಫಾಲೋ ಮಾಡ್ತಿದ್ದಾಳೆ ಕುಸುಮಾ. ಭಾಗ್ಯ ಕೂಡ ಇದಕ್ಕೆ ಬೆಂಬಲ ನೀಡಿದ್ದಾಳೆ. ಇದೀಗ ತಾಂಡವ್ ಮನೆಯಲ್ಲಿ ಮೆರೆಯುವ ಕನಸು ಕಂಡಿದ್ದ ಶ್ರೇಷ್ಠಾ ಕಥೆ ಈಗ ಯಾರಿಗೂ ಬೇಡ ಎನ್ನುವಂತಾಗಿದೆ.

ಬೆಳಿಗ್ಗೆ ಬೇಗ ಏಳ್ಬೇಕು, ಮನೆ ಕೆಲಸವನ್ನೆಲ್ಲ ಒಂದಾದ್ಮೇಲೆ ಒಂದರಂತೆ ಮಾಡ್ಬೇಕು. ಅಡುಗೆ ಬರದ ಶ್ರೇಷ್ಠಾ ಈಗ ಪರದಾಡ್ತಿದ್ದಾಳೆ. ಅತ್ತ ಆಫೀಸ್ ಕೆಲಸ ಇತ್ತ ಮನೆ ಕೆಲಸ ಎಲ್ಲವನ್ನೂ ನಿಭಾಯಿಸಲಾಗದೆ ಒದ್ದಾಡ್ತಿದ್ದಾಳೆ. ಮನೆಯವರಿಗೆಲ್ಲ ಕಾಫಿ ನೀಡಿ, ಉಸ್ಸಪ್ಪ ಅಂತ ಸೋಫಾ ಮೇಲೆ ಬಂದು ಕುಳಿತುಕೊಂಡಿದ್ದ ಶ್ರೇಷ್ಠಾ ನೋಡಿ ಕುಸುಮಾ ಕೂಗಾಡ್ತಾಳೆ. ಯಾಕೆ ಇಲ್ಲಿಗೆ ಬಂದು ಕುತಿದ್ದೀಯಾ ಅಂತ ಕುಸುಮಾ ಕೇಳ್ತಿದ್ದಂತೆ ಬೆಚ್ಚಿ ಬಿದ್ದು, ಎದ್ದು ನಿಲ್ಲುವ ಶ್ರೇಷ್ಠಾ, ಕೆಲಸ ಮಾಡಿ ಸುಸ್ತಾಯ್ತು, ರೆಸ್ಟ್ ಮಾಡ್ತಿದ್ದೇನೆ ಎನ್ನುತ್ತಾಳೆ. ಕೆಲಸ ಮುಗೀತಾ? ಈ ಗ್ಲಾಸ್ ವಾಶ್ ಮಾಡಿ, ತಿಂಡಿ ರೆಡಿ  ಮಾಡ್ಕೋ ಎಂದು ಆರ್ಡರ್ ಮಾಡಿದ್ದನ್ನ ಕೇಳಿ ಶ್ರೇಷ್ಠಾ ದಂಗಾಗಿದ್ದಾಳೆ.

ಮನೆ ಕೆಲಸವನ್ನು ಕೀಳಾಗಿ ನೋಡ್ತಿದ್ದ ಶ್ರೇಷ್ಠಾ, ಇದೇ ವಿಷ್ಯವನ್ನು ಇಟ್ಕೊಂಡು ಅನೇಕ ಬಾರಿ ಭಾಗ್ಯಳನ್ನು ಹೀಯಾಳಿಸಿದ್ಲು.. ಅವಳಿಗೆ ಏನೂ ಬರೋದಿಲ್ಲ ಅಂತ ತಾಂಡವ್ ಮುಂದೆ ಭಾಗ್ಯಗೆ ಅವಮಾನ ಮಾಡಿದ್ಲು. ಆದ್ರೀಗ ಮನೆ ಕೆಲಸ ಅಂದ್ರೆ ಏನು ಎಂಬುದು ಶ್ರೇಷ್ಠಾ ಅರಿವಿಗೆ ಬರ್ತಿದೆ. ಇದೀಗ ಸೀರಿಯಲ್‌ ನಲ್ಲಿ ಹೆಣ್ಣಿನ ಕಷ್ಟ, ಸಾಧನೆಗಳನ್ನು ವಿವರವಾಗಿ ತೋರಿಸಲಾಗ್ತಿದೆ. ಗಂಡ ಬೇರೆ ಹುಡುಗಿ ಜೊತೆ ಸಂಬಂಧ ಇಟ್ಕೊಂಡಿದ್ದಾನೆ ಎಂಬುದು ಗೊತ್ತಾಗ್ತಿದ್ದಂತೆ ಕುಗ್ಗಿದ್ರೂ ಮತ್ತೆ ಎದ್ದು ನಿಂತ ಭಾಗ್ಯ, ಎಲ್ಲವನ್ನು ಎದುರಿಸ್ತಿದ್ದಾಳೆ. ಒಂದ್ಕಡೆ ನಿರ್ಲಕ್ಷ್ಯ ಮಾಡ್ತಿರುವ ಗಂಡ, ಮನೆ ಸಾಲ, ಇನ್ನೊಂದು ಕಡೆ ಮನೆಗೆ ಬಂದಿರುವ ಗಂಡನ ಪ್ರೇಯಸಿ ಶ್ರೇಷ್ಠಾ ಮಧ್ಯೆ ತನ್ನ ಮಕ್ಕಳು ಹಾಗೂ ಅತ್ತೆ ಮಾವನಿಗಾಗಿ ಭಾಗ್ಯ ಮುನ್ನುಗ್ಗುತ್ತಿದ್ದಾಳೆ. ಎಷ್ಟೇ ಕಷ್ಟಗಳು ಎದುರಾದ್ರೂ ಭಾಗ್ಯ ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲ. ಆಕೆಯ ಈ ಕೆಲಸ ವೀಕ್ಷಕರಿಗೆ ಸ್ಪೂರ್ತಿ ನೀಡಿದೆ.

ಆದ್ರೆ, ಇದ್ರಲ್ಲಿ, ಕುಸುಮಾ, ಶ್ರೇಷ್ಠಾಳನ್ನ ಸರಿಯಾಗೇ ಬೆಂಡೆತ್ತುತ್ತಿದ್ದಾಳೆ. ಇದನ್ನು ನೋಡಿದ ವೀಕ್ಷಕರು ಖುಷಿಯಾಗಿದ್ದಾರೆ. ನಿಂಗಿದು ಬೇಕಿತ್ತ ಶ್ರೇಷ್ಠಾ, ಸುಮ್ನೆ ಮನೆಗೆ ವಾಪಸ್ ಹೋಗು ಅಂತ ಸಲಹೆ ನೀಡ್ತಿದ್ದಾರೆ. ಸುಮ್ನೆ ನಾನು ಸೊಸೆ ಅಂತ ಬೀಗೋದಲ್ಲ, ಭಾಗ್ಯಾ ಸ್ಥಾನಕ್ಕೆ ಬರೋದು ಸುಲಭವೂ ಅಲ್ಲ. ಅಡುಗೆ ಮಾಡ್ದೆ, ಸ್ವಿಗ್ಗಿ, ಜೋಮಾಟೋದಲ್ಲಿ ಫುಡ್ ಆರ್ಡರ್ ಮಾಡುವಷ್ಟು ಮನೆ ಕೆಲಸ ಸುಲಭವಲ್ಲ, ಆಫೀಸ್ ನೋಡ್ಕೊಂಡಂತೆ ಮನೆ ನೋಡಿಕೊಳ್ಳೋಕೆ ಸಾಧ್ಯವಿಲ್ಲ ಎಂದು ವೀಕ್ಷಕರು ಬರೆದಿದ್ದಾರೆ. ಮತ್ತೆ ಕೆಲವರಿಗೆ ಕುಸುಮಾ ವರ್ತನೆ ಇಷ್ಟವಾಗಿಲ್ಲ. ಕುಸುಮಾ, ಭಾಗ್ಯಾಳನ್ನು ಕೂಡ ಸೊಸೆ ತರ ನೋಡಿರಲಿಲ್ಲ. ಆಕೆಗೆ ಸೊಸೆ ಬೇಡ, ಮನೆ ಕೆಲಸ ಮಾಡುವವರು ಬೇಕು. ಈಗ ಶ್ರೇಷ್ಠಾಗೂ ಅದನ್ನೇ ಮಾಡ್ತಿದ್ದಾಳೆ. ಇನ್ನೆರಡು ದಿನದಲ್ಲಿ ಅಡುಗೆ ಕಲಿತು ಶ್ರೇಷ್ಠಾ ನಿಮ್ಮನ್ನು ಆಳ್ತಾಳೆ ನೋಡಿ.. ಕುಸುಮಾ ಕೆಟ್ಟ ಅತ್ತೆ.. ಭಾಗ್ಯ ಜೀವನವನ್ನ ಆಕೆ ಸರಿ ಮಾಡಲ್ಲ..  ಮಾಡಿದ್ರು ಭಾಗ್ಯ ಮನೆಯ ಆಳಾಗಿ ದುಡಿತಾ ಇರ್ತಾಳೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.  ಇನ್ನೂ ಕೆಲವರು ಸೀರಿಯಲ್‌ ನಲ್ಲಿ ಲಾಜಿಕ್‌ ಹುಡುಕ್ತಾ ಕೂತಿದ್ದಾರೆ.. ಕಾನೂನು ಪ್ರಕಾರ ಮೊದಲ ಹೆಂಡತಿಗೆ ಡಿವೋರ್ಸ್‌ ಕೊಡದೇ ಎರಡನೆ ಮದುವೆ ಆಗ್ಬಾರ್ದು ಅನ್ನೋ ಕಾಮನ್‌ ಸೆನ್ಸ್‌ ಬೇಡ್ವಾ? ಸೀರಿಯಲ್‌ ತಂಡ ಯಾಕೆ ಸಮಾಜಕ್ಕೆ ಸರಿಯಾದ ಮೆಸೆಜ್‌ ಕೊಡಲ್ಲ..   ಕಾನೂನಿನ ಅರಿವು ಇಲ್ವಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

Shwetha M