ಕುಸುಮಾಗೆ ಚಿಕ್ಕ ಸೊಸೆ ಬೇಕಿತ್ತಾ? – ಭಾಗ್ಯ ಆಟ.. ಶ್ರೇಷ್ಠಾ ಸುಸ್ತೋ ಸುಸ್ತು
ತಾಂಡವ್ ಈಗ ಯಾರ ಪರ?
ಭಾಗ್ಯಲಕ್ಷ್ಮೀ ಸೀರಿಯಲ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಅಳುಮುಂಜಿಯಾಗಿದ್ದ ಭಾಗ್ಯ ಈಗ ರೆಬಲ್ ಆಗಿದ್ದಾಳೆ.. ಮನೆಯನ್ನ ಚೆನ್ನಾಗಿ ನಿಭಾಯಿಸಿಕೊಂಡು ಹೋಗೋದ್ರ ಜೊತೆಗೆ ಈಗ ತಾಂಡವ್‌ನ ಸರಿಯಾಗೇ ಆಟ ಆಡಿಸ್ತಿದ್ದಾಳೆ.. ಇದೀಗ ಭಾಗ್ಯ ಮನೆಗೆ ಶ್ರೇಷ್ಠಾ ಎಂಟ್ರಿ ಆಗಿದ್ದಾಳೆ.. ಎಲ್ಲರು ಶ್ರೇಷ್ಠಾಗೆ ಮಂಗಳಾರತಿ ಮಾಡ್ತಾರೆ ಅಂದ್ರೆ.. ಆಕೆಯನ್ನ ಆರತಿ ಮಾಡಿ ಮನೆಗೆ ಕರೆಸಿಕೊಂಡಿದ್ದಾರೆ.. ಹಾಗಾದ್ರೆ ತಾಂಡವ್ ಶ್ರೇಷ್ಠಾ ಲವ್ ನ ಭಾಗ್ಯ ಒಪ್ಪಿಕೊಂಡ್ಲಾ? ಕುಸುಮಾಗೆ ಚಿಕ್ಕ ಸೊಸೆ ಆದ್ಲಾ ಶ್ರೇಷ್ಠಾ? ಭಾಗ್ಯಗೆ ಮನೆಯಲ್ಲಿ ಜಾಗ ಸಿಗಲ್ವಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಗ್ ಬಾಸ್‌ನ ರಾಧಾ – ಕೃಷ್ಣ ತ್ರಿವ್ಯಾ! – ಮನದಾಳ ಮಾತು ಹಂಚಿಕೊಂಡ ತ್ರಿವಿಕ್ರಮ್ ತಾಯಿ!
ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಈತರ ಟ್ವಿಸ್ಟ್ ಸಿಗುತ್ತೆ ಅಂತಾ ಯಾರೂ ಅಂದ್ಕೊಂಡಿರ್ಲಿಲ್ವೇನೋ.. ಯಾಕಂದ್ರೆ ಸೀರಿಯಲ್ ಡೈರೆಕ್ಟರ್ ಈಸಲ ತುಂಬಾ ತಲೆ ಓಡ್ಸಿ ಟ್ವಿಸ್ಟ್ ಕೊಟ್ಟಿದ್ದಾರೆ. ಹೌದು.. ಭಾಗ್ಯ ಪ್ಲಾನ್ ನಿಂದ ತಾಂಡವ್ ಸರಿ ಆಗ್ತಾನೆ.. ಶ್ರೇಷ್ಠಾ ಬೀದಿಗೆ ಬೀಲ್ತಾಳೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ.. ಇದೀಗ ಶ್ರೇಷ್ಠಾ ಭಾಗ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ.
ಹೌದು, ತನ್ವಿ ಕಾಲೇಜಿನಿಂದ ಸಸ್ಬೆಂಡ್ ಆಗಿದ್ಲು.. ಮತ್ತೆ ಆಕೆಯನ್ನ ಕಾಲೇಜಿಗೆ ಸೇರಿಸ್ಬೇಕು ಅಂತಾ ಭಾಗ್ಯ ಜೊತೆ ತಾಂಡವ್ ಹೋಗಿದ್ದ. ಆಗ್ಲೇ ಶ್ರೇಷ್ಠಾ ಫೋನ್ ಮೇಲೆ ಫೋನ್ ಮಾಡಿದ್ದಳು. ಆತ್ಮಹತ್ಯೆ ಮಾಡಿಕೊಳ್ತೇನೆ.. ಹತ್ತು ನಿಮಿಷ ನಿನಗೆ ಟೈಂ ಅಂತ ತಾಂಡವ್ ಎಚ್ಚರಿಸಿದ್ದಳು. ಹೆದರಿ ಅವಳ ಮನೆಗೆ ಓಡಿದ್ದ ತಾಂಡವ್, ಶ್ರೇಷ್ಠಾ ಹೇಳಿದ್ದಕ್ಕೆಲ್ಲ ತಲೆಯಾಡಿಸಿದ್ದ. ಮನೆಗೆ ಕರೆದುಕೊಂಡು ಹೋಗೋದಾಗಿ ಪ್ರಾಮೀಸ್ ಮಾಡಿದ್ದ. ತಾಂಡವ್ ಜೊತೆ ಶ್ರೇಷ್ಠಾ ಮನೆಗೆ ಬಂದಿದ್ದಾಳೆ. ಆರಂಭದಲ್ಲಿ ಶ್ರೇಷ್ಠಾ ಮನೆಗೆ ಬರ್ತಾಳೆ ಎಂಬ ವಿಷ್ಯ ಗೊತ್ತಾಗ್ತಿದ್ದಂತೆ ಭಾಗ್ಯ ಮತ್ತೆ ಕುಸುಮಾ ಸೇರಿದಂತೆ ಮನೆಯವರೆಲ್ಲ ಶಾಕ್ ಆಗಿದ್ರು. ಆದ್ರೆ ಶ್ರೇಷ್ಠಾ ತಾಂಡವ್ ಮನೆಗೆ ಬರೋದ್ರೋಳಗೆ ಭಾಗ್ಯ, ಕುಸುಮಾ ಮಾಸ್ಟರ್ ಪ್ಲ್ಯಾನ್ ಮಾಡಿದ್ರು.. ಭಾಗ್ಯಾ ಸೇರಿದಂತೆ ಇಡೀ ಮನೆ ನನಗೆ ಎದುರಾಗುತ್ತೆ ಅನ್ನೋ ಆಲೋಚನೆಯಲ್ಲಿ ಶ್ರೇಷ್ಠಾ ತಾಂಡವ್ ಬಂದಿದ್ರು.. ಆದ್ರೆ ಶ್ರೇಷ್ಠಾಗೆ, ಕುಸುಮಾ ಹಾಗೂ ಭಾಗ್ಯ ಚಮಕ್ ಕೊಟ್ಟಿದ್ದಾರೆ.. ಶ್ರೇಷ್ಠಾ ಮನೆಗೆ ಬರ್ತಿದ್ದಂತೆ ದೃಷ್ಟಿ ತೆಗೆದು ಅವಳನ್ನು ಒಳಗೆ ಕರೆದುಕೊಂಡಿದ್ದಾರೆ.. ಅಷ್ಟೇ ಅಲ್ಲ, ಶ್ರೇಷ್ಠಾ ನನ್ನ ಸೊಸೆ ಅಂತ ಕುಸುಮಾ ಒಪ್ಪಿಕೊಂಡಿದ್ದಾಳೆ. ಅಮ್ಮನ ಮಾತು ಕೇಳಿ ಶ್ರೇಷ್ಠಾ ಹಾಗೂ ತಾಂಡವ್ ಖುಷಿಯಾಗಿದ್ದಾರೆ. ಇನ್ಮುಂದೆ ನಂದೇ ಹವಾ ಅಂತ ಶ್ರೇಷ್ಠಾ ಮೆರೆಯುವ ಮುನ್ನವೇ ಭಾಗ್ಯ ಹಾಗೂ ಕುಸುಮಾ ತಮ್ಮ ಆಟ ಶುರು ಮಾಡಿದ್ದಾರೆ.
ಹೌದು.. ಕುಸುಮಾ ಶ್ರೇಷ್ಠಾಳನ್ನ ಸೊಸೆ ಅಂತಾ ಒಪ್ಪಿಕೊಂಡಿದ್ದಲ್ಲದೇ ಆಕೆಯನ್ನ ಬೆಂಡೆತ್ತುವ ಕೆಲಸ ಮಾಡ್ತಿದ್ದಾಳೆ. ಶ್ರೇಷ್ಠಾ ನಿದ್ರೆ ಮಾಡೋ ಹಾಗಿಲ್ಲ.. ಟಿವಿ ನೋಡ್ತಾ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಅತ್ತೆಯಾದ್ಮೇಲೆ ಸೊಸೆ, ಸೊಸೆಯಾದ್ಮೇಲೆ ಅತ್ತೆ ಕಾಟಕ್ಕೆ ಶ್ರೇಷ್ಠಾ ಸುಸ್ತಾಗಿದ್ದಾಳೆ.
ಬೆಚ್ಚಗೆ ಹಾಸಿಗೆ ಮೇಲೆ ಹೊದ್ದು ಮಲಗಿದ್ದ ಶ್ರೇಷ್ಠಾ ನೋಡುವ ಕುಸುಮಾ, ನನ್ನ ಸೊಸೆ ಇನ್ನೂ ಮಲಗಿದ್ದಾಳಾ ಎನ್ನುತ್ತ ಒಂದು ಬಕೆಟ್ ತಣ್ಣೀರನ್ನು ಶ್ರೇಷ್ಠಾ ಮೇಲೆ ಹಾಕ್ತಾಳೆ. ಬೆಚ್ಚಿ ಎದ್ದೇಳುವ ಶ್ರೇಷ್ಠಾ ಬಾತ್ ರೂಮಿಗೆ ಓಡ್ತಾಳೆ. ಇನ್ನು ಶ್ರೇಷ್ಠಾ ಕೈಗೆ ಪಾತ್ರೆ ನೀಡುವ ಭಾಗ್ಯ, ಅಡುಗೆ ಮನೆನೂ ನಿಂದೇ ಬಚ್ಚಲು ಮನೆನೂ ನಿಂದೇ ಎನ್ನುತ್ತಾಳೆ. ಭಾಗ್ಯ ಮಾತು ಕೇಳಿ ಶ್ರೇಷ್ಠಾ ಶಾಕ್ ಆಗಿದ್ದಾಳೆ. ಆದ್ರೆ ತಾಂಡವ್ ಮಾತ್ರ ಹೆಂಡ್ತಿ ಹಾಗೂ ಅಮ್ಮನ ವರ್ತನೆ ನೋಡಿ ಫುಲ್ ಖುಷಿ ಆಗಿದ್ದಾನೆ.. ಇದೀಗ ಕುಸುಮಾ, ಭಾಗ್ಯ ಆಟದಿಂದಾಗಿ ಸೀರಿಯಲ್ ನಲ್ಲಿ ಈಗ ಫುಲ್ ಮಜಾ ಸಿಗ್ತಿದೆ ಅಂತ ವೀಕ್ಷಕರು ಹೇಳ್ತಿದ್ದಾರೆ.
ಭಾಗ್ಯ ಹಾಗೂ ಕುಸುಮಾ ಕೊಟ್ತಿರೋ ಚಮಕ್ ಗೆ ಶ್ರೇಷ್ಠಾಗೆ ಎಲ್ಲ ಕಡೆಯಿಂದ ಹಿಂಸೆಯಾಗ್ತಿದೆ. ಮೊದಲ ದಿನವೇ ಶ್ರೇಷ್ಠಾ ಸುಸ್ತಾದಂತೆ ಕಾಣ್ತಿದೆ. ಹೋಗ್ತಾ ಹೋಗ್ತಾ ಶ್ರೇಷ್ಠಾ ಸ್ಥಿತಿ ಮತ್ತಷ್ಟು ಹದಗೆಡೋದು ಗ್ಯಾರಂಟಿ. ಇಷ್ಟು ದಿನ ಅತ್ತು ಕರೆದು ಬೇಸರ ವ್ಯಕ್ತಪಡಿಸ್ತಿದ್ದ ಭಾಗ್ಯ ಈಗ ಬದಲಾಗಿದ್ದು, ಎಲ್ಲರಿಗೂ ಖುಷಿಯಾಗಿದೆ. ಸವತಿ ವಿರುದ್ಧ ಭಾಗ್ಯ ನಡೆಸುತ್ತಿರುವ ಹೋರಾಟವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಇದೀಗ ಭಾಗ್ಯಲಕ್ಷ್ಮೀ ಸೀರಿಯಲ್ ನೋಡಿದ ಫ್ಯಾನ್ಸ್ , ಭಾಗ್ಯಾ ಇಷ್ಟು ಸಾಕಾಗಲ್ಲ.. ಇನ್ನಷ್ಟು ಕಾಟಕೊಡು ಎನ್ನುತ್ತಿದ್ದಾರೆ. ಇನ್ಮುಂದೆ ಪ್ರತಿ ದಿನ ಹಬ್ಬನೇ, ಭಾಗ್ಯಾ ಕಾಟಕ್ಕೆ ಬೇಸತ್ತು, ತಾಂಡವ್ ಬೇಡ ಅಂತ ಶ್ರೇಷ್ಠಾ ಓಡಿ ಹೋಗ್ಬೇಕು ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಹಣದ ಆಸೆ ಇರ್ಬಾರದು.. ಪರರ ಗಂಡದ ಮೇಲೆ ಕಣ್ಣು ಹಾಕಿದೆ.. ಈಕೆಗೆ ಹೀಗೆ ಆಗ್ಬೇಕು.. ಗ್ರಹಚಾರ ಶುರು ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.